HOME » NEWS » National-international » PETROL DIESEL PRICE WHY PETROL AND DIESEL PRICE HIKED CONTINUOUSLY IN INDIA STG LG

Petrol Diesel Price: ಪೆಟ್ರೋಲ್‌, ಡೀಸೆಲ್‌ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದೇಕೆ?; ಇಲ್ಲಿದೆ ಸಂಪೂರ್ಣ ಮಾಹಿತಿ...!

ದೇಶದಲ್ಲಿ ಜನಸಾಮಾನ್ಯರು ತೈಲ ಬೆಲೆಯ ಮೂಲ ಬೆಲೆಗಿಂತಲೂ ಹೆಚ್ಚಿನ ಬೆಲೆಯನ್ನು ತೆರಿಗೆ ರೂಪದಲ್ಲಿ ಪಾವತಿಸುತ್ತಿದ್ದಾರೆ. ಪ್ರತಿದಿನವೂ ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿರುವ ತೈಲದರದಿಂದಾಗಿ ಜನಸಾಮಾನ್ಯರು ಮಾತ್ರ ಹೈರಾಣಾಗುತ್ತಿದ್ದು, ಜೇಬು ಖಾಲಿ ಮಾಡಿಕೊಳ್ಳುತ್ತಿದ್ದಾರೆ.

news18-kannada
Updated:February 17, 2021, 2:51 PM IST
Petrol Diesel Price: ಪೆಟ್ರೋಲ್‌, ಡೀಸೆಲ್‌ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದೇಕೆ?; ಇಲ್ಲಿದೆ ಸಂಪೂರ್ಣ ಮಾಹಿತಿ...!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಫೆ.17): ಭಾರತದಲ್ಲಿ ತೈಲ ಕಂಪನಿಗಳು ಇಂಧನ ದರವನ್ನು ಏರಿಸುತ್ತಲೇ ಇವೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಪ್ರತಿ ಲೀಟರ್‌ಗೆ 89 ರೂ. ಆಗಿದ್ದರೆ, ಮುಂಬೈನಲ್ಲಿ ಡೀಸೆಲ್ ಪ್ರತಿ ಲೀಟರ್‌ಗೆ 86.30 ರೂ.ಗೆ ಏರಿಕೆಯಾಗಿದೆ. ತೈಲ ದರಗಳನ್ನು ಪ್ರತಿದಿನವೂ ಪರಿಷ್ಕರಿಸುವುದು ಸರ್ಕಾರಿ ಒಡೆತನದ ತೈಲ ಕಂಪನಿಗಳೇ ಆದರೂ ಈ ಕಂಪನಿಗಳು ತೈಲ ಬೆಲೆ ಏರಿಕೆಗೆ ಸರ್ಕಾರವನ್ನೇ ಹೊಣೆ ಮಾಡುತ್ತವೆ. ಸರ್ಕಾರ ವಿಧಿಸುವ ಹೆಚ್ಚಿನ ತೆರಿಗೆ ಪರಿಣಾಮ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಸುವುದು ಅನಿವಾರ್ಯ. ಸರ್ಕಾರ ಇಂಧನಗಳ ಮೇಲೆನ ತೆರಿಗೆ ಇಳಿಕೆ ಮಾಡಿದರಷ್ಟೇ ಬೆಲೆ ಇಳಿಕೆಯಾಗಲು ಸಾಧ್ಯವೆಂದು ತೈಲಕಂಪನಿಗಳು ಹೇಳುತ್ತವೆ.

ಇಂಧನ ದರ ಗಗನಮುಖಿಯಾಗಲು ಹಲವು ಅಂಶಗಳು ಕಾರಣವಾಗುತ್ತವೆ. ಅದರಲ್ಲಿ ಕಚ್ಚಾತೈಲದ ಬೆಲೆ ಏರಿಕೆಯೂ ಒಂದು. ಭಾರತದಲ್ಲಿ ಇಂಧನಕ್ಕೆ ಬೇಡಿಕೆ ಹೆಚ್ಚಾದಂತೆ ಕಚ್ಚಾತೈಲದ ಬೇಡಿಕೆಯೂ ಹೆಚ್ಚಾಗುತ್ತದೆ. ದೇಶದ ಬಳಸುವ ಕಚ್ಚಾತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಇಂಧನ ಬೆಲೆ ಏರಿಕೆಗೆ ಕಚ್ಚಾತೈಲದ ದರವೂ ಕೂಡ ನೇರ ಪರಿಣಾಮವನ್ನುಂಟು ಮಾಡುತ್ತದೆ. ತೈಲ ಕಂಪನಿಗಳು ಅಂತಾರಾಷ್ಟ್ರೀಯ ತೈಲ ಬೆಲೆ ಆಧರಿಸಿಯೇ ಇಂಧನ ಬೆಲೆ ಪರಿಷ್ಕರಿಸುತ್ತವೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಇಂಧನ ಬಳಕೆ ಪೂರ್ಣ ಸ್ಥಗಿತಗೊಂಡ ಕಾರಣ ಕಚ್ಚಾತೈಲದ ಬೆಲೆ ಇಳಿಕೆಯಾಗಿತ್ತು. ಮತ್ತೆ ಅಕ್ಟೋಬರ್‌ನಿಂದ ಜಾಗತಿಕ ಕಚ್ಚಾತೈಲದ ಬೆಲೆಗಳಲ್ಲಿ ಶೇ.50 ಕ್ಕಿಂತ ಹೆಚ್ಚಾಗಿದ್ದು, ಪ್ರತಿ ಬ್ಯಾರೆಲ್‌ಗೆ 63.3 ಡಾಲರ್ ನಷ್ಟು ಏರಿಕೆಯಾಗಿದೆ ಎಂದು ಸರ್ಕಾರ ಹೇಳುತ್ತಿದೆ.

ಕಚ್ಚಾ ವಸ್ತುಗಳ ಬೆಲೆಗಳು ಕಳೆದ ವರ್ಷದ ಮಟ್ಟಕ್ಕೆ ತಲುಪಿಲ್ಲವಾದರೂ ಕೂಡ ಭಾರತೀಯ ಜನರು ಕಳೆದ ಜನವರಿಯಲ್ಲಿ ನೀಡುತ್ತಿದ್ದ ಹಣಕ್ಕಿಂತ ಹೆಚ್ಚಿನ ಮೊತ್ತವನ್ನು ಈಗಾಗಲೇ ಪಾವತಿಸುತ್ತಿದ್ದಾರೆ. ಇತರ ದೇಶಗಳಲ್ಲಿ ಎರಡೂ ಇಂಧನಗಳ ಬೆಲೆಗಳು ಕೇವಲ ಪ್ರಾಥಮಿಕ ಹಂತದಲ್ಲಿದ್ದರೆ, ಭಾರತೀಯ ಗ್ರಾಹಕರು ಮಾತ್ರ ಹೆಚ್ಚಿನ ಹಣ ಪಾವತಿಸುತ್ತಿದ್ದಾರೆ.

ರಾಮಮಂದಿರ ನಿರ್ಮಾಣ: ದೇಣಿಗೆ ಸಂಗ್ರಹ ನೆಪದಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ; ಕುಮಾರಸ್ವಾಮಿ ಆರೋಪ

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಗ್ರಾಹಕರು ಏಕೆ ಹೆಚ್ಚು ಪಾವತಿಸುತ್ತಿದ್ದಾರೆ?

ಚಿಲ್ಲರೆ ವ್ಯಾಪಾರಿ ಸಿದ್ಧಾಂತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅನಿಯಂತ್ರಿತವಾಗಿವೆ ಅಥವಾ ಜಾಗತಿಕ ಕಚ್ಚಾ ತೈಲ ಬೆಲೆಗಳೊಂದಿಗೆ ಸಂಬಂಧ ಹೊಂದಿವೆ. ಇದರರ್ಥ ಕಚ್ಚಾವಸ್ತುಗಳ ಬೆಲೆಗಳು ಕುಸಿದರೆ ಚಿಲ್ಲರೆ ಮಾರಾಟದ ಬೆಲೆಗಳು ಸಹ ಕಡಿಮೆಯಾಗಬೇಕು. ಆದರೆ ಇದು ನಿಜವಾಗಿಯೂ ಹೀಗಾಗುವುದಿಲ್ಲ, ತೈಲ ಬೆಲೆ ನಿಯಂತ್ರಣವು ಹೆಚ್ಚಾಗಿ ಭಾರತದಲ್ಲಿ ಏಕಮುಖವಾಗಿದೆ. ಆದ್ದರಿಂದ ಜಾಗತಿಕ ಬೆಲೆಗಳು ಏರಿದಾಗ ಇದರ ಪರಿಣಾಮವು ಗ್ರಾಹಕನ ಮೇಲಾಗುತ್ತದೆ. ಅವರು ಬಳಸುವ ಪ್ರತಿ ಲೀಟರ್ ಇಂಧನಕ್ಕೆ ಹೆಚ್ಚು ಬೆಲೆ ತೆರಬೇಕಾಗುತ್ತದೆ. ಆದರೆ ಇದು ಉಲ್ಟಾ ಆದಾಗ ಮತ್ತು ಬೆಲೆಗಳು ಇಳಿಕೆಯಾದಾಗ ಸರ್ಕಾರವು ಪೂರ್ವನಿಯೋಜಿತವಾಗಿ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಹೊಸ ತೆರಿಗೆ ಮತ್ತು ಸುಂಕ ವಿಧಿಸುತ್ತದೆ. ಇದರಿಂದ ಬೆಲೆ ಇಳಿಕೆಯ ಲಾಭ ಪಡೆಯಬೇಕಾಗಿದ್ದ ಜನಸಾಮಾನ್ಯರಿಗೆ ಹೊಸ ತೆರಿಗೆ ಹೊರೆ ಬೀಳುತ್ತದೆ.

ಕಚ್ಚಾ ತೈಲ ಬೆಲೆಗಳು ಈಗ ಏಕೆ ಹೆಚ್ಚುತ್ತಿವೆ?ಕೊರೊನಾ ಸಾಂಕ್ರಾಮಿಕ ರೋಗ ವಿಶ್ವದಾದ್ಯಂತ ಹರಡಿದ ನಂತರ 2020ರ ಏಪ್ರಿಲ್‌ನಲ್ಲಿ ಕಚ್ಚಾತೈಲದ ಬೆಲೆ ಮತ್ತು ಬೇಡಿಕೆಯಲ್ಲಿ ಕುಸಿತ ಕಂಡಿತು. ಆದರೆ ಆರ್ಥಿಕತೆಗಳ ಮೇಲಿನ ನಿರ್ಬಂಧವನ್ನು ಕಡಿಮೆ ಮಾಡಿರುವುದರಿಂದ ಮತ್ತು ಕಾರ್ಖಾನೆಯ ಉತ್ಪಾದನೆಯು ಹೆಚ್ಚಾದಂತೆ ಜಾಗತಿಕ ಬೇಡಿಕೆ ಸುಧಾರಿಸಿದೆ ಮತ್ತು ಬೆಲೆಗಳು ಚೇತರಿಸಿಕೊಳ್ಳುತ್ತಿವೆ. ಜೂನ್ ಮತ್ತು ಅಕ್ಟೋಬರ್ ನಡುವೆ ಬ್ಯಾರೆಲ್‌ಗೆ ಸುಮಾರು 40 ಡಾಲರ್ ನಂತೆ ವಹಿವಾಟು ನಡೆಸುತ್ತಿದ್ದ ಬ್ರೆಂಟ್ ಕಚ್ಚಾತೈಲವು ನವೆಂಬರ್‌ನಲ್ಲಿ ಏರಿಕೆಯಾಗಲು ಪ್ರಾರಂಭಿಸಿತು ಮತ್ತು ಕೋವಿಡ್-19 ಲಸಿಕೆ ಜಾಗತಿಕವಾಗಿ ಲಭ್ಯವಾಗುವ ಮುನ್ಸೂಚನೆ ಹೆಚ್ಚಿದಂತೆ ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ 60 ಡಾಲರ್ ದಾಟಿದೆ.

ಇಂಧನ ಬೆಲೆಯ ಮೇಲೆ ತೆರಿಗೆಯ ಪರಿಣಾಮ ಏನು?

ಕೇಂದ್ರ ಸರ್ಕಾರವು ಕಳೆದ ವರ್ಷದ ಅವಧಿಯಲ್ಲಿ ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. 2020ರ ಆರಂಭದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲಿದ್ದ 19.98 ರೂ. ಅಬಕಾರಿ ಸುಂಕವನ್ನು 32.98 ರೂ.ಗೆ ಹೆಚ್ಚಿಸಿದರೆ, ಪ್ರತಿ ಲೀಟರ್ ಡೀಸೆಲ್ ಮೇಲಿದ್ದ 15.83 ರೂ. ತೆರಿಗೆಯನ್ನು 31.83 ರೂ.ಗೆ ಹೆಚ್ಚಿಸಿತು. ಸಾಂಕ್ರಾಮಿಕ ರೋಗದಿಂದ ಆರ್ಥಿಕ ಚಟುವಟಿಕೆಗಳು ಕುಸಿಯುತ್ತಿದ್ದಂತೆ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿತ್ತು.

ಹಲವಾರು ರಾಜ್ಯಗಳು ತಮ್ಮ ಆದಾಯವನ್ನು ಹೆಚ್ಚಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿವೆ. ದೆಹಲಿ ಸರ್ಕಾರ ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ.27 ರಿಂದ 30ಕ್ಕೆ ಏರಿಸಿದೆ. ಅದರಂತೆ ಡೀಸೆಲ್ ಮೇಲಿನ ವ್ಯಾಟ್ ಅನ್ನು ಮೇ ತಿಂಗಳಲ್ಲಿ ಶೇ.16.75 ರಿಂದ 3 ಕ್ಕೆ ಏರಿಸಿದೆ, ಆದರೆ ಜುಲೈನಲ್ಲಿ ಅದನ್ನು ಮತ್ತೆ 16.75ಕ್ಕೆ ಇಳಿಸಿದೆ.

ದೇಶದಲ್ಲಿ ಜನಸಾಮಾನ್ಯರು ತೈಲ ಬೆಲೆಯ ಮೂಲ ಬೆಲೆಗಿಂತಲೂ ಹೆಚ್ಚಿನ ಬೆಲೆಯನ್ನು ತೆರಿಗೆ ರೂಪದಲ್ಲಿ ಪಾವತಿಸುತ್ತಿದ್ದಾರೆ. ಪ್ರತಿದಿನವೂ ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿರುವ ತೈಲದರದಿಂದಾಗಿ ಜನಸಾಮಾನ್ಯರು ಮಾತ್ರ ಹೈರಾಣಾಗುತ್ತಿದ್ದು, ಜೇಬು ಖಾಲಿ ಮಾಡಿಕೊಳ್ಳುತ್ತಿದ್ದಾರೆ.
Published by: Latha CG
First published: February 17, 2021, 2:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories