Monkeypox: ಮಂಕಿಪಾಕ್ಸ್ ಬಗ್ಗೆ ಹೆಚ್ಚಿದ ಆತಂಕ, ಅಲರ್ಜಿಗೂ ಭಯಬೀಳ್ತಿದ್ದಾರೆ ಜನ - ವೈದ್ಯರ ಕಸಿವಿಸಿ

ಕಳೆದ 10 ದಿನಗಳಿಂದ ವಿಶೇಷವಾಗಿ ದೇಶದಲ್ಲಿ ಮಂಕಿಪಾಕ್ಸ್ ನ ಮೊದಲ ಪ್ರಕರಣ ಪತ್ತೆಯಾದ ನಂತರ ದೇಶಾದ್ಯಂತ ಜನರಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಂತೂ ಜನರು ಸ್ವಲ್ಪ ರೋಗಲಕ್ಷಣಗಳು ತಮ್ಮ ದೇಹದ ಮೇಲೆ ಕಂಡರೆ ಸಾಕು, ಅದು ನಿಜಕ್ಕೂ ಮಂಕಿಪಾಕ್ಸ್ ನ ರೋಗಲಕ್ಷಣವೇ ಅಥವಾ ಅದು ಸಾಮಾನ್ಯವಾದ ಚರ್ಮದ ಅಲರ್ಜಿಯೇ ಅಂತ ಪರೀಕ್ಷಿಸಿಕೊಳ್ಳಲು ಜನರು ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ ಎಂದು ಹೇಳಬಹುದು.

ಮಂಕಿಪಾಕ್ಸ್

ಮಂಕಿಪಾಕ್ಸ್

  • Share this:
ಕಳೆದ 10 ದಿನಗಳಿಂದ ವಿಶೇಷವಾಗಿ ದೇಶದಲ್ಲಿ ಮಂಕಿಪಾಕ್ಸ್ ನ (Monkeypox) ಮೊದಲ ಪ್ರಕರಣ ಪತ್ತೆಯಾದ ನಂತರ ದೇಶಾದ್ಯಂತ ಜನರಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಂತೂ ಜನರು (People) ಸ್ವಲ್ಪ ರೋಗಲಕ್ಷಣಗಳು ತಮ್ಮ ದೇಹದ ಮೇಲೆ ಕಂಡರೆ ಸಾಕು, ಅದು ನಿಜಕ್ಕೂ ಮಂಕಿಪಾಕ್ಸ್ ನ ರೋಗಲಕ್ಷಣವೇ (symptom of monkeypox) ಅಥವಾ ಅದು ಸಾಮಾನ್ಯವಾದ ಚರ್ಮದ ಅಲರ್ಜಿಯೇ (Skin allergy) ಅಂತ ಪರೀಕ್ಷಿಸಿಕೊಳ್ಳಲು ಜನರು ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ ಎಂದು ಹೇಳಬಹುದು. ಈಗ ಜನರು ತಮ್ಮ ಮೈ ಮೇಲೆ ಕೆಂಪು ಗುಳ್ಳೆಗಳು ಮತ್ತು ಕಲೆಗಳನ್ನು ಕಂಡುಕೊಂಡ ನಂತರ ತಮಗೆ ಮಂಕಿಪಾಕ್ಸ್ ಆಗಿದೆಯೇ ಎಂದು ಆಸ್ಪತ್ರೆಗೆ ಪರೀಕ್ಷೆ ಮಾಡಿಸಿಕೊಳ್ಳಲು ಹೋಗುತ್ತಿದ್ದಾರೆ.

"ಸುದ್ದಿ ಮಾಧ್ಯಮದ ವರದಿಗಳಲ್ಲಿ ಮಂಕಿಪಾಕ್ಸ್ ಬಗ್ಗೆ ತುಂಬಾನೇ ಚರ್ಚಿಸಲಾಗುತ್ತಿದ್ದರಿಂದ, ಜನರು ಸ್ವಲ್ಪ ಮಟ್ಟಿಗೆ ಅದರ ರೋಗಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಬಹುದು.

ತಮ್ಮ ರೋಗಲಕ್ಷಣಗಳು ಮಂಕಿಪಾಕ್ಸ್ ಗೆ ಸಂಬಂಧಿಸಿವೆಯೇ ಎಂದು ಖಚಿತಪಡಿಸಿಕೊಳ್ಳಲು ಆಸ್ಪತ್ರೆಗೆ ಬರುತ್ತಿರುವ ಜನರು  
34 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್ ವೈರಸ್ ಸೋಂಕು ತಗುಲಿರುವುದು ದೃಢಪಟ್ಟ ನಂತರ ದೆಹಲಿಯಲ್ಲಿ ಭಾನುವಾರ ಮಂಕಿಪಾಕ್ಸ್ ನ ಮೊದಲ ಪ್ರಕರಣ ವರದಿಯಾಗಿದೆ. "ಹೆಚ್ಚಿದ ಜಾಗೃತಿಯಿಂದಾಗಿ, ಜನರು ತಮ್ಮ ರೋಗಲಕ್ಷಣಗಳು ಮಂಕಿಪಾಕ್ಸ್ ಗೆ ಸಂಬಂಧಿಸಿವೆಯೇ ಎಂದು ಖಚಿತಪಡಿಸಿಕೊಳ್ಳಲು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ, ಇದನ್ನು ತಜ್ಞರ ಅಡಿಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: Stomach Cancer: ಹೊಟ್ಟೆಯ ಕ್ಯಾನ್ಸರ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು! ನಿರ್ಲಕ್ಷಿಸಬೇಡಿ

“ನಮ್ಮ ದೇಶದಲ್ಲಿ ಮಂಕಿಪಾಕ್ಸ್ ನ ಮೊದಲ ಪ್ರಕರಣ ಪತ್ತೆಯಾದ ನಂತರ ಜನರಲ್ಲಿ ಆತಂಕ ಹೆಚ್ಚಾಗಿರುವುದನ್ನು ನಾವು ಗಮನಿಸುತ್ತಿದ್ದೇವೆ" ಎಂದು ಮೇದಾಂತ ಆಸ್ಪತ್ರೆಯ ಚರ್ಮರೋಗದ ಸಂದರ್ಶಕ ಸಲಹೆಗಾರರಾದ ಡಾ.ರಮಣಜಿತ್ ಸಿಂಗ್ ಹೇಳಿದರು. ಇತ್ತೀಚೆಗೆ ವಿದೇಶಕ್ಕೆ ಪ್ರಯಾಣಿಸಿದ ಜನರಲ್ಲಿ ಈ ಭಯವು ವಿಶೇಷವಾಗಿ ಇದೆ ಎಂದು ಡಾ. ಸಿಂಗ್ ಹೇಳಿದರು.

ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಚಿಕನ್‌ಪಾಕ್ಸ್ ಕಾಯಿಲೆ 
“ಮಳೆಗಾಲದಲ್ಲಿ, ಜನರು ವೈರಲ್ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ ಮತ್ತು ಚಿಕನ್‌ಪಾಕ್ಸ್ ಪ್ರಕರಣಗಳು ಈ ಋತುವಿನಲ್ಲಿ ಹೆಚ್ಚಾಗಿ ಕಂಡು ಬರುತ್ತವೆ ಮತ್ತು ದದ್ದುಗಳು ಮತ್ತು ವಾಕರಿಕೆಯ ಲಕ್ಷಣಗಳನ್ನು ಹೊಂದಿರುವ ಇತರ ಸೋಂಕುಗಳೊಂದಿಗೆ ಕಂಡು ಬರುತ್ತವೆ” ಎಂದು ಅವರು ಹೇಳಿದರು.

"ಈ ಪರಿಸ್ಥಿತಿಯಿಂದಾಗಿ, ಕೆಲವು ಜನರು ಗೊಂದಲಕ್ಕೊಳಗಾಗುತ್ತಿದ್ದಾರೆ ಮತ್ತು ಅದನ್ನು ಮಂಕಿಪಾಕ್ಸ್ ಎಂದು ತಪ್ಪಾಗಿ ಅರ್ಥೈಸುತ್ತಿದ್ದಾರೆ. ರೋಗಲಕ್ಷಣಗಳು ಮತ್ತು ಅನುಕ್ರಮವನ್ನು ಅರ್ಥಮಾಡಿಕೊಳ್ಳುವ ಮೂಲಕ ರೋಗಿಯು ಮಂಕಿಪಾಕ್ಸ್ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬಹುದು" ಎಂದು ಡಾ. ಸಿಂಗ್ ಅವರು ಹೇಳಿದರು.

ಮಂಕಿಪಾಕ್ಸ್ ಕಾಯಿಲೆಯ ರೋಗ ಲಕ್ಷಣಗಳು 
ಮಂಕಿಪಾಕ್ಸ್ ಸಾಮಾನ್ಯವಾಗಿ ಜ್ವರ, ಅಸ್ವಸ್ಥತೆ, ತಲೆನೋವು, ಕೆಲವೊಮ್ಮೆ ಗಂಟಲು ಕೆರೆತ ಮತ್ತು ಕೆಮ್ಮು ಮತ್ತು ಲಿಂಫಡೆನೋಪತಿ (ಊದಿಕೊಂಡ ದುಗ್ಧರಸ ಗ್ರಂಥಿಗಳು) ದಿಂದ ಪ್ರಾರಂಭವಾಗುತ್ತದೆ ಮತ್ತು ಈ ಎಲ್ಲಾ ರೋಗಲಕ್ಷಣಗಳು ಚರ್ಮದ ಗಾಯಗಳು, ದದ್ದುಗಳು ಮತ್ತು ಇತರ ಸಮಸ್ಯೆಗಳಿಗೂ ನಾಲ್ಕು ದಿನಗಳ ಮೊದಲೇ ಕಾಣಿಸಿಕೊಳ್ಳುತ್ತವೆ, ಇದು ಪ್ರಾಥಮಿಕವಾಗಿ ಕೈ, ಕಣ್ಣುಗಳಂತಹ ತುದಿಗಳಿಂದ ಪ್ರಾರಂಭವಾಗುತ್ತದೆ ಮತ್ತು ಇಡೀ ದೇಹಕ್ಕೆ ಹರಡುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Explained: ಕೋವಿಡ್‌ನಂತೆ ಭಾರತವನ್ನೂ ಕಾಡಲಿದೆಯಾ ಮಂಕಿಪಾಕ್ಸ್? ಈ ಬಗ್ಗೆ ಆರೋಗ್ಯ ತಜ್ಞರು ಏನಂತಾರೆ?

"ಈ ಅನುಕ್ರಮದಲ್ಲಿ ಯಾರಿಗಾದರೂ ರೋಗಲಕ್ಷಣಗಳು ಕಂಡು ಬಂದರೆ, ಅವರನ್ನು ಮಂಕಿಪಾಕ್ಸ್ ಇದೆಯೇ ಅಂತ ಪರೀಕ್ಷಿಸಬೇಕು. ಚಿಕನ್‌ಪಾಕ್ಸ್ ಸಮಯದಲ್ಲಿ ಉಂಟಾಗುವ ಗುಳ್ಳೆಗಳು ದ್ರವದಿಂದ ತುಂಬಿರುತ್ತವೆ ಮತ್ತು ಅಸ್ವಸ್ಥತೆಯನ್ನು ಒಳಗೊಳ್ಳುವುದಿಲ್ಲ" ಎಂದು ಅವರು ಹೇಳಿದರು. ಮಂಕಿಪಾಕ್ಸ್ ನಲ್ಲಿ ಚರ್ಮದ ಮೇಲೆ ಗುಳ್ಳೆಗಳ ಜೊತೆಗೆ ಅಸ್ವಸ್ಥತೆಯೂ ಸಹ ಇರುತ್ತದೆ ಎಂದು ತಜ್ಞರು ಒತ್ತಿ ಹೇಳುತ್ತಾರೆ.

ಈ ಬಗ್ಗೆ ವೈದ್ಯರು ಏನು ಹೇಳಿದ್ದಾರೆ
ಗುರುಗ್ರಾಮದ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಚರ್ಮರೋಗ ವಿಭಾಗದ ಹಿರಿಯ ಸಲಹೆಗಾರರಾದ ಡಾ. ಸಚಿನ್ ಧವನ್ ಅವರು ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ 10 ತಿಂಗಳ ಮಗುವಿಗೆ ಕೀಟ ಕಡಿತದ ನಂತರ ಆದ ಬದಲಾವಣೆಯನ್ನು ತೋರಿಸಲು ಅವರನ್ನು ಭೇಟಿ ಮಾಡಿದ್ದರು ಎಂದು ಹೇಳಿದರು.

"ಅಂತರ್ಜಾಲದ ಮೂಲಕ ಹೆಚ್ಚುತ್ತಿರುವ ಜಾಗೃತಿಯೊಂದಿಗೆ, ಜನರು ಮಂಕಿಪಾಕ್ಸ್ ಬಗ್ಗೆ ದದ್ದುಗಳು ಅಥವಾ ಸರಳ ಕೀಟ ಕಡಿತವನ್ನು ಹೊಂದಿದ್ದರೆ ಅದರ ಬಗ್ಗೆ ಪ್ರಶ್ನೆಗಳೊಂದಿಗೆ ನಮ್ಮ ಬಳಿಗೆ ಬರುತ್ತಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ. ಪ್ರಕರಣಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆ ಇದೆ. ಆದರೆ ನಿಮಗೆ ಅನುಮಾನವಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ" ಎಂದು ಅವರು ಹೇಳಿದರು.

ಭಾರತದಲ್ಲಿರುವ ಮಂಕಿಪಾಕ್ಸ್ ಪ್ರಕರಣಗಳು 
ಕೇರಳದಲ್ಲಿ ಮೂರು ಮತ್ತು ದೆಹಲಿಯಲ್ಲಿ ಒಂದು ಸೇರಿದಂತೆ ಭಾರತದಲ್ಲಿ ಈವರೆಗೆ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಮೂರು ಪ್ರಕರಣಗಳು ವಿದೇಶಿ ಪ್ರಯಾಣದ ಇತಿಹಾಸವನ್ನು ಹೊಂದಿದ್ದರೆ, ದೆಹಲಿಯ ರೋಗಿಯು ಹಿಮಾಚಲ ಪ್ರದೇಶದಲ್ಲಿ ಸ್ಟಾಗ್ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:  Explained: ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ಇವೆರಡರ ನಡುವಿನ ವ್ಯತ್ಯಾಸವೇನು; ಇವುಗಳ ಸಾಮಾನ್ಯ ರೋಗಲಕ್ಷಣ ಯಾವುದು?

ದ್ವಾರಕಾದ ಆಕಾಶ್ ಹೆಲ್ತ್ಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಚರ್ಮರೋಗ ತಜ್ಞೆ ಡಾ. ಪೂಜಾ ಚೋಪ್ರಾ ಮಾತನಾಡಿ ದೇಶದ ಇತರ ಭಾಗಗಳಲ್ಲಿನ ತಮ್ಮ ಸಹೋದ್ಯೋಗಿಗಳು ಜ್ವರ ಮತ್ತು ಕೀಲು ನೋವಿನೊಂದಿಗೆ ಅಸಹಜ ದದ್ದುಗಳನ್ನು ಹೊಂದಿರುವ ರೋಗಿಗಳ ಪ್ರಕರಣಗಳನ್ನು ನೋಡಿದ್ದಾರೆ. ಜನರು ಜಾಗರೂಕರಾಗಿರುವುದು ಒಳ್ಳೆಯದು ಎಂದು ಒತ್ತಿ ಹೇಳಿದ ಅವರು, ರೋಗಿಗಳು ಚರ್ಮದ ಅಲರ್ಜಿಯನ್ನು ಮಂಕಿಪಾಕ್ಸ್ ನೊಂದಿಗೆ ಗೊಂದಲಗೊಳಿಸಿಕೊಳ್ಳುತ್ತಿದ್ದಾರೆ ಎಂದು ತನ್ನ ಸಹವರ್ತಿಗಳೊಂದಿಗೆ ಸಹಮತ ವ್ಯಕ್ತಪಡಿಸಿದರು.

"ನಿಮಗೆ ಸೋಂಕು ಇದೆ ಎಂದು ನೀವು ಶಂಕಿಸಿದರೆ, ಅಸಾಮಾನ್ಯ ದದ್ದುಗಳು, ಜ್ವರ ಮತ್ತು ಕೀಲು ನೋವಿನಂತಹ ರೋಗಲಕ್ಷಣಗಳನ್ನು ಮೊದಲು ಸೂಕ್ಷ್ಮವಾಗಿ ಗಮನಿಸಿ" ಎಂದು ಅವರು ಹೇಳಿದ್ದಾರೆ.
Published by:Ashwini Prabhu
First published: