Petrol Price Today: ಅಬ್ಬಾ ! ಸದ್ಯಕ್ಕೆ ನಿಂತಿದೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ನಿಟ್ಟುಸಿರು ಬಿಟ್ಟ ವಾಹನ ಸವಾರರು

Petrol Diesel Price Today: ಪ್ರತಿದಿನ ಮನೆಯಿಂದ ಗಾಡಿ ಹೊರಗೆ ತೆಗೆಯಬೇಕಾದ್ರೂ ಒಂದು ಸಲ ಇವತ್ತು ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಏನಾಗಿದೆ ಅಂತ ನೋಡ್ಕೊಂಡು, ವಿಚಾರ ಮಾಡಿ ಆಮೇಲೆ ವಾಹನ ಬಳಸುವ ಸಂದರ್ಭ ಬಂದುಬಿಟ್ಟಿದೆ. ಅಪರೂಪ ಎನ್ನುವಂತೆ ಇಂದು ಪೆಟ್ರೋಲ್ ಮತ್ತು ಡೀಸೆಲ್​ ಬೆಲೆಗಳು ಏರಿಕೆಯಾಗಿಲ್ಲ. ಯಾವ್ಯಾವ ನಗರದಲ್ಲಿ ಎಷ್ಟಿದೆ ಇಂಧನ ಬೆಲೆ, ಇಲ್ಲಿದೆ ವಿವರ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol - Diesel Price Today: ಬಹಳ ಅಪರೂಪ ಎನ್ನುವಂತೆ ಪೆಟ್ರೋಲ್ ಮತ್ತು ಡೀಸೆಲ್​ಗಳ ಬೆಲೆಗಳಲ್ಲಿ ಇಂದು ಏರಿಕೆಯಾಗಿಲ್ಲ. ಪ್ರತಿದಿನ ಮನೆಯಿಂದ ಗಾಡಿ ಹೊರಗೆ ತೆಗೆಯಬೇಕಾದ್ರೂ ಒಂದು ಸಲ ಇವತ್ತು ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಏನಾಗಿದೆ ಅಂತ ನೋಡ್ಕೊಂಡು, ವಿಚಾರ ಮಾಡಿ ಆಮೇಲೆ ವಾಹನ ಬಳಸುವ ಸಂದರ್ಭ ಬಂದುಬಿಟ್ಟಿದೆ. ಪ್ರತಿದಿನ ಇಷ್ಟಿಷ್ಟೇ ಎನ್ನುವಂತೆ ಇಂಧನ ಬೆಲೆಯೇರಿಕೆ ಆಗುತ್ತಿದ್ದು ವಾಹನ ಸವಾರರಂತೂ ಇರುವ ಖರ್ಚಿನ ಜೊತೆ ಅನಿವಾರ್ಯವಾಗಿ ಪೆಟ್ರೋಲ್​ಗೆ ಹೆಚ್ಚಿನ ಬೆಲೆ ನೀಡಬೇಕಾಗಿದೆ ಎಂದು ಬೇಸರದಲ್ಲೇ ಇದ್ದಾರೆ. ಆದ್ರೆ ಬೇರೆ ದಾರಿ ಕಾಣದೆ ಬೆಲೆಯೇರಿಕೆಗೆ ಹೊಂದಿಕೊಳ್ಳಲೇಬೇಕಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ - ಡೀಸೆಲ್ ಬೆಲೆ ಹೀಗಿದೆ:

ಬೆಂಗಳೂರು

ಪೆಟ್ರೋಲ್ - ರೂ 104.94 /ಲೀ

ಡೀಸೆಲ್ - ರೂ 95.26 /ಲೀ

ಮುಂಬೈ:

ಪೆಟ್ರೋಲ್ -ರೂ 107.54 /ಲೀ
ಡೀಸೆಲ್ - ರೂ 97.45 /ಲೀ

ದೆಹಲಿ

ಪೆಟ್ರೋಲ್ - ರೂ 101.54 /ಲೀ
ಡೀಸೆಲ್ - ರೂ 89.87 /ಲೀ

ಚೆನ್ನೈ

ಪೆಟ್ರೋಲ್ - ರೂ 102.23 /ಲೀ
ಡೀಸೆಲ್ - ರೂ 94.39 /ಲೀ

ಕೋಲ್ಕತ್ತಾ

ಪೆಟ್ರೋಲ್ - ರೂ 101.74 /ಲೀ
ಡೀಸೆಲ್ - ರೂ 93.02 /ಲೀ

ಭೋಪಾಲ್

ಪೆಟ್ರೋಲ್ - ರೂ 109.89 /ಲೀ
ಡೀಸೆಲ್ - ರೂ 98.67 /ಲೀ

ಹೈದರಾಬಾದ್

ಪೆಟ್ರೋಲ್ - ರೂ 105.52 /ಲೀ
ಡೀಸೆಲ್ - ರೂ 97.96 /ಲೀ

ಗೌಹಾಟಿ

ಪೆಟ್ರೋಲ್ - ರೂ 97.34 /ಲೀ
ಡೀಸೆಲ್ - ರೂ 89.22 /ಲೀ

ಲಖನೌ

ಪೆಟ್ರೋಲ್ - ರೂ 98.63 /ಲೀ
ಡೀಸೆಲ್ - ರೂ 90.26 /ಲೀ

ಗಾಂಧಿನಗರ

ಪೆಟ್ರೋಲ್ - ರೂ 98.50 /ಲೀ
ಡೀಸೆಲ್ - ರೂ 96.95 /ಲೀ

ನಿಮ್ಮ ನಗರದ ತೈಲ ಬೆಲೆಯನ್ನು ಪರಿಶೀಲಿಸುವುದು ಹೇಗೆ?

ದೇಶದ ಮೂರು ತೈಲ ಮಾರುಕಟ್ಟೆ ಕಂಪನಿಗಳಾದ ಎಚ್‌ಪಿಸಿಎಲ್, ಬಿಪಿಸಿಎಲ್ ಮತ್ತು ಐಒಸಿ ಬೆಳಿಗ್ಗೆ 6 ಗಂಟೆಯ ನಂತರ ಹೊಸ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಿಸುತ್ತವೆ. ಹೊಸ ದರಗಳಿಗಾಗಿ, ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಮಾಹಿತಿಯನ್ನು ಪಡೆಯಬಹುದು. ಅದೇ ಸಮಯದಲ್ಲಿ, ನೀವು ಮೊಬೈಲ್ ಫೋನ್‌ಗಳಲ್ಲಿ ಎಸ್‌ಎಂಎಸ್ ಮೂಲಕವೂ ದರವನ್ನು ಪರಿಶೀಲಿಸಬಹುದು.

92249 92249 ಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಬಗ್ಗೆಯೂ ನೀವು ತಿಳಿದುಕೊಳ್ಳಬಹುದು. ನೀವು ಆರ್​ಎಸ್​ಪಿ <ಸ್ಪೇಸ್> ಪೆಟ್ರೋಲ್ ಪಂಪ್ ಡೀಲರ್ ಕೋಡ್ ಅನ್ನು 92249 92249 ಗೆ ಕಳುಹಿಸಬೇಕು. ನೀವು ದೆಹಲಿಯಲ್ಲಿದ್ದರೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸಂದೇಶದ ಮೂಲಕ ತಿಳಿದುಕೊಳ್ಳಲು ಬಯಸಿದರೆ, ನೀವು ಆರ್​ಎಸ್​ಪಿ 102072 ಅನ್ನು 92249 92249 ಗೆ ಕಳುಹಿಸಬೇಕು.

ಬೆಲೆಗಳು ಪ್ರತಿದಿನ ಬದಲಾಗುತ್ತವೆ:

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದೈನಂದಿನ ಬದಲಾವಣೆ ಬೆಳಿಗ್ಗೆ 6 ಗಂಟೆಗೆ ಸಂಭವಿಸುತ್ತದೆ. ಬೆಳಿಗ್ಗೆ 6 ರಿಂದ ಹೊಸ ದರಗಳು ಅನ್ವಯವಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ವ್ಯಾಪಾರಿ ಆಯೋಗ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ವಿದೇಶಿ ವಿನಿಮಯ ದರಗಳ ಜೊತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ಬೆಲೆಗಳು ಯಾವುವು ಎಂಬುದರ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: