Petrol Price Down: ದೀಪಾವಳಿ‌ ದಿನ ಇಂಧನ ಬೆಲೆ ಭಾರೀ ಇಳಿಕೆ, ಯಾವ್ಯಾವ ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ?

Petrol Price Down: 2021ರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು 28 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 26 ರೂ. ಹೆಚ್ಚಿಸಲಾಗಿದೆ. ಆದರೀಗ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂ. ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 10 ರೂ. ಮಾತ್ರ ಇಳಿಸಲಾಗಿದೆ. ಇನ್ನಷ್ಟು ಇಳಿಸಬಹುದಿತ್ತು ಎಂಬ ಚರ್ಚೆ ಕೂಡ ನಡೆಯುತ್ತಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ, ನ. 4: ಕೊರೋನಾ ಬಳಿಕ ಜನ ಕಡುಕಷ್ಟದಲ್ಲಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಕೇಂದ್ರ ಸರ್ಕಾರ (Union Government) ನಿರಂತರವಾಗಿ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಗಳನ್ನು ಹೆಚ್ಚಳ ಮಾಡುತ್ತಿತ್ತು. ಇದರಿಂದ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಜನ ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರು. ಇತ್ತೀಚೆಗೆ ದೇಶಾದ್ಯಂತ ನಡೆದ ಉಪ ಚುನಾವಣೆ(By Election)ಯಲ್ಲಿ ಬಿಜೆಪಿ (BJP) ಪಕ್ಷಕ್ಕೆ ಸೋಲುಣಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದರಿಂದ ಎತ್ತೆಚ್ಚುಕೊಂಡಿರುವ ಕೇಂದ್ರ ಸರ್ಕಾರ ಈಗ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 10 ರೂಪಾಯಿ ಬೆಲೆ ಇಳಿಸಿದೆ. ಕೇಂದ್ರ ಸರ್ಕಾರ ಬೆಲೆ ಇಳಿಸುತ್ತಿದ್ದಂತೆ ರಾಜ್ಯ ಸರ್ಕಾರ(State Government)ಗಳು ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವಿಧಿಸುತ್ತಿದ್ದ ವ್ಯಾಟ್ (VAT) ಅನ್ನು ಕಡಿಮೆ ಮಾಡಿವೆ.

ದಿಢೀರ್​ ಬೆಲೆ ಇಳಿಕೆ ಮಾಡಿರುವುದು ಏಕೆ?

ದೀಪಾವಳಿ ಹಬ್ಬಕ್ಕೆ ಉಡುಗೊರೆ ಕೊಟ್ಟಿದ್ದೇವೆ ಎಂಬಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ‌ಇಳಿಸಲಾಗಿದೆ. ಆದರೆ ಇಷ್ಟು ದಿನ ಏಕೆ ಬೆಲೆ ಇಳಿಕೆ ಮಾಡಿರಲಿಲ್ಲ ಎಂಬ ಚರ್ಚೆ ಆಗುತ್ತಿದೆ. ಜೊತೆಗೆ 2021ರಲ್ಲಿ ಒಟ್ಟು ಒಂದು ಲೀಟರ್ ಪೆಟ್ರೋಲ್ ಬೆಲೆಯನ್ನು 28 ರೂಪಾಯಿ ಹೆಚ್ಚಿಸಲಾಗಿದೆ.‌ ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ಮೇಲೆ 26 ರೂಪಾಯಿ ಹೆಚ್ಚಿಸಲಾಗಿದೆ. ಆದರೀಗ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 10 ರೂಪಾಯಿ ಬೆಲೆಗಳನ್ನು ಮಾತ್ರ ಇಳಿಸಿರುವುದು ಏಕೆ? ಇನ್ನಷ್ಟು ಬೆಲೆ ಕಡಿಮೆ ಮಾಡಬಹುದಿತ್ತಲ್ಲ ಎಂದು ಕೂಡ ಚರ್ಚೆ ನಡೆಯುತ್ತಿದೆ.

ಇದನ್ನು ಓದಿ :ಅಬಕಾರಿ ಸುಂಕ, ವ್ಯಾಟ್ ಕಡಿತ; ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಇಳಿಕೆ

ಯಾವ  ಯಾವ ರಾಜ್ಯಗಳಲ್ಲಿ ಪೆಟ್ರೋಲ್​ ಬೆಲೆ ಇಳಿಕೆ?

ಕೇಂದ್ರ ಸರ್ಕಾರ ಪೆಟ್ರೋಲ್  ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಿದ ಬಳಿಕ ಕರ್ನಾಟಕ (Karnataka), ಅಸ್ಸಾಂ (Assam), ಗೋವಾ (Goa), ತ್ರಿಪುರಾ (Tripura), ಉತ್ತರಾಖಂಡ (Uttarakhand), ಮಣಿಪುರ (Manipur) ಗುಜರಾತ್ (Gujarat), ಉತ್ತರ ಪ್ರದೇಶ (Uttar Pradesh), ಹರಿಯಾಣ (Haryana) ಮತ್ತು ಬಿಹಾರ (Bihar) ಸರ್ಕಾರಗಳು ಕೂಡ ರಾಜ್ಯ ಸರ್ಕಾರಗಳು ವಿಧಿಸುತ್ತಿದ್ದ ವ್ಯಾಟ್ ಅನ್ನು ಕಡಿತಗೊಳಿಸಿ ಘೋಷಣೆ ಮಾಡಿವೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka Chief Minister Basavaraja Bommai) ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 7 ರೂಪಾಯಿ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 7 ರೂಪಾಯಿ ಬೆಲೆ ಇಳಿಸುವುದಾಗಿ ಘೋಷಿಸಿದ್ದಾರೆ.‌

ಇದೇ ರೀತಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Goa Chief Minister Pramod Sawanth) ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಂಮಂತ ಬಿಸ್ವಾ ಶರ್ಮಾ (Assam Chief Minister Dr. Himanta Biswa Sarma) ತಮ್ಮ ಸರ್ಕಾರಗಳು ಪೆಟ್ರೋಲ್ ಮೇಲೆ 7 ರೂಪಾಯಿ ಮತ್ತು ಡೀಸೆಲ್ ಮೇಲೆ 7 ರೂಪಾಯಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ತ್ರಿಪುರ ಮುಖ್ಯಮಂತ್ರಿ ಬಿಲ್ಲಬ್ ದೇಬ್ (Tripura Chief Minister Biplab Deb), ಮಣಿಪುರ ಮುಖ್ಯಮಂತ್ರಿ ಬಿರನ್ ಸಿಂಗ (Manipur Chief Minister N Biren Singh) ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Gujarat Chief Minister Bhupendra Patel) ತಮ್ಮ ಸರ್ಕಾರಗಳು ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 5 ರೂಪಾಯಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ.

ಇದನ್ನು ಓದಿ : ಪೆಟ್ರೋಲ್​ 12 ರೂ. ಡೀಸೆಲ್​ 17 ರೂ. ಇಳಿಕೆ: ಇಂದು ಸಂಜೆಯಿಂದಲೇ ಹೊಸ ದರ ಜಾರಿ

ಹರಿಯಾಣ, ಯೂಪಿಯಲ್ಲಿ ಗರಿಷ್ಠ ಇಳಿಕೆ

ಏತನ್ಮಧ್ಯೆ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಉತ್ತರ ಪ್ರದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಒಟ್ಟು 12 ರೂಪಾಯಿಗಳಷ್ಟು ಇಳಿಕೆಯಾಗಲಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಮುಂದಿನ‌ ವರ್ಷ ನಡೆಯುವ ವಿಧಾನಸಭಾ ಚುನಾವಣಾ (Assembly Elections) ದೃಷ್ಟಿಯಿಂದ ಉತ್ತರ ಪ್ರದೇಶದಲ್ಲಿ ಗರಿಷ್ಠ ಮಟ್ಟದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡಲಾಗುತ್ತೆ ಎನ್ನಲಾಗುತ್ತಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ (Hariyana Chief Minister Manoharlal Kattar) ತಮ್ಮ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಒಟ್ಟು 12 ರೂಪಾಯಿಗಳಷ್ಟು ಇಳಿಕೆಯಾಗಲಿದೆ ಎಂದು ಟ್ವಿಟರ್ ಮೂಲಕ ಘೋಷಿಸಿದ್ದಾರೆ‌.

ಬಿಹಾರದಲ್ಲಿ ಕನಿಷ್ಠ ಬೆಲೆ ಇಳಿಕೆ

ಬಿಜೆಪಿಯ ಸಂಸದ ಸುಶೀಲ್ ಕುಮಾರ್ ಮೋದಿ (BJP MP Sushil Modi) ಅವರ ಟ್ವೀಟ್ ಪ್ರಕಾರ ಬಿಹಾರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 1.30 ರೂಪಾಯಿ ಕಡಿಮೆ ಮಾಡಲಾಗಿದೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು 1.90 ರೂಪಾಯಿ ಇಳಿಸಲಾಗಿದೆ. ಇದು ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜ್ಯಗಳು ಇಳಿಸಿರುವ ಅತ್ಯಂತ ಕಡಿಮೆ ಬೆಲೆಯಾಗಿದೆ. ಇದಲ್ಲದೆ ಉತ್ತರಖಂಡ ಸರ್ಕಾರ (Uttarakhand government) ಪ್ರತಿ ಲೀಟರ್ ಪೆಟ್ರೋಲ್ ಮೇಲೆ 2 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು 2 ರೂಪಾಯಿ ಇಳಿಸಿದೆ.
Published by:Vasudeva M
First published: