Baba Ka Dhaba: ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಒಂದೇ ಒಂದು ಪೋಸ್ಟ್​ನಿಂದ ಬದಲಾಯ್ತು ಈ ವೃದ್ಧ ದಂಪತಿಯ ಬದುಕು

ಸಾಮಾಜಿಕ ಜಾಲತಾಣವನ್ನು ಯಾವೆಲ್ಲ ರೀತಿಯಲ್ಲಿ ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಬಹುದು. ಕಷ್ಟದಲ್ಲಿರುವ ಜೀವಗಳಿಗೆ ಹೇಗೆಲ್ಲ ಸಹಾಯ ಮಾಡಬಹುದು ಎಂದು ಈ ಒಂದು ಘಟನೆಯಿಂದ ಸಾಬೀತಾಗಿದೆ. ಮೊನ್ನೆವರೆಗೂ ಕಣ್ಣೀರಿಡುತ್ತಿದ್ದ ಅಜ್ಜನ ಮುಖದಲ್ಲಿ ಇಂದು ನೆಮ್ಮದಿಯ ಮಂದಹಾಸ ಮೂಡಿದೆ.

Anitha E | news18-kannada
Updated:October 9, 2020, 9:21 AM IST
Baba Ka Dhaba: ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಒಂದೇ ಒಂದು ಪೋಸ್ಟ್​ನಿಂದ ಬದಲಾಯ್ತು ಈ ವೃದ್ಧ ದಂಪತಿಯ ಬದುಕು
ಬಾಬಾ ಕ ಡಾಬದ ಮಾಲೀಕ ಕಾಂತ ಪ್ರಸಾದ್​
  • Share this:
ಒಂದು ಕಡೆ ಕೊರೋನಾ ಭೀತಿ, ಮತ್ತೊಂದು ಕಡೆ ಲಾಕ್​ಡೌನ್​ ಇದರ ನಡುವೆ ಎಷ್ಟು ಮಂದಿಯ ಬದುಕು ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗುತ್ತಿದೆ. ಅಕ್ಕಾಗಿ ಸ್ಥಳೀಯ ವಸ್ತು ಹಾಗೂ ಸ್ಥಳೀಯ ಉತ್ಪಾದಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಎಂದೂ ಹೇಳಲಾಗುತ್ತಿದೆ. ಹೀಗಿರುವಾಗಲೇ ದೆಹಲಿಯ ವೃದ್ಧ ದಂಪತಿ ಹಸಿದ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದು, ಅವರಿಗೆ ಒಂದೊತ್ತಿನ ಊಟ ಸಂಪಾದಿಸುವುದು ಕಷ್ಟವಾಗುತ್ತಿದೆ. ಹೌದು, 80 ವರ್ಷದ ವೃದ್ಧ ದಂಪತಿ ಪುಟ್ಟ ಫುಡ್​ ಸ್ಟಾಲ್​ ನಡೆಸುತ್ತಿದ್ದಾರೆ. ಆದರೆ ಅವರಿಗೆ ವ್ಯಾಪಾರ ಆಗುವುದೇ ಇಲ್ಲ. ಬಂದರೆ ದಿನದಲ್ಲಿ ಒಬ್ಬರು ಅಥವಾ ಇಬ್ಬರು ಬರಬಹುದು. ದೆಹಲಿಯ ಮಾಲ್ವೀಯ ನಗರದಲ್ಲಿರುವ ಈ ಬಾಬಾ ಕ ಡಾಬ ಮುಂದೆ ಮೊನ್ನೆಯವರೆಗೆ ಜನರೇ ಇರುತ್ತಿರಲಿಲ್ಲ. ಆದರೆ ನಿನ್ನೆಯಿಂದ ಡಾಬ ಬಳಿ ಜನರು ಆಹಾರ ಖರೀದಿಸಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಹೌದು, 80 ವರ್ಷದ ಕಾಂತ ಪ್ರಸಾದ್​ ಹಾಗೂ ಅವರ ಪತ್ನಿ 1990ರಿಂದ ಡಾಬವನ್ನು ನಡೆಸುತ್ತಿದ್ದಾರೆ. ಆದರೆ ಕೋವಿಡ್ ಲಾಕ್​ಡೌನ್​ ಆರಂಭವಾದಾಗಿನಿಂದ ಇವರ ಡಾಬ ಬಳಿ ಜನರು ಬರುತ್ತಲೇ ಇಲ್ಲ. ಮೊನ್ನೆಯಷ್ಟೆ ಫುಡ್​ ಬ್ಲಾಗರ್​ ಒಬ್ಬರು ಇವರನ್ನು ಸಂದರ್ಶನ ಮಾಡಿ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Baba Ka Dhabha, Malviya Nagar, Kanta Prasad, ಬಾಬಾ ಕ ಡಾಬ, ಕಾಂತ ಪ್ರಸಾದ್​, 80 ವರ್ಷದ ವೃದ್ಧ ದಂಪತಿ, ಸಾಮಾಜಿ ಜಾಲತಾಣ, ವೈರಲ್​ ವಿಡಿಯೋ ದೆಹಲಿ, ಮಾಲ್ವೀಯ ನಗರ ದೆಹಲಿ
ಬಾಬಾ ಕ ಡಾಬದ ಮಾಲೀಕ ಕಾಂತ ಪ್ರಸಾದ್​


ಕಾಂತ ಪ್ರಸಾದ್​ ಅವರನ್ನು ಸಂದರ್ಶನ ಮಾಡಿದಾಗ, ವ್ಯಾಪಾರವೇ ಇಲ್ಲ ಎಂದು ಕಣ್ಣೀರಿಟ್ಟಿದ್ದರು. ಅವರ ಪರಿಸ್ಥಿತಿ ಕಂಡ ಆತ, ಆ ದಿನ ಊಟವನ್ನು ತಾನೇ ಖರೀದಿಸುವುದಾಗಿ ಹೇಳಿ, ಅವರ ಸಂದರ್ಶನ ಮಾಡಿದ್ದರು. ಆ ವಿಡಿಯೋವನ್ನು ಪೋಸ್ಟ್​ ಮಾಡುವುದರ ಜೊತೆಗೆ ಇಲ್ಲಿಗೆ ಬಂದು ಆಹಾರ ಖರೀದಿಸುವಂತೆ ಜನರಲ್ಲಿ ಮನವಿ ಮಾಡಿದ್ದರು.


ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ, ಈ ವೃದ್ಧ ದಂಪತಿಯ ಬದುಕು ಬದಲಾಗಿದೆ. ಡಾಬಾ ಮುಂದೆ ಜನರು ಸಾಲು ಗಟ್ಟಿ ನಿಲ್ಲುತ್ತಿದ್ದಾರೆ.




Baba Ka Dhabha, Malviya Nagar, Kanta Prasad, ಬಾಬಾ ಕ ಡಾಬ, ಕಾಂತ ಪ್ರಸಾದ್​, 80 ವರ್ಷದ ವೃದ್ಧ ದಂಪತಿ, ಸಾಮಾಜಿ ಜಾಲತಾಣ, ವೈರಲ್​ ವಿಡಿಯೋ ದೆಹಲಿ, ಮಾಲ್ವೀಯ ನಗರ ದೆಹಲಿ
ಬಾಬಾ ಕ ಡಾಬದ ಪ್ರಸ್ತುತ ದೃಶ್ಯ


ಜೊಮ್ಯಾಟೊ ಸಹ ಈ ವಿಡಿಯೋ ನೋಡಿ ಖುದ್ದು ಸ್ವಯಂಪ್ರೇರಿತವಾಗಿ ಈ ಬಾಬಾ ಕ ಡಾಬವನ್ನು ತನ್ನ ಸರ್ವೀಸ್​ ಲಿಸ್ಟ್​ನಲ್ಲಿ ಸೇರಿಸಿಕೊಂಡಿದೆ.




ಸಾಮಾಜಿಕ ಜಾಲತಾಣದಲ್ಲಿ #SupportLocal ಎಂಬ ಅಭಿಯಾನ ಸಹ ಆರಂಭವಾಗಿದೆ. ಇನ್ನು ಸಾಕಷ್ಟು ಮಂದಿ ಡಾಬಾದ ಮಾಲೀಕರಾ ಕಾಂತ ಪ್ರಸಾದ್​ ಅವರ ಸಹಾಯಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.





ಬಾಬಾ ಕ ಡಾಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ಧಂತೆಯೇ ಹೋಟೆಲ್​ ಮಾಲೀಕರ ಸಂಘದವರೂ ಈ ದಂಪತಿಯ ಮನೆಗೆ ಭೇಟಿ ಕೊಟ್ಟು, ಅವರ ಡಾಬಗೆ ಅಗತ್ಯವಿರುವ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.





ಸಾಮಾಜಿಕ ಜಾಲತಾಣವನ್ನು ಯಾವೆಲ್ಲ ರೀತಿಯಲ್ಲಿ ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಬಹುದು. ಕಷ್ಟದಲ್ಲಿರುವ ಜೀವಗಳಿಗೆ ಹೇಗೆಲ್ಲ ಸಹಾಯ ಮಾಡಬಹುದು ಎಂದು ಈ ಒಂದು ಘಟನೆಯಿಂದ ಸಾಬೀತಾಗಿದೆ. ಮೊನ್ನೆವರೆಗೂ ಕಣ್ಣೀರಿಡುತ್ತಿದ್ದ ಅಜ್ಜನ ಮುಖದಲ್ಲಿ ಇಂದು ನೆಮ್ಮದಿಯ ಮಂದಹಾಸ ಮೂಡಿದೆ.
Published by: Anitha E
First published: October 9, 2020, 9:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading