• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Viral Video: ಅಬ್ಬಬ್ಬಾ, ಎಂಥಾ ಕಾಲ ಬಂತಪ್ಪ! ವೀವ್ಸ್‌ಗಾಗಿ ಮಗನ ಜೊತೆ ರೋಮ್ಯಾನ್ಸ್ ಮಾಡಿದ ತಾಯಿ! ನೆಟ್ಟಿಗರಿಂದ ಮಂಗಳಾರತಿ

Viral Video: ಅಬ್ಬಬ್ಬಾ, ಎಂಥಾ ಕಾಲ ಬಂತಪ್ಪ! ವೀವ್ಸ್‌ಗಾಗಿ ಮಗನ ಜೊತೆ ರೋಮ್ಯಾನ್ಸ್ ಮಾಡಿದ ತಾಯಿ! ನೆಟ್ಟಿಗರಿಂದ ಮಂಗಳಾರತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೆಹಲಿ ಮೂಲದ ರಚನಾ ಎಂಬ ವಿಡಿಯೋ ಕ್ರಿಯೇಟರ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹುಡುಗನೊಂದಿಗೆ ನೃತ್ಯ ಮಾಡುವ, ಚುಂಬಿಸುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಮೊದಲು ಈ ವಿಡಿಯೋದಲ್ಲಿ ಬರುವ ಹುಡುಗ ಯಾರೆಂಬುದರ ಬಗ್ಗೆ ಜನರಿಗೆ ಕೂತೂಹಲ ಮೂಡಿತ್ತು. ಕೆಲವೊಂದು ಪೋಸ್ಟ್​ಗಳಲ್ಲಿ ಆಕೆಯೆ ತಾಯಿ ಮತ್ತು ಮಗ​ ಎಂದು ಬರೆದುಕೊಂಡಿದ್ದಾರೆ. ಇದು ಗೊತ್ತಾದ ಮೇಲೆ ಆಕೆಯ ಫಾಲೋವರ್ಸ್ ರಚನಾ​ ವಿರುದ್ಧ ಕಿಡಿ ಕಾರುತ್ತಿದ್ದಾರೆ

ಮುಂದೆ ಓದಿ ...
  • Share this:

ಸಾಮಾಜಿಕ ಜಾಲತಾಣದಲ್ಲಿ (Social Media) ವೀವ್ಸ್​ಗಳಿಗಾಗಿ ಸಾಕಷ್ಟು ಜನ ಚಿತ್ರ ವಿಚಿತ್ರ ವಿಡಿಯೋಗಳನ್ನು (Video) ಪೋಸ್ಟ್​ ಮಾಡುತ್ತಾರೆ. ಕೆಲವರು ಅರೆಬರೆ ಬಟ್ಟೆಯಲ್ಲಿ ನೃತ್ಯ ಮಾಡುವ ವಿಡಿಯೋಗಳನ್ನು, ಕೆಲವರು ತಮಾಷೆಯ ವಿಡಿಯೋಗಳನ್ನು ಇನ್​ಸ್ಟಾಗ್ರಾಮ್ (Instagram) , ಫೇಸ್​ಬುಕ್​ಗಳಲ್ಲಿ (Facebook) ಪೋಸ್ಟ್​ ಮಾಡುವ ಮೂಲಕ ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಪೋಸ್ಟ್ ಮಾಡುವ ವಿಡಿಯೋಗಳಿಗೆ ಲಕ್ಷಗಟ್ಟಲೇ ವೀಕ್ಷಣೆಗಳು ಬರುತ್ತಿವೆ. ವಿಚಿತ್ರವೆಂದರೆ ಆಕೆ ತನ್ನ ಮಗನೊಂದಿಗೆ ಚಲನಚಿತ್ರಗಳ ರೊಮ್ಯಾಂಟಿಕ್ ಹಾಡುಗಳಿಗೆ (Romantic Song) ನೃತ್ಯ ಮಾಡುವ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕೆಲವು ವೀಕ್ಷಕರು ವಿರೋಧಿಸಿದ್ದು, ಮಗನೊಂದಿಗೆ ಇಂತಹ ವಿಡಿಯೋ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ದೆಹಲಿ ಮೂಲದ ರಚನಾ ಎಂಬ ವಿಡಿಯೋ ಕ್ರಿಯೇಟರ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹುಡುಗನೊಂದಿಗೆ ನೃತ್ಯ ಮಾಡುವ, ಚುಂಬಿಸುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಮೊದಲು ಈ ವಿಡಿಯೋದಲ್ಲಿ ಬರುವ ಹುಡುಗ ಯಾರೆಂಬುದರ ಬಗ್ಗೆ ಜನರಿಗೆ ಕೂತೂಹಲ ಮೂಡಿತ್ತು. ಕೆಲವೊಂದು ಪೋಸ್ಟ್​ಗಳಲ್ಲಿ ಆಕೆಯೆ ತಾಯಿ ಮತ್ತು ಮಗ​  ಎಂದು ಬರೆದುಕೊಂಡಿದ್ದಾರೆ. ಇದು ಗೊತ್ತಾದ ಮೇಲೆ ಆಕೆಯ ಫಾಲೋವರ್ಸ್ ರಚನಾ​ ವಿರುದ್ಧ ಕಿಡಿ ಕಾರುತ್ತಿದ್ದಾರೆ.


ಜನರ ಆಕ್ರೋಶಕ್ಕೆ ಕಾರಣ


ಮಹಿಳೆ ನೃತ್ಯ, ಸಂಭಾಷಣೆ ವಿಡಿಯೋಗಳನ್ನು ಆ ಹುಡಗನೊಂದಿಗೆ ಮಾಡಿದ್ದರೆ ಯಾರೂ  ಟೀಕಿಸುತ್ತಿರಲಿಲ್ಲ, ಆದರೆ ಆಕೆ ಹುಡುಗನೊಂದಿಗೆ  ಬಾತ್ ​ಟಬ್​ ಒಟ್ಟಿಗೆ ಸ್ನಾನ ಮಾಡುತ್ತಿರುವ, ಚುಂಬಿಸುವಂತಹ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಹಲವಾರು ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​​ ಮಾಡಿರುವುದು ಇದು ಸಾರ್ವಜನಿಕರನ್ನು ಕೆರಳಿಸಿದೆ.


ಇದನ್ನೂ ಓದಿ:Video Viral: 100 ವರ್ಷದ ತಂದೆಗೆ ಹಾಡು ಹೇಳಿ ರಂಜಿಸಿದ 75 ವರ್ಷದ ಪುತ್ರ! ಅಪ್ಪ-ಮಗನ ಹೃದಯಸ್ಪರ್ಶಿ ವಿಡಿಯೋ ನೋಡಿ ನೆಟ್ಟಿಗರು ಭಾವುಕ


'ಮಮ್ ಆ್ಯಂಡ್​​ ಸನ್'​ ಎಂದು ಬರೆದು ವಿಡಿಯೋ ಪೋಸ್ಟ್​


ಇತ್ತೀಚೆಗೆ, ರಚನಾ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ, ನಾನು ಮದುವೆಯಾಗಿದ್ದೇನೆ ಮತ್ತು ಮಕ್ಕಳೂ ಇದ್ದಾರೆ. ಆದರೆ ನನಗೆ ಇಷ್ಟು ದೊಡ್ಡ ಮಗನಿದ್ದಾನೆ ಎಂದರೆ ಯಾರೂ ನಂಬುವುದಿಲ್ಲ. ಇದನ್ನು ಕೇಳಿ ಜನರು ಮೂರ್ಛೆ ಹೋಗುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇತರ ವಿಡಿಯೋಗಳಂತೆ ಈ ವಿಡಿಯೋದಲ್ಲಿಯೂ ರಚನಾ 'ಮಮ್ ಆ್ಯಂಡ್​ ಸನ್' ಎಂದು ಬರೆದುಕೊಂಡಿದ್ದಾರೆ.




ಕಮೆಂಟ್ ಸೆಕ್ಷನ್ ಬ್ಲಾಕ್


ರಚನಾ ತನ್ನ ವಿಡಿಯೋಗಳಿಗೆ ಸಂಬಂಧಿಸಿದಂತೆ ಹಲವು ಜನರಿಂದ ಟೀಕೆಗಳಿಗೆ ಒಳಗಾಗಿದ್ದಾರೆ. ಕೆಲವರು ನಮ್ಮ ವಿಡಿಯೋಗಳನ್ನು ಸಹ ಇಷ್ಟಪಡುತ್ತಾರೆ, ಕೆಲವರಿಗೆ ಇಷ್ಟವಾಗುವುದಿಲ್ಲ ಇದು ವಿಚಿತ್ರ ಅನ್ನಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಕೆಟ್ಟ ಕಮೆಂಟ್‌ಗಳಿಂದ ಬೇಸತ್ತ ರಚನಾ ಕಾಮೆಂಟ್ ಆಯ್ಕೆಯನ್ನೇ ಬ್ಲಾಕ್ ಮಾಡಿದ್ದಾರೆ. ವಿಡಿಯೋ ಕ್ರಿಯೇಟರ್ ರಚನಾ ಇನ್ಸ್ಟಾಗ್ರಾಮ್ ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಅವರ ಅನುಯಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.



ಮಕ್ಕಳ ಮೇಲೆ ದುಷ್ಪರಿಣಾಮ


ಈಕೆಯ ವಿಡಿಯೋಗಳನ್ನು ಶೇರ್​ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಈ ಇಬ್ಬರು ತಾಯಿ- ಮಗ. ಇವರು ರೊಮ್ಯಾಂಟಿಕ್ ಗೀತೆಗೆ ನೃತ್ಯ ಮಾಡುತ್ತಿರುವುದು ತುಂಬಾ ವಿಚಿತ್ರ ಅನ್ನಿಸುತ್ತದೆ ಎಂದು ಬರೆದುಕೊಂಡಿದ್ದರು.


ಇದಕ್ಕೆ ಕಮೆಂಟ್ ಮಾಡಿರುವ ಮತ್ತೊಬ್ಬರು " ಇದು ತುಂಬಾ ಅನುಚಿತ ವರ್ತನೆ.  ಬೇರೆ ಮಕ್ಕಳು ಈ ರೀತಿ ವಿಡಿಯೋ ಮಾಡುವಂತೆ ಬಲವಂತ ಮಾಡಬಹುದು, ಇದರ ವಿರುದ್ಧ ತನಿಖೆ ಮಾಡಬೇಕು. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಭವಿಷ್ಯದಲ್ಲಿ ಅವರಿಗೆ ತೊಂದರೆಯಲ್ಲಿರಬಹುದು" ಎಂದು ಮಹಿಳಾ ಆಯೋಗದ ಟ್ವಿಟರ್​ ಖಾತೆಗೆ ಟ್ಯಾಗ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.









View this post on Instagram






A post shared by Rachna🌸 (@rachnaa_0)





ಬಂಧಿಸಬೇಕೆಂದು ಆಗ್ರಹ


ಇನ್ನು ಮತ್ತೊಬ್ಬ ಟ್ವಿಟರ್​ ಬಳಕೆದಾರರು ಈ ಬಗ್ಗೆ ಖಾರವಾಗಿ ಟ್ವಿಟರ್​ ಪ್ರತಿಕ್ರಿಯಿಸಿದ್ದಾರೆ. ಅಂತಹ ಪೋಷಕರನ್ನು ಜೈಲಿಗಟ್ಟಬೇಕು. ಮಕ್ಕಳ ಪಾಲನೆ ಎಲ್ಲರಿಗೂ ಅಲ್ಲ. ಅನೇಕ ಬಳಕೆದಾರರು ವಿಡಿಯೋದಲ್ಲಿ ಮಕ್ಕಳೊಂದಿಗೆ ಮಾಡುತ್ತಿರುವ ಇಂತಹ ಕ್ರಿಯೆಗಳು ಮಕ್ಕಳ ನಿಂದನೆ ಎಂದು ಆರೋಪಿಸಿದ್ದಾರೆ.

Published by:Rajesha M B
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು