HOME » NEWS » National-international » PETROL AND DIESEL PRICE PETROL AND DIESEL RATE INCREASED TODAY IN BANGALORE CHECK LATEST PETROL AND DIESEL PRICE IN INDIA DBDEL LG

Petrol Diesel Price: ಸತತವಾಗಿ 3ನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ ಕೇಂದ್ರ ಸರ್ಕಾರ

ಮೇ 10ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 23 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 35 ಪೈಸೆ, ಮೇ 11ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 24 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 32 ಪೈಸೆ ಏರಿಕೆ ಮಾಡಿತ್ತು. ಈಗ ಮೇ 12ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 20 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 27 ಪೈಸೆ ಏರಿಕೆ ಮಾಡಿದೆ.

news18-kannada
Updated:May 12, 2021, 12:01 PM IST
Petrol Diesel Price: ಸತತವಾಗಿ 3ನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಮೇ 12): ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರ ಕೊರೊನಾ ಮೊದಲ ಅಲೆ ಇದ್ದಾಗಲೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿತ್ತು. ಈಗ ಕೊರೊನಾ ಎರಡನೇ ಅಲೆ ತಾರಕ್ಕೇರಿರುವ ಸಂದರ್ಭದಲ್ಲೂ ಮತ್ತೆ ಮೇ 4ರಿಂದ ನಿರಂತರವಾಗಿ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಮೇ 12ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 20 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 27 ಪೈಸೆ ಏರಿಕೆ ಮಾಡಿದೆ.

ಮೇ ತಿಂಗಳಲ್ಲಿ ಒಟ್ಟು ಏಳು ಭಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಪ್ರತಿ ಪೆಟ್ರೋಲ್ ಮೇಲೆ 1.65 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 1.88 ರೂಪಾಯಿ ಹೆಚ್ಚಳ ಮಾಡಲಾಗಿದೆ. ಮೇ 5ರಂದು ಪ್ರತಿ ಪೆಟ್ರೋಲ್ ಮೇಲೆ 13 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 21 ಪೈಸೆ, ಮೇ 6ರಂದು ಪ್ರತಿ ಪೆಟ್ರೋಲ್ ಮೇಲೆ 18 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 31 ಪೈಸೆ ಹಾಗೂ ಮೇ 7ರಂದು ಪ್ರತಿ ಪೆಟ್ರೋಲ್ ಮೇಲೆ 25 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 33 ಪೈಸೆ ಬೆಲೆ ಹೆಚ್ಚಿಸಿತ್ತು. ಹೀಗೆ ನಿರಂತರವಾಗಿ ನಾಲ್ಕು ದಿನ ಬೆಲೆ ಏರಿಸಿ ಎರಡು ದಿನ ಮಾತ್ರ ವಿರಮಿಸಿತ್ತು. ಬಳಿಕ ಮೇ 10ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 23 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 35 ಪೈಸೆ, ಮೇ 11ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 24 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 32 ಪೈಸೆ ಏರಿಕೆ ಮಾಡಿತ್ತು. ಈಗ ಮೇ 12ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 20 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 27 ಪೈಸೆ ಏರಿಕೆ ಮಾಡಿದೆ.

ಖಾಸಗಿ ಆಸ್ಪತ್ರೆಗಳಲ್ಲಿನ ಶೇ. 50ರಷ್ಟು ಹಾಸಿಗೆಗಳನ್ನು ಸರ್ಕಾರವೇ ಹಂಚಲಿದೆ; ಸಚಿವ ಬಿ.ಶ್ರೀರಾಮುಲು

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ‌ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿದೆ.
Youtube Video

ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ

ಬೆಂಗಳೂರು- ಪೆಟ್ರೋಲ್ 95.11 ರೂ., ಡೀಸೆಲ್ 87.57 ರೂ.ಭೂಪಾಲ್- ಪೆಟ್ರೋಲ್ 100.08 ರೂ., ಡೀಸೆಲ್ 90.95 ರೂ.
ಮುಂಬೈ- ಪೆಟ್ರೋಲ್ 98.36 ರೂ., ಡೀಸೆಲ್ 89.75 ರೂ.
ಜೈಪುರ - ಪೆಟ್ರೋಲ್ 98.47 ರೂ., ಡೀಸೆಲ್ 91.20 ರೂ.
ಪಾಟ್ನಾ- ಪೆಟ್ರೋಲ್ 94.28 ರೂ., ಡೀಸೆಲ್ 87.84 ರೂ.
ಚೆನ್ನೈ- ಪೆಟ್ರೋಲ್ 93.84 ರೂ., ಡೀಸೆಲ್ 87.49 ರೂ.
ಕೋಲ್ಕತ್ತಾ- ಪೆಟ್ರೋಲ್ 92.16 ರೂ., ಡೀಸೆಲ್ 85.45 ರೂ.
ದೆಹಲಿ- ಪೆಟ್ರೋಲ್ 92.05 ರೂ., ಡೀಸೆಲ್ 82.61 ರೂ.
ಲಕ್ನೋ- ಪೆಟ್ರೋಲ್ 89.96 ರೂ., ಡೀಸೆಲ್ 82.99 ರೂ.
ರಾಂಚಿ- ಪೆಟ್ರೋಲ್ 89.17 ರೂ., ಡೀಸೆಲ್ 87.26 ರೂ.
Published by: Latha CG
First published: May 12, 2021, 8:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories