Petrol Diesel Rates Today- ಸತತ ಮೂರನೇ ದಿನ ಇಳಿಕೆಯಾದ ಡೀಸೆಲ್ ದರ

August 20th Petrol-Diesel Prices- ಬೆಂಗಳೂರಿನಲ್ಲಿ ಡೀಸೆಲ್ ದರ 21 ಪೈಸೆ ಇಳಿಕೆ ಕಂಡಿದೆ. ಪೆಟ್ರೋಲ್ ರೇಟ್ ಕಳೆದ 33 ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಕಳೆದ ಒಂದು ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಷ್ಟೇನೂ ಏರು ಪೇರು ಆಗಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು, ಆ. 20: ಡೀಸೆಲ್ ದರ ಸತತ ಮೂರನೇ ದಿನ ಇಳಿಕೆ ಕಂಡಿದೆ. ಇಂದು ಬೆಂಗಳೂರಿನಲ್ಲಿ ಡೀಸೆಲ್ ಒಂದು ಲೀಟರ್​ಗೆ 21 ಪೈಸೆಯಷ್ಟು ಅಗ್ಗವಾಗಿದೆ. ಇವತ್ತು ಶುಕ್ರವಾರ ಬೆಂಗಳೂರಿನಲ್ಲಿ ಡೀಸೆಲ್ ರೇಟ್ ಲೀಟರ್​ಗೆ 94.65 ಇದೆ. ಮೊನ್ನೆ ಆಗಸ್ಟ್ 18ರಂದು ಕೂಡ ಡೀಸೆಲ್ ದರ 21 ಪೈಸೆ ಇಳಿಕೆ ಕಂಡಿತ್ತು. ನಿನ್ನೆ 19 ಪೈಸೆ ತಗ್ಗಿತ್ತು. ಆಗಸ್ಟ್ 12ರಂದು 6 ಪೈಸೆ ಬೆಲೆ ಹೆಚ್ಚಳ ಕಂಡಿದ್ದ ಡೀಸೆಲ್ ಅದಾದ ಬಳಿಕ ಏರಿಕೆ ಕಂಡಿಲ್ಲ. ಇದೇ ವೇಳೆ, ಪೆಟ್ರೋಲ್ ದರ ಯಥಾಸ್ಥಿತಿ ಮುಂದುವರಿದಿದೆ. ಆಗಸ್ಟ್ 10 ಮತ್ತು 11ರಂದು ಏರುಪೇರು ಆಗಿದ್ದು ಬಿಟ್ಟರೆ ಉಳಿದಂತೆ ಕಳೆದ ಮೂವತ್ತಕ್ಕೂ ಹೆಚ್ಚು ದಿನಗಳಿಂದ ಪೆಟ್ರೋಲ್ ದರ ವ್ಯತ್ಯಾಸ ಕಂಡಿಲ್ಲ. ಬೆಂಗಳೂರಿನಲ್ಲಿ ಸದ್ಯ ಪೆಟ್ರೋಲ್ ದರ ಲೀಟರ್​ಗೆ 105.25 ಇದೆ. ಚೆನ್ನೈನಲ್ಲಿ ತೆರಿಗೆ ಇಳಿಕೆಯಂದಾಗಿ ಅಲ್ಲಿ ಪೆಟ್ರೋಲ್ ದರ ನೂರು ರೂಗಿಂತ ಕೆಳಗೆ ಇದೆ.

ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಮಾರುಕಟ್ಟೆ ನಿಯಂತ್ರಿತವಾಗಿವೆ ಎಂದು ಸರ್ಕಾರ ಹೇಳುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಾಗುವ ಬದಲಾವಣೆಯು ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತೆರಿಗೆ ಹಾಕುತ್ತವೆ. ಪೆಟ್ರೋಲ್ ಬೆಲೆಯಲ್ಲಿ ಶೇ. 60 ರಷ್ಟು ಭಾಗ ತೆರಿಗೆಯೇ ಆಗಿರುತ್ತದೆ ಎಂಬುದು ಗಮನಾರ್ಹ.

ಇದನ್ನೂ ಓದಿ: LPG Cylinder Price Hike: ಈ ವರ್ಷ ಇಲ್ಲಿಯವರೆಗೆ ಗ್ಯಾಸ್ ದರದಲ್ಲಿ 165 ರೂ. ಏರಿಕೆ.. ಬೆಲೆ ಹೆಚ್ಚಳಕ್ಕೆ ಇದೇ ಕಾರಣ!

ಕೇಂದ್ರ ಸರ್ಕಾರ ಪ್ರತೀ ಲೀಟರ್ ಪೆಟ್ರೋಲ್​ಗೆ ವಿಧಿಸುವ ಅಬಕಾರಿ ಸುಂಕದ ಮೊತ್ತ 32.90 ರೂ ಇರುತ್ತದೆ. ಹಾಗೆಯೇ, ಡೀಸೆಲ್ ಬೆಲೆಯಲ್ಲಿ ಶೇ. 54ರಷ್ಟು ತೆರಿಗೆ ಇದೆ. ಇದರಲ್ಲಿ ಅಬಕಾರಿ ಸುಂಕದ ಮೊತ್ತ 31.80 ರೂ ಇದೆ. ಇನ್ನು, ರಾಜ್ಯ ಸರ್ಕಾರಗಳೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಮ್ಮದೇ ಮೌಲ್ಯ ವರ್ಧಿತ ತೆರಿಗೆ (VAT – Value Added Tax) ತೆರಿಗೆ ವಿಧಿಸುತ್ತವೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ವ್ಯಾಟ್ ತೆರಿಗೆ ಇರುವುದರಿಂದ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ರಾಜಸ್ಥಾನ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಅತಿ ಹೆಚ್ಚು ವ್ಯಾಟ್ ತೆರಿಗೆ ಇದೆ. ಇತ್ತೀಚೆಗಷ್ಟೇ ತಮಿಳುನಾಡು ಸರ್ಕಾರ ಆಗಸ್ಟ್ 14ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನ 3 ರೂಪಾಯಿಯಷ್ಟು ಕಡಿತಗೊಳಿಸಿತ್ತು. ಪರಿಣಾಮವಾಗಿ ಚೆನ್ನೈ ಹಾಗೂ ಇತರ ತಮಿಳುನಾಡು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ತಗ್ಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರ:

ಬೆಂಗಳೂರು:
ಪೆಟ್ರೋಲ್ ದರ: 105.25 ರೂ
ಡೀಸೆಲ್ ದರ: 94.65 ರೂ

ದೆಹಲಿ:
ಪೆಟ್ರೋಲ್ ದರ: 101.84 ರೂ
ಡೀಸೆಲ್ ದರ: 89.27 ರೂ

ಮುಂಬೈ:
ಪೆಟ್ರೋಲ್ ದರ: 107.83 ರೂ
ಡೀಸೆಲ್ ದರ: 96.84 ರೂ

ಕೋಲ್ಕತಾ:
ಪೆಟ್ರೋಲ್ ದರ: 102.08 ರೂ
ಡೀಸೆಲ್ ದರ: 92.32

ಚೆನ್ನೈ:
ಪೆಟ್ರೋಲ್ ದರ: 99.47
ಡೀಸೆಲ್ ದರ: 93.84

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: