Petrol Price Today| ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್-ಡೀಸೆಲ್; ನಿಮ್ಮ ನಗರದಲ್ಲಿ ಬೆಲೆ ಎಷ್ಟು?

ಮೆಟ್ರೋ ನಗರಗಳ ಹೊರಗೆ, ಭಾರತದಾದ್ಯಂತ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪೆಟ್ರೋಲ್ ದರವು ಲೀಟರ್ 100 ರೂ.ಗಿಂತಲೂ ಹೆಚ್ಚಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  Fuel Price Today (ಬೆಂಗಳೂರು ಜುಲೈ 10); ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದೂ ಸಹ ಬದಲಾಗದೆ ಉಳಿದಿದೆ. ಪ್ರಸ್ತುತ, ಭಾರತದಲ್ಲಿ ಇಂಧನ ದರಗಳು ಸಾರ್ವಕಾಲಿಕ ದಾಖಲೆ ಬರೆದಿದೆ. ಮುಂಬೈ, ದೆಹಲಿ, ಕೋಲ್ಕತಾ ಮತ್ತು ಚೆನ್ನೈ ಸೇರಿದಂತೆ ಈ ನಾಲ್ಕು ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿಗೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಕೊನೆಯದಾಗಿ ಜುಲೈ 8 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿವೆ. ಮುಂಬೈಯಲ್ಲಿ ಪೆಟ್ರೋಲ್ ಪಂಪ್ ದರ ಪ್ರತಿ ಲೀಟರ್​ಗೆ 106.59 ರೂ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100.56 ರೂ, ಕೋಲ್ಕತ್ತಾದಲ್ಲಿ ಲೀಟರ್‌ಗೆ 100.62 ರೂ. ಚೆನ್ನೈನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 101.37 ರೂ. ಬೆಂಗಳೂರಿನ ಪೆಟ್ರೋಲ್ ಬೆಲೆ ಮುಂಬೈ ನಂತರದ ಎರಡನೆಯ ಸ್ಥಾನದಲ್ಲಿದ್ದು,  ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 103.93 ರೂ.

  ಡೀಸೆಲ್ ಬೆಲೆಗಳು ಸಹ ದೇಶದ ಎಲ್ಲಾ ಮಹಾನಗರಗಳಲ್ಲಿ ಪೆಟ್ರೋಲ್ ದರಕ್ಕೆ ಹತ್ತಿರವಾಗುತ್ತಿದೆ. ಆದರೆ, ಮಹಾನಗರಗಳ ಹೊರಗಿನ ಕೆಲವು ನಗರಗಳಲ್ಲಿ, ಡೀಸೆಲ್ ಬೆಲೆ ಪೆಟ್ರೋಲ್ ದರವನ್ನು ಮೀರಿದೆ. ಮುಂಬೈಯಲ್ಲಿ ಡೀಸೆಲ್ ಪ್ರತಿ ಲೀಟರ್‌ಗೆ 97.18 ರೂ. ದೆಹಲಿಯಲ್ಲಿ ಡೀಸೆಲ್‌ ಲೀಟರ್‌ಗೆ 89.62 ರೂ. ಕೋಲ್ಕತಾದಲ್ಲಿ ಪ್ರತಿ ಲೀಟರ್‌ಗೆ 92.65 ರೂ. ಚೆನ್ನೈ ನಗರದಲ್ಲಿ ಲೀಟರ್‌ಗೆ 92.15 ರೂ.ಗಳ ದರದಲ್ಲಿ ಡೀಸೆಲ್ ಚಿಲ್ಲರೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಸರ್ಕಾರಿ ತೈಲ ಕಂಪನಿಗಳು ವಾಹನ ಚಾಲಕರಿಗೆ ಪ್ರತಿ ಲೀಟರ್‌ಗೆ 94.99 ರೂ. ಚಾರ್ಚ್​ ಮಾಡುತ್ತಿದೆ.

  ಉಲ್ಲೇಖಿಸಲಾದ ಮೆಟ್ರೋ ನಗರಗಳ ಹೊರಗೆ, ಭಾರತದಾದ್ಯಂತ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪೆಟ್ರೋಲ್ ದರವು ಲೀಟರ್ 100 ರೂ.ಗಿಂತಲೂ ಹೆಚ್ಚಾಗಿದೆ. ಈ ರಾಜ್ಯಗಳು ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಪಂಜಾಬ್, ಲಡಾಖ್, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ ಮತ್ತು ಒಡಿಶಾ, ಕೋಲ್ಕತಾ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ದೆಹಲಿ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ದೇಶದಲ್ಲಿ ಅತಿ ಹೆಚ್ಚು ಪೆಟ್ರೋಲ್ ದರವಿದೆ. ಗಂಗನಗರದಲ್ಲಿ ರಾಜಸ್ಥಾನದ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 111.87 ರೂ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 108.88 ರೂ.

  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತುಂಬಾ ಹೆಚ್ಚಾಗುತ್ತಿದ್ದರೆ ಸಮಸ್ಯೆ ಇಲ್ಲ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಅದಾಯವನ್ನು ಹೆಚ್ಚಿಸಿಕೊಳ್ಳವ ಸಲುವಾಗಿ ತೆರಿಗೆಯನ್ನು ಏರಿಸುತ್ತಿರುವುದೇ ತೈಲ ಬೆಲೆ ಏರಿಕೆ ಕಾರಣ ಎನ್ನಲಾಗಿದೆ. ರಾಜ್ಯಮಟ್ಟದ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವಿಧಿಸಲಾಗುತ್ತಿದ್ದರೆ, ಕೇಂದ್ರ ಸರ್ಕಾರ ಅಬಕಾರಿ ಸುಂಕ, ಬಂದರು ಸುಂಕ, ಅಭಿವೃದ್ಧಿ ಸುಂಕ ಎಂದು ವಿವಿಧ ರೀತಿಯಲ್ಲಿ ತೈಲದ ಮೇಲೆ ತೆರಿಗೆ ಹಾಕುತ್ತಿದೆ.

  ಇದನ್ನೂ ಓದಿ: Karnataka Rain: ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ, ಕೊಡಗಿನಲ್ಲಿ ರೆಡ್​ ಆಲರ್ಟ್​​!

  ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಮತ್ತು ಡಾಲರ್ ರೂಪಾಯಿಗೆ ಕರೆನ್ಸಿ ಪರಿವರ್ತನೆ ದರಕ್ಕೆ ಇಳಿಯುತ್ತದೆ. ಈಗಿರುವ ಪೆಟ್ರೋಲ್ ಬೆಲೆಯ ಶೇಕಡಾ 60 ಕ್ಕಿಂತ ಹೆಚ್ಚು ತೆರಿಗೆಯಿಂದ ಕೂಡಿದೆ. ಡೀಸೆಲ್​ಗೆ ಸಂಬಂಧಿಸಿದಂತೆ, ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಬೆಲೆ ಮತ್ತು ತೆರಿಗೆ ನಡುವಿನ ವ್ಯತ್ಯಾಸ ಶೇಕಡಾ 53 ರಷ್ಟಿದೆ ಎಂದು ಹೇಳಲಾಗಿದೆ.

  ಇದಲ್ಲದೆ, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಒರಿಸ್ಸಾ, ಕೇರಳ, ಆಂಧ್ರಪ್ರದೇಶ, ಲಡಾಖ್, ಬಿಹಾರ, ಜಮ್ಮು ಕಾಶ್ಮೀರದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 103.93 ರೂ. ದಾಟಿದೆ. ಕರ್ನಾಟಕದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 103 ರೂ. ದಾಟಿದೆ. 

  ಇದನ್ನೂ ಓದಿ: ಟ್ವಿಟರ್ ಇಂಡಿಯಾ ಉದ್ಯೋಗಿ ಮನೀಶ್ ಮಹೇಶ್ವರಿ ಪ್ರಕರಣ: ಆದೇಶ ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್

  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ.

  ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊರೋನಾ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ತೈಲ ಬೆಲೆಯನ್ನು ಸಾಕಷ್ಟು ಇಳಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಈ ಲಾಭವನ್ನು ಜನರಿಗೆ ನೀಡದೆ ಪ್ರತಿದಿನ ತೈಲದ ಮೇಲೆ ತೆರಿಗೆಯನ್ನು ವಿಧಿಸುತ್ತಲೇ ಇದೆ. ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಸಹಜವಾಗಿ ನಿತ್ಯ ಬಳಕೆಯ ಬೇರೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಮತ್ತಷ್ಟು ತೊಂದರೆಯಾಗುತ್ತಿದೆ.
  Published by:MAshok Kumar
  First published: