ATMನಲ್ಲಿ ಒಂದು ಬಾರಿ ಕಾರ್ಡ್ ಹಾಕಿದ್ರೆ 5 ಬಾರಿ ಹಣ ಬರುತ್ತಂತೆ! ಕೆಲಸ ಬಿಟ್ಟು ಹಣಕ್ಕಾಗಿ ಕ್ಯೂ ನಿಂತ ಜನರು

ಈ ಎಟಿಎಂ ಮಷಿನ್‌ನಲ್ಲಿ ಒಂದು ಬಾರಿ ಎಟಿಎಂ ಕಾರ್ಡ್ ಹಾಕಿ, ಪಾಸ್ವರ್ಡ್ ಹಾಕಿ, ಎಷ್ಟು ಬೇಕೆ ಅಷ್ಟು ಕ್ಯಾಶ್ ಎಂಟ್ರಿ ಮಾಡಿದಾಗ ಒಂದಲ್ಲ, 5 ಬಾರಿ ಹಣ ಬಂದಿದ್ಯಂತೆ! ಈ ಸುದ್ದಿ ಇದೀಗ ಕಾಡ್ಗಿಚ್ಚಿನಂತೆ ಹರಡಿದೆ. ಈ ಸುದ್ದಿ ಕೇಳಿದ್ದೇ ತಡ, ಜನರೆಲ್ಲ ತಮ್ಮ ತಮ್ಮ ಕೆಲಸ ಬಿಟ್ಟು, ಕೈಯಲ್ಲಿ ಎಟಿಎಂ ಕಾರ್ಡ್ ಹಿಡಿದು, ಎಟಿಎಂ ಮುಂದೆ ಜಮಾಯಿಸಿದ್ದಾರೆ.!

ಎಟಿಎಂ ಮುಂದೆ ಕ್ಯೂ ನಿಂತ ಜನ

ಎಟಿಎಂ ಮುಂದೆ ಕ್ಯೂ ನಿಂತ ಜನ

  • Share this:
ಮಹಾರಾಷ್ಟ್ರ: ಎಟಿಎಂಗಳಲ್ಲಿ (ATM) ಎನಿ ಟೈಮ್ ಮನಿ (Any Time Money) ಬರುತ್ತೆ ಅನ್ನೋದು ಸುಳ್ಳು. ಖಾತೆಯಲ್ಲಿ (Account) ಹಣವಿದ್ದರೂ (Cash) ಎಷ್ಟೋ ಸಲ ತಾಂತ್ರಿಕ ದೋಷಗಳಿಂದ (Technical Errors) ಎಟಿಎಂ ಮಷಿನ್‌ಗಳಿಂದ (ATM Machine) ಹಣ ಬರುವುದೇ ಇಲ್ಲ. ಇನ್ನು ಹಳ್ಳಿಗಳಲ್ಲಂತೂ (Villages) ಎಟಿಎಂ ಮಷಿನ್ ಯಾವಾಗ ಸರಿಯಾಗಿ ಇರುತ್ತೆ ಎನ್ನುವುದೇ ಯಕ್ಷ ಪ್ರಶ್ನೆ. ಅಂಥದ್ರಲ್ಲಿ ಎಟಿಎಂ ಮಷಿನ್‌ನಲ್ಲಿ ಒಂದು ಸಾರಿ ಎಟಿಎಂ ಕಾರ್ಡ್ (ATM Card) ಹಾಕಿದಾಗ ಐದೈದು ಬಾರಿ ಹಣ ಬಂದ್ರೆ ಹೇಗಾಗುತ್ತೆ ಹೇಳಿ? ಹೌದು ಮಹಾರಾಷ್ಟ್ರದ (Maharashtra) ನಾಗ್ಪುರದ (Nagpur) ಖಾಸಗಿ ಬ್ಯಾಂಕ್ (Privet Bank) ಎಟಿಎಂನಲ್ಲಿ ಹೀಗೆ ಆಗಿದೆ. ಒಂದು ಬಾರಿ ಎಟಿಎಂ ಕಾರ್ಡ್ ಹಾಕಿ, ಪಾಸ್‌ವರ್ಡ್ (Password) ಹಾಕಿ, ಎಷ್ಟು ಬೇಕೆ ಅಷ್ಟು ಕ್ಯಾಶ್ ಎಂಟ್ರಿ ಮಾಡಿದಾಗ ಒಂದಲ್ಲ, 5 ಬಾರಿ ಹಣ ಬಂದಿದ್ಯಂತೆ. ಈ ಸುದ್ದಿ ಇದೀಗ ಕಾಡ್ಗಿಚ್ಚಿನಂತೆ ಹರಡಿದೆ. ಈ ಸುದ್ದಿ ಕೇಳಿದ್ದೇ ತಡ, ಜನರೆಲ್ಲ ತಮ್ಮ ತಮ್ಮ ಕೆಲಸ ಬಿಟ್ಟು, ಕೈಯಲ್ಲಿ ಎಟಿಎಂ ಕಾರ್ಡ್ ಹಿಡಿದು, ಎಟಿಎಂ ಮುಂದೆ ಜಮಾಯಿಸಿದ್ದಾರೆ.

500 ರೂಪಾಯಿ ಅಂತ ಎಂಟ್ರಿ ಮಾಡಿದ್ದಕ್ಕೆ 2500 ರೂಪಾಯಿ ಬಂತು!

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಎಟಿಎಂನಿಂದ 500 ರೂಪಾಯಿ ಡ್ರಾ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬರು 500 ರೂಪಾಯಿ ಮುಖಬೆಲೆಯ ಐದು ಕರೆನ್ಸಿ ನೋಟುಗಳನ್ನು ಪಡೆದುಕೊಂಡಿದ್ದಾರೆ. ನಾಗ್ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ಹೀಗೆ ಒಂದರ ಬದಲು 5 ಬಾರಿ ಹಣ ಬಂದಿದ್ಯಂತೆ.

ಸುದ್ದಿ ತಿಳಿದು ಎಟಿಎಂ ಮುಂದೆ ಕ್ಯೂ ನಿಂತ ಜನರು!

ಎಟಿಎಂನಲ್ಲಿ ಒಂದಕ್ಕೆ 5 ಪಟ್ಟು ಹಣ ಬರುತ್ತಿರೋ ವಿಚಾರ ಜನರಿಗೆ ಗೊತ್ತಾಗಿದೆ. ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಜನರೆಲ್ಲ ತಮ್ಮ ತಮ್ಮ ಕೆಲಸ ಬಿಟ್ಟು, ಕೈಯಲ್ಲಿ ಎಟಿಎಂ ಕಾರ್ಡ್ ಹಿಡಿದು, ಎಟಿಎಂ ಮುಂದೆ ಜಮಾಯಿಸಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಎಟಿಎಂ ಮುಂದೆ ಜನಸಾಗರವೇ ನೆರೆಯಿತು.

ಇದನ್ನೂ ಓದಿ: Currency Notes: ನಕಲಿ ನೋಟು ತಡೆಯೋಕೆ 174 ವರ್ಷಗಳ‌ ಹಿಂದೆಯೇ ಸೂಪರ್ ಐಡಿಯಾ ಮಾಡಿದ್ರಂತೆ, ಏನದು?

ಪೊಲೀಸರ ನೆರವಿನಿಂದ ಎಟಿಎಂ ಮುಚ್ಚಿದ ಬ್ಯಾಂಕ್

ಈ ವಿಚಾರ ಸುಮಾರು ಹೊತ್ತಿನ ಬಳಿಕ ಖಾಸಗಿ ಬ್ಯಾಂಕ್‌ಗೆ ತಿಳಿದಿದೆ. ಆಗ ಅಲರ್ಟ್ ಆದ ಬ್ಯಾಂಕ್ ಅಧಿಕಾರಿಗಳು, ಖಪರ್ಖೇಡ ಠಾಣೆ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಬಳಿಕ ಪೊಲೀಸರೊಂದಿಗೆ ಎಟಿಎಂ ಕೇಂದ್ರಕ್ಕೆ ಬಂದ ಬ್ಯಾಂಕ್ ಅಧಿಕಾರಿಗಳು, ಹರಸಾಹಸ ಪಟ್ಟು ಎಟಿಎಂ ಕೇಂದ್ರಕ್ಕೆ ಬಾಗಿಲು ಹಾಕಿದ್ದಾರೆ. ಅಲ್ಲಿಗೆ ಬಂದಿದ್ದ ಪೊಲೀಸರು ಗ್ರಾಹಕರಿಗೆ ಎಚ್ಚರಿಕೆ ಕೊಟ್ಟು, ಮನವೊಲಿಸಿ ಅಲ್ಲಿಂದ ಜನರನ್ನು ತೆರವು ಮಾಡಿದ್ರು.

ತಾಂತ್ರಿಕ ದೋಷದಿಂದ ಆಯ್ತು ಭಾರೀ ಎಡವಟ್ಟು

ತಾಂತ್ರಿಕ ದೋಷದಿಂದ ಎಟಿಎಂ ಹೆಚ್ಚುವರಿ ಹಣ ನೀಡುತ್ತಿದೆ ಅಂತ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. 100 ಮುಖಬೆಲೆಯ ನೋಟುಗಳನ್ನು ವಿತರಿಸಲು ಎಟಿಎಂ ಟ್ರೇನಲ್ಲಿ 500 ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ತಪ್ಪಾಗಿ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಸಂಬಂಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Jaswiendre Singh: ಇವರ್ಯಾರು ಗುರು? ನಷ್ಟವಾದ್ರೂ ಪರ್ವಾಗಿಲ್ಲಾ ಅಂತ ಕಡಿಮೆ ಬೆಲೆಗೆ ಇಂಧನ ಮಾರಾಟ ಮಾಡ್ತಾರಂತೆ!

ಈ ಬಗ್ಗೆ ದೂರು ದಾಖಲಿಸದ ಬ್ಯಾಂಕ್ ಅಧಿಕಾರಿಗಳು

ಇನ್ನು ಕೇವಲ ಒಬ್ಬ ಗ್ರಾಹಕ ಅಲ್ಲ, ಅನೇಕ ಗ್ರಾಹಕರು ಈ ರೀತಿ ಒಂದಕ್ಕೆ 5 ಪಟ್ಟು ಹಣ ಪಡೆದಿದ್ದಾರೆ ಎನ್ನಲಾಗಿದೆ. ಬಳಿಕ ಬ್ಯಾಂಕ್‌ನವರೇ ಎಟಿಎಂ ಕೇಂದ್ರವನ್ನು ಕ್ಲೋಸ್ ಮಾಡಿದ್ದಾರೆ. ಇನ್ನು ಇದುವರೆಗೂ ಖಾಸಗಿ ಬ್ಯಾಂಕ್ ಸಿಬ್ಬಂದಿ ಈ ಬಗ್ಗೆ ಖಪರ್ಖೇಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಅಂತ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Published by:Annappa Achari
First published: