Petrol Price: ದೇಶದಲ್ಲೇ ಮೊದಲ ಬಾರಿಗೆ ದೆಹಲಿಯಲ್ಲಿ ಪೆಟ್ರೋಲ್​​ಗಿಂತಲೂ ಡೀಸೆಲ್​​​​ ಬೆಲೆ ಜಾಸ್ತಿ ; ಒಂದು ಲೀಟರ್​​ಗೆ ಎಷ್ಟು ಗೊತ್ತೇ?

Diesel Fuel: ಇನ್ನು, ದೆಹಲಿಯಲ್ಲಿ ಮಾತ್ರ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡೀಸೆಲ್​ ಬೆಲೆ ಪೆಟ್ರೋಲ್​​ಗಿಂತಲೂ ಜಾಸ್ತಿ ಆಗಿದೆ. ಸಾಮಾನ್ಯವಾಗಿ ಪೆಟ್ರೋಲ್​​-ಡೀಸೆಲ್​​ ನುಡವೆ 5ರಿಂದ 8 ರೂ. ಇರುತ್ತಿತ್ತು. ಇದರಲ್ಲಿ ಪೆಟ್ರೋಲ್​​ ಬೆಲೆಯೇ ಡೀಸೆಲ್​​ಗಿಂತಲೂ ಇರುತ್ತಿತ್ತು. ಆದರೀಗ, ಡೀಸೆಲ್​​​​​ ಬೆಲೆ ಈಗ ಪೆಟ್ರೋಲ್​​​ ಬೆಲೆಗಿಂತಲೂ ಏರಿಕೆಯಾಗಿದೆ.

news18-kannada
Updated:June 24, 2020, 12:12 PM IST
Petrol Price: ದೇಶದಲ್ಲೇ ಮೊದಲ ಬಾರಿಗೆ ದೆಹಲಿಯಲ್ಲಿ ಪೆಟ್ರೋಲ್​​ಗಿಂತಲೂ ಡೀಸೆಲ್​​​​ ಬೆಲೆ ಜಾಸ್ತಿ ; ಒಂದು ಲೀಟರ್​​ಗೆ ಎಷ್ಟು ಗೊತ್ತೇ?
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜೂನ್​.24): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಾತ್ರ ಕಡಿಮೆ ಮಾಡುತ್ತಿಲ್ಲ. ಬದಲಿಗೆ ಕಳೆದ 18 ದಿನಗಳಿಂದ ನಿರಂತರವಾಗಿ ಬೆಲೆಯನ್ನು ಏರಿಸುತ್ತಿದೆ.

ಇನ್ನು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ‌ ಹಿಂದಿನಿಂದಲೂ ನಡೆದುಕೊಂಡ ಬಂದಿರುವ ರೀತಿ. ಆದರೆ ನರೇಂದ್ರ ಮೋದಿ ಅವರ ಸರ್ಕಾರ ಈ‌ ಸತ್ಸಂಪ್ರದಾಯವನ್ನು ಮರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಳೆದ 18 ದಿನಗಳಿಂದ ನಿರಂತರವಾಗಿ ಹೆಚ್ಚಳ ಮಾಡುತ್ತಿದೆ.

ಬಳಕೆ ಅಥವಾ ಬೇಡಿಕೆ ಕಡಿಮೆ ಆದಾಗಲೂ ವಸ್ತುಗಳ ದರ ಇಳಿಕೆಯಾಗುತ್ತೆ. ಇದು ಮಾರುಕಟ್ಟೆಯಲ್ಲಿ ಸಹಜವಾಗಿ ಕಂಡುಬರುವ ರೀತಿ.‌ ಒಂದೊಮ್ಮೆ ಬೇಡಿಕೆ ಕಡಿಮೆ ಆದಾಗಲೂ ಬೆಲೆ ಇಳಿದಿಲ್ಲ ಎಂದರೆ ಏನೋ 'ಮಿಸ್ ಮ್ಯಾಚ್' ಆಗುತ್ತಿದೆ ಎಂದು ಅರ್ಥ. ಇದೇ ರೀತಿ ದೇಶದಲ್ಲಿ ಈಗ ಲಾಕ್ಡೌನ್ ಕಾರಣಕ್ಕೆ ಹಾಗೂ ಕೊರೋನಾಗೆ ಹೆದರಿ‌‌ ಜನ‌ ಮೊದಲಿನಷ್ಟು ಹೊರಗಡೆ ಓಡಾಡುತ್ತಿಲ್ಲ. ಪೆಟ್ರೋಲ್, ಡೀಸೆಲ್ ಬಳಕೆಯಾಗುತ್ತಿಲ್ಲ. ಆದರೂ ದೇಶದಲ್ಲಿ ‌ಪ್ರತಿದಿನ‌ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ‌ ಹೆಚ್ಚಳವಾಗುತ್ತಿದೆ.‌ ಸಹಜವಾಗಿ ಇದು‌ ಕೇಂದ್ರ ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ, ಜನರಿಂದ ಕೊರೋನಾ ಮತ್ತು ಲಾಕ್​​ಡೌನ್​​ನಂತಹ‌‌‌ ಕಡುಕಷ್ಟದ ಕಾಲದಲ್ಲೂ ಹಣ ದೋಚುತ್ತಿದೆ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ನಿರಂತರವಾಗಿ ಕಳೆದ 18 ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಪ್ರತಿ ಲೀಟರ್ ಪೆಟ್ರೋಲ್ ಗೆ 8.50 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ 10.01 ರೂಪಾಯಿ ಹೆಚ್ಚಳ ಮಾಡಲಾಗಿದೆ. ದೇಶದ ವಿವಿದ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇದನ್ನೂ ಓದಿ: ಕೋವಿಡ್​​-19 ಭೀತಿ ನಡುವೆಯೇ ಎದುರಾಯ್ತು ನೀರಿನ ಸಂಕಷ್ಟ - ದೊಡ್ಡಬಳ್ಳಾಪುರದಲ್ಲಿ ಜನರ ಪರದಾಟ

ಇನ್ನು, ದೆಹಲಿಯಲ್ಲಿ ಮಾತ್ರ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡೀಸೆಲ್​ ಬೆಲೆ ಪೆಟ್ರೋಲ್​​ಗಿಂತಲೂ ಜಾಸ್ತಿ ಆಗಿದೆ. ಸಾಮಾನ್ಯವಾಗಿ ಪೆಟ್ರೋಲ್​​-ಡೀಸೆಲ್​​ ನುಡವೆ 5ರಿಂದ 8 ರೂ. ಇರುತ್ತಿತ್ತು. ಇದರಲ್ಲಿ ಪೆಟ್ರೋಲ್​​ ಬೆಲೆಯೇ ಡೀಸೆಲ್​​ಗಿಂತಲೂ ಇರುತ್ತಿತ್ತು. ಆದರೀಗ, ಡೀಸೆಲ್​​​​​ ಬೆಲೆ ಈಗ ಪೆಟ್ರೋಲ್​​​ ಬೆಲೆಗಿಂತಲೂ ಏರಿಕೆಯಾಗಿದೆ.
ಭಾರತದ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್​​ ಪೆಟ್ರೋಲ್​ ಬೆಲೆ 79.76 ರೂ. ಇದ್ದರೇ ಡೀಸೆಲ್​​ ಬೆಲೆ ಮಾತ್ರ 48 ಪೈಸೆ ಜಾಸ್ತಿಯಾಗುವ ಮೂಲಕ ಒಂದು ಲೀಟರ್​​ಗೆ 79.88 ರೂ. ಆಗಿದೆ.
First published: June 24, 2020, 12:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading