Financial Crisis: ಪಾಪರ್ ಪಾಕಿಸ್ತಾನ! ಚಹಾ ಖರೀದಿಗೂ ದುಡ್ಡಿಲ್ಲವಂತೆ!

ನಮ್ಮ ನೆರೆ ದೇಶ ಪಾಕಿಸ್ತಾನದ ಚಹಾಪ್ರಿಯರಿಗೆ, ಅಲ್ಲಿನ ಹಿರಿಯ ಮಂತ್ರಿಯೊಬ್ಬರು ಮಾಡಿರುವ ಮನವಿಯೊಂದು, ಸಿಕ್ಕಾಪಟ್ಟೆ ನಿರಾಶೆಯನ್ನು ಮೂಡಿಸಿದೆಯಂತೆ. ಅದೇನಪ್ಪಾ ಮನವಿ ಅಂತೀರಾ? ಹಿರಿಯ ಮಂತ್ರಿ ಅಹಸಾನ್ ಇಕ್ಬಾಲ್, ದೇಶದ ಜನರಲ್ಲಿ, ನೀವುಗಳು ನಿತ್ಯವೂ ಕುಡಿಯುವ ಚಹಾದ ಪ್ರಮಾಣವನ್ನು ಕಡಿಮೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಮ್ಮ ನೆರೆ ದೇಶ ಪಾಕಿಸ್ತಾನದ (Pakistan) ಚಹಾಪ್ರಿಯರಿಗೆ, ಅಲ್ಲಿನ ಹಿರಿಯ ಮಂತ್ರಿಯೊಬ್ಬರು ಮಾಡಿರುವ ಮನವಿಯೊಂದು, ಸಿಕ್ಕಾಪಟ್ಟೆ ನಿರಾಶೆಯನ್ನು ಮೂಡಿಸಿದೆಯಂತೆ. ಅದೇನಪ್ಪಾ ಮನವಿ ಅಂತೀರಾ? ಹಿರಿಯ ಮಂತ್ರಿ ಅಹಸಾನ್ ಇಕ್ಬಾಲ್, ದೇಶದ ಜನರಲ್ಲಿ, ನೀವುಗಳು ನಿತ್ಯವೂ ಕುಡಿಯುವ ಚಹಾದ (Tea) ಪ್ರಮಾಣವನ್ನು ಕಡಿಮೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಹಾಗೆ ಮಾಡುವುದರಿಂದ ಪಾಕಿಸ್ತಾನದ ಅತ್ಯಧಿಕ ಆಮದು ಬಿಲ್‍ಗಳನ್ನು (Bill of import) ಕಡಿಮೆ ಮಾಡಿಕೊಳ್ಳಬಹುದು ಎಂಬುವುದು ಅವರ ಅಭಿಪ್ರಾಯವಾಗಿದೆ. ಸದ್ಯಕ್ಕೆ ಪಾಕಿಸ್ತಾನದ ಬಳಿ ಅತ್ಯಂತ ಕಡಿಮೆ ವಿದೇಶಿ ಕರೆನ್ಸಿ (Foreign currency) ಮೀಸಲು ಉಳಿದುಕೊಂಡಿದ್ದು, ಪ್ರಸ್ತುತ ಎರಡು ತಿಂಗಳುಗಳಿಂತ ಕಡಿಮೆ ಅವಧಿಯ ಎಲ್ಲಾ ರೀತಿಯ ಆಮದು ವ್ಯವಹಾರಗಳಿಗಷ್ಟೇ ಸಾಕಾಗುವಷ್ಟಿದೆ ಎನ್ನಲಾಗುತ್ತಿದೆ.

ವಿಶ್ವದಲ್ಲಿಯೇ ಅತ್ಯಧಿಕ ಚಹಾವನ್ನು ಆಮದು ಮಾಡಿಕೊಳ್ಳುವ ದೇಶ
ಪಾಕಿಸ್ತಾನ ವಿಶ್ವದಲ್ಲಿಯೇ ಅತ್ಯಧಿಕ ಚಹಾವನ್ನು ಆಮದು ಮಾಡಿಕೊಳ್ಳುವ ದೇಶವಾಗಿದೆ. ಕಳೆದ ವರ್ಷ ಅದು 600 ಮಿಲಿಯನ್ ಡಾಲರ್‍ಗಿಂತಲೂ ಮೌಲ್ಯದ ಚಹಾವನ್ನು ಖರೀದಿಸಿದೆ. “ಚಹಾದ ಸೇವನೆಯನ್ನು ಒಂದರಿಂದ ಎರಡು ಕಪ್‍ಗಳಷ್ಟು ಕಡಿಮೆ ಮಾಡಿಕೊಳ್ಳಬೇಕೆಂದು ನಾನು ದೇಶದ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಏಕೆಂದರೆ ನಾವು ಸಾಲದಲ್ಲಿ ಚಹಾವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ” ಎಂದು ಮಂತ್ರಿ ಅಹಸಾನ್ ಇಕ್ಬಾಲ್ ಹೇಳಿರುವುದನ್ನು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.

ರಾತ್ರಿ 8.30 ಕ್ಕೆ ಮಾರುಕಟ್ಟೆ ಮಳಿಗೆಗಳು ಬಂದ್
ವ್ಯಾಪಾರ ವಹಿವಾಟುದಾರರು, ತಮ್ಮ ಮಾರುಕಟ್ಟೆ ಮಳಿಗೆಗಳನ್ನು ರಾತ್ರಿ 8.30 ಕ್ಕೆ ಮುಚ್ಚಿದರೆ ವಿದ್ಯುತ್ ಶಕ್ತಿಯನ್ನು ಕೂಡ ಉಳಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಪಾಕಿಸ್ತಾನದ ವಿದೇಶಿ ಕರೆನ್ಸಿ ಮೀಸಲು ವೇಗವಾಗಿ ಕಡಿಮೆಯಾಗುತ್ತಿರುವ ಕಾರಣ, ಆಮದು ವೆಚ್ಚಗಳನ್ನು ಕಡಿತಗೊಳಿಸಿ, ಹಣವನ್ನು ದೇಶದಲ್ಲೇ ಉಳಿಸಿಕೊಳ್ಳುವಂತೆ ಸರಕಾರದ ಮೇಲೆ ಒತ್ತಡ ಉಂಟಾಗಿದೆ.

ಚಹಾ ಸೇವನೆ ಕಡಿಮೆ ಮಾಡುವುದರಿಂದ ಆರ್ಥಿಕ ಸಮಸ್ಯೆ ಪರಿಹರಿಸಲು ಸಾಧ್ಯವೇ?
ಚಹಾ ಸೇವನೆಯನ್ನು ಕಡಿಮೆ ಮಾಡಿ ಎಂದು ಮಂತ್ರಿಗಳು ವಿನಂತಿ ಮಾಡಿಕೊಂಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ಕೂಡ ವೈರಲ್ ಆಗಿದ್ದು, ಚಹಾದ ಸೇವನೆ ಕಡಿಮೆ ಮಾಡುವುದರಿಂದ ದೇಶದ ಗಂಭೀರ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೇ ಎಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Nupur Sharma ವಿರುದ್ಧ ಗಲ್ಫ್ ರಾಷ್ಟ್ರದಲ್ಲೂ ಪ್ರತಿಭಟನೆ! ಗಲಾಟೆ ಮಾಡಿದವರನ್ನ ಗಡಿಪಾರು ಮಾಡಲು ಕುವೈತ್​ ನಿರ್ಧಾರ

ಅನಿವಾರ್ಯವಲ್ಲದ ಐಷಾರಾಮಿ ವಸ್ತುಗಳ ಆಮದಿನ ಮೇಲೆ ನಿರ್ಭಂಧ
ಪಾಕಿಸ್ತಾನಿ ವಿದೇಶಿ ವಿನಿಮಯ ಮೀಸಲು ಫೆಬ್ರವರಿಯಲ್ಲಿ, ಸುಮಾರು 16 ಬಿಲಿಯನ್ ಡಾಲರ್ ನಿಂದ ಜೂನ್ ಮೊದಲನೇ ವಾರದಲ್ಲಿ, 10 ಬಿಲಿಯನ್ ಡಾಲರ್ ತಲುಪಿ ಈಗ ಅದಕ್ಕಿಂತಲೂ ಕಡಿಮೆಯಾಗಿದೆ. ಎರಡು ತಿಂಗಳ ಅವಧಿಯ ವರೆಗಿನ ಎಲ್ಲಾ ಆಮದು ವೆಚ್ಚಗಳನ್ನು ಪೂರೈಸಲು ಈ ಮೊತ್ತ ಸಾಕಾಗುವುದಿಲ್ಲ. ಹಣಕಾಸು ನಿಧಿಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಕರಾಚಿಯಲ್ಲಿ ಕಳೆದ ತಿಂಗಳು, ಅಧಿಕಾರಿಗಳು ಅನಿವಾರ್ಯವಲ್ಲದ ಐಷಾರಾಮಿ ವಸ್ತುಗಳ ಆಮದಿನ ಮೇಲೆ ನಿರ್ಭಂಧ ಹೇರಿದ್ದಾರೆ.

ಆರ್ಥಿಕತೆಯನ್ನು ತಪ್ಪಾದ ರೀತಿಯಲ್ಲಿ ನಿರ್ವಹಿಸಿದ ಇಮ್ರಾನ್ ಖಾನ್ ಅವರ ಸರಕಾರ
ಏಪ್ರಿಲ್ ತಿಂಗಳಲ್ಲಿ ಸಂಸತ್ತಿನ ಮತದಾನದ ಮೂಲಕ, ಇಮ್ರಾನ್ ಖಾನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಶೆಹಬಾಜ್ ಶರೀಫ್ ಅವರ ಸರಕಾರಕ್ಕೆ ಈ ಆರ್ಥಿಕ ಬಿಕ್ಕಟ್ಟು ಪ್ರಮುಖ ಸವಾಲಾಗಿದೆ ಪರಿಣಮಿಸಿದೆ. ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಸಮಯದ ಬಳಿಕ ಶೆಹಬಾಜ್ ಅವರು ಮಾಡಿದ ಕೆಲಸವೆಂದರೆ, ಹಿಂದಿನ ಇಮ್ರಾನ್ ಖಾನ್ ಅವರ ಸರಕಾರವನ್ನು ದೂಷಿಸಿದ್ದು. ಇಮ್ರಾನ್ ಖಾನ್ ಅವರ ಸರಕಾರವನ್ನು ದೇಶದ ಆರ್ಥಿಕತೆಯನ್ನು ತಪ್ಪಾದ ರೀತಿಯಲ್ಲಿ ನಿರ್ವಹಿಸಿತ್ತು ಮತ್ತು ಅದನ್ನು ಸರಿಯಾದ ದಾರಿಗೆ ತರುವುದು ತಮ್ಮ ಪಾಲಿಗೆ ತಮ್ಮ ಪಾಲಿಗೆ ಅತ್ಯಂತ ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದ್ದರು.

 ಇದನ್ನೂ ಓದಿ:  Pakistan: ಪಾಕಿಸ್ತಾನಕ್ಕೂ ಎದುರಾಗಿದ್ಯಂತೆ ಮಹಾ ಸಂಕಷ್ಟ! 'ಮಾಡಿದ್ದುಣ್ಣೋ ಮಾರಾಯಾ' ಅನ್ನೋದು ಇದಕ್ಕೆ ಅನಿಸುತ್ತೆ!

ಕಳೆದ ವಾರ ಪಾಕಿಸ್ತಾನದ ಕ್ಯಾಬಿನೆಟ್ 47 ಬಿಲಿಯನ್ ಡಾಲರ್‍ಗಳ ಹೊಸ ಬಜೆಟ್ ಅನ್ನು ಪರಿಚಯಿಸಿತು. ಸ್ಥಗಿತಗೊಂಡಿರುವ 6 ಬಿಲಿಯನ್ ಡಾಲರ್ ಬೇಲ್‍ಔಟ್ ಕಾರ್ಯಕ್ರಮವನ್ನು ಮರು ಪ್ರಾರಂಭ ಮಾಡುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಮ್‍ಎಫ್) ಯ ಮನವೊಲಿಸುವ ಗುರಿಯನ್ನು ಅದು ಹೊಂದಿದೆ. ಪಾಕಿಸ್ತಾನದ ಕಡಿಮೆ ವಿದೇಶಿ ಕರೆನ್ಸಿ ಮೀಸಲು ಪೂರೈಕೆ ಮತ್ತು ಹಲವಾರು ವರ್ಷಗಳ ಕುಂಠಿತ ಅಭಿವೃದ್ಧಿಯ ಕಾರಣದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ನಿವಾರಣೆ ಮಾಡುವ ಉದ್ದೇಶದಿಂದ 2019 ರಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಒಪ್ಪಂದದ ಮಾತುಕತೆ ನಡೆದಿತ್ತು. ಆದರೆ ನಂತರ ಅದನ್ನು ಸ್ಥಗಿತಗೊಳಿಸಲಾಗಿತ್ತು.
Published by:Ashwini Prabhu
First published: