ಕೋಟಿ ಸಂಬಳದ ಪ್ರಖ್ಯಾತ ಉದ್ಯಮಿ: ಇಂದ್ರಾ ನೂಯಿ ‘ಪೆಪ್ಸಿಕೋ’ಯಿಂದ ಹೊರಕ್ಕೆ..!

 • Share this:
  ನ್ಯೂಸ್​-18 ಕನ್ನಡ

  ಬೆಂಗಳೂರು(ಆಗಸ್ಟ್​.06): ಭಾರತ ಮೂಲದ ಪ್ರಖ್ಯಾತ ಉದ್ಯಮಿ, ಪೆಪ್ಸಿಕೋ ಕಂಪನಿಯ ಚೇರ್ಮನ್ ಹಾಗೂ ಸಿಇಒ ಇಂದ್ರಾ ನೂಯಿ ಅವರು 12 ವರ್ಷಗಳ ಬಳಿಕ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎನ್ನುತ್ತಿವೆ ಮೂಲಗಳು.

  ಮುಂಬರುವ ಅಕ್ಟೋಬರ್ ತಿಂಗಳು 3ನೇ ತಾರೀಖಿನಂದು ಇಂದ್ರಾ ನೂಯಿ ಅಧಿಕೃತವಾಗಿ ಕಂಪನಿಯ ಸಿಇಒ ಹುದ್ದೆಯಿಂದ ಕಳೆಗಿಳಿಯಲಿದ್ದು, 2019 ರವರೆಗೂ ಕಂಪನಿ ಚೇರ್ಮನ್​ ಆಗಿ ಮುಂದುವರಿಯಲಿದ್ದಾರೆ.

  62 ವರ್ಷದ ಭಾರತೀಯ ಮೂಲದ ಇಂದ್ರಾ ನೂಯಿ, ಉತ್ತರ ಅಮೆರಿಕದಲ್ಲಿ ಮಂದಗತಿಯಲ್ಲಿದ್ದ ಪಾನೀಯ ಮಾರಾಟವನ್ನು ಅಂತಾರಾಷ್ಟ್ರೀಯ ವ್ಯವಹಾರದ ಮೂಲಕ ವೃದ್ಧಿಗೊಳಿಸಿದ್ದಾರೆ. ಇದರಿಂದಾಗಿ ಕಂಪನಿ ಒಟ್ಟು ಆದಾಯದ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಹೋಗಿದೆ.

  ಇಂದ್ರಾ ನೂಯಿ 1994 ರಲ್ಲಿ "ಪೆಪ್ಸಿಕೋ" ಸೇರಿದರು. 2001 ರಲ್ಲಿ ಅಧ್ಯಕ್ಷ ಮತ್ತು ಸಿ.ಎಫ್.ಓ ಆಗಿ ಹೆಸರಿಸಲ್ಪಟ್ಟರು. ಒಂದು ದಶಕಕ್ಕೂ ಹೆಚ್ಚು ಕಾಲ ಕಂಪನಿಯ ಜಾಗತಿಕ ಕಾರ್ಯತಂತ್ರ ನಿರ್ದೇಶಿಸಿದ್ದಾರೆ. ಕಂಪನಿಯ ಪುನರ್ನಿಮಾಣಕ್ಕೆಗೆ ನೂಯಿ ಕಾರಣವಾಗಿದ್ದಾರೆ ಎನ್ನುತ್ತಿವೆ ಪೆಪ್ಸಿಕೋ ಕಂಪನಿ ಮೂಲಗಳು.

  1997 ರಲ್ಲಿ ಇವರು ತನ್ನ ರೆಸ್ಟೋರೆಂಟ್ ಕಂಪನಿಯ ಪುನರ್ನಿರ್ಮಾಣವನ್ನು "ಯಮ್ ! ಬ್ರ್ಯಾಂಡ್" ಆಗಿ ಸೃಷ್ಟಿಸಿದರು. ಟ್ರೋಪಿಕಾನ ಸಂಘಟನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. "ಕ್ವೇಕರ್ ಓಟ್ಸ್" ಕಂಪನಿಯ ಜೊತೆ ವಿಲೀನದಲ್ಲಿ ಸಹ ಇವರು ಮುಖ್ಯ ಪಾತ್ರವನ್ನು ವಹಿಸಿದರು ಎನ್ನಲಾಗಿದೆ.

  ಪೆಪ್ಸಿಕೊ ಗೆ ಇಂದ್ರಾ ನೂಯಿ "ಗೆಟೊರೇಡ್" ಅನ್ನು ತಂದಿದ್ದಾರೆ. 2006 ರಲ್ಲಿ, ಇವರು ಪೆಪ್ಸಿಕೋವಿನ ಐದನೇ ಸಿಇಒ ಆದರು. ಇದು ಪೆಪ್ಸಿಕೋವಿನ 44 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜರುಗಿದ ಅಪರೂಪದ ಘಟನೆ. ಇವರು ಯಾವಾಗಲೂ ಸರಿಯಾದ ದಾರಿಯಲ್ಲಿ ಕಂಪನಿಯನ್ನು ಮುನ್ನಡೆಸಿದ್ದಾರೆ ಎನ್ನುತ್ತಿವೆ ಮೂಲಗಳು.

  ಸದ್ಯದ ಮಾಹಿತಿ ಪ್ರಕಾರ 2000 ರಲ್ಲಿ ಇವರು ಸಿ.ಇ.ಒ ರಾಗಿ ಪ್ರಾರಂಭಿಸಿದಾಗಿನಿಂದಲೂ ಕಂಪನಿಯ ವಾರ್ಷಿಕ ಆದಾಯ 72 % ಹೆಚ್ಚಾಗಿದೆ, ನಿವ್ವಳ ಲಾಭ ದುಪ್ಪಟ್ಟು ಹಾಗು ಆದಾಯ $ 5.6 ಬಿಲಿಯನ್ ಆಗಿದೆ.

  ವೈಯಕ್ತಿಕ ಜೀವನ: ಕರ್ನಾಟಕ ಉಡುಪಿ ನೂಯಿ ರಾಜ್.ಕೆ ಇಂದಿರಾ ನೂಯಿಯನ್ನು ಮದುವೆಯಾದರು. ಈ ದಂಪತಿಗಳಿಗೆ ಇಬ್ಬರು ಪುತ್ರಿಯರಿದ್ದಾರೆ. ಅವರ ಹೆಸರು ಪ್ರೀತಾ ನೂಯಿ ಹಾಗೂ ತಾರಾ ನೂಯಿ ಎನ್ನಲಾಗಿದೆ.

  ಇಂದಿರಾ ನೂಯಿ ಅಕ್ಕ ಚಂದ್ರಿಕಾ ಕೃಷ್ಣಮೂರ್ತಿ ಟಂಡನ್ ಪ್ರಸಿದ್ಧ ಗಾಯಕಿ. ತನ್ನ ಸಹೋದರಿಯೊಂದಿಗೆ ಬೆಳೆದ ಸಂದರ್ಭದಲ್ಲಿ ಇಂದ್ರಾ ನೂಯಿಯ ತಾಯಿ ಪ್ರತಿ ರಾತ್ರಿ ಭಾಷಣ ಮಾಡಲು ಪ್ರೋತ್ಸಾಹಿಸಿತ್ತಿದ್ದರಂತೆ. ಭಾಷಣದ ನಂತರ ವಿಜೇತರಿಗೆ ಚಾಕಲೇಟ್ ತುಂಡು ಕೊಡುತ್ತಿದ್ದರು. ಈ ಚಟುವಟಿಕೆ ತಮ್ಮ ಜೀವನದ ನಂತರ ಭಾಗಗಳಲ್ಲಿ ಹೆಚ್ಚಿನ ಎತ್ತರ ಏರಲು ನನಗೆ ಉಪಯೊಗವಾಯಿತು ಎನ್ನುತ್ತಾರೆ ಇಂದಿರಾ ನೂಯಿ.

  ನಾಯಕತ್ವದ ಬಗ್ಗೆ ಇಂದಿರಾ ನೂಯಿ: "ನಾಯಕತ್ವ ವ್ಯಾಖ್ಯಾನಿಸಲು ಕಷ್ಟ, ಉತ್ತಮ ನಾಯಕತ್ವ ಇನ್ನೂ ಕಷ್ಟ. ನೀವು ಜನರನ್ನು ಭೂಮಿಯ ತುದಿಗಳಿಗೆ ಅನುಸರಿಸಲು ಮತ್ತು ಪಡೆಯಲು ಸಾಧ್ಯವಿದ್ದರೆ ನೀವು ಮಹಾನ್ ನಾಯಕ".

  "ನಾನು ಬಹಳ ಪ್ರಾಮಾಣಿಕ ಮಹಿಳೆ- ಪಾಶವೀಯ ಪ್ರಾಮಾಣಿಕತೆ. ನಾನು ಯಾವಾಗಲೂ ನನ್ನ ದೃಷ್ಟಿಯಿಂದ ಹಾಗೂ ಇತರರ ದೃಷ್ಟಿಯಿಂದಲೂ ನೋಡ್ತೀನಿ. ನಾನು ಯಾವಾಗ ದೂರ ನಡೆದು ಹೋಗ ಬೇಕೆಂದು ನಾನು ಅರಿಯುವೆನು."

  (ಮಾಹಿತಿ ಮೂಲ: ವಿಕಿಪೀಡಿಯಾ, ಪಿಟಿಐ)
  First published: