ಬರೋಬ್ಬರಿ 85 ಲಕ್ಷಕ್ಕೆ ಹರಾಜಾಯ್ತು ಟೇಪ್​​​ನಿಂದ ಗೋಡೆಗೆ ಅಂಟಿಸಿದ ಬಾಳೆಹಣ್ಣು...!

ಅಂದಹಾಗೆ ಈ ಕಲಾಕೃತಿಯ ನಿರ್ಮಾತೃ ಇಟಲಿಯ ಕಲಾವಿದ ಮೌರಿಜಿಯೋ ಕ್ಯಾಟೆಲನ್​. ಬಾಳೆಹಣ್ಣಿನ ಈ ಕಲಾಕೃತಿಯನ್ನು ಮಿಯಾಮಿ ಬೀಚ್​​ನ 'ಆರ್ಟ್​​​​ ಬೇಸೆಲ್​​'ನಲ್ಲಿ ಮಾರಾಟಕ್ಕೆ ಇಡಲಾಗಿತ್ತು.

ಟೇಪ್​ನಿಂದ ಗೋಡೆಗೆ ಅಂಟಿಸಿರುವ ಬಾಳೆಹಣ್ಣಿನ ಮುಂದೆ ನಿಂತು ಫೋಟೋಗೆ ಪೋಸ್​ ಕೊಟ್ಟಿರುವ ಯುವತಿ

ಟೇಪ್​ನಿಂದ ಗೋಡೆಗೆ ಅಂಟಿಸಿರುವ ಬಾಳೆಹಣ್ಣಿನ ಮುಂದೆ ನಿಂತು ಫೋಟೋಗೆ ಪೋಸ್​ ಕೊಟ್ಟಿರುವ ಯುವತಿ

  • Share this:
ಖಾಲಿಯಿರುವ ಬಿಳಿಗೋಡೆಗೆ ಟೇಪ್​ನಿಂದ ಅಂಟಿಸಿರುವ ಬಾಳೆಹಣ್ಣು. ಅದನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ. ಸೆಲ್ಪೀ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಇದು ಕೇವಲ ಟೇಪು ಅಂಟಿಸಿದ ಬಾಳೆಹಣ್ಣು ಮಾತ್ರ ಅಲ್ಲ. ಅದೊಂದು ಕಲಾಕೃತಿ. ಆ ಕಲಾಕೃತಿಗೆ ಒಂದು ಹೆಸರು ಕೂಡ ಇದೆ. 'ಕಮೀಡಿಯನ್​​' ಹೆಸರಿನ ಈ ಕಲಾಕೃತಿ ನೋಡಿ ಕಲಾರಸಿಕರು ಮಾರುಹೋಗಿದ್ದಾರೆ.

ಅಂದಹಾಗೆ ಈ ಕಲಾಕೃತಿಯ ನಿರ್ಮಾತೃ ಇಟಲಿಯ ಕಲಾವಿದ ಮೌರಿಜಿಯೋ ಕ್ಯಾಟೆಲನ್​. ಬಾಳೆಹಣ್ಣಿನ ಈ ಕಲಾಕೃತಿಯನ್ನು ಮಿಯಾಮಿ ಬೀಚ್​​ನ 'ಆರ್ಟ್​​​​ ಬೇಸೆಲ್​​'ನಲ್ಲಿ ಮಾರಾಟಕ್ಕೆ ಇಡಲಾಗಿತ್ತು.

ಬೆಂಗಳೂರಿಗೆ ಬಂತು ಈಜಿಪ್ಟ್‌ ಈರುಳ್ಳಿ; ಏನಿದರ ವಿಶೇಷತೆ? ಕೆ.ಜಿ. ಗೆ ಎಷ್ಟು ರೂ? ಇಲ್ಲಿದೆ ಮಾಹಿತಿ..!

ಟೇಪ್​ನಿಂದ ಗೋಡೆಗೆ ಅಂಟಿಸಿರುವ ಈ ಬಾಳೆಹಣ್ಣು ಎಷ್ಟು ರೂಪಾಯಿಗೆ ಮಾರಾಟ ಆಗಬಹುದು? ಎಂದು ನಮ್ಮನ್ನು ಪ್ರಶ್ನೆ ಕೇಳಿದರೆ, ಕನಿಷ್ಠ 5 ರೂಪಾಯಿ ಅಥವಾ ಹೆಚ್ಚೆಂದರೆ 10 ರೂಪಾಯಿ ಎಂದು ಹೇಳುತ್ತೇವೆ.

  
View this post on Instagram
 

The talk of the town in Miami right now is Maurizio Cattelan’s “Comedian,” a banana 🍌 duct taped to the wall. Two have already sold for $120,000 at Perrotin 😉 read more, including about the banana my husband, @nnddmmyy, hung on his dorm wall for two years, on Artnet News, link in bio @artnet @galerieperrotin @mauriziocattelan @artbasel #art #conceptualart #banana #sculpture #artbasel #artbaselmiamibeach #artbaselmiami #artfair #artgallery #artwork #whatisart #isthisart #miami #miamibeach #florida #miamiflorida #mauriziocattelan #perrotin #galerieperrotin #artist #bananapeel #ducttape #artnetnews #artcollector #vippreview #artjournalism #artjournalist #openingday #artgallery #gallery #artworld


A post shared by Sarah Cascone (@sarahecascone) on


ಆದರೆ ಕಲಾಕೃತಿಯಾಗಿ ರೂಪುಗೊಂಡಿರುವ, ತನ್ನದೇಯಾದ ವಿಶೇಷ ಹೆಸರನ್ನು ಹೊಂದಿರುವ ಬಾಳೆಹಣ್ಣು ಬರೋಬ್ಬರಿ 85 ಲಕ್ಷಕ್ಕೆ ಮಾರಾಟವಾಗಿದೆ. ಇದು ಆಶ್ಚರ್ಯ ಎನಿಸಿದರೂ ಸತ್ಯ. ಮಾರಾಟಗೊಂಡಿರುವ ಬಾಳೆಹಣ್ಣು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಹಲವರು ಸೆಲ್ಫೀ ಕ್ಲಿಕ್ಕಿಸಿಕೊಂಡು ಹೊಗಳುತ್ತಿದ್ದಾರೆ.

ದೆಹಲಿ ಅಗ್ನಿ ದುರಂತದಲ್ಲಿ ಜೀವದ ಹಂಗು ತೊರೆದು 11 ಜನರನ್ನು ರಕ್ಷಿಸಿದ ರಿಯಲ್ ಹಿರೋ; ಗೃಹ ಸಚಿವರಿಂದ ಶ್ಲಾಘನೆ

 
ಕಲಾವಿದ ಮೌರಿಜಿಯೊ ಮೊದಲು ಕಂಚಿನ ಬಾಳೆ ಹಣ್ಣನ್ನು ಬಳಸಿದ್ದರಂತೆ. ಆದರೆ ಅದು ಸರಿ ಕಾಣಲಿಲ್ಲವೆಂದು ಬಳಿಕ ಮಿಯಾಮಿಯ ಅಂಗಡಿಯೊಂದರಲ್ಲಿ ನಿಜವಾದ ಬಾಳೆಹಣ್ಣನ್ನು ಖರೀದಿಸಿ ಅದನ್ನು ಡಕ್ಟ್​ ಟೇಪ್​ನಿಂದ ಅಂಟಿಸಿದ್ದಾರೆ. ಈ ಕಲಾಕೃತಿಯನ್ನು ಖರೀದಿಸಿದವರು ಅಗತ್ಯವಿದ್ದಾಗ ಆ ಬಾಳೆಹಣ್ಣನ್ನು ಬದಲಿಸಬಹುದಂತೆ.
First published: