ಪೆಟ್ರೋಲ್​, ಡಿಸೇಲ್ ಬೆಲೆ 5 ರಿಂದ 6 ರೂ ಏರಿಕೆ ಸಾಧ್ಯತೆ; ಸಾಮಾನ್ಯರ ಜೇಬಿಗೆ ಬೀಳಲಿದೆ ಮತ್ತಷ್ಟು ಕತ್ತರಿ

ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ ಶೇ.10.68 ರಷ್ಟು ಏರಿಕೆಯಾಗಿದೆ. ಇದು ಭಾರತದ ಮಾರುಕಟ್ಟೆಯ ಮೇಲೆ ದೊಡ್ಡ ಪ್ರಮಾಣದ ಬೆಲೆ ಏರಿಳತಕ್ಕೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.

MAshok Kumar | news18-kannada
Updated:September 17, 2019, 4:06 PM IST
ಪೆಟ್ರೋಲ್​, ಡಿಸೇಲ್ ಬೆಲೆ 5 ರಿಂದ 6 ರೂ ಏರಿಕೆ ಸಾಧ್ಯತೆ; ಸಾಮಾನ್ಯರ ಜೇಬಿಗೆ ಬೀಳಲಿದೆ ಮತ್ತಷ್ಟು ಕತ್ತರಿ
ರೇಖಾಚಿತ್ರ: ಮಿರ್​ ಸುಹೇಲ್​
MAshok Kumar | news18-kannada
Updated: September 17, 2019, 4:06 PM IST
ನವ ದೆಹಲಿ (ಸೆಪ್ಟೆಂಬರ್16); ವಿಶ್ವದ ಪ್ರಮುಖ ತೈಲ ಉತ್ಪಾದನಾ ರಾಷ್ಟ್ರವಾದ ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಕಳೆದ ಶನಿವಾರ ಡ್ರೋನ್ ದಾಳಿಯಾಗಿರುವ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಕಚ್ಚಾತೈಲ ಬೆಲೆ ಏರಿಕೆಯಾಗಿದೆ. ಈ ಬೆಳವಣಿಗೆ ಭಾರತದ ಮೇಲೂ ಪರಿಣಾಮ ಬೀರಲಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಸಗಟು ವ್ಯಾಪಾರ ದರ ಶೀಘ್ರದಲ್ಲಿ 5 ರಿಂದ 6 ರೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಳೆದ ಶನಿವಾರ ಸೌದಿ ಅರೇಬಿಯಾದ ಎರಡು ಅರಾಮ್ಕೋ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದಿತ್ತು. ಈ ದಾಳಿಯಿಂದಾಗಿ ಸೌದಿ ಅರೇಬಿಯಾದ ತೈಲ ಉತ್ಪಾದನೆಯಲ್ಲಿ ಅರ್ಧದಷ್ಟು ಸ್ಥಗಿತವಾಗಿದೆ. ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಪೆಟ್ರೋಲಿಯಂ ಕಚ್ಚಾ ತೈಲಗಳ ಬೆಲೆ ದಿಢೀರ್ ಏರಿಕೆಯಾಗಿದೆ.

ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ ಶೇ.10.68 ರಷ್ಟು ಏರಿಕೆಯಾಗಿದೆ. ಇದು ಭಾರತದ ಮಾರುಕಟ್ಟೆಯ ಮೇಲೆ ದೊಡ್ಡ ಪ್ರಮಾಣದ ಬೆಲೆ ಏರಿಳತಕ್ಕೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.

ಭಾರತದ ಅತ್ಯಂತ ದೊಡ್ಡ ತೈಲ ಮಾರಾಟ ಜಾಲವಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹೆಚ್​ಪಿಸಿಎಲ್​ ಮತ್ತು ಬಿಪಿಸಿಎಲ್ ತಮ್ಮ ಕಂಪೆನಿಗಳ ಮೇಲಾಗುವ ನಷ್ಟವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆಯನ್ನು 5 ರಿಂದ 6 ರೂಪಾಯಿಯ ವರೆಗೆ ಎರಿಸುವ ಸಾಧ್ಯತೆ ಇದೆ. ಈಗಾಗಲೇ ಭಾರತದಲ್ಲಿ ಪೆಟ್ರೋಲ್ ನೆಲೆ ಪ್ರತಿ ಲೀಟರ್​ಗೆ 73 ರಿಂದ 78 ರೂ ಆಸುಪಾಸಿನಲ್ಲಿದೆ.

ವಿಶ್ವದಲ್ಲೇ ಅತಿಹೆಚ್ಚು ಪೆಟ್ರೋಲಿಯಂ ಕಚ್ಚಾತೈಲದ ಅನುಭೋಗ ರಾಷ್ಟ್ರ ಭಾರತ. ಭಾರತ ಗಲ್ಫ್ ರಾಷ್ಟ್ರಗಳಿಂದ ಪ್ರತಿದಿನ 5.7 ಮಿಲಿಯನ್ ಬ್ಯಾರೆಲ್​ನಷ್ಟು ಪೆಟ್ರೋಲಿಯಂ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಅಂದರೆ ವಿಶ್ವದ ಪೆಟ್ರೋಲ್ ಬೇಡಿಕೆಯಲ್ಲಿ ಭಾರತದ ಪಾಲು ಶೇ.5 ರಷ್ಟು. ಹೀಗಾಗಿ ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೃತಕವಾಗಿ ಸೃಷ್ಟಿಸಲಾಗಿರುವ ಪೆಟ್ರೋಲಿಯಂ ತೈಲ ಉತ್ಪನ್ನಗಳ ಬಿಕ್ಕಟ್ಟು ಈಗಾಗಲೇ ಕುಸಿದಿರುವ ಭಾರತದ ಆರ್ಥಿಕತೆಯ ಮೇಲೆ ಮತ್ತಷ್ಟು ಬರೆ ಎಳೆದಂತಾಗಿದೆ.

ಇದನ್ನೂ ಓದಿ : ಪೆಟ್ರೋಲ್ ಬಿಸಿ; ಸೌದಿ ಘಟಕಗಳ ಮೇಲೆ ಡ್ರೋನ್ ದಾಳಿ ಬೆನ್ನಲ್ಲೇ ಜಾಗತಿಕ ತೈಲ ಬೆಲೆ ಶೇ. 10ರಷ್ಟು ಏರಿಕೆ; ಇರಾನ್ ಮೇಲೆ ಅಮೆರಿಕ ಕೆಂಗಣ್ಣು

First published:September 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...