370ನೇ ವಿಧಿ ರದ್ದು ಮಾಡಿದ್ದು ಜಮ್ಮು-ಕಾಶ್ಮೀರ ಮತ್ತು ಲಡಾಖ್​ನ ಜನರಿಗೆ ಲಾಭ: ರಾಷ್ಟ್ರಪತಿ ಕೋವಿಂದ್

ವಿಶೇಷಾಧಿಕಾರದಿಂದಾಗಿ ಕಾಶ್ಮೀರಿಯರು ಮಾಹಿತಿ ಹಕ್ಕು, ಶಿಕ್ಷಣ ಹಕ್ಕು ಮೊದಲಾದ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇದೀಗ ಇವೆಲ್ಲವೂ ಕಾಶ್ಮೀರಿಯರಿಗೆ ವರದಾನವಾಗಲಿದೆ ಎಂದು ರಾಷ್ಟ್ರಪತಿಗಳು ಹೇಳಿದರು.

news18
Updated:August 14, 2019, 10:27 PM IST
370ನೇ ವಿಧಿ ರದ್ದು ಮಾಡಿದ್ದು ಜಮ್ಮು-ಕಾಶ್ಮೀರ ಮತ್ತು ಲಡಾಖ್​ನ ಜನರಿಗೆ ಲಾಭ: ರಾಷ್ಟ್ರಪತಿ ಕೋವಿಂದ್
ರಾಮನಾಥ್ ಕೋವಿಂದ್
  • News18
  • Last Updated: August 14, 2019, 10:27 PM IST
  • Share this:
ನವದೆಹಲಿ(ಅ. 14): ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ್ದರಿಂದ ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಪ್ರಾಯಪಟ್ಟರು. 73ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಇವತ್ತು ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ದೇಶದ ವಿವಿಧೆಡೆ ಜನರು ಹೊಂದಿರುವ ಹಕ್ಕು ಮತ್ತು ಸೌಲಭ್ಯಗಳು ಜಮ್ಮು-ಕಾಶ್ಮೀರ ಮತ್ತು ಲಡಾಕ್​ನ ಜನರಿಗೂ ಇನ್ಮುಂದೆ ಲಭ್ಯವಾಗಲಿದೆ ಎಂದು ತಿಳಿಸಿದರು.

ವಿಶೇಷಾಧಿಕಾರದಿಂದಾಗಿ ಕಾಶ್ಮೀರಿಯರು ಮಾಹಿತಿ ಹಕ್ಕು, ಶಿಕ್ಷಣ ಹಕ್ಕು ಮೊದಲಾದ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇದೀಗ ಇವೆಲ್ಲವೂ ಕಾಶ್ಮೀರಿಯರಿಗೆ ವರದಾನವಾಗಲಿದೆ. ಹಾಗೆಯೇ, ತ್ರಿವಳಿ ತಲಾಖ್ ನಿಷೇಧದಂತಹ ಕಾನೂನುಗಳು ಕಾಶ್ಮೀರಿ ಹೆಣ್ಮಕ್ಕಳಿಗೆ ನೆರವಾಗಲಿದೆ ಎಂದು ರಾಷ್ಟ್ರಪತಿಗಳು ಹೇಳಿದರು.

ಇದನ್ನೂ ಓದಿ: ಕಾಶ್ಮೀರ ವಿಚಾರದಲ್ಲಿ ವಿರೋಧಿಸುವವರ ಮನ ಮಾವೋವಾದಿ, ಭಯೋತ್ಪಾದಕರ ಪರ ಮಿಡಿಯುತ್ತದೆ; ಪ್ರಧಾನಿ ಮೋದಿ!

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಮನಸ್ಸಿನಲ್ಲಿ ರಾಜಕೀಯ ಅಧಿಕಾರ ಮಾತ್ರ ಇರಲಿಲ್ಲ. ರಾಷ್ಟ್ರ ನಿರ್ಮಾಣ ಮತ್ತು ರಾಷ್ಟ್ರೀಯ ಬೆಸುಗೆಯ ಸುದೀರ್ಘ ಮತ್ತು ಬೃಹತ್ ಪ್ರಕ್ರಿಯೆಗೆ ಸ್ವಾತಂತ್ರ್ಯ ಎನ್ನುವುದು ಮೆಟ್ಟಿಲೆಂದು ಭಾವಿಸಿದ್ದರು. ಪ್ರತಿಯೊಬ್ಬ ವ್ಯಕ್ತಿ, ಕುಟುಂಬ ಮತ್ತು ಒಟ್ಟಾರೆ ಸಮಾಜದ ಏಳ್ಗೆಯು ಅವರ ಗುರಿಯಾಗಿತ್ತು ಎಂದು ರಾಮನಾಥ್ ಕೋವಿಂದ್ ಅವರು ಸ್ವಾತಂತ್ರ್ಯದ ನೈಜ ಉದ್ದೇಶವನ್ನು ವಿವರಿಸಿದರು.

ಅಬಲ ಪ್ರಜೆಗಳಿಗೆ ನಾವು ಕಲ್ಯಾಣ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತೇವೆ. ಸೌರ ಶಕ್ತಿಯನ್ನು ನವೀಕರಣ ಇಂಧನವಾಗಿ ಬಳಕೆ ಮಾಡುತ್ತೇವೆ. ಇಂಥವನ್ನು ಮಾಡುವ ಮೂಲಕ ಗಾಂಧೀಜಿ ಅವರ ತತ್ವವನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಆಧುನಿಕ ಅಭಿವೃದ್ಧಿ ತತ್ವದ ಜೊತೆಗೆ ಗಾಂಧಿ ತತ್ವವನ್ನು ರಾಷ್ಟ್ರಪತಿಗಳು ಸಮೀಕರಣ ಮಾಡಿದರು.

ಇದನ್ನೂ ಓದಿ: ಗಾಂಧಿ ಮತ್ತು ನೆಹರು ಸಲಿಂಗಿಗಳು ಎಂದು ವಿವಾದಾತ್ಮಕ ಟ್ವೀಟ್​​; ಲೇಖಕಿ ವಿರುದ್ಧ ಎಫ್​​ಐಆರ್

ಗಾಂಧೀಜಿ ಬದುಕಿದ್ದ ಕಾಲಮಾನಕ್ಕೂ ಈಗಿನ ಆಧುನಿಕ ಭಾರತ ತೀರಾ ಬದಲಾಗಿದೆ. ಆದರೆ, ಮಹಾತ್ವ ಗಾಂಧಿ ಅವರ ತತ್ವ ಮಾತ್ರ ಈಗಲೂ ಬಹಳ ಪ್ರಸ್ತುತವಿದೆ. ಸುಸ್ಥಿರತೆ, ಪರಿಸರ ಸೂಕ್ಷ್ಮತೆ, ಪರಿಸರದೊಂದಿಗೆ ಸಹಭಾಳ್ವೆಯನ್ನು ಬೋಧಿಸುತ್ತಿದ್ದ ಅವರು ಭವಿಷ್ಯದ ಸವಾಲುಗಳನ್ನು ಅಂದಾಜಿಸಿದ್ದರು. ನಾವು ಮಾಡುವ ಕಲ್ಯಾಣ ಯೋಜನೆಗಳು ಗಾಂಧಿ ತತ್ವಕ್ಕೆ ಪೂರಕವಾಗಿಯೇ ಇರುತ್ತದೆ ಎಂದು ರಾಮನಾಥ್ ಕೋವಿಂದ್ ಹೇಳಿದರು.ಆಗಸ್ಟ್ 5ರವರೆಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದತ್ತವಾಗಿ ವಿಶೇಷಾಧಿಕಾರ ಇತ್ತು. ರಕ್ಷಣೆ, ರೈಲ್ವೆ, ವಿದೇಶಾಂಗ ವ್ಯವಹಾರದಂತಹ ಬೆರಳೆಣಿಕೆಯಷ್ಟು ವಿಚಾರಗಳನ್ನು ಹೊರತುಪಡಿಸಿ ಉಳಿದಂತೆ ತನ್ನದೇ ಕಾನೂನುಗಳನ್ನು ರೂಪಿಸುವ ಅಧಿಕಾರ ಕಾಶ್ಮೀರಕ್ಕಿತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರವು 370ನೇ ವಿಧಿ ರದ್ದುಗೊಳಿಸುವ ಮೂಲಕ ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ನಿಷ್ಕ್ರಿಯಗೊಳಿಸಿದೆ. ಇದೀಗ ಕಾಶ್ಮೀರಕ್ಕೆ ಭಾರತದ ಸಂವಿಧಾನವೇ ಅನ್ವಯವಾಗಲಿದೆ.

370ನೇ ವಿಧಿಯ ರದ್ದಿನ ಜೊತೆಗೆ ಜಮ್ಮು-ಕಾಶ್ಮೀರ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ವಿಧೇಯಕವನ್ನು ಜಾರಿಗೆ ತರಲಾಗಿದೆ. ಜಮ್ಮು-ಕಾಶ್ಮಿರವರು ದೆಹಲಿಯಂತೆ ಪ್ರತ್ಯೇಕ ಶಾಸನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ