Chinaದಲ್ಲಿ Covid ಅಬ್ಬರ: ಲೋಹದ ಪೆಟ್ಟಿಗೆಯಲ್ಲಿ ಸೋಂಕಿತರ ಕ್ವಾರಂಟೈನ್..!

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ ಪ್ರಕಾರ ಲೋಹದ ಪೆಟ್ಟಿಗೆಯಲ್ಲಿ ಹಾಸಿಗೆ ಮತ್ತು ಶೌಚಾಲಯದ ವ್ಯವಸ್ಥೆ ಇರುವುದು ಕಂಡು ಬಂದಿದೆ

ಲೋಹದ ಪೆಟ್ಟಿಗೆ

ಲೋಹದ ಪೆಟ್ಟಿಗೆ

  • Share this:
ಕೊರೊನಾ ತವರು ದೇಶ ಚೀನಾದಲ್ಲಿ (China) ಕೋವಿಡ್-19 (Covid) ಮಹಾಮಾರಿ ಅಬ್ಬರ ಹೆಚ್ಚಾಗಿದೆ. 13 ಮಿಲಿಯನ್ ಜನ ಸಾಂದ್ರತೆ ಇರುವ ಚೀನಾದ ಕ್ಸಿಯಾನ್ ನಗರದಲ್ಲಿ ಕೊರೋನಾ ಹೆಚ್ಚಾಗಿದ್ದು ಲಾಕ್‌ಡೌನ್ , 3ನೇ ವಾರಕ್ಕೆ ವಿಸ್ತಿರಿಸಿದೆ. ಸದ್ಯ ನಾಗರಿಕರು ಮನೆಯಲ್ಲಿಯೇ ಇದ್ದಾರೆ. 1 ಮಿಲಿಯನ್ ಜನ ಸಾಂದ್ರತೆ ಇರುವ ಹೆನಾನ್‌ನ ಯಝ್ವಹಾ ನಗರವೂ ಲಾಕ್‌ಡೌನ್ ಆಗಿದೆ. ಓಮಿಕ್ರಾನ್ (Omicron) ಬಂದಮೇಲೆ ಚೀನಾದಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಹಿಂದೆ ಕೊರೋನಾ ಅಬ್ಬರಕ್ಕೆ ಇಡೀ ಚೀನಾ ತತ್ತರಿಸಿ ಹೋಗಿತ್ತು. ಮತ್ತೆ ಈಗ ಚೀನಾಕ್ಕೆ ನಡುಕ ಶುರುವಾಗಿದೆ.

ಕ್ವಾರಂಟೈನ್ ಮಾಡಲುಲೋಹದ ಪೆಟ್ಟಿಗೆ

ಚೀನಾದಲ್ಲಿ ಕೋವಿಡ್-19ಗೆ ಒಳಗಾಗಿರುವ ಸೋಂಕಿತರನ್ನು ಬಲವಂತವಾಗಿ ಕ್ವಾರಂಟೈನ್ ಮಾಡುತ್ತಿರುವ ದೃಶ್ಯವೊಂದು ವೈರಲ್ ಆಗಿದೆ. ಸೋಂಕಿತರನ್ನು ಕ್ವಾರಂಟೈನ್ ಮಾಡಲು ಸಣ್ಣದಾದ ಲೋಹದ ಪೆಟ್ಟಿಗೆಗಳನ್ನು ಬಳಸಲಾಗುತ್ತಿದೆ. ಚೀನಾ ಆರಂಭಿಕ ಹಂತದಲ್ಲಿ ಲಾಕ್‌ಡೌನ್, ಗಡಿ ಬಂದ್, ಕ್ವಾರಂಟೈನ್, ಸಾಮೂಹಿಕ ಆರೋಗ್ಯ ತಪಾಸಣೆ ಮಾಡಿದರೂ ಕೊರೋನಾ ಎಗ್ಗಿಲ್ಲದೆ ಹಬ್ಬಿದೆ. ಅದರಲ್ಲೂ ಚೀನಾ ಬೀಜಿಂಗ್ ಒಲಂಪಿಕ್ಸ್‌ ಹತ್ತಿರವಿರುವಾಗ ಎಚ್ಚರ ವಹಿಸಿದೆ.

ಆದರೂ, ಕೆಲವು ಸಿಟಿಗಳಲ್ಲಿ ಕೊರೋನಾ ತಾಂಡವವಾಡುತ್ತಿದೆ. ಹಾಗಾಗಿ ಈ ಪ್ರದೇಶಗಳ ಜನರನ್ನು ಬಲವಂತವಾಗಿ ಒಂದು ಲೋಹದ ಪೆಟ್ಟಿಗೆಯಲ್ಲಿ ಇಟ್ಟು ಕ್ವಾರಂಟೈನ್ ಮಾಡುತ್ತಿರುವುದಾಗಿ ಬಿಬಿಸಿ ನ್ಯೂಸ್ ವರದಿ ಮಾಡಿದೆ. ಕೊರೋನಾ ಸೋಂಕು ಧೃಡಪಟ್ಟಿರುವ ಜನರನ್ನು ತಕ್ಷಣ ಕರೆದುಕೊಂಡು ಹೋಗಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದೃಶ್ಯ

ಮಧ್ಯ ಚೀನಾದ ಶಾಂಕ್ಸಿ ಪ್ರದೇಶದಲ್ಲಿ ಕೊರೋನಾಕ್ಕೆ ತುತ್ತಾದ ಗರ್ಭಿಣಿಯರು, ಮಕ್ಕಳು, ವಯಸ್ಸಾದವರು ಸೇರಿ ಯಾರನ್ನು ಬಿಡದೆ ಬಲವಂತವಾಗಿ ಲೋಹದ ಇಕ್ಕಟ್ಟಿನ ಪೆಟ್ಟಿಗೆಯಲ್ಲಿ ತುಂಬಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಅಲ್ಲದೇ ಅವರನ್ನು 2 ವಾರಗಳ ಕಾಲ ಅಲ್ಲಿಯೇ ಇರುವಂತೆ ನಿರ್ಬಂಧ ಹೇರಲಾಗಿದೆ. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗೆ ಸೋಂಕಿತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ಕ್ಯಾಂಪ್‌ಗಳನ್ನು ಸರ್ಕಾರ ಮಾಡಿದೆ.

ಇದನ್ನು ಓದಿ: ಸಿಎಂಗಳ ಸಭೆಯಲ್ಲಿ ಪರೋಕ್ಷವಾಗಿ ಲಾಕ್ಡೌನ್ ಪ್ರಸ್ತಾಪ ನಿರಾಕರಿಸಿದ ಪ್ರಧಾನಿ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ ಪ್ರಕಾರ ಲೋಹದ ಪೆಟ್ಟಿಗೆಯಲ್ಲಿ ಹಾಸಿಗೆ ಮತ್ತು ಶೌಚಾಲಯದ ವ್ಯವಸ್ಥೆ ಇರುವುದು ಕಂಡು ಬಂದಿದೆ. ಡೈಲಿ ಮೇಲ್ ವರದಿ ಪ್ರಕಾರ ಚೀನಾದಲ್ಲಿ ಕೊರೋನಾಗೆ ಹೆದರಿ ಬರೋಬ್ಬರಿ 20 ಮಿಲಿಯನ್ ಜನ ಮನೆ ಬಿಟ್ಟು ಹೊರಗೆ ಬಂದಿಲ್ಲ. ತಮಗೆ ಬೇಕಾದ ಆಹಾರ, ವಸ್ತುಗಳನ್ನು ಕೊಳ್ಳಲು ಸಹ ಹೊರಗೆ ಬರದೇ ಮನೆಯ ಒಳಗೆ ಇದ್ದಾರೆ ಎಂದು ವರದಿ ಮಾಡಿದೆ.

ಓಮಿಕ್ರಾನ್​ ಅಬ್ಬರ

ಓಮಿಕ್ರಾನ್‌ ಹೊಸ ಅಲೆ ಬರುತ್ತಿದ್ದಂತೆ ಚೀನಾದಲ್ಲಿ ಸೋಂಕಿತರು ಹೆಚ್ಚಾಗಿದ್ದಾರೆ. ಪ್ರಕರಣಗಳು ವರದಿಯಾಗುತ್ತಿದ್ದಂತೆ ತಡರಾತ್ರಿ ಅನ್ಯಾಂಗ್ ಪಟ್ಟಣದಲ್ಲಿ 5.5 ಮಿಲಿಯನ್ ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಇದನ್ನು ಓದಿ: National Crush ಆದ ಎಸ್​ಪಿಜಿ ಕಮಾಂಡೋ; ನಮ್ಮ ಹೀರೋ ಎಂದ ಯುವತಿಯರು

ಮಧ್ಯ ಚೀನಾದಲ್ಲಿ ಸೋಮವಾರದೊಳಗೆ 2,017 ಹೊಸ ಪ್ರಕರಣಗಳು ದಾಖಲಾಗಿವೆ ಮತ್ತು 417 ಮಂದಿ ಚೇತರಿಸಿ ಕೊಂಡಿದ್ದಾರೆ. ಹೀಗಾಗಿ ವೈರಸ್ ಹರಡುವುದನ್ನು ತಡೆಗಟ್ಟಲು ಚೀನಾ ಸರ್ಕಾರ ಈ ಕ್ರಮ ಕೈಗೊಂಡಿದೆ. ಅಲ್ಲದೇ ಕೊರೋನಾ ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಸಾಮೂಹಿಕ ಕೊರೋನಾ ತಪಾಸಣೆ ಮಾಡಲಾಯಿತು ಎಂದು ನಗರದ ಆರೋಗ್ಯಾಧಿಕಾರಿ ಯೊಂಗ್ಪೆಂಗ್ ಹೇಳಿದ್ದಾರೆ. ಅಲ್ಲದೇ ಚೀನಾದ ಕ್ಸಿಯಾನ್ ಪ್ರದೇಶದಲ್ಲಿ ಕೋವಿಡ್-19 ಮುನ್ನೆಚ್ಚರಿಕೆಯಾಗಿ ಪ್ರದೇಶಗಳ ವರ್ಗೀಕರಣ ಮಾಡಲಾಗಿದೆ. ಚೀನಾ ಒಟ್ಟು ಮೂರು ಅಪಾಯಕಾರಿ ಕೊರೋನಾ ಪ್ರದೇಶ ಹೊಂದಿದ್ದು, 55 ಕಡಿಮೆ ಅಪಾಯಕಾರಿ ಸ್ಥಳಗಳನ್ನು ಹೊಂದಿದೆ.

ಚೀನಾದಲ್ಲಿ ಪ್ರತಿನಿತ್ಯ ಸಾವಿರಾರು ಹೊಸ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಸರ್ಕಾರ ಒಂದಲ್ಲ ಒಂದು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದು ಕೊಳ್ಳುತ್ತಿದ್ದರೂ ಕೊರೋನಾ ತಗ್ಗಿಸುವಲ್ಲಿ ವಿಫಲವಾಗಿತ್ತಿದೆ. ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಚೀನಾದ ಈ ಹೊಸ ಕ್ವಾರಂಟೈನ್ ಕ್ರಮ ಹೇಗೆ ಸಹಕಾರಿಯಾಗುತ್ತೆ ನೋಡಬೇಕು.
Published by:Seema R
First published: