Petrol-diesel price: ಶೀಘ್ರದಲ್ಲೇ ಪೆಟ್ರೋಲ್​-ಡಿಸೇಲ್​ ಬೆಲೆ ಇಳಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಹೆಜ್ಜೆ

ಶುಕ್ರವಾರ ಲಕ್ನೋದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ 45 ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.  

ಪೆಟ್ರೋಲ್ ಬಂಕ್

ಪೆಟ್ರೋಲ್ ಬಂಕ್

  • Share this:
    ನವದೆಹಲಿ (ಸೆ. 14): ನಿರಂತರವಾಗಿ ಏರುತ್ತಿರುವ ಪೆಟ್ರೋಲ್​ -ಡಿಸೇಲ್​ (Petrol- diesel price )ಬೆಲೆಯಿಂದಾಗಿ ಜನರು ಹೈರಾಣಾಗಿದ್ದಾರೆ. ವಿರೋಧ ಪಕ್ಷಗಳು ಕೂಡ ಈ ಬೆಲೆ ಏರಿಕೆ ಖಂಡಿಸಿ ಆಡಳಿತ ಪಕ್ಷದ ಮೇಲೆ ಟೀಕೆ ನಡೆಸುತ್ತಿದೆ. ಪೆಟ್ರೋಲ್​- ಡಿಸೇಲ್​ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತಗಳು ಕೂಡ ಗಗನ ಮುಖಿಯಾಗಿದೆ. ಇದರಿಂದಾಗಿ ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಮನಗಂಡ ಸರ್ಕಾರ ಇದಕ್ಕೆ ಪರಿಹಾರ ಕಲ್ಪಿಸಲು ಮಹತ್ವದ ಹೆಜ್ಜೆಯನ್ನು ಇಡಲು ಮುಂದಾಗಿದೆ. ಪೆಟ್ರೋಲ್​ ಮತ್ತು ಡಿಸೇಲ್​ ಹಣ ದುಬ್ಬರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಹೊಸ ಯೋಜನೆ ರೂಪಿಸಲು ಮುಂದಾಗಿದೆ.

     ಜಿಎಸ್​ಟಿ  ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನ

    ಸರಕು ಮತ್ತು ಸೇವಾ ತೆರಿಗೆ (GST) ಮೇಲೆ ಒಂದೇ ರಾಷ್ಟ್ರೀಯ ದರದ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಮಂತ್ರಿಗಳ ಸಮಿತಿಯು ಪರಿಗಣಿಸಲು ಸಿದ್ದತೆ ನಡೆಸಿದೆ. ಮುಂದಿನ ಸಭೆಯ ವೇಳೆ ಗ್ರಾಹಕರ ಬೆಲೆ ಮತ್ತು ಸರ್ಕಾರದ ಆದಾಯದಲ್ಲಿ ಸಂಭವನೀಯ ಪ್ರಮುಖ ಬದಲಾವಣೆಗೆ ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ.

    ಶುಕ್ರವಾರ ಜಿಎಸ್​ಟಿ ಸಭೆ

    ಶುಕ್ರವಾರ ಲಕ್ನೋದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ 45 ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

    ಇದನ್ನು ಓದಿ: ವಾಯು ಸೇನೆಯಲ್ಲಿ ಕೆಲಸ ಮಾಡುವ ಕನಸಿದ್ಯಾ? SSLC, PUC ಆದವರಿಗೂ ಇಲ್ಲಿದೆ ಉತ್ತಮ ಅವಕಾಶ

    ಕೆಲವರ ವಿರೋಧ

    ಜಿಎಸ್​ಟಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಬೇಕು ಎಂದರೆ, ಸಮಿತಿಯ ನಾಲ್ಕನೇ ಮೂರು ಭಾಗ ಅನುಮೋದನೆ ಅಗತ್ಯ. ಇನನು ಈ ಸಮಿತಿಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರತಿನಿಧಿಗಳು ಭಾಗಿಯಾಗುತ್ತಾರೆ. ಈ ವೇಳೆ ಈ ಕುರಿತು ಪ್ರಸ್ತಾಪಿಸಲಾಗುವುದು. ಇನ್ನು ಇಂಧನವನ್ನು ಜಿಎಸ್‌ಟಿಯಲ್ಲಿ ಸೇರಿಸುವ ಪ್ರಸ್ತಾಪವನ್ನು ಈಗಾಗಲೇ ಕೆಲವರು ವಿರೋಧಿಸಿದ್ದಾರೆ, ಕಾರಣ, ಕೇಂದ್ರ ಸರ್ಕಾರದ ಪ್ರಮುಖ ಆದಾಯ-ಉತ್ಪಾದಿಸುವ ಸಾಧನವನ್ನು ಹಸ್ತಾಂತರಿಸದಂತೆ ಆಗಲಿದೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

    ಇದನ್ನು ಓದಿ: ಮಾರುಕಟ್ಟೆ ಪರಿಣಿತರಿಂದ ಉತ್ತಮ ಹೂಡಿಕೆ ಸಲಹೆಗಳು; ಹೇಗೆ ಹೂಡಿಕೆ ಮಾಡಬೇಕು?

    100ರ ಗಡಿ ದಾಟಿರುವ ಪೆಟ್ರೋಲ್​-ಡಿಸೇಲ್

    ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಹೆಚ್ಚಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಕಳೆದ ಒಂಬತ್ತನೇ ದಿನದಿಂದ ಪೆಟ್ರೋಲ್​ ಬೆಲೆ ಸ್ಥಿರವಾಗಿವೆ.  ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 101.19 ರೂ. ಅದೇ ಸಮಯದಲ್ಲಿ, ಡೀಸೆಲ್ ಪ್ರತಿ ಲೀಟರ್‌ಗೆ 88.62 ರೂ ಆಗಿದೆ.

    ಸರ್ಕಾರದ ಖಜಾನೆ ತುಂಬುತ್ತಿರುವ ಪೆಟ್ರೋಲ್​-ಡಿಸೇಲ್

    ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸರ್ಕಾರದ ಅಬಕಾರಿ ಸುಂಕ ಸಂಗ್ರಹವು ಶೇಕಡಾ 48 ರಷ್ಟು ಹೆಚ್ಚಾಗಿದೆ. ಅಂದರೆ, ಬೆಲೆ ಏರಿಕೆಯ ನಡುವೆ, ಪೆಟ್ರೋಲ್ ಮತ್ತು ಡೀಸೆಲ್ ಸರ್ಕಾರದ ಖಜಾನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅಬಕಾರಿ ಸುಂಕ ಸಂಗ್ರಹವು 2021 ರ ಏಪ್ರಿಲ್ ನಿಂದ ಜುಲೈವರೆಗೆ 1 ಲಕ್ಷ ಕೋಟಿ ಮೀರಿದೆ, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 67,895 ಕೋಟಿ ರೂ. ಅದೇ ಸಮಯದಲ್ಲಿ, 2020-21ರ ಆರ್ಥಿಕ ವರ್ಷದಲ್ಲಿ, ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸಂಗ್ರಹಿಸಿದ ತೆರಿಗೆಯಲ್ಲಿ ಶೇಕಡಾ 88 ರಷ್ಟು ಏರಿಕೆಯಾಗಿದೆ ಮತ್ತು ಈ ಮೊತ್ತವು 3.35 ಲಕ್ಷ ಕೋಟಿಗಳಷ್ಟಿದೆ.
    Published by:Seema R
    First published: