HOME » NEWS » National-international » PETROL DIESEL PRICE DOWN 7 TO 8 RUPEES AFTER METHANOL BLENDING

ಗುಡ್ ​ನ್ಯೂಸ್: ಕೆಲವೇ ದಿನಗಳಲ್ಲಿ ಪೆಟ್ರೋಲ್ ದರ 8 ರೂ. ಇಳಿಕೆ..!

ಮೆಥನಾಲ್ ರಾಸಾಯನಿಕ ಎಥನಾಲ್​ಗಿಂತ ಅಗ್ಗವಾಗಿದೆ. ಒಂದು ಲೀಟರ್​ ಎಥನಾಲ್​ಗೆ 40 ರೂ. ಆದರೆ ಮೆಥನಾಲ್ ದರವು ಕೇವಲ 20 ರೂ.

zahir | news18
Updated:January 3, 2019, 5:45 PM IST
ಗುಡ್ ​ನ್ಯೂಸ್: ಕೆಲವೇ ದಿನಗಳಲ್ಲಿ ಪೆಟ್ರೋಲ್ ದರ 8 ರೂ. ಇಳಿಕೆ..!
ಸಾಂದರ್ಭಿಕ ಚಿತ್ರ
  • News18
  • Last Updated: January 3, 2019, 5:45 PM IST
  • Share this:
(ಅಲೋಕ್ ಪ್ರಿಯದರ್ಶಿ)

ಪೆಟ್ರೋಲ್​ ಬೆಲೆಗಳ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತರಲಿದೆ. ಈ ಯೋಜನೆಯಲ್ಲಿ ಪೆಟ್ರೋಲ್​ನಲ್ಲಿ ಶೇ.15 ರಷ್ಟು ಮೆಥನಾಲ್ (ಜೈವಿಕ ಇಂಧನದ ಉಪ ಉತ್ಪನ್ನ) ಮಿಶ್ರಣ ಮಾಡಲು ನಿರ್ಧರಿಸಲಾಗಿದೆ.

ಬಲ್ಲ ಮೂಲಗಳ ಪ್ರಕಾರ ಮಾರ್ಚ್​ ತಿಂಗಳಲ್ಲಿ ಎಲ್ಲ ಪೆಟ್ರೋಲ್​ ಪಂಪ್​ಗಳಲ್ಲೂ ಮೆಥನಾಲ್ ಮಿಶ್ರಿತ ಪೆಟ್ರೋಲ್​ ದೊರೆಯಲಿದ್ದು, ಇದರಿಂದ ಇಂಧನ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ಪ್ರಸ್ತುತ ಭಾರತದಲ್ಲಿ ಶೇ. 10 ಎಥನಾಲ್ ಮಿಶ್ರಿತ ಪೆಟ್ರೋಲ್​ನ್ನು ವಾಹನಗಳಲ್ಲಿ ಬಳಸಲಾಗುತ್ತಿದೆ. ಇದರ ಬದಲಾಗಿ ಮೆಥನಾಲ್​ನ್ನು ಪೆಟ್ರೋಲ್​ನಲ್ಲಿ ಮಿಶ್ರಣ ಮಾಡಲು ಮುಂದಾಗಿದೆ.

ಈ ಹಿಂದೆಯೇ ಇಂತಹದೊಂದು ಯೋಜನೆಯನ್ನು ತರಲು ನೀತಿ ಆಯೋಗ ನಿರ್ಧರಿಸಿದ್ದು, ಇದಕ್ಕಾಗಿ ಸಂಪುಟದ ಒಪ್ಪಿಗೆಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಇದೀಗ ಮುಂದಿನ 45 ದಿನಗಳಲ್ಲಿ ದೇಶದ 50 ಸಾವಿರ ಪಂಪ್​ಗಳಲ್ಲಿ ಬದಲಾವಣೆ ತರಲು ತೈಲ ಮಾರಾಟಗಾರರೊಂದಿಗೆ ಸಭೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ಯೋಜನೆ ಜಾರಿಗೆ ಬಂದರೆ ಮುಂಬರುವ ದಿನಗಳಲ್ಲಿ ಪೆಟ್ರೋಲ್​ ದರದಲ್ಲಿ ಶೇ.10 ರಷ್ಟು ಅಥವಾ 7 ರಿಂದ 8 ರೂ. ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪೆಟ್ರೋಲಿಯಂ ಡೆಲಿವರಿ ಸೇವೆ: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಡೀಸೆಲ್-ಪೆಟ್ರೋಲ್..!

ಯಾವಾಗ ಸಿಗಲಿದೆ ಅಗ್ಗದ ತೈಲ ?
ಮೆಥನಾಲ್​ ರಾಸಾಯನಿಕದಿಂದ ವಾಹನಗಳ ಚಲಾವಣೆಯ ಕುರಿತಾದ ಮತ್ತಷ್ಟು ಅಧ್ಯಯನ ವೇಗದಿಂದ ನಡೆಯುತ್ತಿದ್ದು, ಈಗಾಗಲೇ  ಶೇ. 15 ರಷ್ಟು ಮೆಥನಾಲ್ ಮಿಶ್ರಿತ ಪೆಟ್ರೋಲ್​ನಲ್ಲಿ ವಾಹನ ಚಲಿಸುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ  45 ದಿನಗಳಲ್ಲಿ 50 ಸಾವಿರ ಪಂಪ್​ಗಳ ಬದಲಾವಣೆಗೆ ಯೋಜನೆ ರೂಪುರೇಶೆ ಸಿದ್ಧಪಡಿಸಲಾಗಿದೆ.ಕೆಲ ಪಂಪ್​ಗಳಲ್ಲಿ ಇದಕ್ಕಾಗಿ ಹೆಚ್ಚುವರಿ ಯಂತ್ರದ ಅಳವಡಿಕೆ ಚಿಂತನೆಯನ್ನು ನಡೆಸಲಾಗಿದ್ದು, ಈ ಬದಲಾವಣೆಗಾಗಿ 5 ಲಕ್ಷ ರೂ ಖರ್ಚಾಗಲಿದೆ. ಈ ಎಲ್ಲ ಕಾರ್ಯಗಳು 45 ದಿನಗಳಲ್ಲಿ ನಡೆದರೆ ಮಾರ್ಚ್​ ತಿಂಗಳಲ್ಲಿ ಶೇ. 15 ರಷ್ಟು ಮೆಥನಾಲ್ ಮಿಶ್ರಿತ ಅಗ್ಗದ ಪೆಟ್ರೋಲ್​ ದೊರೆಯಲಿದೆ.

ಇದನ್ನೂ ಓದಿ: 2000 ರೂಪಾಯಿ ನೋಟ್ ಮುದ್ರಣ ನಿಲ್ಲಿಸಿದ ಸರ್ಕಾರ, ಮುಂದೇನು?

ಹೊಸ ಯೋಜನೆ ಏಕೆ?
ಮೆಥನಾಲ್ ರಾಸಾಯನಿಕ ಎಥನಾಲ್​ಗಿಂತ ಅಗ್ಗವಾಗಿದೆ. ಒಂದು ಲೀಟರ್​ ಎಥನಾಲ್​ಗೆ 40 ರೂ. ಆದರೆ ಮೆಥನಾಲ್ ದರವು ಕೇವಲ 20 ರೂ. ಅದೇ ರೀತಿ ಮೆಥನಾಲ್​ ಪೆಟ್ರೋಲ್​ನಿಂದ ಬರುವ ಹೊಗೆಯಿಂದ  ವಾಯು ಮಾಲಿನ್ಯ ಕೂಡ ಕಡಿಮೆ ಇರುತ್ತದೆ. ಮುಖ್ಯವಾಗಿ  ವಿದೇಶದಿಂದ ಪೆಟ್ರೋಲ್ ಆಮದಿನ ಮೇಲೆ ನಿಯಂತ್ರಣ ಹೊಂದಲು ಈ ಯೋಜನೆಯಿಂದ ಸಾಧ್ಯವಾಗಲಿದೆ.

ಇದನ್ನೂ ಓದಿ: 12 ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗವಕಾಶ: ತಿಂಗಳ ವೇತನ 47 ಸಾವಿರ ರೂ.

ಮೆಥನಾಲ್ ಸಿಗುವುದು ಹೇಗೆ?
-ಈ ಯೋಜನೆ ಜಾರಿಗೆ ಬಂದರೆ ಮೆಥನಾಲ್ ಆಮದಿಗೆ ಸರ್ಕಾರ ಮುಂದಾಗಲಿದೆ.
-RCF (ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ) GNFC(ಗುಜರಾತ್ ನರ್ಮದಾ ರಸಗೊಬ್ಬರ ನಿಗಮ) ಮತ್ತು ಅಸ್ಸಾಂ ಪೆಟ್ರೋಕೆಮಿಕಲ್ಸ್​ನಂತಹ ಕಂಪೆನಿಗಳೊಂದಿಗೆ ಮೆಥನಾಲ್ ಉತ್ಪಾದನೆಗೆ ಮಾತುಕತೆ ನಡೆಸಲಾಗಿದೆ.
-ಕಬ್ಬಿನಿಂದ ಎಥೆನಾಲ್​ನ್ನು ತಯಾರಿಸಲಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮೆಥನಾಲ್​ ತಯಾರಿಕೆಗೆ ದೇಸಿಯ ಕೃಷಿಕರು ಮಹತ್ತರ ಪಾತ್ರವಹಿಸಲಿದ್ದಾರೆ.

First published: January 3, 2019, 5:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading