ನಿಮ್ಮ ವಾಹನ 15 ವರ್ಷಕ್ಕಿಂತ ಹಳೆಯದಾಗಿದ್ದರೆ ಅದನ್ನು ಯಾವಾಗ ಬೇಕಿದ್ರೂ ಜಪ್ತಿ ಮಾಡ್ಬಹುದು, ಜೋಕೆ!

Delhi Government: 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳು ದೆಹಲಿಯಲ್ಲಿ ರಸ್ತೆಗಿಳಿದರೆ ದಂಡ ವಿಧಿಸಲು ದೆಹಲಿ ಸರ್ಕಾರ ಮುಂದಾಗಿದೆ.. ಜೊತೆಗೆ ಹಳೆಯ ವಾಹನಗಳು ವಾಹನಗಳು ರಸ್ತೆಯಲ್ಲಿ ಸಂಚರಿಸುವುದು ಕಂಡು ಬಂದರೆ ಕೂಡಲೇ ಆ ವಾಹನಗಳನ್ನು ಜಪ್ತಿ ಮಾಡಲಾಗುವುದು

ವಾಹನ

ವಾಹನ

 • Share this:
  ದೆಹಲಿ-ಎನ್‌ಸಿಆರ್‌ನಲ್ಲಿನ(Delhi) ಗಾಳಿಯು(Air) ವಿಷಕಾರಿಯಾಗುತ್ತಿದೆ. ವಾಯು ಮಾಲಿನ್ಯದಿಂದ(Pollution) ಜನರ ಜೀವನ(Life) ಕಷ್ಟಕರವಾಗಿದೆ.. ಹೆಚ್ಚುತ್ತಿರುವ ವಾಯುಮಾಲಿನ್ಯ(Air Pollution) ನಿಯಂತ್ರಣ ಮಾಡಲು ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್(Supreme court) ತರಾಟೆಗೆ ತೆಗೆದುಕೊಂಡಿದೆ.ಜೊತೆಗೆ ವಾಯುಮಾಲಿನ್ಯ ನಿಯಂತ್ರಣ ಕ್ರಮಗಳ ಅನುಷ್ಠಾನಕ್ಕ 24ಗಂಟೆಗಳ ಡೆಡ್ ಲೈನ್ ಕೊಟ್ಟು ಸುಪ್ರೀಂಕೋರ್ಟ್‌ ದೆಹಲಿ ಸರ್ಕಾರಕ್ಕೆ(Delhi Government) ಎಚ್ಚರಿಕೆ ನೀಡಿದೆ.. ಜೊತೆಗೆ ಮಾಲಿನ್ಯ ಬಿಕ್ಕಟ್ಟು ಆದೇಶ ಹೊರಡಿಸುವವರೆಗೂ ಅಲ್ಲಿನ ಶಾಲೆ-ಕಾಲೇಜುಗಳಿಗೆ ಸರ್ಕಾರ ರಜೆ ವಿಧಿಸಿದೆ.. ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ನಿಯಂತ್ರಣ ಮಾಡಲು ಈಗಾಗಲೇ ಸಮ-ಬೆಸ ನೀತಿ ಅನುಸರಿಸಿದ್ದ ದೆಹಲಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ..

  15 ವರ್ಷ ಹಳೆಯ ವಾಹನಗಳಿಗೆ ದಂಡ

  ದೆಹಲಿಯ ಅಕ್ಕಪಕ್ಕದ ರಾಜ್ಯಗಳಲ್ಲಿ ಹೆಚ್ಚು ಕೃಷಿ ತ್ಯಾಜ್ಯ ಸುಡುವುದು ದೆಹಲಿಗೆ ದೊಡ್ಡ ಸಮಸ್ಯೆ.. ಇತರೆ ಕಾಲಕ್ಕೆ ಹೋಲಿಕೆ ಮಾಡಿಕೊಂಡರೆ ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಇಂದಿಗಿಂತಲೂ ಮಿತಿ ಮೀರಿಇರುತ್ತದೆ. ಹೀಗಾಗಿ ಪ್ರತಿಬಾರಿಯೂ ದೆಹಲಿಸರ್ಕಾರ ವಾಯುಮಾಲಿನ್ಯ ನಿಯಂತ್ರಣ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಂತೆಕಳೆದ ಬಾರಿ ಮಾಲಿನ್ಯ ಹೆಚ್ಚಳವಾದಗ ಸಮ-ಬೆಸ ನೀತಿ ಸೇರಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದ ಸರ್ಕಾರ ಈಗ ಹೊಸ ಮಾರ್ಗದಲ್ಲಿ ವಾಹನ ನಿಯಂತ್ರಿಸಲು ಮುಂದಾಗಿದೆ.

  ಇದನ್ನೂ ಓದಿ: ವಾಯುಮಾಲಿನ್ಯದ ಕಾರಣಕ್ಕೆ ದೆಹಲಿಯಂತೆ ನೋಯಿಡಾದಲ್ಲೂ ಶಾಲೆಗಳು ಬಂದ್

  15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳು ದೆಹಲಿಯಲ್ಲಿ ರಸ್ತೆಗಿಳಿದರೆ ದಂಡ ವಿಧಿಸಲು ದೆಹಲಿ ಸರ್ಕಾರ ಮುಂದಾಗಿದೆ.. ಜೊತೆಗೆ ಹಳೆಯ ವಾಹನಗಳು ವಾಹನಗಳು ರಸ್ತೆಯಲ್ಲಿ ಸಂಚರಿಸುವುದು ಕಂಡು ಬಂದರೆ ಕೂಡಲೇ ಆ ವಾಹನಗಳನ್ನು ಜಪ್ತಿ ಮಾಡಲಾಗುವುದು. ವಾಹನಗಳನ್ನು ಜಪ್ತಿ ಮಾಡುವುದು ಮಾತ್ರವಲ್ಲ ಅದರ ಮಾಲೀಕರಿಗೆ ದಂಡ ವಿಧಿಸಲಾಗುವುದು. ಮತ್ತು ವಾಹನವನ್ನು ಸಾರಿಗೆ ಇಲಾಖೆಯ ಪರವಾನಗಿ ಸ್ಕ್ರಾಪ್ ಗೆ ಹಸ್ತಾಂತರಿಸಲಾಗುವುದು. ವಾಹನವನ್ನು ಸ್ಕ್ರ್ಯಾಪೇಜ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಸ್ಕ್ರಾಪರ್ ಸ್ಥಳಕ್ಕೆ ಬರಲು ಸಾಧ್ಯವಾಗದಿದ್ದರೆ, ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕನ್ನು ಸ್ಥಳೀಯ ಪೊಲೀಸರಿಗೆ ಹೊಂದಿರುತ್ತಾರೆ. ನಂತರ ಅದನ್ನು ಪೊಲೀಸರು ಸ್ಕ್ರ್ಯಾಪಿಂಗ್ ಯಾರ್ಡ್‌ಗೆ ಕಳುಹಿಸುತ್ತಾರೆ.

  ವಾಹನ ಕಳೆದುಕೊಂಡ ಮಾಲೀಕರಿಗೆ ಸಿಗಲಿದೆ ಪರಿಹಾರ

  ಇನ್ನು ವರ್ಷಕ್ಕಿಂತ ಹಳೆಯದಾದ ಕಾರುಗಳನ್ನು ರಸ್ತೆಗಳಲ್ಲಿಯೂ ನಿಲ್ಲಿಸುವಂತಿಲ್ಲ. ಒಂದು ವೇಳೆ ಇಂಥಹ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದರೂ, ಕಾರು ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ರಾಜ್ಯದಿಂದ ಅಧಿಕಾರ ಪಡೆದ ಸ್ಕ್ರಾಪರ್ ಮೂಲಕ ಈ ವಾಹನದ ಮಾರುಕಟ್ಟೆ ಮೌಲ್ಯವನ್ನು ಲೆಕ್ಕಹಾಕಿ, ಅದರ ಮೊತ್ತವನ್ನು ಮಾಲೀಕರಿಗೆ ನೀಡಲಾಗುತ್ತದೆ. ಸ್ಕ್ರಾಪರ್ ಮತ್ತು ವಾಹನ ಮಾಲೀಕರ ನಡುವೆ ಏನಾದರೂ ವಿವಾದಗಳಿದ್ದರೆ, ಅದನ್ನು ಸ್ಥಳೀಯ ಪೊಲೀಸರು ಬಗೆಹರಿಸುತ್ತಾರೆ. ಡಿಸೆಂಬರ್ 3 ರಿಂದ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಪ್ರವೇಶವನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.

  ಇದನ್ನೂ ಓದಿ: ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್ ಮುಖ್ಯ ಕಾರ್ಯದರ್ಶಿಗಳ ಸಭೆ ಆರಂಭ

  ವಾಹನದ ಸ್ಕ್ರ್ಯಾಪಿಂಗ್ ಕಡ್ಡಾಯ

  ಫಿಟ್‌ನೆಸ್ ಪರೀಕ್ಷೆಯ ನಂತರ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಸುಸ್ಥಿತಿಯಲ್ಲಿ ಕಂಡುಬಂದರೆ ಅವುಗಳನ್ನು ಬಳಸಲು ಇದುವರೆಗೆ ಅವಕಾಶವಿತ್ತು. ವಾಹನಗಳು ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸ್ ಆಗದಿದ್ದರೆ, ಅವುಗಳನ್ನು ನಷ್ಟಗೊಳಿಸಲು ಆದೇಶ ನೀಡಲಾಗಿತ್ತು. ವಾಹನ ಸ್ಕ್ರ್ಯಾಪಿಂಗ್ ಅನ್ನು ಉತ್ತೇಜಿಸಲು, ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ, ತನ್ನ ವಾಹನವನ್ನು ಸ್ಕ್ರಾಪ್ ಮಾಡಲು ಮಾಲೀಕರಿಗೆ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಇದೀಗ ದೆಹಲಿ ಸರ್ಕಾರವು ಹೆಚ್ಚುತ್ತಿರುವ ಮಾಲಿನ್ಯವನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ವಿಧಾನವನ್ನು ಅಳವಡಿಸಿಕೊಂಡಿದೆ. 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ತಮ್ಮ ಹಳೆಯ ವಾಹನಗಳನ್ನು ನೆನಪಿಗೋ ಅಥವಾ ಅವಶ್ಯಕತೆಗೆ ಉಳಿಸಿಕೊಳ್ಳಬೇಕು ಎನ್ನುವ ದೆಹಲಿ ಜನರು ಇನ್ನು ಮುಂದೆ ಎಚ್ಚರಿಕೆಯಿಂದ ಇರುವುದು ಒಳಿತು..
  Published by:ranjumbkgowda1 ranjumbkgowda1
  First published: