Petrol Price: ಬೆಂಗಳೂರು, ಜೈಪುರ ಸೇರಿ ಅನೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ ಕೊಂಚ ಇಳಿಕೆ

Petrol Diesel Rate: ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 86.30 ರೂ. ಇದೆ. ಮುಂಬೈನಲ್ಲಿ 92.86 ರೂ, ಜೈಪುರದಲ್ಲಿ 92.51 ರೂ, ಬೆಂಗಳೂರಿನಲ್ಲಿ 89.21 ರೂ ಇದೆ. ಬಹುತೇಕ ಎಲ್ಲ ನಗರಗಳಲ್ಲೂ ನಿನ್ನೆಗಿಂತ ಇಂದು ಪೆಟ್ರೋಲ್ ಬೆಲೆ ಕಡಿಮೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Petrol Rate Today: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನ ಏರಿಳಿತಗಳು ಉಂಟಾಗುತ್ತಲೇ ಇರುತ್ತವೆ. ನಿನ್ನೆಗಂತ ಇಂದು ಪೆಟ್ರೋಲ್ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರವೆಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಜೈಪುರದಲ್ಲಿ ಪೆಟ್ರೋಲ್ ದರ 1 ರೂ. ಕಡಿಮೆಯಾಗಿದೆ. ಹಾಗೇ, ಬೆಂಗಳೂರು, ಚೆನ್ನೈ, ಪಾಟ್ನಾ, ಭುವನೇಶ್ವರದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 89 ರೂ. ಆಸುಪಾಸಿನಲ್ಲಿದೆ. ಬಹುತೇಕ ಎಲ್ಲ ನಗರಗಳಲ್ಲೂ ನಿನ್ನೆಗಿಂತ ಇಂದು ಪೆಟ್ರೋಲ್ ಬೆಲೆ ಕಡಿಮೆಯಾಗಿದೆ.

    ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 86.30 ರೂ. ಇದೆ. ಮುಂಬೈನಲ್ಲಿ 92.86 ರೂ, ಜೈಪುರದಲ್ಲಿ 92.51 ರೂ, ಬೆಂಗಳೂರಿನಲ್ಲಿ 89.21 ರೂ, ಹೈದರಾಬಾದ್​ನಲ್ಲಿ 89.21 ರೂ, ತಿರುವನಂತಪುರದಲ್ಲಿ 88.33 ರೂ, ಚೆನ್ನೈನಲ್ಲಿ 88.82 ರೂ, ಕೊಲ್ಕತ್ತಾದಲ್ಲಿ 87.69 ರೂ. ಇದೆ.

    ಭಾರತದಲ್ಲಿ ಡೀಸೆಲ್ ಬೆಲೆಯಲ್ಲೂ ನಿನ್ನೆಯ ದರವೇ ಮುಂದುವರೆದಿದೆ. ಕೆಲವು ನಗರಗಳಲ್ಲಿ ಮಾತ್ರ ಡೀಸೆಲ್ ಬೆಲೆ ಇಂದು ಕೊಂಚ ಇಳಿಮುಖವಾಗಿದೆ. ಜೈಪುರದಲ್ಲಿ 1 ಲೀಟರ್ ಡೀಸೆಲ್ ಬೆಲೆ 85ರಿಂದ 84.62 ರೂ.ಗೆ ಇಳಿದಿದೆ. ಚೆನ್ನೈ, ಮುಂಬೈ, ಹೈದರಾಬಾದ್, ಭುವನೇಶ್ವರದಲ್ಲಿ 1 ಲೀಟರ್ ಡೀಸೆಲ್ ಬೆಲೆ 83 ರೂ. ದಾಟಿದೆ. ವಿವಿಧ ನಗರಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ. ನವದೆಹಲಿಯಲ್ಲಿ ಇಂದು 1 ಲೀಟರ್ ಡೀಸೆಲ್​ಗೆ 76.48 ರೂ. ಇದೆ. ಚೆನ್ನೈನಲ್ಲಿ 81.71 ರೂ, ಮುಂಬೈನಲ್ಲಿ 83.30 ರೂ, ಬೆಂಗಳೂರಿನಲ್ಲಿ 81.10 ರೂ, ಹೈದರಾಬಾದ್​ನಲ್ಲಿ 83.46 ರೂ. ಇದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ.

    ಇದನ್ನೂ ಓದಿ: Budget Session 2021: ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ; ರಾಷ್ಟ್ರಪತಿ ಭಾಷಣ ಬಹಿಷ್ಕಾರಕ್ಕೆ ವಿಪಕ್ಷಗಳು ನಿರ್ಧಾರ

    ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಏರಿಕೆ ಆಗದಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. ನಿನ್ನೆಗಿಂತ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಕೊಂಚ ಏರಿಕೆ ಕಂಡುಬಂದಿದೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಆಗುತ್ತಿದ್ದರೂ, ಕೊರೊನಾ ಕಾರಣಗಳಿಂದ ಜನಸಾಮಾನ್ಯರು ಕಷ್ಟದಲ್ಲಿದ್ದರೂ, ಸಾರ್ವಜನಿಕರು ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಲೆಕ್ಕಿಸದ ಸರ್ಕಾರಿ ಒಡೆತನದ ತೈಲ ಕಂಪನಿಗಳು ಸತತವಾಗಿ ಬೆಲೆ ಏರಿಕೆಯಲ್ಲಿ ನಿರತವಾಗಿವೆ.
    Published by:Sushma Chakre
    First published: