• Home
  • »
  • News
  • »
  • national-international
  • »
  • Kerala: ನನ್ನ ನೆಮ್ಮದಿಯನ್ನೇ ಕಳೆದುಕೊಂಡಿದ್ದೇನೆ, ಲಾಟರಿ ಗೆದ್ದ ಆಟೋ ಚಾಲಕನಿಗೆ ಹೊಸ 'ಅಪಾಯ'!

Kerala: ನನ್ನ ನೆಮ್ಮದಿಯನ್ನೇ ಕಳೆದುಕೊಂಡಿದ್ದೇನೆ, ಲಾಟರಿ ಗೆದ್ದ ಆಟೋ ಚಾಲಕನಿಗೆ ಹೊಸ 'ಅಪಾಯ'!

25 ಕೋಟಿ ಬಹುಮಾನ ಗೆದ್ದ ಆಟೋ ಚಾಲಕ ಅನೂಪ್

25 ಕೋಟಿ ಬಹುಮಾನ ಗೆದ್ದ ಆಟೋ ಚಾಲಕ ಅನೂಪ್

ಅನೂಪ್ ತನ್ನ ಹೆಂಡತಿ, ಮಗು ಮತ್ತು ತಾಯಿಯೊಂದಿಗೆ ತಿರುವನಂತಪುರಂನಿಂದ ಸುಮಾರು 12 ಕಿಮೀ ದೂರದಲ್ಲಿರುವ ಶ್ರೀಕಾರಿಯಂನಲ್ಲಿ ವಾಸಿಸುತ್ತಿದ್ದಾರೆ. ಅನೂಪ್ ಅವರು ತಮ್ಮ ಮಗುವಿನ ಉಳಿತಾಯದ ಪೆಟ್ಟಿಗೆಯಲ್ಲಿದ್ದ ಹಣವನ್ನು ಕೊಟ್ಟು ಸ್ಥಳೀಯ ಏಜೆಂಟ್‌ ಒಬ್ಬರಿಂದ ವಿಜೇತ ಟಿಕೆಟ್ ಪಡೆದುಕೊಂಡಿದ್ದಾರೆ. ಬಹುಮಾನ ಘೋಷಣೆಯಾದಾಗ ತುಂಬಾ ಖುಷಿಯಾಗಿದ್ದೆ ಆದರೆ ಈಗ ಸಂಕಷ್ಟದಲ್ಲಿ ಸಿಲುಕಿದ್ದೇನೆ ಎಂದು ಅನೂಪ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಪೋಸ್ಟ್​ ಮಾಡಿ ಹೇಳಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ತಿರುವನಂತಪುರಂ(ಸೆ.24): ಕೇರಳ ಸರ್ಕಾರದ ಮೆಗಾ ಓಣಂ ಬಂಪರ್ ಲಾಟರಿಯಲ್ಲಿ (Onam Lottery) ರೂ 25 ಕೋಟಿ ಗೆದ್ದು ಮೊದಲ ಬಹುಮಾನದ ವಿಜೇತರು ಎಂದು ಘೋಷಿಸಲ್ಪಟ್ಟ ಆಟೋರಿಕ್ಷಾ ಚಾಲಕ ಅನೂಪ್​ಗೆ (Auto Driver Anoop) ಹೊಸ ತಲೆನೋವು ಶುರುವಾಗಿದೆ. ಕಳೆದ ಐದು ದಿನಗಳಿಂದ ಇವರಿಗೆ ಮನೆಯಿಂದ ಹೊರ ಹೋಗಲು ಆಗುತ್ತಿಲ್ಲ. ತಮ್ಮ ನೋವು ತೋಡಿಕೊಂಡಿರುವ ಅನೂಪ್ "ನಾನು ಮನಸ್ಸಿನ ಶಾಂತಿಯನ್ನು ಕಳೆದುಕೊಂಡಿದ್ದೇನೆ. ನಾನು ನನ್ನ ಸ್ವಂತ ಮನೆಯಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಾನು ಮೊದಲ ಬಹುಮಾನವನ್ನು ಗೆದ್ದ ಬೆನ್ನಲ್ಲೇ ವಿವಿಧ ಅಗತ್ಯಗಳನ್ನು ಮುಂದಿಟ್ಟುಕೊಂಡು ಜನರು ಮನೆಗೆ ಬರಲಾರಂಭಿಸಿದ್ದಾರೆ. ಹೀಗಾಗಿ ನಾನು ಮನೆ ಬದಲಾಯಿಸುತ್ತಿದ್ದೇನೆ. ನಾನು ಬಹುಮಾನವನ್ನು (Prize) ಗೆಲ್ಲುವವರೆಗೂ ಇದ್ದ ಎಲ್ಲಾ ನೆಮ್ಮದಿ ಕಳೆದುಕೊಂಡಿದ್ದೇನೆ. ಆಗಲೇ ಚೆನ್ನಾಗಿದ್ದೆ" ಎಂದು ಅವರು ಹೇಳಿದ್ದಾರೆ.


ಬಹುಮಾನ ಗೆದ್ದ ಬಳಿಕ ನೆಮ್ಮದಿ ಇಲ್ಲ


ಅನೂಪ್ ತನ್ನ ಹೆಂಡತಿ, ಮಗು ಮತ್ತು ತಾಯಿಯೊಂದಿಗೆ ತಿರುವನಂತಪುರಂನಿಂದ ಸುಮಾರು 12 ಕಿಮೀ ದೂರದಲ್ಲಿರುವ ಶ್ರೀಕಾರಿಯಂನಲ್ಲಿ ವಾಸಿಸುತ್ತಿದ್ದಾರೆ. ಅನೂಪ್ ಅವರು ತಮ್ಮ ಮಗುವಿನ ಉಳಿತಾಯದ ಪೆಟ್ಟಿಗೆಯಲ್ಲಿದ್ದ ಹಣವನ್ನು ಕೊಟ್ಟು ಸ್ಥಳೀಯ ಏಜೆಂಟ್‌ ಒಬ್ಬರಿಂದ ವಿಜೇತ ಟಿಕೆಟ್ ಪಡೆದುಕೊಂಡಿದ್ದಾರೆ. ಬಹುಮಾನ ಘೋಷಣೆಯಾದಾಗ ತುಂಬಾ ಖುಷಿಯಾಗಿದ್ದೆ ಆದರೆ ಈಗ ಸಂಕಷ್ಟದಲ್ಲಿ ಸಿಲುಕಿದ್ದೇನೆ ಎಂದು ಅನೂಪ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಪೋಸ್ಟ್​ ಮಾಡಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Kerala Onam Lottery Result 2022: ಆಟೋ ಡ್ರೈವರ್‌ಗೆ ಒಲಿದ ಅದೃಷ್ಟ, ಕೊನೆ ಕ್ಷಣದಲ್ಲಿ ಖರೀದಿಸಿದ ಟಿಕೆಟ್‌ಗೆ ಬಂತು 25 ಕೋಟಿ ಬಹುಮಾನ!


ನನಗೂ ಹಣ ಸಿಕ್ಕಿಲ್ಲ


"ನಾನು ಮನೆ ಬದಲಾಯಿಸುತ್ತಲೇ ಇರುತ್ತೇನೆ. ನಾನು ಹೋಗಿ ನನ್ನ ತಂಗಿಯ ಮನೆಯಲ್ಲಿ ಇದ್ದೆ, ಆದರೆ ಜನರು ಆ ವಿಳಾಸವನ್ನು ಹುಡುಕಿ ಅಲ್ಲಿಗೆ ಬಂದರು, ನನ್ನ ಮಗುವಿಗೆ ಅನಾರೋಗ್ಯದಿಂದ ನಾನು ಈಗ ಬಂದಿದ್ದೇನೆ. ನನಗೂ ಹಣ ಸಿಕ್ಕಿಲ್ಲ. ನಾನಿಷ್ಟು ಹಣ ಗೆಲ್ಲಬಾರದಿತ್ತೆಂದು ನನಗೀಗ ಅನಿಸುತ್ತಿದೆ. ಮೂರನೇ ಬಹುಮಾನ ಬಂದಿದ್ದರೆ ಚೆನ್ನಾಗಿರುತ್ತಿತ್ತೇನೋ ”ಎಂದಿದ್ದಾರೆ. ವಿಡಿಯೋ ಮಾಡುತ್ತಿರುವಾಗಲೇ ಜನರು ಅವರ ಮನೆ ಬಾಗಿಲು ಬಡಿಯುತ್ತಿರುವುದನ್ನೂ ಅನೂಪ್ ತೋರಿಸಿದ್ದಾರೆ.




ಬಹುಮಾನ ಸಿಗದಿದ್ದರೇ ಚೆನ್ನಾಗಿರುತ್ತಿತ್ತು
ತೆರಿಗೆ ಮತ್ತು ಇತರ ಬಾಕಿಗಳನ್ನು ಕಡಿತಗೊಳಿಸಿದ ನಂತರ, ಅನೂಪ್ ಬಹುಮಾನದ ಮೊತ್ತವಾಗಿ 15 ಕೋಟಿ ರೂ. ಪಡೆಯುತ್ತಾರೆ. "ನಾನು ಆ ಮೊತ್ತ ಗೆಲ್ಲಬಾರದಿತ್ತು. ತುಂಬಾ ಜನರು ನಾನು ಬಹುಮಾನ ಗೆದ್ದಿರುವುದಕ್ಕೆ ಹಾಗೂ ಬಳಿಕ ಸಿಕ್ಕ ಪ್ರಚಾರಕ್ಕೆ ಖುಷಿಪಟ್ಟುಕೊಂಡಿರುವುದು ನನಗೂ ಖುಷಿ ಕೊಟ್ಟಿದೆ. ನಾನು ಒಂದೆರಡು ದಿನ ಆ ಖುಷಿಯನ್ನು ಪಡೆದಿದ್ದೇನೆ. ಆದರೀಗ ಇದೊಂದು ದೊಡ್ಡ ಅಪಾಯದಂತೆ ಭಾಸವಾಗುತ್ತಿದೆ. ನಾನೀಗ ನನ್ನದೇ ಮನೆಯಿಂದ ಹೊರ ಹೋಗಲು ಆಗುತ್ತಿಲ್ಲ. ಜನರೆಲ್ಲರೂ ನನ್ನ ಬಳಿ ಆರ್ಥಿಕ ಸಹಾಯ ಯಾಚಿಸಿ ಬರುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡ ಅನೂಪ್


ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ತಾನಿನ್ನೂ ಹಣವನ್ನು ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಕೇರಳದ ವಿವಿಧೆಡೆಯಿಂದ ಹಾಗೂ ತಮಿಳುನಾಡಿನಿಂದ ಒಂದಷ್ಟು ಜನ ಸಾಲುಗಟ್ಟಿ ಮನೆ ಎದುರು ನಿಂತಿದ್ದಾರೆ ಎನ್ನುತ್ತಾರೆ ಅನೂಪ್ ಪತ್ನಿ ಮಾಯಾ. "ಅವರು ಬಂದು ಹಣ ಕೇಳುತ್ತಾರೆ, ನಮಗೆ ಏನು ಹೇಳಬೇಕೆಂದು ತಿಳಿದಿಲ್ಲ, ಅನೂಪ್ ಮನೆಗೆ ಹಿಂತಿರುಗಲು ಸಹ ಸಾಧ್ಯವಾಗುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Kerala: ಭಾರತದ ಮೊದಲ ಪೂರ್ಣ ತೋಳಿನ ಕಸಿ ಶಸ್ತ್ರಚಿಕಿತ್ಸೆ, ಬರೋಬ್ಬರಿ 18 ಗಂಟೆಗಳ ಕಾಲ ನಡೆದ ಆಪರೇಷನ್!


ಮಿತ್ರರು ಶತ್ರುಗಳಾಗುತ್ತಿದ್ದಾರೆ


ಈಗ ಪರಿಚಯವಿದ್ದ ಅನೇಕರು ಶತ್ರುಗಳಾಗುವ ಹಂತ ಬಂದಿದೆ ಎಂದು ಅನೂಪ್ ಹೇಳಿದ್ದಾರೆ. "ನನ್ನನ್ನು ಹುಡುಕಿಕೊಂಡು ಬರುವ ಅನೇಕ ಜನರು ನೆರೆಹೊರೆಯಲ್ಲಿ ಸುತ್ತಾಡುವುದರಿಂದ ನನ್ನ ನೆರೆಹೊರೆಯವರು ಕೋಪಗೊಂಡಿದ್ದಾರೆ. ಮಾಸ್ಕ್ ಧರಿಸಿದರೂ ಗುರುತು ಹಿಡಿದು ನನ್ನ ಸುತ್ತಲೂ ಗುಂಪುಗೂಡುತ್ತಾರೆ, ನನ್ನ ಮನಸ್ಸಿನ ಶಾಂತಿಯೆಲ್ಲವೂ ಕಣ್ಮರೆಯಾಗಿದೆ" ಎಂದು ಅನೂಪ್ ಹೇಳಿದ್ದಾರೆ.

Published by:Precilla Olivia Dias
First published: