ಇನ್ಮುಂದೆ ಸೂಪರ್ ಮಾರ್ಕೆಟ್​ನಲ್ಲೂ ಸಿಗಲಿದೆ ಪೆಟ್ರೋಲ್, ಡೀಸೆಲ್?

ಪೆಟ್ರೋಲ್​ ಹಾಗೂ ಡೀಸೆಲ್​ ಮಾರಾಟಕ್ಕೆ ಈಗಿರುವ ನಿಯಮಗಳನ್ನು ಸಡಿಲಪಡಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನಿರ್ಧರಿಸಿದೆ.

Rajesh Duggumane | news18
Updated:June 18, 2019, 3:20 PM IST
ಇನ್ಮುಂದೆ ಸೂಪರ್ ಮಾರ್ಕೆಟ್​ನಲ್ಲೂ ಸಿಗಲಿದೆ ಪೆಟ್ರೋಲ್, ಡೀಸೆಲ್?
ಸಾಂದರ್ಭಿಕ ಚಿತ್ರ
  • News18
  • Last Updated: June 18, 2019, 3:20 PM IST
  • Share this:
ನವದೆಹಲಿ (ಜೂ.18): ಸೂಪರ್​ ಮಾರ್ಕೆಟ್​  ಹೊಕ್ಕರೆ ಸಾಕು ನಿಮಗೆ ಅಗತ್ಯವಿರುವ ಬಹುತೇಕ ವಸ್ತುಗಳು ಸಿಗುತ್ತವೆ. ಇನ್ನುಮುಂದೆ ಈ ಸಾಲಿಗೆ ಪೆಟ್ರೋಲ್​, ಡೀಸೆಲ್​ ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ! ಸದ್ಯ, ಹೀಗೊಂದು ಚಿಂತನೆಯನ್ನು ಸರ್ಕಾರ ನಡೆಸಿದೆ.

ಪೆಟ್ರೋಲ್​ ಹಾಗೂ ಡೀಸೆಲ್​ ಮಾರಾಟಕ್ಕೆ ಈಗಿರುವ ನಿಯಮಗಳನ್ನು ಸಡಿಲಪಡಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನಿರ್ಧರಿಸಿದೆ. ಇದರನ್ವಯ ಸೂಪರ್​ ಮಾರ್ಕೆಟ್​​ ಹಾಗೂ ಶಾಪಿಂಗ್​ ಮಾಲ್​, ವಾಣಿಜ್ಯ ಮಳಿಗೆಗಳಲ್ಲಿ ಪೆಟ್ರೋಲ್​ ಮಾರಾಟ ಮಾಡಬಹುದಾಗಿದೆ.

ಈ ಕುರಿತು ಮನವಿಯನ್ನು ಸಚಿವ ಸಂಪುಟದ ಎದುರಿಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಪೆಟ್ರೋಲ್​, ಡೀಸೆಲ್​ ಸುಲಭವಾಗಿ ದೊರೆಯುವಂತೆ ನೋಡಿಕೊಳ್ಳಲು ಕೇಂದ್ರ ಮುಂದಾಗಿದೆ. ಇದರ ಜೊತೆಗೆ ಖಾಸಗಿ ಕಂಪನಿಗಳು ಪೆಟ್ರೋಲ್​ ಮಾರಾಟ ಮಾಡುವ ಉದ್ಯಮಕ್ಕೆ ಕಾಲಿಡಲು ಇರುವ ಸಾಕಷ್ಟು ಕಠಿಣ ನಿಯಮಗಳನ್ನು ಸರ್ಕಾರ ಸಡಿಲಗೊಳಿಸಲಿದೆ.

ಹಾಲಿ ಇರುವ ನಿಯಮದ ಪ್ರಕಾರ ಈ ಉದ್ಯಮಕ್ಕೆ ಕಾಲಿಡಲು ದೇಶಿಯ ಮಾರುಕಟ್ಟೆಯಲ್ಲಿ 2,000 ಕೋಟಿ ರೂ. ಹಣವನ್ನು ಸಂಸ್ಥೆ ಹೂಡಿಕೆ ಮಾಡಿರಬೇಕು. ಈ ನಿಯಮ ಸಡಿಲಿಕೆಯಿಂದ ಸಾಕಷ್ಟು ಸಂಸ್ಥೆಗಳು ಈ ಉದ್ಯಮಕ್ಕೆ ಕಾಲಿಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಪೆಟ್ರೋಲ್​ ಬಂಕ್​ ಡೀಲರ್​ ಶಿಪ್​ ಪಡೆಯುವುದು ಇನ್ನು ಸುಲಭ..! ಹೇಗೆ ಅಂತೀರಾ?

First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ