ಸೈದ್ಧಾಂತಿಕವಾಗಿ ವೈವಿಧ್ಯತೆ ಇದ್ದರೂ ಶಿವಸೇನೆ ಜೊತೆಗಿನ ಮೈತ್ರಿಯಲ್ಲಿ ಪರಿಶುದ್ಧ ಹೊಂದಾಣಿಕೆ ಇದೆ; ಶರದ್ ಪವಾರ್

ಆದರೆ, (ಅಜಿತ್) ಅವರಿಗೆ ಇದು ಸರಿಯಾದ ನಿರ್ಧಾರವಲ್ಲ ಎಂಬ ವಾಸ್ತವ ಅರಿವಾಗಿದೆ. ಮತ್ತು ನನ್ನನ್ನು ನೋಡಿ ಅವರು ಏಕೆ ಅದಾದ ಮರುದಿನ ಮುಂಜಾನೆ ವಾಪಸ್ಸಾದರು ಎಂದು ಪ್ರಶ್ನೆ ಮಾಡಿದರು.

HR Ramesh | news18-kannada
Updated:December 3, 2019, 8:50 PM IST
ಸೈದ್ಧಾಂತಿಕವಾಗಿ ವೈವಿಧ್ಯತೆ ಇದ್ದರೂ ಶಿವಸೇನೆ ಜೊತೆಗಿನ ಮೈತ್ರಿಯಲ್ಲಿ ಪರಿಶುದ್ಧ ಹೊಂದಾಣಿಕೆ ಇದೆ; ಶರದ್ ಪವಾರ್
ಶರದ್ ಪವಾರ್, ಉದ್ಧವ್ ಠಾಕ್ರೆ.
  • Share this:
ಮುಂಬೈ: ಶಿವಸೇನೆ ಜೊತೆಗಿನ ಮೈತ್ರಿ ಬಿಜೆಪಿ ಜೊತೆಗೆ ಹೊಲಿಸಿಕೊಂಡರೆ ಕಷ್ಟವೇನಲ್ಲ ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸೇನೆ ಜೊತೆಗಿನ ಮೈತ್ರಿಯನ್ನು ಪ್ರತಿಪಾದಿಸಿದ್ದಾರೆ.  

ದಶಕಗಳ ಕಾಲ ಹಿಂದೂತ್ವ ಪ್ರತಿಪಾದಿಸಿಕೊಂಡು ಬಂದಿರುವ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ಶಿವಸೇನೆ ಜೊತೆಗಿನ ಎನ್​ಸಿಪಿ-ಕಾಂಗ್ರೆಸ್ ಮೈತ್ರಿಯ ಅಸ್ತಿತ್ವದ ವಿಚಾರವಾಗಿ ಮಾತನಾಡಿರುವ ಶರದ್ ಪವಾರ್, ಸೈದ್ಧಾಂತಿಕವಾಗಿ ವೈವಿಧ್ಯತೆ ಇದ್ದರೂ ಉತ್ತಮ ಹೊಂದಾಣಿಕೆ ಮೂಲಕ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರ ಪೂರ್ಣ ಅವಧಿ ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎನ್​ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶರದ್ ಪವಾರ್, ಪ್ರಧಾನಿ ಮೋದಿ ಜೊತೆಗಿನ ಮಾತುಕತೆ ಬಗ್ಗೆಯೂ ಮಾತನಾಡಿದ್ದಾರೆ. ಜೊತೆಯಾಗಿ ಕೆಲಸ ಮಾಡುವಂತೆ ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಬಿಜೆಪಿ ಜೊತೆಗೆ ಕೆಲಸ ಮಾಡುವುದು ಅಸಾಧ್ಯ ಎಂದು ತಾವು ಹೇಳಿದ್ದಾಗಿ ತಿಳಿಸಿದ್ದಾರೆ. ಬಿಜೆಪಿಗೆ ಹೋಲಿಸಿದರೆ ಶಿವಸೇನೆ ಜೊತೆಗಿನ ಮೈತ್ರಿ ನಮಗೆ ಕಷ್ಟವಾಗುವುದಿಲ್ಲ ಎಂದೂ ಹೇಳಿದ್ದಾರೆ.

ಶಿವಸೇನೆ, ಎನ್​ಸಿಪಿ, ಕಾಂಗ್ರೆಸ್​ ಇನ್ನೆನು ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ಶರದ್ ಪವಾರ್ ಅವರ ಸೋದರ ಸಂಬಂಧಿ ಅಜಿತ್ ಪವಾರ್ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದು, ಮತ್ತೆ ಪಕ್ಷಕ್ಕೆ ವಾಪಸ್ ಆಗಿದ್ದರ ಬಗ್ಗೆಯೂ ಶರದ್ ಪವಾರ್ ಮಾತನಾಡಿದ್ದಾರೆ. ಅವರು (ಅಜಿತ್) ನಮ್ಮ ಮತ್ತು ಕಾಂಗ್ರೆಸ್ ನಡುವೆ ಆದ ತೀರ್ಮಾನದಂತೆ ಮತ್ತೆ ಹಿಂದಿರುಗಿದರು. ಅವರು ತುಂಬಾ ಸಂತೋಷವಾಗಿರಲಿಲ್ಲ. ಈ ವಿಚಾರವಾಗಿ ಅವರು ಸಂಪೂರ್ಣವಾಗಿ ಅಸಮಾಧಾನಗೊಂಡಿದ್ದರು. ಅಂತಿಮವಾಗಿ ಅವರು ಕಟ್ಟಕಡೆಯ ನಿರ್ಧಾರ ತೆಗೆದುಕೊಂಡರು ಎಂದು ಹೇಳಿದರು.

ನವೆಂಬರ್ 23ರ ಬೆಳಗಿನ ಜಾವ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಪಡೆದರು.

ಇದನ್ನು ಓದಿ: ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ ಮಹಾ ಹೇಳಿಕೆ; ಸಂಸತ್​ನಲ್ಲಿ ವಿವರಣೆ ಕೇಳಿದ ಶಿವಸೇನೆ

ಆದರೆ, (ಅಜಿತ್) ಅವರಿಗೆ ಇದು ಸರಿಯಾದ ನಿರ್ಧಾರವಲ್ಲ ಎಂಬ ವಾಸ್ತವ ಅರಿವಾಗಿದೆ. ಮತ್ತು ನನ್ನನ್ನು ನೋಡಿ ಅವರು ಏಕೆ ಅದಾದ ಮರುದಿನ ಮುಂಜಾನೆ ವಾಪಸ್ಸಾದರು ಎಂದು ಪ್ರಶ್ನೆ ಮಾಡಿದರು.
Loading...

First published:December 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...