ಪೆಟ್ರೋಲ್​​-ಡೀಸೆಲ್​​​ ದರ ಮತ್ತೆ ಏರಿಕೆ; ಇಲ್ಲಿದೆ ಸಂಪೂರ್ಣ ವಿವರ!

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿದ್ದು, ಡಾಲರ್ ​ಎದುರು ಭಾರತದ ರೂಪಾಯಿ ಮೌಲ್ಯ ಕಡಿಮೆಯಾಗುತ್ತಿದೆ. ಇದುವೇ  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಿದೆ.

Ganesh Nachikethu | news18
Updated:February 26, 2019, 9:04 AM IST
ಪೆಟ್ರೋಲ್​​-ಡೀಸೆಲ್​​​ ದರ ಮತ್ತೆ ಏರಿಕೆ; ಇಲ್ಲಿದೆ ಸಂಪೂರ್ಣ ವಿವರ!
ಸಾಂದರ್ಭಿಕ ಚಿತ್ರ
  • News18
  • Last Updated: February 26, 2019, 9:04 AM IST
  • Share this:
ನವದೆಹಲಿ(ಫೆ.26): ಕಳೆದ ಒಂದು ತಿಂಗಳಿನಿಂದ ಏರಿಕೆ ಹಾದಿಯಲ್ಲಿದ್ದ ಇಂಧನ ಬೆಲೆ ಸೋಮವಾರ ಕೂಡಾ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿದ್ದು, ಡಾಲರ್ ​ಎದುರು ಭಾರತದ ರೂಪಾಯಿ ಮೌಲ್ಯ ಕಡಿಮೆಯಾಗುತ್ತಿದೆ. ಇದುವೇ  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಿದೆ.

ದೇಶಾದ್ಯಂತ ಪೆಟ್ರೋಲ್​​-ಡೀಸೆಲ್​​ ಬೆಲೆ ಮತ್ತೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 73.99 ರೂ. ಹಾಗೂ ಡೀಸೆಲ್ ದರ 69.09 ರೂ. ಇದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 71.66 ರೂ. ಮತ್ತು ಡೀಸೆಲ್‌ ದರ 66.92 ರೂ. ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್‌ ದರ 77.24 ರೂ. ಮತ್ತು ಡೀಸೆಲ್‌ ದರ 70.05 ರೂ ಆಗಿದೆ.

ಚೆನ್ನೈ ಪೆಟ್ರೋಲ್‌ -74.36 ರೂ, ಡೀಸೆಲ್‌ -70.67 ರೂ, ಹಾಗೂ ಕೋಲ್ಕತಾದಲ್ಲಿ ಪೆಟ್ರೋಲ್‌ ದರ 73.71 ರೂ. ಮತ್ತು ಡೀಸೆಲ್‌ ದರ 68.66 ರೂ ಆಗಿದ್ದು, ಹಿಂದಿಗಿಂತಲೂ ಅಲ್ಪ ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ ಏರಿಕೆಯಾದ ಕಾರಣ ಪೆಟ್ರೋಲ್,ಡೀಸೆಲ್ ಬೆಲೆ ಪರಿಷ್ಕರಣೆಯಾಗಿದೆ.

ಇದನ್ನೂ ಓದಿ: SC/ST Job Reservation: ಬಡ್ತಿ ಮೀಸಲಾತಿಗೆ ಸಚಿವ ಸಂಪುಟ ಒಪ್ಪಿಗೆ; ಅನುಷ್ಠಾನಕ್ಕೆ ನಿರ್ಧಾರ

ಪ್ರತಿ ಬ್ಯಾರೆಲ್ ಗೆ 80 ಯುಎಸ್ ಡಾಲರ್ ಗೇರಿದ್ದ ಕಚ್ಚಾತೈಲ ಬೆಲೆ ಇತ್ತೀಚಿನ ತಿಂಗಳುಗಳಲ್ಲಿ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಶೇಕಡಾ 40ರಷ್ಟು ಇಳಿಕೆ ಕಂಡಿದ್ದರಿಂದ ಡಿಸೇಲ್, ಪೆಟ್ರೋಲ್ ಬೆಲೆಯೂ ಶೇಕಡಾ 20ರಷ್ಟು ಇಳಿಕೆಯಾಗಿದೆ. ಶೇ 80ರಷ್ಟು ಇಂಧನವನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಸತತ ಐದು ದಿನಗಳಿಂದ ಪೆಟ್ರೋಲ್ ಬೆಲೆಗಳು ದೊಡ್ಡ ಮಟ್ಟದಲ್ಲೇ ಇಳಿಕೆಯಾಗುತ್ತಿರವುದನ್ನು ನಾವು ಗಮನಿಸಬಹುದು. ಪೆಟ್ರೋಲ್ ಬೆಲೆ ಇಳಿಕೆಗೆ ಮಾಮೂಲಿಯಂತೆ ಕಾರಣವಾಗಿರುವುದು ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆಯಲ್ಲಿ ಆಗುತ್ತಿರುವ ಗಣನೀಯ ಇಳಿಕೆ.

ಇದನ್ನೂ ಓದಿ: 50 ದಿನಗಳಿಂದಲೂ ಇಳಿಯುತ್ತಿದೆ ಪೆಟ್ರೋಲ್ ಬೆಲೆ; ಇನ್ನೆಷ್ಟು ದಿನ ಬೆಲೆ ತಗ್ಗಲಿದೆ? ಕಾರಣ ಏನು?ಪ್ರಮುಖ ತೈಲ ಮಾರುಕಟ್ಟೆಯಾದ ಬ್ರೆಂಟ್ ಕ್ರೂಡ್​ನಲ್ಲಿ ಬ್ಯಾರೆಲ್ ತೈಲವು 59.23 ಡಾಲರ್​ಗೆ ಇಳಿಕೆಯಾಗಿತ್ತು. ಹಾಗೆಯೇ ಡಬ್ಲ್ಯೂಟಿಐ ಕ್ರೂಡ್​ನಲ್ಲಿನ ಬ್ಯಾರೆಲ್ ತೈಲವು 50.53 ಡಾಲರ್ ಆಗಿತ್ತು. ಮುಂದಿನ ಕೆಲ ದಿನಗಳವರೆಗೂ ಈ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುವ ಸಂಭವವಿದ್ದು, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನಷ್ಟು ಇಳಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು.
------------
First published:February 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ