Petrol, Diesel Price: ದಿನ ಬಿಟ್ಟು ದಿನ ಡೀಸೆಲ್ ಬೆಲೆ ಏರಿಕೆ; 12 ದಿನದಲ್ಲಿ 7 ಬಾರಿ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

Petrol Diesel Rate: ಜೂನ್ ತಿಂಗಳಲ್ಲಿ ಬರೊಬ್ಬರಿ 23 ದಿನ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ಈಗ ಕಳೆದ ಹನ್ನೆರೆಡು ದಿನಗಳಲ್ಲಿ ಏಳನೇ ಬಾರಿಗೆ ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ.

news18-kannada
Updated:July 20, 2020, 10:33 AM IST
Petrol, Diesel Price: ದಿನ ಬಿಟ್ಟು ದಿನ ಡೀಸೆಲ್ ಬೆಲೆ ಏರಿಕೆ; 12 ದಿನದಲ್ಲಿ 7 ಬಾರಿ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ (ಕಚ್ಛಾ ತೈಲ) ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಮಹಾ ಕ್ರೂರಿ ಕೊರೋನಾ ಮತ್ತು ಲಾಕ್​ಡೌನ್ ಕಾರಣಗಳಿಂದ ಜನ ಸಾಮಾನ್ಯರು ತತ್ತರಿಸಿಹೋಗಿದ್ದರೂ ಹಾಗೂ ಕಾಂಗ್ರೆಸ್ ನಾಯಕರು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೋಮವಾರ ಮತ್ತೊಮ್ಮೆ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ‌ ಹಿಂದಿನಿಂದಲೂ ಇದು ನಡೆದುಕೊಂಡ ಬಂದಿರುವ ರೀತಿ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ‌ ಸತ್ಸಂಪ್ರದಾಯವನ್ನು ಮರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಲೇ ಇದೆ.

ಇದನ್ನೂ ಓದಿ: Rape And Murder: ಪಶ್ಚಿಮ ಬಂಗಾಳದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ; ಬಸ್​ಗಳಿಗೆ ಬೆಂಕಿ ಹಚ್ಚಿ, ಹೆದ್ದಾರಿ ಬಂದ್ ಮಾಡಿದ ಗ್ರಾಮಸ್ಥರು

ಜೂನ್ ತಿಂಗಳಲ್ಲಿ ಬರೊಬ್ಬರಿ 23 ದಿನ‌ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ಈಗ ಕಳೆದ ಹನ್ನೆರೆಡು ದಿನಗಳಲ್ಲಿ ಏಳನೇ ಬಾರಿಗೆ ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಮೊದಲು ಜುಲೈ 7ರಂದು ಪ್ರತಿ ಲೀಟರ್ ಡೀಸೆಲ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿತ್ತು. ಜುಲೈ 12ರಂದು ಮತ್ತೆ 16 ಪೈಸೆ ಬೆಲೆ ಏರಿಕೆ ಮಾಡಲಾಗಿತ್ತು. ಜುಲೈ 13ರಂದು ಪ್ರತಿ ಲೀಟರ್ ಡೀಸೆಲ್ ಗೆ 11 ಪೈಸೆ ಹೆಚ್ಚಳ ಮಾಡಲಾಗಿತ್ತು. ಜುಲೈ 15ರಂದು ಮತ್ತೆ ಪ್ರತಿ ಲೀಟರ್ ಡೀಸೆಲ್ ಗೆ 13 ಪೈಸೆ ಹೆಚ್ಚಳ ಮಾಡಲಾಗಿತ್ತು. ಜುಲೈ 17ರಂದು 17 ಪೈಸೆ ಬೆಲೆ ಏರಿಸಲಾಗಿತ್ತು. ಜುಲೈ 18ರಂದು ಮತ್ತೆ ಪ್ರತಿ‌‌ ಲೀಟರ್ ಡೀಸೆಲ್ ಮೇಲೆ 17 ಪೈಸೆ ಹೆಚ್ಚಳ ಮಾಡಲಾಗಿತ್ತು. ಮತ್ತೆ ಈಗ ಜುಲೈ 20ರಂದು ಪ್ರತಿ ಲೀಟರ್ ಡೀಸೆಲ್ ಬೆಲೆಗೆ 12 ಪೈಸೆ ಏರಿಸಲಾಗಿದೆ. ಒಟ್ಟು ಕಳೆದ ಒಂದು ತಿಂಗಳಿನಿಂದ ಪ್ರತಿ ಲೀಟರ್ ಡೀಸೆಲ್​ಗೆ ಒಟ್ಟು 12.12 ರೂಪಾಯಿ ಹೆಚ್ಚಳ ಮಾಡಿದಂತಾಗಿದೆ.

ಇದನ್ನೂ ಓದಿ: ಕೊರೋನಾ ರೋಗಿ ಮನೆಯಲ್ಲಿ ಮಟನ್ ಬಿರಿಯಾನಿ ಮಾಡಿ ತಿಂದು, ಚಿನ್ನಾಭರಣ ಕದ್ದೊಯ್ದ ಕಳ್ಳರು!

ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ -ಡೀಸೆಲ್ ಬೆಲೆ:
ಬೆಂಗಳೂರು- ಪೆಟ್ರೋಲ್ 83.02 ರೂ., ಡೀಸೆಲ್ 77.19 ರೂ.ಭೂಪಾಲ್- ಪೆಟ್ರೋಲ್ 88.08 ರೂ., ಡೀಸೆಲ್ 81.08 ರೂ.
ಮುಂಬೈ- ಪೆಟ್ರೋಲ್ 87.19 ರೂ., ಡೀಸೆಲ್ 79.87 ರೂ.
ಚೆನ್ನೈ- ಪೆಟ್ರೋಲ್ 83.63 ರೂ., ಡೀಸೆಲ್ 78.71ರೂ.
ಪಾಟ್ನಾ- ಪೆಟ್ರೋಲ್ 83.31ರೂ., ಡೀಸೆಲ್ 78.37 ರೂ.
ಕೋಲ್ಕತ್ತಾ- ಪೆಟ್ರೋಲ್ 82.10 ರೂ., ಡೀಸೆಲ್ 76.75 ರೂ.
ಲಕ್ನೋ- ಪೆಟ್ರೋಲ್ 80.98 ರೂ., ಡೀಸೆಲ್ 73.51 ರೂ.
ದೆಹಲಿ- ಪೆಟ್ರೋಲ್ 80.43 ರೂ., ಡೀಸೆಲ್ 81.63 ರೂ.
ರಾಂಚಿ- ಪೆಟ್ರೋಲ್ 80.29 ರೂ., ಡೀಸೆಲ್ 77.54 ರೂ.
Published by: Vijayasarthy SN
First published: July 20, 2020, 8:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading