Petrol Price: 19 ದಿನಗಳಿಂದ ನಿರಂತರವಾಗಿ ಏರುತ್ತಲೇ ಇದೆ ಪೆಟ್ರೋಲ್-ಡೀಸೆಲ್ ಬೆಲೆ

ನಿರಂತರವಾಗಿ ಕಳೆದ 19 ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಗುರುವಾರ ಪ್ರತಿ ಲೀಟರ್ ಪೆಟ್ರೋಲ್ ಗೆ 8.66 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ 10.63 ರೂಪಾಯಿ ಹೆಚ್ಚಳ ಮಾಡಲಾಗಿದೆ. ದೇಶದ ವಿವಿದ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈ ರೀತಿ ಇವೆ.

news18-kannada
Updated:June 25, 2020, 9:38 AM IST
Petrol Price: 19 ದಿನಗಳಿಂದ ನಿರಂತರವಾಗಿ ಏರುತ್ತಲೇ ಇದೆ ಪೆಟ್ರೋಲ್-ಡೀಸೆಲ್ ಬೆಲೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜೂ.25): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಾತ್ರ ಕಡಿಮೆ ಮಾಡುತ್ತಿಲ್ಲ. ಬದಲಿಗೆ ಕಳೆದ 19 ದಿನಗಳಿಂದ ನಿರಂತರವಾಗಿ ಬೆಲೆಯನ್ನು ಏರಿಸುತ್ತಿದೆ.

ಇನ್ನು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ‌ ಹಿಂದಿನಿಂದಲೂ ನಡೆದುಕೊಂಡ ಬಂದಿರುವ ರೀತಿ. ಆದರೆ ನರೇಂದ್ರ ಮೋದಿ ಅವರ ಸರ್ಕಾರ ಈ‌ ಸತ್ಸಂಪ್ರದಾಯವನ್ನು ಮರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಳೆದ 19 ದಿನಗಳಿಂದ ನಿರಂತರವಾಗಿ ಹೆಚ್ಚಳ ಮಾಡುತ್ತಿದೆ.

ಬಳಕೆ ಅಥವಾ ಬೇಡಿಕೆ ಕಡಿಮೆ ಆದಾಗಲೂ ವಸ್ತುಗಳ ದರ ಇಳಿಕೆಯಾಗುತ್ತೆ. ಇದು ಮಾರುಕಟ್ಟೆಯಲ್ಲಿ ಸಹಜವಾಗಿ ಕಂಡುಬರುವ ರೀತಿ.‌ ಒಂದೊಮ್ಮೆ ಬೇಡಿಕೆ ಕಡಿಮೆ ಆದಾಗಲೂ ಬೆಲೆ ಇಳಿದಿಲ್ಲ ಎಂದರೆ ಏನೋ 'ಮಿಸ್ ಮ್ಯಾಚ್' ಆಗುತ್ತಿದೆ ಎಂದು ಅರ್ಥ. ಇದೇ ರೀತಿ ದೇಶದಲ್ಲಿ ಈಗ ಲಾಕ್​ಡೌನ್​​ ಕಾರಣಕ್ಕೆ ಹಾಗೂ ಕೊರೋನಾಗೆ ಹೆದರಿ‌‌ ಜನ‌ ಮೊದಲಿನಷ್ಟು ಹೊರಗಡೆ ಓಡಾಡುತ್ತಿಲ್ಲ. ಪೆಟ್ರೋಲ್, ಡೀಸೆಲ್ ಬಳಕೆಯಾಗುತ್ತಿಲ್ಲ. ಆದರೂ ದೇಶದಲ್ಲಿ ‌ಪ್ರತಿದಿನ‌ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ‌ ಹೆಚ್ಚಳವಾಗುತ್ತಿದೆ.‌ ಸಹಜವಾಗಿ ಇದು‌ ಕೇಂದ್ರ ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ, ಜನರಿಂದ ಕೊರೋನಾ ಮತ್ತು ಲಾಕ್​​ಡೌನ್​​​ನಂತಹ‌‌‌ ಕಡುಕಷ್ಟದ ಕಾಲದಲ್ಲೂ ಹಣ ದೋಚುತ್ತಿದೆ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಕಡಿಮೆ‌ ಇರುವುದರಿಂದ ಹಾಗೂ ಕೊರೋನಾ ಮತ್ತು ಲಾಕ್​​ಡೌನ್​​ನಂತಹ‌‌‌ ಕಷ್ಟದ ಸಂದರ್ಭ‌ ಇದಾಗಿರುವುದರಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು‌ ಡೀಸೆಲ್ ಬೆಲೆ‌ಯನ್ನು‌ ಇಳಿಕೆ ಮಾಡಬೇಕು. ಜನರಿಂದ ಹಣ ಸುಲಿಯಲು ಇದು ಸೂಕ್ತ ಕಾಲವಲ್ಲ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಆದರೂ‌ ಪ್ರತಿಪಕ್ಷಗಳ ಮಾತಿಗೆ ಕಿಮ್ಮತ್ತು ಕೊಡ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು‌ ಏರಿಸುತ್ತಲೇ ಇದೆ.

ಇದನ್ನೂ ಓದಿ: ಕಾಡಿನಿಂದ ನಾಡಿಗೆ ಬಂದ ಸಾರಂಗವನ್ನು ಸುತ್ತುವರೆದ ನಾಯಿಗಳ ದಂಡು - ಜಿಂಕೆ ಪ್ರಾಣ ಉಳಿಸಿದ ರೈತ

ನಿರಂತರವಾಗಿ ಕಳೆದ 19 ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಗುರುವಾರ ಪ್ರತಿ ಲೀಟರ್ ಪೆಟ್ರೋಲ್ ಗೆ 8.66 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ  10.63 ರೂಪಾಯಿ ಹೆಚ್ಚಳ ಮಾಡಲಾಗಿದೆ. ದೇಶದ ವಿವಿದ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈ ರೀತಿ ಇವೆ.ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

  • ಭೂಪಾಲ್-  ಪೆಟ್ರೋಲ್ 87.53ರೂ., ಡೀಸೆಲ್ 79.44 ರೂ.

  • ಮುಂಬೈ- ಪೆಟ್ರೋಲ್ 86.68 ರೂ., ಡೀಸೆಲ್ 78.33 ರೂ.

  • ಚೆನ್ನೈ- ಪೆಟ್ರೋಲ್ 83.16 ರೂ., ಡೀಸೆಲ್ 77.27 ರೂ.

  • ಪಾಟ್ನಾ- ಪೆಟ್ರೋಲ್ 82.90 ರೂ., ಡೀಸೆಲ್ 76.99 ರೂ.

  • ಬೆಂಗಳೂರು- ಪೆಟ್ರೋಲ್ 82.51ರೂ., ಡೀಸೆಲ್ 75.67 ರೂ.

  • ಕೋಲ್ಕತ್ತಾ- ಪೆಟ್ರೋಲ್  81.59 ರೂ., ಡೀಸೆಲ್ 75.17 ರೂ.

  • ನೋಯ್ಡಾ- ಪೆಟ್ರೋಲ್ 80.67ರೂ., ಡೀಸೆಲ್ 72.12 ರೂ.

  • ದೆಹಲಿ- ಪೆಟ್ರೋಲ್ 79.96 ರೂ., ಡೀಸೆಲ್ 80.06ರೂ.

  • ರಾಂಚಿ- ಪೆಟ್ರೋಲ್ 79.95 ರೂ., ಡೀಸೆಲ್ 76.1ರೂ.

  • ಫರೀದಾಬಾದ್- ಪೆಟ್ರೋಲ್ 78.37ರೂ., ಡೀಸೆಲ್ 72.52 ರೂ.

  • ಗುರುಗ್ರಾಂ- ಪೆಟ್ರೋಲ್ 78.13ರೂ., ಡೀಸೆಲ್ 72.3 ರೂ.

First published: June 25, 2020, 9:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading