ಜಾರ್ಖಂಡ್ ಮೊದಲ ಹಂತದ ವಿಧಾನಸಭೆ ಚುನಾವಣೆಯಲ್ಲಿ ಶೇ.62.87 ದಾಖಲೆ ಮತದಾನ

ಮೊದಲ ಹಂತದಲ್ಲಿ ಪ್ರಮುಖ ಅಭ್ಯರ್ಥಿಗಳ ಹಣೆ ಬರೆಹ ನಿರ್ಧಾರವಾಗಲಿದೆ. ಜಾರ್ಖಂಡ್ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ, ಕಾಂಗ್ರೆಸ್​ ರಾಜ್ಯಾಧ್ಯಕ್ಷ ರಾಮೇಶ್ವರ್ ಒರಾನ್​ ಮತ್ತು ಮಾಜಿ ಮಂತ್ರಿ, ಬಿಜೆಪಿ ಅಭ್ಯರ್ಥಿ ಭಾನು ಪ್ರತಾಪ್ ಶಶಿ ಸೇರಿದಂತೆ ಮೊದಲಾದ ಪ್ರಮುಖ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಇಂದು ಮತದಾನವಾಗಿದೆ.

HR Ramesh | news18-kannada
Updated:November 30, 2019, 8:15 PM IST
ಜಾರ್ಖಂಡ್ ಮೊದಲ ಹಂತದ ವಿಧಾನಸಭೆ ಚುನಾವಣೆಯಲ್ಲಿ ಶೇ.62.87 ದಾಖಲೆ ಮತದಾನ
ಜಾರ್ಖಂಡ್ ಮೊದಲ ಹಂತದ ಚುನಾವಣೆಯ ಮತಗಟ್ಟೆಯಲ್ಲಿ ಭದ್ರತೆ ನೀಡಿರುವ ಸಿಬ್ಬಂದಿ.
  • Share this:
ರಾಂಚಿ: ಜಾರ್ಖಂಡ್​ನ 13 ವಿಧಾನಸಭೆ ಕ್ಷೇತ್ರಗಳಿಗೆ ಶನಿವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.62.87 ದಾಖಲೆ ಮತದಾನವಾಗಿದೆ. 

ಮಾವೋವಾದಿಗಳ ಬೆದರಿಕೆಯ ನಡುವೆಯೂ ಮತದಾರರು ಬೆಳಗ್ಗೆಯಿಂದ ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ, ಶೇ.62.87 ರಷ್ಟು ದಾಖಲೆಯುತ ಮತದಾನವಾಗಿದೆ. ಇದರಲ್ಲಿ ಬಿಷ್ಣುಪುರದಲ್ಲಿ ಶೇ.67.04ನಷ್ಟು ಅತಿಹೆಚ್ಚು ಪ್ರಮಾಣದಲ್ಲಿ  ಮತದಾನವಾಗಿದ್ದರೆ, ಮಾಣಿಕ್​ ಕ್ಷೇತ್ರದಲ್ಲಿ ಶೇ.57.61ರಷ್ಟು ಕಡಿಮೆ ಮತದಾನವಾಗಿದೆ.

ದಲ್ತಾನ್​ಗಂಜ್​ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಗಲಾಟೆಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ತ್ರಿಪ್ಟಾಯಿ ಮತಗಟ್ಟೆ ಬಳಿ ಬಂದ ನಂತರ ತಮ್ಮ ಪರವಾನಗಿವುಳ್ಳ ರಿವಾಲ್ವಾರ್​ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಯೂ ನಡೆದಿದೆ. ಘಟನೆ ಅಭ್ಯರ್ಥಿಯ ರಿವಾಲ್ವಾರ್ ಪರವಾನಗಿ ರದ್ದುಗೊಳಿಸುವಂತೆ ಚುನಾವಣಾ ಆಯೋಗ ವರದಿ ಮಾಡಿದೆ.

ಜಾರ್ಝಂಡ್​ನ ಛಾತ್ರಾ, ಲತೆಹಾರ್, ಛತ್ತಪುರ್ (ಎಸ್​ಸಿ ಮೀಸಲು ಕ್ಷೇತ್ರ), ಗುಮ್ಲಾ, ಬಿಷ್ಣುಪುರ್, ಲೋಹಾರ್​ದಾಗ, ಮಾಣಿಕ್ (ಎಸ್​ಟಿ ಮೀಸಲು ಕ್ಷೇತ್ರಗಳು), ಪಂಕಿ, ದಲ್ತಾನ್​ಗಂಜ್, ಬಿಶ್ರಮ್​ಪುರ್, ಹುಸೈನ್​ಬಾದ್​, ಗರ್ವಾಹ ಮತ್ತು ಭಾವನಾಥಪುರ್ ಕ್ಷೇತ್ರಗಳಿಗೆ ಇಂದು ಮೊದಲ ಹಂತದಲ್ಲಿ ಮತದಾನವಾಗಿದೆ.

ಒಟ್ಟು 37,78,963 ಮತದಾರರಲ್ಲಿ 19,79,991 ಪುರಷರು ಹಾಗೂ 17,98,966 ಮಹಿಳೆಯರು ಮತ್ತು ಐದು ಮಂದಿ ತೃತೀಯ ಲಿಂಗಿಗಳು ಇದ್ದಾರೆ. ಅಖಾಡದಲ್ಲಿ 15 ಮಹಿಳೆಯರು ಸೇರಿದಂತೆ 189 ಅಭ್ಯರ್ಥಿಗಳಿದ್ದಾರೆ. ಭಾವನಾಥಪುರ್​ನಲ್ಲಿ 28 ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ಅತಿಹೆಚ್ಚು ಮಂದಿ ಕಣದಲ್ಲಿ ಇದ್ದಾರೆ. ಛಾತ್ರಾ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ, ಮೊದಲ ಹಂತದಲ್ಲಿ 4,892 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇವುಗಳಲ್ಲಿ 4,585 ಮತಗಟ್ಟೆಗಳನ್ನು ಗ್ರಾಮೀಣ ಭಾಗದಲ್ಲಿ ಮತ್ತು 307 ಕೇಂದ್ರಗಳನ್ನು ನಗರ ಭಾಗದಲ್ಲಿ ಸ್ಥಾಪಿಸಲಾಗಿತ್ತು. 121 ಸಖಿ ಮತಗಟ್ಟೆ, ಮತ್ತು 417 ಮಾದರಿ ಮತಗಟ್ಟೆಗಳಿದ್ದವು. ಮೊದಲ ಹಂತದ ಮತದಾನದಲ್ಲಿ 1,262 ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿತ್ತು.ಇದನ್ನು ಓದಿ: ವಿಶ್ವಾಸ ಮತ ಪರೀಕ್ಷೆ ಗೆದ್ದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ; ಬಿಜೆಪಿ ವಾಕೌಟ್

ಮತದಾನಕ್ಕೆ ವ್ಯಾಪಕ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಭಯೋತ್ಪಾದಕರು ಮತ್ತು ಮಾವೋವಾದಿಗಳ ಉಪಟಳವಿರುವ ಸ್ಥಳಗಳಿಗೆ ಮತಗಟ್ಟೆ ಅಧಿಕಾರಿಗಳನ್ನು ಹೆಲಿಕಾಪ್ಟರ್​ನಲ್ಲಿ ಕರೆದೊಯ್ಯಲಾಗಿತ್ತು.

ಮೊದಲ ಹಂತದಲ್ಲಿ ಪ್ರಮುಖ ಅಭ್ಯರ್ಥಿಗಳ ಹಣೆ ಬರೆಹ ನಿರ್ಧಾರವಾಗಲಿದೆ. ಜಾರ್ಖಂಡ್ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ, ಕಾಂಗ್ರೆಸ್​ ರಾಜ್ಯಾಧ್ಯಕ್ಷ ರಾಮೇಶ್ವರ್ ಒರಾನ್​ ಮತ್ತು ಮಾಜಿ ಮಂತ್ರಿ, ಬಿಜೆಪಿ ಅಭ್ಯರ್ಥಿ ಭಾನು ಪ್ರತಾಪ್ ಶಶಿ ಸೇರಿದಂತೆ ಮೊದಲಾದ ಪ್ರಮುಖ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಇಂದು ಮತದಾನವಾಗಿದೆ.

ಬಿಜೆಪಿ 12 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಒಂದು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ನೀಡಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್, ಆರ್​ಜೆಡಿ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿದ್ದು, ಕ್ರಮವಾಗಿ ನಾಲ್ಕು, ಆರು ಮತ್ತು ಮೂರು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿವೆ.
First published: November 30, 2019, 8:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading