Petrol Price Today: ಸತತ 12ನೇ ದಿನವೂ ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್-ಡೀಸೆಲ್ ಬೆಲೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜುಲೈ 17ರಿಂದ ಪೆಟ್ರೋಲ್ ಬೆಲೆ ಯಾವುದೇ ಏರಿಕೆ ಕಂಡಿಲ್ಲ. ಆದರೆ, ಮೇ 4ರಿಂದ ಇಲ್ಲಿಯವರೆಗೆ ಹಲವು ಬಾರಿ ಬೆಲೆ ಹೆಚ್ಚಳಗೊಂಡ ಪರಿಣಾಮ ಈ ಅವಧಿಯಲ್ಲಿ ಪೆಟ್ರೋಲ್ 11 ರೂ ದುಬಾರಿಯಾಗಿದೆ.

  • Share this:

Petrol, Diesel Prices on July 29 ಬೆಂಗಳೂರು: ನಿರಂತರವಾಗಿ ಏರಿಕೆ ಕಾಣುತ್ತಾ ಬಂದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ 12 ದಿನಗಳಿಂದ ತಟಸ್ಥವಾಗಿದೆ. ಜುಲೈ 17ರಿಂದ ಪೆಟ್ರೋಲ್ ಬೆಲೆ ಯಾವುದೇ ಏರಿಕೆ ಕಂಡಿಲ್ಲ. ಆದರೆ, ಮೇ 4ರಿಂದ ಇಲ್ಲಿಯವರೆಗೆ ಹಲವು ಬಾರಿ ಬೆಲೆ ಹೆಚ್ಚಳಗೊಂಡ ಪರಿಣಾಮ ಈ ಅವಧಿಯಲ್ಲಿ ಪೆಟ್ರೋಲ್ 11 ರೂ ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.25 ರೂ ದರ ಇದೆ. ಡೀಸೆಲ್ ಬೆಲೆ 95.26 ರೂ ನಲ್ಲೇ ಮುಂದುವರಿದಿದೆ. ಮಹಾನಗರಿಗಳ ಪೈಕಿ ಮುಂಬೈನಲ್ಲಿ ಪೆಟ್ರೋಲ್ ಡೀಸೆಲ್ ಅತಿ ದುಬಾರಿ ಇದೆ. ಈ ವಾಣಿಜ್ಯ ನಗರಿಯಲ್ಲಿ ಪೆಟ್ರೋಲ್ ಬೆಲೆ 107.83 ಇದ್ದರೆ, ಡೀಸೆಲ್ ದರ 97.43 ರೂ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.84 ರೂ ಇದೆ. ಇಲ್ಲಿ ಡೀಸೆಲ್ ಬೆಲೆ ಇನ್ನೂ 90 ರೂ ಗಡಿ ಮುಟ್ಟಿಲ್ಲ.


ಪೆಟ್ರೋಲ್ ಮತ್ತು ಡೀಸೆಲ್ ದರ ಈ ವರ್ಷ ಗಣನೀಯ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಪೆಟ್ರೋಲ್ ಈ ವರ್ಷ ಬರೋಬ್ಬರಿ 63 ಬಾರಿ ಬೆಲೆ ಏರಿಕೆ ಕಂಡಿದೆ. ಇದು ಜನವರಿ 1ರಿಂದ ಜುಲೈ 9ರವರೆಗೆ ಸರ್ಕಾರವೇ ನೀಡಿರುವ ಲೆಕ್ಕ. ಈ ಬೆಲೆ ಏರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 3.34 ಲಕ್ಷ ಕೋಟಿ ರೂ ಆದಾಯ ಹರಿದುಬಂದಿದೆ. ಇನ್ನು, ಇದೇ ಅವಧಿಯಲ್ಲಿ ಡೀಸೆಲ್ ಬೆಲೆ 61 ಬಾರಿ ಹೆಚ್ಚಳಗೊಂಡಿದೆ. ಇನ್ನು, ಬೆಲೆ ಇಳಿಕೆ ವಿಷಯಕ್ಕೆ ಬಂದರೆ ಈ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಕಂಡಿದ್ದು ಕೇವಲ ನಾಲ್ಕು ಬಾರಿ ಮಾತ್ರ.


ದೇಶದ 20 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ನೂರು ರೂ ಗಡಿ ದಾಟಿದೆ. ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನಲ್ಲಿ ಪೆಟ್ರೋಲ್ ಬೆಲೆ 110 ರೂ ದಾಟಿದೆ. ದೇಶದಲ್ಲೇ ಅತಿ ದುಬಾರಿ ಪೆಟ್ರೋಲ್ ಇರುವುದು ರಾಜಸ್ಥಾನದ ಶ್ರೀ ಗಂಗಾನಗರ್ ಜಿಲ್ಲೆಯಲ್ಲಿ. ಇಲ್ಲಿ ಪೆಟ್ರೋಲ್ ಬೆಲೆ 113 ರೂ ದಾಟಿದೆ. ಈ ಜಿಲ್ಲೆಯಲ್ಲಿ ಡೀಸೆಲ್ ಬೆಲೆ ಕೂಡ ಕೆಲ ದಿನಗಳ ಹಿಂದೆಯೇ ಶತಕ ಭಾರಿಸಿದೆ. ಇಲ್ಲಿ ಡೀಸೆಲ್ ಬೆಲೆ ಲೀಟರ್​ಗೆ 103.15 ರೂ ಇದೆ. ರಾಜಸ್ಥಾನ, ಒಡಿಶಾ ಮತ್ತು ಮಧ್ಯ ಪ್ರದೇಶದ ಕೆಲ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ಶತಕ ದಾಟಿ ಮುಂದೆ ಹೋಗಿದೆ.


ಇದನ್ನೂ ಓದಿ:Astrology: ಹೂಡಿಕೆ ನಿರ್ಧಾರ ಮಾಡಿದ್ದರೆ ಈ ರಾಶಿಯವರು ಒಮ್ಮೆ ಯೋಚಿಸಿ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ


ವಿವಿಧೆಡೆ ಇರುವ ಇಂದಿನ (ಜುಲೈ 29) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ:


ಬೆಂಗಳೂರು:
ಪೆಟ್ರೋಲ್: 105.25 ರೂ
ಡೀಸೆಲ್: 95.26


ದೆಹಲಿ:
ಪೆಟ್ರೋಲ್: 101.84 ರೂ
ಡೀಸೆಲ್: 89.87 ರೂ


ಮುಂಬೈ:
ಪೆಟ್ರೋಲ್: 107.83 ರೂ
ಡೀಸೆಲ್: 97.43 ರೂ


ಚೆನ್ನೈ:
ಪೆಟ್ರೋಲ್: 102.40 ರೂ
ಡೀಸೆಲ್: 94.39 ರೂ


ಕೋಲ್ಕತಾ:
ಪೆಟ್ರೋಲ್: 102.08
ಡೀಸೆಲ್: 93.02


ಹೈದರಾಬಾದ್:
ಪೆಟ್ರೋಲ್: 103.83 ರೂ
ಡೀಸೆಲ್: 97.06 ರೂ


ಭೋಪಾಲ್:
ಪೆಟ್ರೋಲ್: 110.20 ರೂ
ಡೀಸೆಲ್: 98.67 ರೂ


ಇದನ್ನೂ ಓದಿ:Karnataka Weather Updates: ಕರ್ನಾಟಕದಲ್ಲಿ ತಗ್ಗಿದ ಮಳೆ; ಈ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ವರುಣನ ಆರ್ಭಟ


ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಮಾರುಕಟ್ಟೆ ನಿಯಂತ್ರಿತವಾಗಿವೆ ಎಂದು ಸರ್ಕಾರ ಹೇಳುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಾಗುವ ಬದಲಾವಣೆಯು ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತೆರಿಗೆ ಹಾಕುತ್ತವೆ. ಪೆಟ್ರೋಲ್ ಬೆಲೆಯಲ್ಲಿ ಶೇ. 60 ರಷ್ಟು ಭಾಗ ತೆರಿಗೆಯೇ ಆಗಿರುತ್ತದೆ ಎಂಬುದು ಗಮನಾರ್ಹ. ಕೇಂದ್ರ ಸರ್ಕಾರ ಪ್ರತೀ ಲೀಟರ್ ಪೆಟ್ರೋಲ್​ಗೆ ವಿಧಿಸುವ ಅಬಕಾರಿ ಸುಂಕದ ಮೊತ್ತ 32.90 ರೂ ಇರುತ್ತದೆ. ಹಾಗೆಯೇ, ಡೀಸೆಲ್ ಬೆಲೆಯಲ್ಲಿ ಶೇ. 54ರಷ್ಟು ತೆರಿಗೆ ಇದೆ. ಇದರಲ್ಲಿ ಅಬಕಾರಿ ಸುಂಕದ ಮೊತ್ತ 31.80 ರೂ ಇದೆ.


ಇನ್ನು, ರಾಜ್ಯ ಸರ್ಕಾರಗಳೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಮ್ಮದೇ ಮೌಲ್ಯ ವರ್ಧಿತ ತೆರಿಗೆ (VAT – Value Added Tax) ತೆರಿಗೆ ವಿಧಿಸುತ್ತವೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ವ್ಯಾಟ್ ತೆರಿಗೆ ಇರುವುದರಿಂದ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ರಾಜಸ್ಥಾನ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಅತಿ ಹೆಚ್ಚು ವ್ಯಾಟ್ ತೆರಿಗೆ ಇದೆ.

First published: