Petrol, Diesel Prices on August 22 ಬೆಂಗಳೂರು: ಸತತ ಮೂರು ದಿನಗಳಿಂದ ಇಳಿಕೆ ಕಂಡಿದ್ದ ಡೀಸೆಲ್ ದರ ನಿನ್ನೆ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಇಂದು ಮತ್ತೆ ಡೀಸೆಲ್ ದರ ಕಡಿಮೆಯಾಗಿದೆ. ಜೊತೆಗೆ ಪೆಟ್ರೋಲ್ ದರವೂ ಕಡಿಮೆಯಾಗಿದೆ. ಹೌದು, ಇಂದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 20 ಪೈಸೆ ಕಡಿಮೆಯಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ ಡೀಸೆಲ್ ಒಂದು ಲೀಟರ್ಗೆ 21 ಪೈಸೆಯಷ್ಟು ಇಳಿಕೆಯಾಗಿತ್ತು. ಬೆಂಗಳೂರಿನಲ್ಲಿ ಡೀಸೆಲ್ ರೇಟ್ ಲೀಟರ್ಗೆ 94.65 ಇತ್ತು. ಇಂದು ಡೀಸೆಲ್ ದರ 94.29 ರೂ. ಇದೆ. ಆಗಸ್ಟ್ 18ರಂದು ಕೂಡ ಡೀಸೆಲ್ ದರ 21 ಪೈಸೆ ಇಳಿಕೆ ಕಂಡಿತ್ತು. ಆಗಸ್ಟ್ 19ರಂದು 19 ಪೈಸೆ ತಗ್ಗಿತ್ತು. ಆಗಸ್ಟ್ 12ರಂದು 6 ಪೈಸೆ ಬೆಲೆ ಹೆಚ್ಚಳ ಕಂಡಿದ್ದ ಡೀಸೆಲ್ ಅದಾದ ಬಳಿಕ ಏರಿಕೆ ಕಂಡಿಲ್ಲ. ಇದೇ ವೇಳೆ, ಪೆಟ್ರೋಲ್ ದರ ಯಥಾಸ್ಥಿತಿ ಮುಂದುವರಿದಿದೆ. ಆಗಸ್ಟ್ 10 ಮತ್ತು 11ರಂದು ಏರುಪೇರು ಆಗಿದ್ದು ಬಿಟ್ಟರೆ ಉಳಿದಂತೆ ಕಳೆದ 35 ದಿನಗಳಿಂದ ಪೆಟ್ರೋಲ್ ದರ ವ್ಯತ್ಯಾಸ ಕಂಡಿರಲಿಲ್ಲ.
36ನೇ ದಿನ ಪೆಟ್ರೋಲ್ ಬೆಲೆಯಲ್ಲಿ 20 ಪೈಸೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಸದ್ಯ ಪೆಟ್ರೋಲ್ ದರ ಲೀಟರ್ಗೆ 105 ರೂಪಾಯಿ ಆಗಿದೆ. ನಿನ್ನೆವರೆಗೆ 105.25 ಇತ್ತು. ಚೆನ್ನೈನಲ್ಲಿ ತೆರಿಗೆ ಇಳಿಕೆಯಿಂದಾಗಿ ಅಲ್ಲಿ ಪೆಟ್ರೋಲ್ ದರ ನೂರು ರೂಗಿಂತ ಕೆಳಗೆ ಇದೆ. ಆಗಸ್ಟ್ 18ರಿಂದ 20ರವರೆಗೆ ಸತತ ಮೂರು ದಿನಗಳ ಕಾಲ ಡೀಸೆಲ್ ದರ 60 ಪೈಸೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ಪೆಟ್ರೋಲ್ ದರ ಯಥಾಸ್ಥಿತಿ ಕಾಯ್ದುಕೊಂಡಿತ್ತು.
ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಮಾರುಕಟ್ಟೆ ನಿಯಂತ್ರಿತವಾಗಿವೆ ಎಂದು ಸರ್ಕಾರ ಹೇಳುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಾಗುವ ಬದಲಾವಣೆಯು ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತೆರಿಗೆ ಹಾಕುತ್ತವೆ. ಪೆಟ್ರೋಲ್ ಬೆಲೆಯಲ್ಲಿ ಶೇ. 60 ರಷ್ಟು ಭಾಗ ತೆರಿಗೆಯೇ ಆಗಿರುತ್ತದೆ ಎಂಬುದು ಗಮನಾರ್ಹ.
ಇದನ್ನೂ ಓದಿ:Afghanistan Crisis- ಅಫ್ಘಾನಿಸ್ತಾನದಿಂದ ಭಾರತಕ್ಕೆ ಸುರಕ್ಷಿತವಾಗಿ ಬಂದಿಳಿದ 390 ಮಂದಿ
ಕೇಂದ್ರ ಸರ್ಕಾರ ಪ್ರತೀ ಲೀಟರ್ ಪೆಟ್ರೋಲ್ಗೆ ವಿಧಿಸುವ ಅಬಕಾರಿ ಸುಂಕದ ಮೊತ್ತ 32.90 ರೂ ಇರುತ್ತದೆ. ಹಾಗೆಯೇ, ಡೀಸೆಲ್ ಬೆಲೆಯಲ್ಲಿ ಶೇ. 54ರಷ್ಟು ತೆರಿಗೆ ಇದೆ. ಇದರಲ್ಲಿ ಅಬಕಾರಿ ಸುಂಕದ ಮೊತ್ತ 31.80 ರೂ ಇದೆ. ಇನ್ನು, ರಾಜ್ಯ ಸರ್ಕಾರಗಳೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಮ್ಮದೇ ಮೌಲ್ಯ ವರ್ಧಿತ ತೆರಿಗೆ (VAT – Value Added Tax) ತೆರಿಗೆ ವಿಧಿಸುತ್ತವೆ.
ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ವ್ಯಾಟ್ ತೆರಿಗೆ ಇರುವುದರಿಂದ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ರಾಜಸ್ಥಾನ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಅತಿ ಹೆಚ್ಚು ವ್ಯಾಟ್ ತೆರಿಗೆ ಇದೆ. ಇತ್ತೀಚೆಗಷ್ಟೇ ತಮಿಳುನಾಡು ಸರ್ಕಾರ ಆಗಸ್ಟ್ 14ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನ 3 ರೂಪಾಯಿಯಷ್ಟು ಕಡಿತಗೊಳಿಸಿತ್ತು. ಪರಿಣಾಮವಾಗಿ ಚೆನ್ನೈ ಹಾಗೂ ಇತರ ತಮಿಳುನಾಡು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ತಗ್ಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರ:
ಬೆಂಗಳೂರು:
ಪೆಟ್ರೋಲ್ ದರ: 105.00 ರೂ
ಡೀಸೆಲ್ ದರ: 94.29 ರೂ
ದೆಹಲಿ:
ಪೆಟ್ರೋಲ್ ದರ: 101.64 ರೂ
ಡೀಸೆಲ್ ದರ: 89.07 ರೂ
ಮುಂಬೈ:
ಪೆಟ್ರೋಲ್ ದರ: 107.66 ರೂ
ಡೀಸೆಲ್ ದರ: 96.64 ರೂ
ಕೋಲ್ಕತಾ:
ಪೆಟ್ರೋಲ್ ದರ: 101.93 ರೂ
ಡೀಸೆಲ್ ದರ: 92.13
ಚೆನ್ನೈ:
ಪೆಟ್ರೋಲ್ ದರ: 99.32
ಡೀಸೆಲ್ ದರ: 93.66
ಭೋಪಾಲ್:
ಪೆಟ್ರೋಲ್ ದರ: 110
ಡೀಸೆಲ್ ದರ: 97.80
ಪಾಟ್ನಾ:
ಪೆಟ್ರೋಲ್ ದರ: 140.10
ಡೀಸೆಲ್ ದರ: 94.86
ಇದನ್ನೂ ಓದಿ:Karnataka Schools Reopen: ರಾಜ್ಯದಲ್ಲಿ ನಾಳೆಯಿಂದ ಶಾಲೆಗಳು ಶುರು; ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ