Petrol Price Today: ಇಂದು ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್​-ಡೀಸೆಲ್ ಬೆಲೆ

ಕೇಂದ್ರ ಸರ್ಕಾರ ಪ್ರತೀ ಲೀಟರ್ ಪೆಟ್ರೋಲ್​ಗೆ ವಿಧಿಸುವ ಅಬಕಾರಿ ಸುಂಕದ ಮೊತ್ತ 32.90 ರೂ ಇರುತ್ತದೆ. ಹಾಗೆಯೇ, ಡೀಸೆಲ್ ಬೆಲೆಯಲ್ಲಿ ಶೇ. 54ರಷ್ಟು ತೆರಿಗೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Petrol, Diesel Prices on August 23 ಬೆಂಗಳೂರು: ಇಂದು ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಳೆದ ನಾಲ್ಕು ದಿನಗಳಿಂದ ಇಳಿಕೆ ಕಂಡಿದ್ದ ಡೀಸೆಲ್ ಬೆಲೆ ಇಂದು ಸ್ಥಿರತೆ ಕಾಯ್ದುಕೊಂಡಿದೆ. ಅದೇ ರೀತಿ ನಿನ್ನೆ 20 ಪೈಸೆ ಇಳಿಕೆ ಕಂಡಿದ್ದ ಪೆಟ್ರೋಲ್ ಬೆಲೆಯೂ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಆಗಸ್ಟ್​ 18ರಿಂದ 22ರವರೆಗೆ ಸತತ 4 ದಿನಗಳ ಕಾಲ ಡೀಸೆಲ್​ ದರ 80 ಪೈಸೆ ಕಡಿಮೆಯಾಗಿದ್ದರೆ, ಪೆಟ್ರೋಲ್ ಬೆಲೆ 20 ಪೈಸೆ ಕಡಿಮೆಯಾಗಿದೆ. 

  ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಮಾರುಕಟ್ಟೆ ನಿಯಂತ್ರಿತವಾಗಿವೆ ಎಂದು ಸರ್ಕಾರ ಹೇಳುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಾಗುವ ಬದಲಾವಣೆಯು ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತೆರಿಗೆ ಹಾಕುತ್ತವೆ. ಪೆಟ್ರೋಲ್ ಬೆಲೆಯಲ್ಲಿ ಶೇ. 60 ರಷ್ಟು ಭಾಗ ತೆರಿಗೆಯೇ ಆಗಿರುತ್ತದೆ ಎಂಬುದು ಗಮನಾರ್ಹ.

  ಕೇಂದ್ರ ಸರ್ಕಾರ ಪ್ರತೀ ಲೀಟರ್ ಪೆಟ್ರೋಲ್​ಗೆ ವಿಧಿಸುವ ಅಬಕಾರಿ ಸುಂಕದ ಮೊತ್ತ 32.90 ರೂ ಇರುತ್ತದೆ. ಹಾಗೆಯೇ, ಡೀಸೆಲ್ ಬೆಲೆಯಲ್ಲಿ ಶೇ. 54ರಷ್ಟು ತೆರಿಗೆ ಇದೆ. ಇದರಲ್ಲಿ ಅಬಕಾರಿ ಸುಂಕದ ಮೊತ್ತ 31.80 ರೂ ಇದೆ. ಇನ್ನು, ರಾಜ್ಯ ಸರ್ಕಾರಗಳೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಮ್ಮದೇ ಮೌಲ್ಯ ವರ್ಧಿತ ತೆರಿಗೆ (VAT – Value Added Tax) ತೆರಿಗೆ ವಿಧಿಸುತ್ತವೆ.

  ಇದನ್ನೂ ಓದಿ:Karnataka Weather Today: ಇಂದು-ನಾಳೆ ಕರ್ನಾಟಕದಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

  ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ವ್ಯಾಟ್ ತೆರಿಗೆ ಇರುವುದರಿಂದ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ರಾಜಸ್ಥಾನ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಅತಿ ಹೆಚ್ಚು ವ್ಯಾಟ್ ತೆರಿಗೆ ಇದೆ. ಇತ್ತೀಚೆಗಷ್ಟೇ ತಮಿಳುನಾಡು ಸರ್ಕಾರ ಆಗಸ್ಟ್ 14ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನ 3 ರೂಪಾಯಿಯಷ್ಟು ಕಡಿತಗೊಳಿಸಿತ್ತು. ಪರಿಣಾಮವಾಗಿ ಚೆನ್ನೈ ಹಾಗೂ ಇತರ ತಮಿಳುನಾಡು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ತಗ್ಗಿದೆ.

  ಪೆಟ್ರೋಲ್ ಮತ್ತು ಡೀಸೆಲ್ ದರ:

  ಬೆಂಗಳೂರು:
  ಪೆಟ್ರೋಲ್ ದರ: 105.00 ರೂ
  ಡೀಸೆಲ್ ದರ: 94.29 ರೂ

  ದೆಹಲಿ:
  ಪೆಟ್ರೋಲ್ ದರ: 101.64 ರೂ
  ಡೀಸೆಲ್ ದರ: 89.07 ರೂ

  ಮುಂಬೈ:
  ಪೆಟ್ರೋಲ್ ದರ: 107.66 ರೂ
  ಡೀಸೆಲ್ ದರ: 96.64 ರೂ

  ಕೋಲ್ಕತಾ:
  ಪೆಟ್ರೋಲ್ ದರ: 101.93 ರೂ
  ಡೀಸೆಲ್ ದರ: 92.13

  ಚೆನ್ನೈ:
  ಪೆಟ್ರೋಲ್ ದರ: 99.32
  ಡೀಸೆಲ್ ದರ: 93.66

  ಭೋಪಾಲ್:
  ಪೆಟ್ರೋಲ್ ದರ: 110
  ಡೀಸೆಲ್ ದರ: 97.80

  ಪಾಟ್ನಾ:

  ಪೆಟ್ರೋಲ್ ದರ: 104.10
  ಡೀಸೆಲ್ ದರ: 94.86

  ಇದನ್ನೂ ಓದಿ:Afghanistan Crisis: ಇಂದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿಳಿದ 145 ಮಂದಿ; ಈವರೆಗೆ 537 ಜನರ ಆಗಮನ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  Published by:Latha CG
  First published: