Afghanistan Crisis: ನಮ್ಮ ಕತೆ ಏನಾದ್ರೂ ಆಗ್ಲಿ, ಮಕ್ಕಳಾದರೂ ಬದುಕಲಿ ಎಂದು ತಂತಿ ಬೇಲಿಯಾಚೆ ಮಕ್ಕಳನ್ನು ಎಸೆಯುತ್ತಿದ್ದಾರೆ ಅಫ್ಘನ್ ಜನ

Life in Afghanistan: ಅನೇಕರು ತಾವು ಬರಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಕನಿಷ್ಟ ತಮ್ಮ ಮಕ್ಕಳಾದರೂ ಬದುಕುಳಿಯಲಿ.. ಎಲ್ಲೋ ದೂರದಲ್ಲೊಂದು ನೆಮ್ಮದಿಯ ಭವಿಷ್ಯ ಅವರಿಗೆ ಸಿಗಲಿ ಎನ್ನುವ ಆಸೆಯಿಂದ ಅಪಾಯ ಎಂದು ಅರಿತರೂ ಹೀಗೆ ಒಬ್ಬರಿಂದೊಬ್ಬರಿಗೆ ದಾಟಿಸುವ ಸಾಹಸದ ಕೆಲಸಕ್ಕೆ ಕೈಹಾಕಿದ್ದಾರೆ.

ಅಫ್ಘಾನಿಸ್ತಾನದ ಬಾಲಕಿ

ಅಫ್ಘಾನಿಸ್ತಾನದ ಬಾಲಕಿ

  • Share this:


Afghanistan: ಅಫ್ಘಾನಿಸ್ತಾನದ ಜನರ ನರಕಯಾತನೆ ಇನ್ನೂ ಮುಂದಿವರೆದೇ ಇದೆ. ಪ್ರತಿದಿನ ಒಂದಿಲ್ಲೊಂದು ಕರುಣಾಜನಕ ಸನ್ನಿವೇಶ ಅಫ್ಘಾನಿಸ್ತಾನದಿಂದ ವರದಿಯಾಗುತ್ತಲೇ ಇದೆ. ಅಫ್ಘಾನಿಸ್ತಾನದ ವಿಮಾನ ನಿಲ್ದಾಣಗಳಲ್ಲಿ ಜೀವದ ಹಂಗು ತೊರೆದು ಎಷ್ಟೊಂದು ಜನ ದೇಶ ಬಿಟ್ಟು ಓಡಿ ಹೋಗಲು ಹರಸಾಹಸ ಪಡುತ್ತಿರುವುದನ್ನು ನೋಡಿಯೇ ಇದ್ದೇವೆ. ಆದರೆ ಅಲ್ಲಿನ ಹೆಂಗಸರು ಮತ್ತು ಮಕ್ಕಳ ಪಾಡು ಇನ್ನೂ ಶೋಚನೀಯವಾಗಿದೆ. ಕಾಬುಲ್ ಏರ್ಪೋರ್ಟ್​ನ (Kabul) ಆ ಗಲಾಟೆ ಗದ್ದಲದಲ್ಲಿ ಯಾವುದೇ ಮಹಿಳೆ ಕಾಣದೇ ಇದ್ದಿದ್ದು ಈಗ ಸಾಕಷ್ಟು ಚರ್ಚೆಯಲ್ಲಿರುವ ವಿಚಾರ. ಆದರೆ ಅದಕ್ಕಿಂತ ಹೆಚ್ಚಾಗಿ ಎದುರಿಗೆ ಇರುವ ಅಷ್ಟೆತ್ತರದ ತಂತಿ ಬೇಲಿಯನ್ನೂ ಲೆಕ್ಕಿಸದೇ ಬದುಕಿದರೆ ಈ ಕಂದನಾದರೂ ಬದುಕಲಿ ಎನ್ನುವ ಆತುರದಲ್ಲಿ ಪುಟ್ಟ ಮಕ್ಕಳನ್ನು ಬ್ರಿಟಿಷ್ ಸೈನಿಕರು ಇರುವ ಕಡೆಗೆ ದಾಟಿಸುತ್ತಿದ್ದಾರೆ. ಈ ವಿಡಿಯೋ ತುಣುಕುಗಳು ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಮಗುವನ್ನು ಕರೆದುಕೊಂಡಿದ್ದೇವೆ ಎಂದರೆ ಆ ಮಗುವಿನ ಕುಟುಂಬ ಕೂಡಾ ಈಗಾಗಲೇ ಸುರಕ್ಷಿತ ಸ್ಥಳ ತಲುಪಿದ್ದು ಮಗು ಅವರನ್ನು ಸೇರಲಿದೆ ಎಂದಿದ್ದಾರೆ ಬ್ರಿಟಿಷ್ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೆಸ್.

ಮಕ್ಕಳನ್ನು ಕರೆದುಕೊಳ್ಳುವುದು ಬಹಳ ಕಷ್ಟದ ಕೆಲಸ. ಅದರಲ್ಲೂ ತಂದೆ ತಾಯಿ ಅಥವಾ ಯಾವುದೇ ಸಂಬಂಧಿಕರು ಇಲ್ಲದೇ ಇರುವಾಗ ಕೇವಲ ಮಗುವನ್ನು ಮಾತ್ರ ನಾವು ಎಂದೂ ರಕ್ಷಣೆy ನೆಪದಲ್ಲಿ ಕರೆದುಕೊಂಡಿಲ್ಲ. ಅಷ್ಟು ದೊಡ್ಡ ಜನರ ಗುಂಪಿನ ನಡುವಿನಿಂದ ಮಕ್ಕಳನ್ನು ಕರೆತಂದು ಅವರ ಕುಟುಂಬದೊಂದಿಗೆ ಸೇರಿಸುವುದು ಬಹಳ ಕಷ್ಟದ ಕೆಲಸ ಎಂದಿದ್ದಾರೆ ವ್ಯಾಲೆಸ್.

ಹೆಣ್ಣುಮಗುವೊಂದನ್ನು ಒಬ್ಬರ ಕೈಯಿಂದ ಒಬ್ಬರಿಗೆ ದಾಟಿಸಿ ಮುಳ್ಳುತಂತಿಯ ಬೇಲಿಯ ಆಚೆ ಇರುವ ಬ್ರಿಟಿಷ್ ಸೈನಿಕರ ಕೈಗೆ ನೀಡುವ ವಿಡಿಯೋ ಕುರಿತು ಅವರು ಹೇಳಿದ್ದಾರೆ. ಅನೇಕರು ತಾವು ಬರಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಕನಿಷ್ಟ ತಮ್ಮ ಮಕ್ಕಳಾದರೂ ಬದುಕುಳಿಯಲಿ.. ಎಲ್ಲೋ ದೂರದಲ್ಲೊಂದು ನೆಮ್ಮದಿಯ ಭವಿಷ್ಯ ಅವರಿಗೆ ಸಿಗಲಿ ಎನ್ನುವ ಆಸೆಯಿಂದ ಅಪಾಯ ಎಂದು ಅರಿತರೂ ಹೀಗೆ ಒಬ್ಬರಿಂದೊಬ್ಬರಿಗೆ ದಾಟಿಸುವ ಸಾಹಸದ ಕೆಲಸಕ್ಕೆ ಕೈಹಾಕಿದ್ದಾರೆ. ಇದು ಬಹಳ ಅಪಾಯಕರ ಎಂದು ಸೈನಿಕರು ಎಷ್ಟೇ ತಿಳಿಸಿ ಹೇಳುವ ಪ್ರಯತ್ನ ಮಾಡಿದರೂ ಅವರು ಕೇಳುತ್ತಿಲ್ಲ.

ಇದನ್ನೂ ಓದಿ: Explained: ಷರಿಯಾ ಕಾನೂನು ಎಂದರೇನು? ಅಫ್ಘಾನಿಸ್ತಾನದ ಮಹಿಳೆಯರಿಗೆ ವಿಧಿಸಿರುವ ಹೊಸಾ ನಿಯಮಗಳೇನು?

ಹಾಗೆಂದು ನಾವು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕರೆದುಕೊಳ್ಳಲು ಸಾಧ್ಯವಿಲ್ಲ ಎಂದು ಸೈನ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಜಾರಿಯಾಗಿರೋದ್ರಿಂದ ಮಹಿಳೆಯರು ಜೀವಭಯದಿಂದ ಇರುವ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಪುಟ್ಟ ಮಕ್ಕಳಿಗೂ ನೂರೆಂಟು ನಿಯಮಗಳು, ಶಿಕ್ಷಣದ ಹಕ್ಕುಗಳಿಂದ ವಂಚನೆ ಮುಂತಾದ ನಾನಾ ಸಮಸ್ಯೆಗಳನ್ನು ಅಲ್ಲಿನ ಜನ ಎದುರಿಸುತ್ತಿರುವ ಬಗ್ಗೆ ವರದಿಯಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: