ಮುಂದಿನ ವಾರದಿಂದ ಪೆಟ್ರೋಲ್​​-ಡೀಸೆಲ್​​ ಬೆಲೆ ಇಳಿಕೆ ಸಾಧ್ಯತೆ; ಯಾಕೆ ಗೊತ್ತೇ?

ಮುಂದಿನ ಕೆಲ ದಿನಗಳವರೆಗೂ ಈ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುವ ಸಂಭವವಿದ್ದು, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನಷ್ಟು ಇಳಿಯುವ ಸಾಧ್ಯತೆ ಇದೆ.

news18
Updated:October 3, 2019, 5:58 PM IST
ಮುಂದಿನ ವಾರದಿಂದ ಪೆಟ್ರೋಲ್​​-ಡೀಸೆಲ್​​ ಬೆಲೆ ಇಳಿಕೆ ಸಾಧ್ಯತೆ; ಯಾಕೆ ಗೊತ್ತೇ?
ಪೆಟ್ರೋಲ್​- ಸಾಂದರ್ಭಿಕ ಚಿತ್ರ
news18
Updated: October 3, 2019, 5:58 PM IST
ನವದೆಹಲಿ(ಅ.03): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಮತ್ತೆ ಇಳಿಕೆಯಾಗಲಿದೆ ಎನ್ನಲಾಗಿದೆ. ಮುಂದಿನ ವಾರದಿಂದ ಪೆಟ್ರೋಲ್​​ ಡೀಸೆಲ್ ಬೆಲೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ತಿಳಿಸಿದೆ. ಈ ಸುದ್ದಿಯಿಂದ ಪೆಟ್ರೋಲ್​​-ಡೀಸೆಲ್​​​ ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದ ವಾಹನ ಸವಾರರಿಗೆ ಮತ್ತೆ ನಿರಾಳ ಸಿಕ್ಕಿದಂತಾಗಿದೆ.

ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಗುರುವಾರ ಪೆಟ್ರೋಲ್‌ ಬೆಲೆ 10 ಪೈಸೆ ಇಳಿಕೆಯಾಗಿತ್ತು. ಹಾಗೆಯೇ ಡೀಸೆಲ್‌ ಬೆಲೆಯೂ 6 ಪೈಸೆ ಕಡಿಮೆಯಾಗಿತ್ತು. ಸದ್ಯದ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಸಂಸ್ಥೆ ಮಾಹಿತಿ ಪ್ರಕಾರ, ಮುಂದಿನ ವಾರಗಳಲ್ಲಿಯೂ ಪೆಟ್ರೋಲ್​​-ಡೀಸೆಲ್​​ ಬೆಲೆ ಇನ್ನಷ್ಟು ಇಳಿಕೆಯಾಗಲಿದೆ ಎನ್ನಲಾಗುತ್ತಿದೆ.

ಈ ಹಿಂದೆ ಸೆಪ್ಟೆಂಬರ್​​ 14ರಂದು ಸೌದಿ ಅರೇಬಿಯಾದ ಅರಾಮ್ಕೋ ತೈಲ ಕಂಪೆನಿ ಮೇಲೆ ಡ್ರೋನ್‌ ದಾಳಿ ನಡೆದಿತ್ತು. ಈ ಡ್ರೋನ್​​ ದಾಳಿ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿಢೀರ್​​ ಏರಿಕೆಯಾಗಿತ್ತು. ತೈಲ ಪೂರೈಕೆಯಲ್ಲಿ ವ್ಯತ್ಯಯ ಕಾಣಿಸಿಕೊಂಡ ಕಾರಣದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೆ ಪರಿಣಾ ಬೀರಿತ್ತು. ಇದರಿಂದಲೇ ಬೆಲೆ ಏರಿಕೆ ಕಂಡಿತ್ತು.

ಇದನ್ನೂ ಓದಿ: ಸದ್ಯದಲ್ಲೇ ಚೆನ್ನೈಗೆ ಆಗಮಿಸಲಿರುವ ಮೋದಿ-ಚೀನಾ ಅಧ್ಯಕ್ಷ; ಬ್ಯಾನರ್ ಮೂಲಕ ಗಣ್ಯರ ಸ್ವಾಗತಕ್ಕೆ​ ಅವಕಾಶ ನೀಡಿದ ಮದ್ರಾಸ್​​ ಹೈಕೋರ್ಟ್​

ಇದೀಗ ಎಲ್ಲಾ ಸಮಸ್ಯೆಯೂ ಸರಿಪಡಿಸಲಾಗಿದೆ. ಕಚ್ಚಾ ತೈಲದ ಬೆಲೆಯೂ ತುಸು ಇಳಿಕೆಯಾಗಿದೆ. ಹಾಗಾಗಿ ಪೆಟ್ರೋಲ್‌ ಬೆಲೆಯೂ ಇಳಿಯುವ ನಿರೀಕ್ಷೆ ಹೆಚ್ಚಿದ ಎಂದು ಇಂಡಿಯನ್‌ ಆಯಿಲ್‌ನ ಅಧ್ಯಕ್ಷ ಸಂಜೀವ್‌ ಸಿಂಗ್‌ ಹೇಳಿದ್ದಾರೆ.

ಯಾಕೆ ಬೆಲೆ ಕಡಿಮೆ?: ಕಳೆದ ಐದು ದಿನಗಳಿಂದ ಪೆಟ್ರೋಲ್-ಡೀಸೆಲ್​​ ಬೆಲೆಗಳು ಇಳಿಕೆಯಾಗುತ್ತಿರವುದನ್ನು ನಾವು ಗಮನಿಸಬಹುದು. ಪೆಟ್ರೋಲ್ ಬೆಲೆ ಇಳಿಕೆಗೆ ಮಾಮೂಲಿಯಂತೆ ಕಾರಣವಾಗಿರುವುದು ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆಯಲ್ಲಿ ಆಗುತ್ತಿರುವ ಗಣನೀಯ ಇಳಿಕೆ. ಪ್ರಮುಖ ತೈಲ ಮಾರುಕಟ್ಟೆಯಾದ ಬ್ರೆಂಟ್ ಕ್ರೂಡ್​ನಲ್ಲಿ ಬ್ಯಾರೆಲ್ ತೈಲವು 59.23 ಡಾಲರ್​ಗೆ ಇಳಿಕೆಯಾಗಿದೆ. ಹಾಗೆಯೇ ಡಬ್ಲ್ಯೂಟಿಐ ಕ್ರೂಡ್​ನಲ್ಲಿನ ಬ್ಯಾರೆಲ್ ತೈಲವು 50.53 ಡಾಲರ್ ಆಗಿದೆ. ಮುಂದಿನ ಕೆಲ ದಿನಗಳವರೆಗೂ ಈ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುವ ಸಂಭವವಿದ್ದು, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನಷ್ಟು ಇಳಿಯುವ ಸಾಧ್ಯತೆ ಇದೆ.
------------
Loading...

First published:October 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...