ಪತ್ತೆಯಾಗಿರುವ ಪಳೆಯುಳಿಕೆ(Fossil) ಮಾದರಿಯು ಕೋಳಿಯಂತೆ ಮೊಟ್ಟೆಯೊಡೆದು ಹೊರಬರಲು ಸಿದ್ಧವಾಗಿತ್ತು ಎಂದು ಹೇಳಿರುವ ವಿಜ್ಞಾನಿಗಳು,(Scientists ) ಇದುವರೆಗೆ ಪತ್ತೆಯಾಗಿರುವ(found) ಭ್ರೂಣಗಳ (Embryo) ಪೈಕಿ ಇದು ಪರಿಪೂರ್ಣವಾಗಿ ಸಂರಕ್ಷಿತವಾಗಿರುವ ಭ್ರೂಣವಾಗಿದೆ ಎಂದು ಹೇಳಿದ್ದಾರೆ. ಈ ಮಾದರಿಯಿಂದ ವಿಜ್ಞಾನಿಗಳು ಡೈನೋಸಾರ್ ಹಾಗೂ ಪಕ್ಷಿಗಳ (Dinosaurs and Birds) ನಡುವಿರುವ ಸಂಬಂಧವನ್ನು( Relationship) ಮತ್ತಷ್ಟು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವಂತೆ ಮಾಡಿದೆ.
ಮಕ್ಕಳ ಪಾಲಿಗೆ ದಂತಕತೆ
ಡೈನೋಸಾರ್ ಈಗಿನ ಪೀಳಿಗೆಯ ಮಕ್ಕಳ ಪಾಲಿಗೆ ದಂತಕತೆಯಾಗಿ ಬದಲಾಗಿದೆ. ಲಕ್ಷಾಂತರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿತ್ತು ಎಂದು ಹೇಳಲಾಗಿರುವ ಡೈನೋಸಾರ್ ತನ್ನ ಬಾಯಿಯಿಂದ ಬೆಂಕಿಯುಗುಳುವ ಸಾಮರ್ಥ್ಯ ಹೊಂದಿತ್ತು ಎಂಬ ಪ್ರತೀತಿ ಇದೆ. ಇಂತಹ ಕ್ರೂರ ಪ್ರಾಣಿ ಹೇಗೆ ಅವಸಾನ ಹೊಂದಿತು ಎಂಬುದು ವಿಜ್ಞಾನಿಗಳ ಪಾಲಿಗೆ ಯಕ್ಷ ಪ್ರಶ್ನೆಯಾಗೇ ಉಳಿದಿದೆ. ಇಂತಹ ಡೈನೋಸಾರ್ಗಳನ್ನು ಆಧರಿಸಿ ಹಾಲಿವುಡ್ನಲ್ಲಿ ತಯಾರಾದ ಜುರಾಸಿಕ್ ಪಾರ್ಕ್ ಸಿನಿಮಾ ಸರಣಿ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯನ್ನು ದೋಚಿತ್ತು. ಆದರೆ, ನಾವೀಗ ಹೇಳಲು ಹೊರಟಿರುವುದು ಆ ವಿಚಾರವನ್ನಲ್ಲ.
ಹಿಸ್ಟರಿ ಮ್ಯೂಸಿಯಂನಲ್ಲಿ ಸಂರಕ್ಷಿಣೆ
2000ರಲ್ಲಿ ಚೀನಾದ ಶಾಹೆ ಕೈಗಾರಿಕಾ ಪಾರ್ಕ್ನಲ್ಲಿ ಡೈನೋಸಾರ್ನ ಪಳೆಯುಳಿಕೆಯೊಂದು ಪತ್ತೆಯಾಗಿತ್ತು. ಆ ಪಳೆಯುಳಿಕೆಯಲ್ಲಿ ಪತ್ತೆಯಾಗಿದ್ದ ಮೊಟ್ಟೆಯನ್ನು ಯಿಂಗ್ಲಿಯಾಂಗ್ ಸ್ಟೋನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಸಂರಕ್ಷಿಸಡಲಾಗಿತ್ತು. ಇದೀಗ ಆ ಮೊಟ್ಟೆಯು ಪರಿಪೂರ್ಣವಾಗಿ ಸಂರಕ್ಷಿತ ಭ್ರೂಣವಾಗಿದೆ ಎಂದು ಚೀನಾ ವಿಜ್ಞಾನಿಗಳು ಘೋಷಿಸಿದ್ದಾರೆ.
ಬೇಬಿ ಯಿಂಗ್ಲಿಯಾಂಗ್ ಎಂದು ನಾಮಕರಣ
ಈ ಭ್ರೂಣಕ್ಕೆ 72 ಮಿಲಿಯನ್ ವಯಸ್ಸಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದು, ಭ್ರೂಣಕ್ಕೆ ಬೇಬಿ ಯಿಂಗ್ಲಿಯಾಂಗ್ ಎಂದು ನಾಮಕರಣ ಮಾಡಲಾಗಿದೆ. ಭ್ರೂಣದಲ್ಲಿರುವ ಮರಿಯು ಹಲ್ಲಿಲ್ಲದ ತೆರೊಪಾಡ್ ಡೈನೋಸಾರ್ ಅಥವಾ ಓವಿರಾಪ್ಟೊಸಾರ್ ಎಂದು ವಿಜ್ಞಾನಿಗಳು ನಿರ್ಣಯಿಸಿದ್ದಾರೆ. ಮೊಟ್ಟೆಯು 7 ಸೆಂಟಿಮೀಟರ್ ಉದ್ದ ಹಾಗೂ 8 ಸೆಂಟಿಮೀಟರ್ ಅಗಲವಿದ್ದು, ಅಸ್ಥಿಪಂಜರವು 24 ಸೆಂಟಿಮೀಟರ್ ಉದ್ದವಿದೆ.
ಇತಿಹಾಸದಲ್ಲಿ ದೊರೆತಿರುವ ಅತ್ಯುತ್ತಮ ಡೈನೋಸಾರ್ ಭ್ರೂಣ ಇದಾಗಿದೆ" ಎಂದು ಬರ್ಮಿಂಗ್ಹ್ಯಾಮ್ ಸಂಶೋಧಕ ಹಾಗೂ ಈ ಕುರಿತು ಐಸೈನ್ಸ್ ನಿಯತಕಾಲಿಕದಲ್ಲಿ ಪ್ರಬಂಧ ಮಂಡಿಸಿರುವ ಡಾ. ಫಿಯೋನ್ ವೈಸುಮ್ ಮಾ ಹೇಳಿದ್ದಾರೆ.
ಅತ್ಯಂತ ಸುಂದರ ಭ್ರೂಣ
ಸಂಶೋಧನಾ ತಂಡದ ಭಾಗವಾಗಿದ್ದ ಎಡಿನ್ಬರ್ಗ್ ವಿಶ್ವವಿದ್ಯಾಲಯದ ಪ್ರೊ. ಸ್ಟೀವ್ ಬ್ರುಸೇಟ್, "ಡೈನೊಸಾರ್ ಪಳೆಯುಳಿಕೆಯ ಮೊಟ್ಟೆಯಲ್ಲಿರುವ ಭ್ರೂಣವು ನಾನು ಈವರೆಗೆ ನೋಡಿರುವ ಡೈನೋಸಾರ್ ಭ್ರೂಣಗಳಲ್ಲಿಯೇ ಅತ್ಯಂತ ಸುಂದರವಾದುದು" ಎಂದು ಉದ್ಗರಿಸಿದ್ದಾರೆ. ಈ ಪುಟ್ಟ ಪ್ರಸವಕ್ಕೂ ಮುನ್ನಿನ ಡೈನೋಸಾರ್ ಮರಿ ಪಕ್ಷಿಯಂತೆಯೇ ತನ್ನ ಮೊಟ್ಟೆಯಲ್ಲಿ ಮುದುಡಿ ಕುಳಿತಿದೆ. ಇದು ಈಗಿನ ಬಹುತೇಕ ಪಕ್ಷಿಗಳು ತಮ್ಮ ಪೂರ್ವಜರಾದ ಡೈನೋಸಾರ್ಗಳಿಂದಲೇ ಸೃಷ್ಟಿಯಾಗಿವೆ ಎಂಬುದಕ್ಕೆ ಸಾಕ್ಷಿ ಒದಗಿಸುತ್ತಿದೆ" ಎಂದು ವಿವರಿಸಿದ್ದಾರೆ.
ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾನಿಲಯದ ಅಧ್ಯಯನ
ವಾಸ್ತವವಾಗಿ ಈ ಪಳೆಯುಳಿಕೆ ಮೊಟ್ಟೆಯು 2000ರಲ್ಲಿ ಶಾಹೆ ಕೈಗಾರಿಕಾ ಪಾರ್ಕ್ನಲ್ಲಿ ಪತ್ತೆಯಾಗಿತ್ತು. ನಂತರ ಈ ಮೊಟ್ಟೆಯನ್ನು ಯಿಂಗ್ಲಿಯಾಂಗ್ ಸ್ಟೋನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂಗೆ ಕೊಡುಗೆ ನೀಡಲಾಗಿತ್ತು. ಈ ಮೊಟ್ಟೆಯನ್ನು 2015ರವರೆಗೆ ಕೊಠಡಿಯೊಂದರಲ್ಲಿ ಶೇಖರಿಸಿಟ್ಟಿದ್ದುದರಿಂದ ವಿಶ್ವವಿಂದು ಅದರ ಕುರಿತು ಕೇಳುವಂತಾಗಿದೆ. ಮ್ಯೂಸಿಯಂನ ಸಿಬ್ಬಂದಿ ಸದಸ್ಯರೊಬ್ಬರು ಮೊಟ್ಟೆಯ ಹೊರಕವಚದಲ್ಲಿ ಮೂಳೆ ಕಾಣಿಸಿಕೊಂಡಿರುವುದನ್ನು ನೋಡಿದ ನಂತರ ಇತರ ಸದಸ್ಯರು ಈ ಕುರಿತು ಅಧ್ಯಯನ ನಡೆಸಲು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾನಿಲಯದ ತಜ್ಞರಿಗೆ ಮಾದರಿಯನ್ನು ರವಾನಿಸಿದ್ದರು.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ