HOME » NEWS » National-international » PERIYARS STATUE VANDALISED IN TAMIL NADU SESR

ರಜನಿಕಾಂತ್​ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪೆರಿಯಾರ್​ ಮೂರ್ತಿ ಧ್ವಂಸ

ತಮಿಳುನಾಡಿನಲ್ಲಿ ಇದೇ ಮೊದಲ ಬಾರಿ ಈ ರೀತಿ ಪೆರಿಯಾರ್​ ಮೂರ್ತಿ ಧ್ವಂಸ ಮಾಡಿರುವ ಪ್ರಕರಣ ನಡೆದಿಲ್ಲ. ಇದಕ್ಕೂ ಮೊದಲ ಏಪ್ರಿಲ್​ 2019ರಲ್ಲಿ ಅರನ್ತಂಗನಿಯಲ್ಲಿ ಕೂಡ ಮೂರ್ತಿ ವಿರೂಪಗೊಳಿಸಲಾಗಿತ್ತು.

Seema.R | news18-kannada
Updated:January 24, 2020, 12:38 PM IST
ರಜನಿಕಾಂತ್​ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪೆರಿಯಾರ್​ ಮೂರ್ತಿ ಧ್ವಂಸ
ಪೆರಿಯಾರ್​ ಮೂರ್ತಿ
  • Share this:
ಚೆನ್ನೈ (ಜ.24): ಕಳೆದೊಂದು ವಾರದಿಂದ ತಮಿಳುನಾಡಿನ ಸಾಮಾಜಿಕ ಹರಿಕಾರ ಪೆರಿಯಾರ್​ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಖ್ಯಾತ ನಟ ರಜನಿಕಾಂತ್​​,​ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಈಗ ಅದರ ಬೆನ್ನಲ್ಲೇ ಯಾರೋ ದುಷ್ಕರ್ಮಿಗಳು ಪೆರಿಯಾರ್​ ಪ್ರತಿಮೆಯನ್ನು ಭಿನ್ನಗೊಳಿಸಿದ್ದಾರೆ.

ತಮಿಳುನಾಡಿನ ಚೆಂಗಲ್​ಪಟ್ಟು ರಸ್ತೆಯ ವೃತ್ತದಲ್ಲಿದ್ದ ಪೆರಿಯಾರ್​ ಮೂರ್ತಿಯನ್ನು ವಿರೂಪಗೊಳಿಸಲಾಗಿದೆ.

ತಮಿಳು ನಿಯತಕಾಲಿಕೆಯ 50ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ರಜನಿಕಾಂತ್, ಪೆರಿಯಾರ್ ನೇತೃತ್ವದಲ್ಲಿ 1971ರಲ್ಲಿ ಮೌಢ್ಯತೆಯ ನಿರ್ಮೂಲನೆಗೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಇದಕ್ಕಾಗಿ ನಡೆದ ಮೆರವಣಿಗೆಯಲ್ಲಿ ಸೀತೆ ಮತ್ತು ಶ್ರೀರಾಮನ ಬೆತ್ತಲೆ ಫೋಟೋಗಳನ್ನು ಪ್ರದರ್ಶಿಸಿದ್ದರು. ಆ ಫೋಟೋಗಳಿಗೆ ಚಪ್ಪಲಿಗಳ ಹಾರ ಹಾಕಿ ಮೆರವಣಿಗೆ ನಡೆಸಿದ್ದರು ಎಂದು ರಜನಿಕಾಂತ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಹೇಳಿಕೆ ರಾಜಕೀಯವಾಗಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದು, ಅಲ್ಲದೇ ಈ ಕುರಿತು ರಜನಿಕಾಂತ್​ ಕ್ಷಮೆಯಾಚಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ರಜನಿಕಾಂತ್​ ಕ್ಷಮೆ ಕೇಳುವ ಮಾತಿಲ್ಲ. ಹಿಂದೂ ಮತ್ತು ಔಟ್​ಲುಕ್​ ಪತ್ರಿಕೆಗಳನ್ನು ಪ್ರಕಟವಾದದ್ದನ್ನೇ ನಾನು ಹೇಳಿದ್ದೇನೆ. ನಾನು ಯಾವುದೇ ಕಲ್ಪನೆ ಮೂಲಕ ಹೇಳಿಕೆ ನೀಡಿಲ್ಲ. ಹಾಗಾಗಿ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.

ಇನ್ನು ಈ ವಿವಾದದ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್​, ರಜನೀಕಾಂತ್​ಗೆ ನಾನು ನೀಡುವ ಸಲಹೆ ಎಂದರೆ, ಯಾವಾಗಲೇ ಅವರು ಪೆರಿಯಾರ್​ ಬಗ್ಗೆ ಮಾತನಾಡಬೇಕಾದರೆ, ತಮಿಳು ಜನರಿಗೆ 95 ವರ್ಷಗಳ ಕಾಲ ಸುದೀರ್ಘ ಹೋರಾಟ ಮಾಡಿದ್ದಾರೆ ಎಂಬ ಬಗ್ಗೆ ಅರಿವಿರಲಿ. ಇನ್ನು ಮುಂದೆ ಅವರು ಯೋಚಿಸಿ ನಂತರ ಮಾತನಾಡಲಿ ಎಂದಿದ್ದರು.

ತಮಿಳುನಾಡಿನಲ್ಲಿ ಸ್ವಾಭಿಮಾನ ಹೋರಾಟ ನಡೆಸಿದ ಪೆರಿಯಾರ್​ ನಾಸ್ತಿಕರಾಗಿದ್ದು, ಡಿಎಂಕೆ ಮಾತೃ ಸಂಸ್ಥೆಯಾದ ದ್ರಾವಿಡ ಕಜಾಗಂ, ಹುಟ್ಟು ಹಾಕಿದ್ದರು.ಇದನ್ನು ಓದಿ: ರಾಮನ ಫೋಟೋಗೆ ಚಪ್ಪಲಿ ಹಾರ; ಪೆರಿಯಾರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ರಜನಿಕಾಂತ್​ ವಿರುದ್ಧ ದೂರು ದಾಖಲು

ತಮಿಳುನಾಡಿನಲ್ಲಿ ಇದೇ ಮೊದಲ ಬಾರಿ ಈ ರೀತಿ ಪೆರಿಯಾರ್​ ಮೂರ್ತಿ ಧ್ವಂಸ ಮಾಡಿರುವ ಪ್ರಕರಣ ನಡೆದಿಲ್ಲ. ಇದಕ್ಕೂ ಮೊದಲ ಏಪ್ರಿಲ್​ 2019ರಲ್ಲಿ ಅರನ್ತಂಗನಿಯಲ್ಲಿ ಕೂಡ ಮೂರ್ತಿ ವಿರೂಪಗೊಳಿಸಲಾಗಿತ್ತು.

ಹಿರಿಯ ನಾಯಕ ಎಚ್​ ರಾಜಾ ಪೆರಿಯಾರ್​ ಎಲ್ಲಾ ಮೂರ್ತಿಗಳನ್ನು ಧ್ವಂಸ ಮಾಡಬೇಕು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ 2018ರ ಮಾರ್ಚ್​ನಲ್ಲಿ ವೆಲ್ಲೂರಿನಲ್ಲಿ ಕೂಡ ಮೂರ್ತಿಯನ್ನು ಒಡೆಯಲಾಗಿತ್ತು.

(ಪೂರ್ಣಿಮ ಮುರಳಿ)
Youtube Video
First published: January 24, 2020, 12:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories