• Home
  • »
  • News
  • »
  • national-international
  • »
  • Elon Musk: ಭೋಜ್​ಪುರಿಯಲ್ಲಿ ಟ್ವೀಟ್​ ಮಾಡುತ್ತಿರುವ ಎಲಾನ್ ಮಸ್ಕ್, ಹ್ಯಾಕ್​ ಆಗಿದೆಯಾ ವಿಶ್ವ ಕುಬೇರನ ಅಕೌಂಟ್​?

Elon Musk: ಭೋಜ್​ಪುರಿಯಲ್ಲಿ ಟ್ವೀಟ್​ ಮಾಡುತ್ತಿರುವ ಎಲಾನ್ ಮಸ್ಕ್, ಹ್ಯಾಕ್​ ಆಗಿದೆಯಾ ವಿಶ್ವ ಕುಬೇರನ ಅಕೌಂಟ್​?

ಟ್ವಿಟರ್ ಖಾತೆ ಬ್ಯಾನ್

ಟ್ವಿಟರ್ ಖಾತೆ ಬ್ಯಾನ್

  • Share this:



ಎಲಾನ್ ಮಸ್ಕ್ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿದೆಯೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಭೋಜ್‌ಪುರಿ ಮತ್ತು ಹಿಂದಿಯಲ್ಲಿ ಅವರ ಖಾತೆಯಿಂದ ಟ್ವೀಟ್‌ಗಳನ್ನು ಮಾಡಲಾಗುತ್ತಿರುವುದರಿಂದ ಪ್ರಶ್ನೆ ಉದ್ಭವಿಸುವುದರಲ್ಲಿ ಆಶ್ಚರ್ಯವಿಲ್ಲ.


ಇನ್ನು ಎಲಾನ್ ಮಸ್ಕ್ ರಾತ್ರೋ ರಾತ್ರಿ ಹಿಂದಿ ಮತ್ತು ಭೋಜ್​ಪುರಿ ಕಲಿಯಲಂತೂ ಸಾಧ್ಯವಿಲ್ಲ. ಒಂದು ವೇಳೆ ಕಲಿತಿದ್ದರೂ ಭೋಜ್‌ಪುರಿ ಹಾಡುಗಳನ್ನು ಏಕೆ ಟ್ವೀಟ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ವಾಸ್ತವವಾಗಿ ಈ ಎಲ್ಲಾ ಆಟವು Twitter ಖಾತೆಯಿಂದ ನಡೆಯುತ್ತಿದೆ.


ಈ ಎಲ್ಲಾ ಗೊಂದಲಗಳಿಗೆ ಟ್ವಿಟ್ಟರ್ ಬಳಕೆದಾರ iawoolford ಕಾರಣ. ಈತ ತನ್ನ ಹೆಸರನ್ನು ಎಲಾನ್ ಮಸ್ಕ್ ಎಂದು ಬದಲಾಯಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ಬಳಕೆದಾರರು ತಮ್ಮ ಡಿಪಿ ಮತ್ತು ಕವರ್ ಫೋಟೋವನ್ನೂ ಎಲಾನ್ ಮಸ್ಕ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿರುವಂತೆಯೇ ಬದಲಾಯಿಸಿಕೊಂಡಿದ್ದಾರೆ.


ಹೀಗಾಗೇ ಈ ಗೊಂದಲ ವ್ಯಾಪಿಸಿದೆ. ಎಲಾನ್ ಮಸ್ಕ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನ ಬಳಕೆದಾರ ಹೆಸರು Elonmusk ಎಂಬುವುದು ಉಲ್ಲೇಖನೀಯ. ಅವರು ಜೂನ್ 2009 ರಲ್ಲಿ ಟ್ವಿಟರ್‌ಗೆ ಸೇರಿದ್ದಾರೆ. ಆದರೀಗ ಗೊಂದಲ ಸೃಷ್ಟಿಯಾಗಿರುವ ಟ್ವಿಟರ್​ ಖಾತೆ ಈ ಸಾಮಾಜಿಕ ಮಾಧ್ಯಮಕ್ಕೆ ಜನವರಿ 2011 ರಲ್ಲಿ ಸೇರ್ಪಡೆಗೊಂಡಿದ್ದಾರೆ.


ಇದರಿಂದ ಖಾತೆ ಹ್ಯಾಕ್ ಆಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಗೊಂದಲಕ್ಕೆ ಮತ್ತೊಂದು ದೊಡ್ಡ ಕಾರಣವೆಂದರೆ ಎರಡೂ ಖಾತೆಗಳು ಬ್ಲೂಟ ಟಿಕ್ ಹೊಂದಿರುವುದು. ಇನ್ನು ಟ್ವಿಟರ್‌ನ ನಿಯಂತ್ರಣವು ಎಲಾನ್ ಮಸ್ಕ್ ಕೈಗೆ ಬಂದಿದ್ದರಿಂದ, ಜನರನ್ನು ಕಂಪನಿಯಿಂದ ವಜಾಗೊಳಿಸಲಾಗುತ್ತಿದೆ. ಕಂಪನಿಯಿಂದ ನಿರಂತರವಾಗಿ ಹೆಚ್ಚಿನ ಸಂಖ್ಯೆಯ ಜನರನ್ನು ವಜಾ ಮಾಡಲಾಗುತ್ತಿದೆ. ಶುಕ್ರವಾರವಷ್ಟೇ ಕಚೇರಿಗೆ ಬರುತ್ತಿದ್ದ ನೌಕರರನ್ನು ಮನೆಗೆ ಕಳುಹಿಸಲಾಗಿ್ದೆ ಎಂಬುವುದು ಉಲ್ಲೇಖನೀಯ.


Another decision by Elon Musk bans over 54,000 Twitter accounts in India
ಎಲಾನ್ ಮಸ್ಕ್ ಟ್ವಿಟರ್ ಡೀಲ್ ಮಾಡಿದ ಕೂಡಲೇ ಸಿಇಒ ಪರಾಗ್ ಅಗರ್ವಾಲ್, ಸಿಎಫ್‌ಒ ನೆಡ್ ಸೆಗಲ್ ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ವಜಾಗೊಳಿಸಿದರು. ಏಪ್ರಿಲ್‌ನಲ್ಲಿ ಆರಂಭವಾದ ಒಪ್ಪಂದವನ್ನು ಅಕ್ಟೋಬರ್‌ನಲ್ಲಿ ಅಂತಿಮಗೊಳಿಸಲಾಯಿತು. ಮಸ್ಕ್ ಟ್ವಿಟರ್ ಅನ್ನು $44 ಶತಕೋಟಿಗೆ ಖರೀದಿಸಿದ್ದಾರೆಂಬುವುದು ಗಮನಾರ್ಹ.


Sriram Krishnan will return to Twitter What else will change on Twitter
ಟ್ವಿಟರ್ ಡೀಲ್​ ಪ್ರಕ್ರಿಯೆ ಏಪ್ರಿಲ್‌ನಲ್ಲಿ ಪ್ರಾರಂಭವಾಯಿತು. ಮಸ್ಕ್ ಮೊದಲು ಟ್ವಿಟರ್‌ನಲ್ಲಿ 9.2% ಪಾಲನ್ನು ಖರೀದಿಸಿದರು, ನಂತರ ಅವರು ಮಂಡಳಿಗೆ ಸೇರಲು ಅವಕಾಶ ನೀಡಿದರು. ಆದರೆ, ಅವರು ಮಂಡಳಿಗೆ ಸೇರಲು ನಿರಾಕರಿಸಿದರು.


Elon Musk tweeted that is buying Manchester United football team stg asp
ನಂತರ ಅವರು ಟ್ವಿಟರ್ ಅನ್ನು ಖರೀದಿಸಲು $ 44 ಬಿಲಿಯನ್ ಅನ್ನು ನೀಡಿದರು. ಆರಂಭದಲ್ಲಿ ಮಧ್ಯಸ್ಥಗಾರರು ಈ ಪ್ರಸ್ತಾಪವನ್ನು ನಿರಾಕರಿಸಿದರು. ಆದರೆ ಬಳಿಕ ಅದನ್ನು ಒ್ಪಪಿಕೊಂಡರು. ಮೇ ತಿಂಗಳಲ್ಲಿ, ಟ್ವಿಟರ್ SEC ಫೈಲಿಂಗ್‌ನಲ್ಲಿ ಕೇವಲ 5% ಬೋಟ್ ಖಾತೆಗಳು ವೇದಿಕೆಯಲ್ಲಿವೆ ಎಂದು ವರದಿ ಮಾಡಿದೆ. ಇಲ್ಲಿಂದ ಟ್ವಿಟರ್ ಮತ್ತು ಮಸ್ಕ್ ನಡುವೆ ವಿವಾದ ಪ್ರಾರಂಭವಾಯಿತು.


ವೇದಿಕೆಯಲ್ಲಿ ಬೋಟ್ ಖಾತೆಗಳ ಸಂಖ್ಯೆ ಹೆಚ್ಚು ಎಂದು ಎಲಾನ್ ಮಸ್ಕ್ ನಿರಂತರವಾಗಿ ಹೇಳುತ್ತಿದ್ದರು. ಈ ಸಂಬಂಧ ಒಪ್ಪಂದವನ್ನೂ ತಡೆಹಿಡಿದಿದ್ದ ಅವರು, ಬಳಿಕ ನ್ಯಾಯಾಲಯದ ಮೊರೆ ಹೋಗಲು ಟ್ವಿಟರ್ ನಿರ್ಧರಿಸಿದೆ. ಆದಾಗ್ಯೂ, ನ್ಯಾಯಾಲಯದ ವಿಚಾರಣೆಯ ಮೊದಲು, ಮಸ್ಕ್ ಒಪ್ಪಂದವನ್ನು ಅಂತಿಮಗೊಳಿಸಿದರು.

Published by:Precilla Olivia Dias
First published: