ಬೀಜಿಂಗ್: 22 ವರ್ಷದ ಯುವಕನೋರ್ವ ಕೇವಲ 10 ನಿಮಿಷದಲ್ಲಿ 1.5 ಲೀಟರ್ ಕೋಲ್ಡ್ ಡ್ರಿಂಕ್ ಕುಡಿದು ಸಾವಿನ ಮನೆ ಸೇರಿದ್ದಾನೆ. ಯುವಕನ ಸಾವು ಖಚಿತಪಡಿಸಿರುವ ವೈದ್ಯರು ಆತನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಚೀನಾದ ಬೀಜಿಂಗ್ ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ವರದಿಗಳ ಪ್ರಕಾರ, ಬಿಸಿಲ ಬೇಗೆಯಿಂದಾಗಿ ಕೂಲ್ ಆಗಲು 10 ನಿಮಿಷದಲ್ಲಿ ಒಂದೂವರೆ ಲೀಟರ್ ಕೋಲ್ಡ್ ಡ್ರಿಂಕ್ ಕುಡಿದು ಮನೆಗೆ ಹೋಗಿದ್ದಾನೆ. ಸುಮಾರು ಆರು ಗಂಟೆ ಬಳಿಕ ಯುವಕನಿಗೆ ಉದರ ಬಾಧೆ ಮತ್ತು ಉಬ್ಬುವಿಕೆ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಯುವಕನ ಪೋಷಕರು ಆತನನ್ನು ಬೀಜಿಂಗ್ ನಗರದ ಚಾಓಯಾಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಯುವಕ ಹೃದಯ ಬಡಿತ ಮತ್ತು ರಕ್ತದೊತ್ತಡ ಅಧಿಕವಾಗಿತ್ತು. ಆಸ್ಪತ್ರೆಗೆ ದಾಖಲಿಸಿದ್ದಾಗ ಯುವಕನ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಆತ ಬಹು ವೇಗವಾಗಿ ಉಸಿರು ತೆಗೆದುಕೊಳ್ಳುತ್ತಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಯುವಕನ ಸಾವಿನ ಬಗ್ಗೆ ವೈದ್ಯರ ತಂಡ ಹೇಳಿದ್ದೇನು?
ಕ್ಲಿನಿಕ್ ಮತ್ತು ರಿಸರ್ಚ್ ಇನ್ ಹೆಪೆಟೊಲಾಜಿ ಆಂಡ್ ಗ್ಯಾಸ್ಟ್ರೋಎಂಟರೊಲಾಜಿ ಜರ್ನಲ್ ಯುವಕನ ಸಾವಿನ ಬಗ್ಗೆ ಮಾಹಿತಿ ನೀಡಿದೆ. ವೇಗವಾಗಿ ಕೋಲ್ಡ್ ಡ್ರಿಂಕ್ ಕುಡಿದ ಪರಿಣಾಮ ಆತನ ಸಾವು ಸಂಭವಿಸಿದೆ. ಈ ರೀತಿ ತಂಪು ಪಾನೀಯ ಸೇವನೆ ಮಾಡೋದರಿಂದ ದೇಹದಲ್ಲಿ ನ್ಯೂಮ್ಯಾಟೋಸಿಸ್ ಉಂಟಾಗುತ್ತದೆ. ವೇಗವಾಗಿ ಕೋಲ್ಡ್ ಡ್ರಿಂಕ್ ಕುಡಿಯುವದರಿಂದ ವ್ಯಕ್ತಿಯ ಕರುಳಿನಲ್ಲಿ ಒಂದು ರೀತಿಯ ಗ್ಯಾಸ್ ನಿರ್ಮಾಣವಾಗುತ್ತದೆ. ಈ ರೀತಿಯ ಅಸಹಜ ಗ್ಯಾಸ್ ನಿಂದಾಗಿ ಉಸಿರಾಟ ಪೂರೈಕೆಯಲ್ಲಿ ಏರುಪೇರಾಗುತ್ತದೆ. ಇದೆಲ್ಲದರ ಪರಿಣಾಮ ಯುವಕ ಎದೆ ಭಾಗಕ್ಕೆ ಆಮ್ಲಜನಕದ ಪೂರೈಕೆಯಾಗದ ಹಿನ್ನೆಲೆ ಆತನ ಸಾವು ಸಂಭವಿಸಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದ ಯುವಕನನ್ನು ಸ್ಥಿತಿ ಗಂಭೀರವಾಗಿತ್ತು. ವೈದ್ಯರು ಆತನನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನ ಮಾಡಿದ್ದರು. ಆಸ್ಪತ್ರೆಗೆ ದಾಖಲಾದ 18 ಗಂಟೆ ನಂತರ ಯುವಕ ಸಾವನ್ನಪ್ಪಿದ್ದ ಎಂದು ಸ್ಥಳೀಯ ವರದಿಗಾರರು ಮಾಹಿತಿ ನೀಡಿದ್ದಾರೆ.
ವೈದ್ಯರ ಭಿನ್ನ ಅಭಿಪ್ರಾಯಗಳು
ಯುವಕನ ಸಾವಿನ ಬಗ್ಗೆ ವರದಿಯಾಗುತ್ತಿದ್ದಂತೆ ತಜ್ಞ ವೈದ್ಯರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಈ ರೀತಿ ಸಾವು ಸಂಭವಿಸೋದು ತುಂಬಾ ಕ್ಷೀಣ ಎಂದು ಬ್ರಿಟಿಷ್ ತಜ್ಞ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಂದು ನಿಯಮಿತ ಬಾಟೆಲ್ ನಲ್ಲಿರುವ ತಂಪು ಪಾನೀಯವನ್ನ ವೇಗವಾಗಿ ಸೇವನೆ ಮಾಡುವದರಿಂದ ಸಾವು ಸಂಭವಿಸುವುದು ಕಡಿಮೆ. ಆದ್ರೆ ಬೀಜಿಂಗ್ ವೈದ್ಯರ ತಂಡ ಯುವಕನ ಸಾವು ಹೇಗೆ ನಡೆದಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಆದ್ರೂ ಈ ಪ್ರಕರಣ ವೈದ್ಯಕೀಯ ಲೋಕದಲ್ಲಿ ಆಶ್ಚರ್ಯವನ್ನುಂಟು ಮಾಡಿದೆ ಎಂದು ಲಂಡನ್ ಯುನಿವರ್ಸಿಟಿಯ ಬಯೋಕೆಮಿಸ್ಟ್ ಅಧ್ಯಾಪಕ ಡಾ. ನಾಥನ್ ಡೇವಿಸ್ ಹೇಳಿದ್ದಾರೆ.
ಇದನ್ನೂ ಓದಿ: Poison Rice: ಸರಿಯಾಗಿ ಬೇಯಿಸದೇ ಇದ್ರೆ ಅನ್ನ ವಿಷವಾಗುತ್ತದೆ! ಅನ್ನ ಮಾಡುವುದು ಹೇಗೆ? ತಜ್ಞರು ವಿವರಿಸಿದ್ದಾರೆ
ಕೂಲ್ ಡ್ರಿಂಕ್ಸ್/ತಂಪು ಪಾನೀಯಗಳು ತಮ್ಮ ಬಣ್ಣ, ಚಿಲ್ಡ್ ರುಚಿಯಿಂದ ಎಂಥವರನ್ನೂ ಸೆಳೆಯುತ್ತವೆ. ಬೇಸಿಗೆ ಇದ್ದರಂತು ಮುಗಿಯಿತು. ಬಾಟಲ್ನ ಕೈನಲ್ಲಿ ಹಿಡಿದು ಆಗಾಗೆ ಕುಡಿಯೋದು, ಹೊರಗಿನಿಂದ ಮನೆಗೆ ಬಂದ ತಕ್ಷಣ ಫ್ರೆಡ್ಜ್ನಲ್ಲಿನ ಬಾಟಲಿಗೆ ಕೈ ಹಾಕ್ತಿರ. ಆದರೆ ತಂಪು ಪಾನೀಯಗಳು ಕೆಟ್ಟ ಸಕ್ಕರೆ ಮೂಲಗಳಾಗಿವೆ. ಸಕ್ಕರೆ ಸೋಡಾಗಳು ಕೇವಲ ದ್ರವ ರೂಪದ ಕೆಟ್ಟ ಕ್ಯಾಲೋರಿಗಳು. ಹಣ್ಣಿನ ರಸ ಇದೆ ಎಂದು ಹೇಳಿಕೊಳ್ಳುವ ಪಾನೀಯಗಳು ಅತಿಯಾದ ಸಕ್ಕತೆ, ಕೆಫಿನ್ನ ಹೊಂದಿವೆ.
ದಿನನಿತ್ಯ ಕೂಲ್ ಡ್ರಿಂಕ್ಸ್ನ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ದೇಹದ ತೂಕ ಹೆಚ್ಚಾಗುವುದು, ಟೈಪ್ 2 ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ತಂಪು ಪಾನೀಯಗಳನ್ನು ಕುಡಿಯುವುದರಿಂದ ಉಂಟಾಗುತ್ತವೆ. ಪಾನೀಯಗಳು ನಿಮ್ಮ ಹಲ್ಲುಗಳಿಗೂ ಹಾನಿಯುಂಟುಮಾಡಬಹುದು, ಇದು ಹಲ್ಲು ಹುಳುಕಾಗಲು ಕಾರಣವಾಗಬಹುದು. ನೀವು ಸೋಡಾವನ್ನು ಸೇವಿಸಿದಾಗ ಸಕ್ಕರೆ ನಿಮ್ಮ ಬಾಯಿಯಲ್ಲಿರುವ ಸೂಕ್ಷ್ಮಜೀವಿಗಳೊಂದಿಗೆ ರಿಯಾಕ್ಟ್ ಆಗಿ ಗ್ಯಾಸ್ನ ಉತ್ಪಾದಿಸುತ್ತವೆ.
ವರದಿ: ಮಹ್ಮದ್ ರಫೀಕ್ ಕೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ