HOME » NEWS » National-international » PETROL PRICE FUEL PRICE COME DOWN AFTER WINTER SAYS UNION PETROLEUM MINISTER DHARMENDRA PRADHAN DBDEL SCT

Petrol Price: ಚಳಿಗಾಲದ ಬಳಿಕ ಪೆಟ್ರೋಲ್- ಡೀಸೆಲ್ ಬೆಲೆ ಇಳಿಕೆ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

Petrol Diesel Price: ಚಳಿಗಾಲ ಮುಗಿದ ಮೇಲೆ  ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸ್ವಲ್ಪ ಇಳಿಕೆ ಆಗಲಿದೆ ಎಂದು‌ ಬಗ್ಗೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

news18-kannada
Updated:February 26, 2021, 2:54 PM IST
Petrol Price: ಚಳಿಗಾಲದ ಬಳಿಕ ಪೆಟ್ರೋಲ್- ಡೀಸೆಲ್ ಬೆಲೆ ಇಳಿಕೆ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಫೆ. 26): ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾದಾಗ ಇತರೆ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಾಗುವುದು ಸಹಜ. ಅದರಿಂದಾಗಿ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವುದರಿಂದ ಜನ ಕಂಗಾಲಾಗಿದ್ದಾರೆ. ಈ ಬಗ್ಗೆ ಇಂದು ಮಾತನಾಡಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಚಳಿಗಾಲ ಮುಗಿದ ಮೇಲೆ  ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸ್ವಲ್ಪ ಇಳಿಕೆ ಆಗಲಿದೆ ಎಂದು‌ ಹೇಳಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶುಕ್ರವಾರ ರಾಷ್ಟ್ರಾದ್ಯಂತ ಫೆಡರೇಷನ್ ಆಫ್ ಆಲ್ ಇಂಡಿಯಾ ಟೇಡರ್ಸ್ ಪ್ರತಿಭಟನೆಯನ್ನೂ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಸದ್ಯ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ.  ಅಂತರಾಷ್ಟ್ರೀಯ ತೈಲ ಮಾರುಕಟ್ಟೆ ಅನುಸಾರವಾಗಿ ದರ ನಿಗದಿ ಆಗುತ್ತಿದೆ. ಚಳಿಗಾಲ ಮುಗಿದ ಮೇಲೆ ಸ್ವಲ್ಪ ಮಟ್ಟಿಗೆ ಇಳಿಕೆ ಆಗಲಿದೆ ಎಂದು‌ ತಿಳಿಸಿದ್ದಾರೆ.

ಕಳೆದ 54 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 25 ಬಾರಿ ಹೆಚ್ಚಾಗಿದೆ. ಜನವರಿ 1ರಿಂದೀಚೆಗೆ 7.68 ರೂಪಾಯಿ ಹೆಚ್ಚಾಗಿದೆ. ಫೆಬ್ರವರಿ ತಿಂಗಳಲ್ಲಿ 15ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಕಳೆದ 18 ದಿನಗಳಿಂದ  4.72 ಪೈಸೆ ಬೆಲೆ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ: Crime News: ಉತ್ತರ ಪ್ರದೇಶದ ಅಪ್ರಾಪ್ತ ಬಾಲಕನ ಮೇಲೆ ಮಹಿಳೆಯಿಂದ ಅತ್ಯಾಚಾರ!

ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಫೆಬ್ರವರಿ 4ರಂದು ತಾರೀಖು ತಲಾ 37 ಪೈಸೆ, ಫೆಬ್ರವರಿ 5ರಂದು 37 ಪೈಸೆ, ಫೆಬ್ರವರಿ 9ರಂದು 42 ಪೈಸೆ, ಫೆಬ್ರವರಿ 10ರಂದು 31 ಪೈಸೆ, ಫೆಬ್ರವರಿ 11ರಂದು 38 ಪೈಸೆ, ಫೆಬ್ರವರಿ 12ರಂದು 38 ಪೈಸೆ, ಫೆಬ್ರವರಿ 13ರಂದು 39 ಪೈಸೆ, ಫೆಬ್ರವರಿ 14ರಂದು 34 ಪೈಸೆ, ಫೆಬ್ರವರಿ 15ರಂದು 30 ಪೈಸೆ, ಫೆಬ್ರವರಿ 16ರಂದು 38 ಪೈಸೆ, ಫೆಬ್ರವರಿ 17ರಂದು 27 ಪೈಸೆ, ಫೆಬ್ರವರಿ 18ರಂದು 36 ಪೈಸೆ ಹೆಚ್ಚಳ, ಫೆಬ್ರವರಿ 19ರಂದು 36 ಪೈಸೆ, ಫೆಬ್ರವರಿ 20ರಂದು 41 ಪೈಸೆ ಹಾಗೂ ಫೆಬ್ರವರಿ 23ರಂದು ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 38 ಪೈಸೆ ಹೆಚ್ಚಳ ಮಾಡಲಾಗಿತ್ತು.

ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ -ಡೀಸೆಲ್ ಬೆಲೆ ಹೀಗಿದೆ...
ಬೆಂಗಳೂರು- ಪೆಟ್ರೋಲ್ 93.98 ರೂ., ಡೀಸೆಲ್ 86.21 ರೂ.ಭೂಪಾಲ್- ಪೆಟ್ರೋಲ್ 98.96 ರೂ., ಡೀಸೆಲ್ 89.60 ರೂ.
ಮುಂಬೈ- ಪೆಟ್ರೋಲ್ 97.34 ರೂ., ಡೀಸೆಲ್ 88.44 ರೂ.
ಜೈಪುರ - ಪೆಟ್ರೋಲ್ 97.47 ರೂ., ಡೀಸೆಲ್ 89.82 ರೂ.
ಪಾಟ್ನಾ- ಪೆಟ್ರೋಲ್ 93.25 ರೂ., ಡೀಸೆಲ್ 86.57 ರೂ.
ಚೆನ್ನೈ- ಪೆಟ್ರೋಲ್ 92.59 ರೂ., ಡೀಸೆಲ್ 86.31 ರೂ.
ಕೋಲ್ಕತ್ತಾ- ಪೆಟ್ರೋಲ್ 91.78 ರೂ., ಡೀಸೆಲ್ 84.56 ರೂ.
ದೆಹಲಿ- ಪೆಟ್ರೋಲ್ 90.93 ರೂ., ಡೀಸೆಲ್ 81.32 ರೂ.
ಲಕ್ನೋ- ಪೆಟ್ರೋಲ್ 89.13 ರೂ., ಡೀಸೆಲ್ 81.70 ರೂ.
ನೋಯ್ಡಾ- ಪೆಟ್ರೋಲ್ 88.54 ರೂ., ಡೀಸೆಲ್ 80 ರೂ.
ಗುರುಗಾವ್ - ಪೆಟ್ರೋಲ್ 87.98 ರೂ., ಡೀಸೆಲ್ 78.98 ರೂ.
ರಾಂಚಿ- ಪೆಟ್ರೋಲ್ 88.35 ರೂ., ಡೀಸೆಲ್ 85.97 ರೂ.
Published by: Sushma Chakre
First published: February 26, 2021, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories