ಅಸೂಕ್ಷ್ಮ ನಾಯಕರನ್ನು ಆಯ್ಕೆ ಮಾಡಿದ ಫಲವನ್ನು ಜನ ಅನುಭವಿಸುತ್ತಿದ್ದಾರೆ; ದೆಹಲಿ ಹಿಂಸಾಚಾರಕ್ಕೆ ಚಿದಂಬರಂ ಕಿಡಿ

ಈಗಲೂ ಕಾಲ ಮಿಂಚಿಲ್ಲ, ಕೇಂದ್ರ ಸರ್ಕಾರ ಕೂಡಲೇ ಸಿಎಎ ವಿರೋಧ ಪ್ರತಿಭಟನಾಕಾರರ ಧ್ವನಿಯನ್ನು ಆಲಿಸಬೇಕು. ಈ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್​ ನಿರ್ದಿಷ್ಟ ತೀರ್ಪು ನೀಡುವವರೆಗೆ ಸಿಎಎ ಕಾನೂನನ್ನು ಪಾಲಿಸಲಾಗುವುದಿಲ್ಲ ಎಂದು ಘೋಷಿಸಬೇಕು. ಆಗ ಮಾತ್ರ ಈ ಹಿಂಸಾಚಾರವನ್ನು ತಡೆಯುವುದು ಸಾಧ್ಯ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಒತ್ತಾಯಿಸಿದ್ದಾರೆ.

MAshok Kumar | news18-kannada
Updated:February 25, 2020, 7:47 PM IST
ಅಸೂಕ್ಷ್ಮ ನಾಯಕರನ್ನು ಆಯ್ಕೆ ಮಾಡಿದ ಫಲವನ್ನು ಜನ ಅನುಭವಿಸುತ್ತಿದ್ದಾರೆ; ದೆಹಲಿ ಹಿಂಸಾಚಾರಕ್ಕೆ ಚಿದಂಬರಂ ಕಿಡಿ
ಪಿ. ಚಿದಂಬರಮ್
  • Share this:
ನವ ದೆಹಲಿ (ಫೆಬ್ರವರಿ. 25) ಸಿಎಎ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು, ಈಶಾನ್ಯ ದೆಹಲಿ ಅಕ್ಷರಶಃ ಬೆಂಕಿ ಕೆಂಡದಂತಾಗಿದೆ. ಈ ಕುರಿತು ವಿಷಾಧ ವ್ಯಕ್ತಪಡಿಸಿರುವ ಮಾಜಿ ಅರ್ಥ ಸಚಿವ ಪಿ. ಚಿದಂಬರಂ, “ಸೂಕ್ಷ್ಮವಲ್ಲದ, ದೂರದೃಷ್ಟಿಯೂ ಇಲ್ಲದ ಅಸೂಕ್ಷ್ಮ ನಾಯಕರನ್ನು ಆಯ್ಕೆ ಮಾಡಿದ ತಪ್ಪಿಗೆ ಜನ ಬೆಲೆ ಪಾವತಿಸುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಟಾಪಟಿ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ಈ ಹಿಂಸಾಚಾರದಲ್ಲಿ ಪೊಲೀಸ್ ಪೇದೆ ಸೇರಿದಂತೆ ಈವರೆಗೆ 9 ಜನ ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಜನ ಗಂಭೀರ ಗಾಯಕ್ಕೊಳಗಾಗಿದ್ದಾರೆ. ಪ್ರತಿಭಟನಾಕಾರರು ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲೆಸೆಯುವುದು, ವಾಹನಗಳಿಗೆ ಬೆಂಕಿ ಹಚ್ಚುವುದು ಸಾಮಾನ್ಯ ಸಂಗತಿಯಾಗಿದೆ. ಒಟ್ಟಾರೆ ದೆಹಲಿ ಶಾಂತಿ ಸುವ್ಯವಸ್ಥೆ ಕೈಮೀರಿ ಹೋಗಿದೆ.

ಈ ಕುರಿತು ಮಾತನಾಡಿರುವ ಚಿದಂಬರಂ, “ಸಿಎಎ ವಿಚಾರವಾಗಿ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಮತ್ತು ಪ್ರಾಣಹಾನಿ ಅತ್ಯಂತ ಆಘಾತಕಾರಿ ಇದಕ್ಕೆ ನಮ್ಮ ಬಲವಾದ ಖಂಡನೆ ಇದೆ. ಸೂಕ್ಷ್ಮವಲ್ಲದ ಹಾಗೂ ದೂರದೃಷ್ಟಿ ಇಲ್ಲದ ನಾಯಕರ ಕೈಗೆ ದೇಶದ ಅಧಿಕಾರ ಕೊಟ್ಟ ತಪ್ಪಿಗೆ ಜನ ಬೆಲೆ ಪಾವತಿ ಮಾಡುತ್ತಿದ್ದಾರೆ.

ಈಗಲೂ ಕಾಲ ಮಿಂಚಿಲ್ಲ, ಕೇಂದ್ರ ಸರ್ಕಾರ ಕೂಡಲೇ ಸಿಎಎ ವಿರೋಧ ಪ್ರತಿಭಟನಾಕಾರರ ಧ್ವನಿಯನ್ನು ಆಲಿಸಬೇಕು. ಈ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್​ ನಿರ್ದಿಷ್ಟ ತೀರ್ಪು ನೀಡುವವರೆಗೆ ಸಿಎಎ ಕಾನೂನನ್ನು ಪಾಲಿಸಲಾಗುವುದಿಲ್ಲ ಎಂದು ಘೋಷಿಸಬೇಕು. ಆಗ ಮಾತ್ರ ಈ ಹಿಂಸಾಚಾರವನ್ನು ತಡೆಯುವುದು ಸಾಧ್ಯ” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ನನ್ನ ತಾಯಿ ಹುಟ್ಟು ದಿನ ನನಗೇ ಗೊತ್ತಿಲ್ಲ, ಎನ್​ಪಿಆರ್​ ಫಾರ್ಮ್​ನಿಂದ ವಿವಾದಾತ್ಮಕ ಷರತ್ತುಗಳನ್ನು ಕೈಬಿಡಿ; ನಿತೀಶ್ ಕರೆ
First published:February 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading