ಭಾರತ್​ ಬಂದ್​ ನಂತರವೂ ದೇಶದಲ್ಲಿ ತೈಲ​ ಬೆಲೆ ಏರಿಕೆ; 90 ರ ಗಡಿ ದಾಟಿದ ಪೆಟ್ರೋಲ್​ ದರ!

news18
Updated:September 11, 2018, 12:40 PM IST
ಭಾರತ್​ ಬಂದ್​ ನಂತರವೂ ದೇಶದಲ್ಲಿ ತೈಲ​ ಬೆಲೆ ಏರಿಕೆ; 90 ರ ಗಡಿ ದಾಟಿದ ಪೆಟ್ರೋಲ್​ ದರ!
news18
Updated: September 11, 2018, 12:40 PM IST
-ನ್ಯೂಸ್​ 18 ಕನ್ನಡ

ನವದೆಹಲಿ,(ಸೆ.11): ತೈಲ ಬೆಲೆ ಏರಿಕೆ ವಿರೋಧಿಸಿ ಸೋಮವಾರ ವಿರೋಧ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಸೇರಿ ಭಾರತ್​ ಬಂದ್​ ನಡೆಸಿ, ಪ್ರತಿಭಟನೆ ಮಾಡಿದ್ದರೂ ಸಹ ಮಂಗಳವಾರ ಪೆಟ್ರೋಲ್​ ಬೆಲೆಯಲ್ಲಿ ಏರಿಕೆ ಕಂಡಿದೆ.

ರಾಜಧಾನಿ ನವದೆಹಲಿ, ಮುಂಬೈ ಸೇರಿದಂತೆ ಇನ್ನೂ ಪ್ರಮುಖ ನಗರಗಳಲ್ಲಿ ಡೀಸೆಲ್​ ಮತ್ತು ಪೆಟ್ರೋಲ್​ ದರ ನಿನ್ನೆಗಿಂತ ಅಧಿಕವಾಗಿದೆ. ದೆಹಲಿಯಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 80.87 ರೂ.  ಡೀಸೆಲ್​ ಬೆಲೆ ಪ್ರತಿ ಲೀಟರ್​ಗೆ 72.97 ರೂ.ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್​ಗೆ  88.26 ರೂ.  ಡೀಸೆಲ್​ಗೆ 77.47 ರೂ. ಅಧಿಕವಾಗಿದೆ. ಮಹಾರಾಷ್ಟ್ರದ ಪರ್ಬಾನಿ ನಗರದಲ್ಲಿ ಮಂಗಳವಾರ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 90.05 ಆಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಸತತ ಬದಲಾವಣೆಯಾಗುತ್ತಿರುವುದರಿಂದ ದೇಶದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದೆ. ಮೂರು ವಾರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 3.65 ರೂ, ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 4.06 ರೂ ಹೆಚ್ಚಳವಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದ್ದು, ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.

ತೈಲ ಬೆಲೆ ಎರಿಕೆ ವಿರೋಧಿಸಿ ಸೋಮವಾರ ದೇಶಾದ್ಯಂತ ಬಂದ್​ಗೆ ಕರೆ ನೀಡಿ ಪ್ರತಿಭಟನೆ ನಡೆಸಿದ್ದರೂ ಸಹ, ಕೇಂದ್ರ ಸರ್ಕಾರ ಇಂಧನದ ಮೇಲೆ ವಿಧಿಸುತ್ತಿರುವ ತೆರಿಗೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಸೋಮವಾರ ಭಾರತ್​ ಬಂದ್​ಗೆ ಬೆಂಬಲಿಸಿದ 4 ರಾಜ್ಯಗಳಲ್ಲಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಆಂಧ್ರಪ್ರದೇಶ ಪೆಟ್ರೋಲ್​ಗೆ 22.15 ರೂ, ಡೀಸೆಲ್​ಗೆ 16.87 ರೂ., ಕರ್ನಾಟಕ ಪೆಟ್ರೋಲ್​ಗೆ 18.88 ರೂ, ಡೀಸೆಲ್​ಗೆ 12.23 ರೂ., ಕೇರಳ ಪೆಟ್ರೋಲ್​ಗೆ ​ 19.09 ರೂ. ಡೀಸೆಲ್​​ಗೆ 14.51 ರೂ. ಮತ್ತು ಪಂಜಾಬ್ ಪೆಟ್ರೋಲ್​ಗೆ​ 21.81 ರೂ. ಡೀಸೆಲ್​ಗೆ 10.07 ರೂ. ತೆರಿಗೆ ಸಂಗ್ರಹ ಮಾಡಿವೆ ಎಂದು ಪಿಟಿಐ ವರದಿ ಮಾಡಿದೆ.
Loading...

ಪೆಟ್ರೋಲ್ ದರದಲ್ಲಿ ಮುಂಬೈ ಶೇ. 39.12 ಗರಿಷ್ಠ ವ್ಯಾಟ್ ಹೊಂದಿದ್ದರೆ, ತೆಲಂಗಾಣದಲ್ಲಿ ಡೀಸೆಲ್ ಮೇಲೆ ಶೇ. 26 ರಷ್ಟು ಗರಿಷ್ಠ ವ್ಯಾಟ್ ಇದೆ. ದೆಹಲಿ ಪೆಟ್ರೋಲ್ ಮೇಲೆ ಶೇ.27 ರಷ್ಟು, ಮತ್ತು ಡೀಸೆಲ್​ ಮೇಲೆ ಶೇ. 17.24 ರಷ್ಟು ವ್ಯಾಟ್ ವಿಧಿಸಿದೆ.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...