Diesel Price: ಇನ್ನೂ ನಿಂತಿಲ್ಲ ಡೀಸೆಲ್‌ ಬೆಲೆ ಏರಿಕೆ ಪರ್ವ; ಲಾಕ್‌ಡೌನ್‌ ನಡುವೆಯೂ ಜನ ಸಾಮಾನ್ಯರ ಜೇಬಿಗೆ ಕತ್ತರಿ

Petrol Price: ಕಳೆದ ತಿಂಗಳು ಬರೊಬ್ಬರಿ 23 ದಿನ‌ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ಈಗ ಕಳೆದ ಹತ್ತು ದಿನದಲ್ಲಿ ಐದನೇ ಬಾರಿಗೆ ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರತಿ ಲೀಟರ್ ಡೀಸೆಲ್ ಗೆ ಒಟ್ಟು 11.83 ರೂಪಾಯಿ ಹೆಚ್ಚಳ ಮಾಡಿದೆ.

news18-kannada
Updated:July 17, 2020, 12:38 PM IST
Diesel Price: ಇನ್ನೂ ನಿಂತಿಲ್ಲ ಡೀಸೆಲ್‌ ಬೆಲೆ ಏರಿಕೆ ಪರ್ವ; ಲಾಕ್‌ಡೌನ್‌ ನಡುವೆಯೂ ಜನ ಸಾಮಾನ್ಯರ ಜೇಬಿಗೆ ಕತ್ತರಿ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ (ಜುಲೈ 17): ಕೊರೋನಾ ಮತ್ತು ಸತತ ಲಾಕ್‌ಡೌನ್‌ ಕಾರಣದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ದೇಶಗಳ ಆರ್ಥಿಕತೆ ನೆಲ ಕಚ್ಚಿದೆ. ಹೀಗಾಗಿ ತೈಲಕ್ಕೆ ಹೆಚ್ಚು ಬೆಲೆ ನಿಗದಿಪಡಿಸುವ ಮೂಲಕ ಕೊರೋನಾ ಪೀಡಿತ ದೇಶಗಳನ್ನು ಮತ್ತಷ್ಟು ಸಂಕಷ್ಟ ದೂಡುವುದು ಬೇಡ ಎಂಬ ಕಾರಣಕ್ಕೆ ಗಲ್ಫ್‌ ರಾಷ್ಟ್ರಗಳ ಒಕ್ಕೂಟ ಸಭೆ ಸೇರಿ ಒಮ್ಮತದಿಂದ ತೈಲ ಬೆಲೆಯನ್ನು ಗಣನೀಯವಾಗಿ ಇಳಿಸಿವೆ. 1989ರ ನಂತರ ಕಳೆದ 30 ವರ್ಷಗಳ ಇತಿಹಾಸದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಷ್ಟು ಕಡಿಮೆ ಬೆಲೆಗೆ ಕಚ್ಚಾತೈಲವನ್ನು ಮಾರಿದ ಇತಿಹಾಸವೇ ಇಲ್ಲ. ಆದರೂ, ಭಾರತದಲ್ಲಿ ಮಾತ್ರ ತೈಲ ಬೆಲೆಯನ್ನು ನಿರಂತರವಾಗಿ ಏರಿಸಲಾಗುತ್ತಿದೆ.

ಕಳೆದ ಮಾರ್ಚ್‌.25 ರಿಂದ ಭಾರತದಲ್ಲಿ ಕೊರೋನಾ ನಿಯಂತ್ರಿಸುವ ಕಾರಣಕ್ಕಾಗಿ ಲಾಕ್‌ಡೌನ್‌ ಘೋಷಿಸಲಾಗಿದೆ. ಇದೀಗ ಹಂತಹಂತವಾಗಿ ಲಾಕ್‌ಡೌನ್‌ ಸಡಿಲಿಸಿದರೂ ಸಹ ದೇಶದ ಆರ್ಥಿಕತೆ ನೆಲ ಕಚ್ಚಿದೆ. ವ್ಯಾಪಾರ ವಹಿವಾಟು ಹಳ್ಳ ಹಿಡಿದಿದೆ. ಪರಿಣಾಮ ಲಕ್ಷಾಂತರ ಜನ ಕೆಲಸ ಮತ್ತು ವ್ಯವಹಾರ ಕಳೆದುಕೊಂಡು ಬೀದಿಗೆ ಬೀಳುವಂತಹ ಪರಿಸ್ಥಿತಿ ಎದುರಾಗಿದೆ. ಕಳೆದ 40 ವರ್ಷಗಳಲ್ಲಿ ಭಾರತ ಈವರೆಗೆ ಕಂಡಿರದಷ್ಟು ನಿರುದ್ಯೋಗ ತಾಂಡವವಾಡುತ್ತಿದೆ. ಆದರೂ, ಇದಕ್ಕೆಲ್ಲ ಪರಿಹಾರ ನೀಡದ ಸರ್ಕಾರ ಕಳೆದ 6 ವಾರಗಳ ಅವಧಿಯಲ್ಲಿ ತೈಲಗಳ ಬೆಲೆಯನ್ನು ಮಾತ್ರ ಸತತ 28 ಬಾರಿ ಹೆಚ್ಚಿಸಿ ದಾಖಲೆ ಬರೆದಿದೆ.

6 ವಾರದಲ್ಲಿ 27 ಬಾರಿ ತೈಲ ಬೆಲೆ ಏರಿಕೆ:  

ಜೂನ್‌ ತಿಂಗಳ ಆರಂಭದಿಂದಲೂ ಕೇಂದ್ರ ಸರ್ಕಾರ ಪೆಟ್ರೋಲ್ - ಡೀಸೆಲ್‌ ಬೆಲೆಯನ್ನು ಸತತವಾಗಿ ಏರಿಸುತ್ತಲೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ.

ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ‌ ಸತ್ಸಂಪ್ರದಾಯವನ್ನು ಮರೆತಂತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಲೇ ಇದೆ.

ಕಳೆದ ತಿಂಗಳು ಬರೊಬ್ಬರಿ 23 ದಿನ‌ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ಈಗ ಕಳೆದ ಹತ್ತು ದಿನದಲ್ಲಿ ಐದನೇ ಬಾರಿಗೆ ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ ಪ್ರತಿ ಲೀಟರ್ ಡೀಸೆಲ್ ಗೆ ಒಟ್ಟು 11.83 ರೂಪಾಯಿ ಹೆಚ್ಚಳ ಮಾಡಲಾಗಿದೆ. ಡೀಸೆಲ್‌ ಬೆಲೆ ಹೀಗೆ ಅಧಿಕವಾಗುತ್ತಾ ಸಾಗಿದರೆ, ದೇಶದಲ್ಲಿ ಅಗತ್ಯ ದಿನೋಪಯೋಗಿ ವಸ್ತುಗಳ ಬೆಲೆಯೂ ಗಣನೀಯವಾಗಿ ಏರಲಿದೆ ಇದು ಸಾಮಾನ್ಯ ಜನರ ಬದುಕಿನ ಮೇಲೆ ವ್ಯತಿರೀಕ್ತ ಪಡಿಣಾಮ ಬೀರಲಿದೆ ಎಂಬುದು ತಜ್ಞರ ಅಭಿಪ್ರಾಯ.

ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈ ರೀತಿ ಇವೆ.

  • ಭೂಪಾಲ್- ಪೆಟ್ರೋಲ್ 88.08 ರೂ, ಡೀಸೆಲ್ 80.69 ರೂ.

  • ಮುಂಬೈ- ಪೆಟ್ರೋಲ್ 87.19 ರೂ, ಡೀಸೆಲ್ 79.58 ರೂ.

  • ಚೆನ್ನೈ- ಪೆಟ್ರೋಲ್ 83.63 ರೂ, ಡೀಸೆಲ್ 78.42 ರೂ.

  • ಪಾಟ್ನಾ- ಪೆಟ್ರೋಲ್ 83.31ರೂ, ಡೀಸೆಲ್ 78.18 ರೂ.

  • ಬೆಂಗಳೂರು- ಪೆಟ್ರೋಲ್ 83.02 ರೂ, ಡೀಸೆಲ್ 76.90 ರೂ.

  • ಕೋಲ್ಕತ್ತಾ- ಪೆಟ್ರೋಲ್ 82.10 ರೂ, ಡೀಸೆಲ್ 76.46 ರೂ.

  • ಲಕ್ನೋ- ಪೆಟ್ರೋಲ್ 80.98 ರೂ, ಡೀಸೆಲ್ 73.22ರೂ.

  • ದೆಹಲಿ- ಪೆಟ್ರೋಲ್ 80.43 ರೂ, ಡೀಸೆಲ್ 81.35 ರೂ.

  • ರಾಂಚಿ- ಪೆಟ್ರೋಲ್ 80.29 ರೂ, ಡೀಸೆಲ್ 77.25 ರೂ.

Published by: MAshok Kumar
First published: July 17, 2020, 7:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading