ಇದು ಸತ್ಯ..ಭಾರತದಲ್ಲಿ ಪೆಟ್ರೋಲ್‌ ದರ 34 ರೂ. ಡೀಸೆಲ್‌ ದರ 38 ರೂ..!

ಸಂಸತ್ತಿನಲ್ಲಿ ನಡೆದ ಇತರೆ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ರಾಜ್ಯ ಹಣಕಾಸು ಸಚಿವ ಶಿವ ಪ್ರತಾಪ್ ಶುಕ್ಲಾ ಈ ಮಾಹಿತಿ ನೀಡಿದ್ದಾರೆ.

zahir | news18
Updated:December 22, 2018, 6:03 PM IST
ಇದು ಸತ್ಯ..ಭಾರತದಲ್ಲಿ ಪೆಟ್ರೋಲ್‌ ದರ 34 ರೂ. ಡೀಸೆಲ್‌ ದರ 38 ರೂ..!
ಸಾಂದರ್ಭಿಕ ಚಿತ್ರ
  • News18
  • Last Updated: December 22, 2018, 6:03 PM IST
  • Share this:
ನವದೆಹಲಿ: ಪೆಟ್ರೋಲ್ ಮೇಲಿನ​ ತೆರಿಗೆ ಮತ್ತು ವಿತರಕರ ಕಮಿಷನ್​ ಅನ್ನು ತೆಗೆದು ಹಾಕಿದರೆ ಲೀಟರ್​ ಪೆಟ್ರೋಲ್​ ಬೆಲೆ ಕೇವಲ 34 ರೂ. ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ಬಹಿರಂಗ ಪಡಿಸಿದೆ. ಸಂಸತ್ತಿನಲ್ಲಿ ನಡೆದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಜ್ಯ ಹಣಕಾಸು ಸಚಿವ ಶಿವ ಪ್ರತಾಪ್ ಶುಕ್ಲಾ ಈ ವಿವರಗಳನ್ನು ನೀಡಿದ್ದಾರೆ.

ಪ್ರತಿ ಲೀಟರ್​ ಪೆಟ್ರೋಲ್​ ಮೇಲೆ ಶೇ. 96.9 ಡೀಲರ್​ ಕಮೀಷನ್​ ಮತ್ತು ತೆರಿಗೆಯನ್ನು ವಿಧಿಸಲಾಗುತ್ತಿದೆ. ಇದೇ ಪ್ರಮಾಣ ಡೀಸೆಲ್​ ಮೇಲೆ ಶೇ.60.3 ರಷ್ಟಿದೆ. ಈ ತೆರಿಗೆಗಳು ಇಲ್ಲದಿದ್ದರೆ ದೆಹಲಿ ಎನ್​ಆರ್​ಸಿಯಲ್ಲಿ ಪೆಟ್ರೋಲ್​ ದರ ಕೇವಲ 34 ರೂ. ಆಗಿರಲಿದೆ ಎಂದು ಸಚಿವರು ಉತ್ತರಿಸಿದರು. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆಗಳು ಏರುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್​ನಲ್ಲಿ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಸರ್ಕಾರ ಕಡಿತಗೊಳಿಸಿತ್ತು.

ಸರ್ಕಾರದ ಬೊಕ್ಕಸಕ್ಕೆ ಲಾಭ

ಸಂಸತ್ತಿನಲ್ಲಿ ನಡೆದ ಇತರೆ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ರಾಜ್ಯ ಹಣಕಾಸು ಸಚಿವ ಶಿವ ಪ್ರತಾಪ್ ಶುಕ್ಲಾ, ಕೇಂದ್ರ ಸರ್ಕಾರವು ಕಳೆದ ವರ್ಷ ಪೆಟ್ರೋಲ್​ ಮೇಲಿನ ತೆರಿಗೆಯಿಂದ 73,516.8 ಕೋಟಿ ಮತ್ತು ಡೀಸೆಲ್​ನಿಂದ 1.5 ಲಕ್ಷ ಕೋಟಿ ಅಬಕಾರಿ ಸುಂಕವನ್ನು ವಸೂಲಿ ಮಾಡಿದೆ. ಪ್ರತಿದಿನ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಆದಾಯದಲ್ಲೂ ಏರಿಳಿತವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೆಲ ಮೊಬೈಲ್​ನಲ್ಲಿ ವಾಟ್ಸಪ್​ ಸ್ಥಗಿತ: ಈ ಪಟ್ಟಿಯಲ್ಲಿ ನಿಮ್ಮ ಸ್ಮಾರ್ಟ್​ಫೋನ್​ ಇದೆಯೇ ಪರೀಕ್ಷಿಸಿಕೊಳ್ಳಿ

ಪೆಟ್ರೋಲ್​ ಮೇಲಿನ ಸುಂಕ ಹೀಗಿದೆ
ದಿನಾಂಕ- ಡಿಸೆಂಬರ್​ 19ಸುಂಕ ವಿಧಿಸದ ಪೆಟ್ರೋಲ್​ ದರ- 34.04 ರೂ.
ಕೇಂದ್ರ ಅಬಕಾರಿ ಸುಂಕ- 17.98 ರೂ.
ರಾಜ್ಯ ವ್ಯಾಟ್​- 15.02
ಡೀಲರ್​ ಕಮಿಷನ್​- 3.59
ಗ್ರಾಹಕರಿಗೆ ಸಿಗುವ ದರ (ಲೀಟರ್)- ​70.63 ರೂ.

ಇದನ್ನೂ ಓದಿ: ಏರ್​​ ಇಂಡಿಯಾದ ವಿವಿಧ ಹುದ್ದೆಗಳಿಗೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಅವಕಾಶ

ಡೀಸೆಲ್​​ ಮೇಲಿನ ಸುಂಕ ಹೀಗಿದೆ
ದಿನಾಂಕ- ಡಿಸೆಂಬರ್ 19
ಡೀಸೆಲ್​​ ದರ- 38.67 ರೂ.
ಕೇಂದ್ರ ಅಬಕಾರಿ ಸುಂಕ- 13.83 ರೂ.
ರಾಜ್ಯ ವ್ಯಾಟ್​- 9.51 ರೂ.
ಡೀಲರ್​ ಕಮಿಷನ್​- 2.53
ಗ್ರಾಹಕರಿಗೆ ಸಿಗುವ ದರ (ಲೀಟರ್)- 64.54 ರೂ.

ಡಿಸೆಂಬರ್ 22ರ ದೆಹಲಿ ನಗರದ​ ಪೆಟ್ರೋಲ್ ಮತ್ತು ಡೀಸೆಲ್ ದರ
ಪೆಟ್ರೋಲ್: ಪ್ರತಿ ಲೀಟರ್​ಗೆ 70.27 ರೂ.
ಡೀಸೆಲ್: ಪ್ರತಿ ಲೀಟರ್​ಗೆ 64.19 ರೂ.

First published:December 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ