ಕಳೆದ 10 ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಬರೋಬ್ಬರಿ 3.43 ರೂ ಏರಿಕೆ

ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಲೀಟರ್​ಗೆ 72.44 ಹಾಗೂ 66.29 ರೂಪಾಯಿ ತಲುಪಿದೆ.

Vijayasarthy SN | news18
Updated:January 14, 2019, 5:01 PM IST
ಕಳೆದ 10 ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಬರೋಬ್ಬರಿ 3.43 ರೂ ಏರಿಕೆ
ಪೆಟ್ರೋಲ್​ ಬಂಕ್
Vijayasarthy SN | news18
Updated: January 14, 2019, 5:01 PM IST
ಬೆಂಗಳೂರು(ಜ. 14): ಒಂದೆರಡು ತಿಂಗಳು ನಿರಂತರವಾಗಿ ಇಳಿಕೆ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇದೀಗ ಏರುಮುಖದಲ್ಲಿವೆ. ಇವತ್ತು ಸೋಮವಾರದಂದು ಪೆಟ್ರೋಲ್ ಬೆಲೆ 40 ಪೈಸೆ ಏರಿದ್ದು, ಬೆಂಗಳೂರಿನಲ್ಲಿ ಲೀಟರ್​ಗೆ 72.44 ರೂಪಾಯಿಗೆ ಬಂದಿದೆ. ಕಳೆದ 10 ದಿನದಲ್ಲಿ ಪೆಟ್ರೋಲ್ ದರ 3.43 ರೂಪಾಯಿಯಷ್ಟು ಏರಿಕೆ ಕಂಡಿದೆ.

ಡೀಸೆಲ್ ಬೆಲೆ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇವತ್ತು ಬೆಂಗಳೂರಿನಲ್ಲಿ 51 ಪೈಸೆಯಷ್ಟು ಏರಿಕೆಯಾಗಿರುವ ಡೀಸೆಲ್ ದರ 66.29 ರೂ ಮುಟ್ಟಿದೆ. ಕಳೆದ 10 ದಿನಗಳಲ್ಲಿ ಹೆಚ್ಚೂಕಡಿಮೆ ಮೂರೂವರೆ ರೂಪಾಯಿಯಷ್ಟು ಡೀಸೆಲ್ ದರ ಏರಿಕೆಯಾಗಿದೆ.

ಇದನ್ನೂ ಓದಿ: ದೇಶ ವಿರೋಧಿ ಘೋಷಣೆ ಕೂಗಿದ್ದ ಆರೋಪದಡಿ ಕನ್ಹಯ್ಯ ಕುಮಾರ್ ಸೇರಿ 10 ಮಂದಿ ವಿರುದ್ಧ ಚಾರ್ಜ್​ಶೀಟ್

ಜಾಗತಿಕ ತೈಲ ಬೆಲೆಯಲ್ಲಿನ ವ್ಯತ್ಯಾಸವು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ.

ಸೋಮವಾರದ ಪೆಟ್ರೋಲ್ ಬೆಲೆ:
ಬೆಂಗಳೂರು: 72.44 ರೂ.
ಚೆನ್ನೈ: 72.39
ದೆಹಲಿ: 70.13
ಹೈದರಾಬಾದ್: 74.40
ಕೋಲ್ಕತಾ: 72.24
ಮುಂಬೈ: 75.77

ಡೀಸೆಲ್ ಬೆಲೆ:
ಬೆಂಗಳೂರು: 66.29 ರೂ
ಚೆನ್ನೈ: 67.78 ರೂ
ದೆಹಲಿ: 64.18
ಹೈದರಾಬಾದ್: 69.77
ಕೋಲ್ಕತಾ: 65.95
ಮುಂಬೈ: 67.18

ಇದನ್ನೂ ಓದಿ: ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳಲ್ಲಿ 45 ಸೀಟುಗಳು ಎನ್​ಸಿಪಿ-ಕಾಂಗ್ರೆಸ್​ ಹಂಚಿಕೆ; ಎಂಎನ್​ಎಸ್​ ಜೊತೆಗೆ ಮೈತ್ರಿಯಿಲ್ಲ
First published:January 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...