Peshawar Blast: ಪಾಕಿಸ್ತಾನದ ಮದರಸಾದಲ್ಲಿ ಬಾಂಬ್ ಸ್ಫೋಟ; 7 ಮಕ್ಕಳು ಸಾವು, 70ಕ್ಕೂ ಹೆಚ್ಚು ಜನ ಗಂಭೀರ

ಪಾಕಿಸ್ತಾನದ ಪೇಶಾವರದ ಮದರಸಾದಲ್ಲಿ ಯಾರೋ ಅಪರಿಚಿತ ವ್ಯಕ್ತಿ ಬ್ಯಾಗ್ ಇಟ್ಟು ಹೋಗಿದ್ದ. ಅದಾದ ಕೆಲವೇ ನಿಮಿಷದಲ್ಲಿ ಬಾಂಬ್ ಸ್ಫೋಟಗೊಂಡಿದೆ.

ಪಾಕಿಸ್ತಾನದ ಪೇಶಾವರದಲ್ಲಿ ಬಾಂಬ್ ಸ್ಫೋಟ

ಪಾಕಿಸ್ತಾನದ ಪೇಶಾವರದಲ್ಲಿ ಬಾಂಬ್ ಸ್ಫೋಟ

 • Share this:
  ನವದೆಹಲಿ (ಅ. 27): ಪಾಕಿಸ್ತಾನದ ಪೇಶಾವರದ ಮದರಸಾದಲ್ಲಿ ಇಂದು ಬೆಳಗ್ಗೆ ಭಾರೀ ಬಾಂಬ್​ ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ 7 ಮಕ್ಕಳು ಮೃತಪಟ್ಟಿದ್ದಾರೆ. 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜಮಿಯಾ ಜುಬೈರಿಯ ಮದರಸಾದಲ್ಲಿ ಇಂದು ಬೆಳಗ್ಗೆ ಇಸ್ಲಾಂ ಧರ್ಮದ ಕುರಿತು ಪ್ರವಚನ ನಡೆಸುತ್ತಿದ್ದ ವೇಳೆಯಲ್ಲಿ ದುಷ್ಕರ್ಮಿಗಳು ಬಾಂಬ್ ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ವಕ್ವರ್ ಅಜೀಂ ಹೇಳಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮದರಸಾದಲ್ಲಿ ಯಾರೋ ಅಪರಿಚಿತ ವ್ಯಕ್ತಿ ಬ್ಯಾಗ್ ಇಟ್ಟು ಹೋಗಿದ್ದ. ಅದಾದ ಕೆಲವೇ ನಿಮಿಷದಲ್ಲಿ ಬಾಂಬ್ ಸ್ಫೋಟಗೊಂಡಿದೆ.

  70ಕ್ಕೂ ಹೆಚ್ಚು ಜನರು ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಅನೇಕರು ಬದುಕುಳಿಯುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಅಫಘಾನಿಸ್ತಾನದ ಗಡಿಯಲ್ಲಿರುವ ಪೇಶಾವರದಲ್ಲಿ ಇತ್ತೀಚೆಗೆ ಇಷ್ಟು ಭೀಕರ ಬಾಂಬ್ ದಾಳಿ ಸಂಭವಿಸಿರಲಿಲ್ಲ.  ಖೆಟ್ಟಾ ಪ್ರದೇಶದಲ್ಲಿ ಉಂಟಾದ ಬಾಂಬ್ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದರು. ಅದಾದ ಎರಡೇ ದಿನಕ್ಕೆ ಇಂದು ಪೇಶಾವರದಲ್ಲಿ ಬಾಂಬ್ ದಾಳಿ ನಡೆಸಲಾಗಿದೆ.

  ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ...
  Published by:Sushma Chakre
  First published: