• Home
  • »
  • News
  • »
  • national-international
  • »
  • Wow! ವಿಶ್ವವಿದ್ಯಾಲಯದಲ್ಲಿ ಪ್ಯೂನ್ ಆಗಿದ್ದ ವ್ಯಕ್ತಿ ಅಲ್ಲೇ ಪ್ರೊಫೆಸರ್ ಆದ ಕಥೆ!

Wow! ವಿಶ್ವವಿದ್ಯಾಲಯದಲ್ಲಿ ಪ್ಯೂನ್ ಆಗಿದ್ದ ವ್ಯಕ್ತಿ ಅಲ್ಲೇ ಪ್ರೊಫೆಸರ್ ಆದ ಕಥೆ!

ಸಾಧನೆ ಮಾಡಿದ ಕಮಲ್

ಸಾಧನೆ ಮಾಡಿದ ಕಮಲ್

ವಿಶ್ವವಿದ್ಯಾಲಯವೊಂದರಲ್ಲಿ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಪ್ರಾಧ್ಯಾಪಕರಾಗಿ ನೇಮಕಗೊಂಡ ಘಟನೆ ನಡೆದಿದೆ. ನಿಜಕ್ಕೂ ಇದೇ ಅಲ್ಲವೇ ಸಕ್ಸಸ್ ಅಂದ್ರೆ?

  • Share this:

ಪಾಟ್ನಾ: ಎಲ್ಲಿ ಇಚ್ಛೆ ಇರುತ್ತದೋ ಅಲ್ಲಿ ಒಂದು ದಾರಿ ಇರುತ್ತದೆ ಅನ್ನೋ ಮಾತು ಮತ್ತೊಮ್ಮೆ ನಿಜವಾಗಿದೆ.  ವಿಶ್ವವಿದ್ಯಾಲಯವೊಂದರಲ್ಲಿ ನಿನ್ನೆಯವರೆಗೆ ಪ್ಯೂನ್ ಮತ್ತು ರಾತ್ರಿ ಕಾವಲುಗಾರರಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಅದೇ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗುವ ಮೂಲಕ ಹಳೆಯ ಗಾದೆಯನ್ನು ಮತ್ತೊಮ್ಮೆ ನಿಜವೆಂದು ಸಾಬೀತುಪಡಿಸಿದ್ದಾರೆ. ಇದು ಕಟ್ಟುಕಥೆಯಲ್ಲ, ನಿಜಕ್ಕೂ ನಡೆದ (Positive Story) ಘಟನೆ. ಹೌದು, ಹೀಗೆ ವಿಶ್ವವಿದ್ಯಾಲಯವೊಂದರಲ್ಲಿ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಪ್ರಾಧ್ಯಾಪಕರಾಗಿ ನೇಮಕಗೊಂಡ (Peon Becomes Professor) ಘಟನೆ ಬಿಹಾರದಲ್ಲಿ (Bihar) ನಡೆದಿದೆ.


42 ವರ್ಷದ ಕಮಲ್ ಕಿಶೋರ್ ಮಂಡಲ್ ಎಂಬ ವ್ಯಕ್ತಿ ಭಾಗಲ್ಪುರ್ ಪಟ್ಟಣದ ಮುಂಡಿಚಕ್ ಪ್ರದೇಶದ ನಿವಾಸಿಯಾಗಿದ್ದು, 2003 ರಲ್ಲಿ ಮುಂಗೇರ್‌ನಲ್ಲಿರುವ ಆರ್‌ಡಿ ಮತ್ತು ಡಿಜೆ ಕಾಲೇಜಿನಲ್ಲಿ 23 ನೇ ವಯಸ್ಸಿನಲ್ಲಿ ರಾತ್ರಿ ಕಾವಲುಗಾರನಾಗಿ ನೇಮಕಗೊಂಡಿದ್ದರು. ಆಗ ಅವರು ಪೊಲಿಟಿಕಲ್ ಸೈನ್ಸ್​ನಲ್ಲಿ ಪದವಿ ಪಡೆದಿದ್ದರೂ ಸಹ ಹಣದ ತುರ್ತು ಅವಶ್ಯಕತೆ ಇದ್ದ ಕಾರಣ ರಾತ್ರಿ ಕಾವಲುಗಾರನಾಗಿ ಕೆಲಸಕ್ಕೆ ಸೇರಿದ್ದರು.


ಜೀವನವೇ ಬದಲಾಗಿದ್ದು ಹೀಗೆ!
ಕರ್ತವ್ಯಕ್ಕೆ ಸೇರಿದ ಕೇವಲ ಒಂದು ತಿಂಗಳ ನಂತರ ಅವರನ್ನು ತಿಲ್ಕಾ ಮಾಂಝಿ ಭಾಗಲ್ಪುರ್ ವಿಶ್ವವಿದ್ಯಾಲಯದ (TMBU) ಅಂಬೇಡ್ಕರ್ ಚಿಂತನೆ ಮತ್ತು ಸಮಾಜಕಾರ್ಯ ವಿಭಾಗಕ್ಕೆ (ಸ್ನಾತಕೋತ್ತರ ಪದವೀಧರರು) ಡೆಪ್ಯೂಟೇಶನ್ ಮೇಲೆ ಕಳುಹಿಸಲಾಗಿತ್ತು. ಅದರ ನಂತರ ಅವರ ಜೀವನವೇ ಬದಲಾಯಿತು.


ವಿದ್ಯಾರ್ಥಿಗಳ ಜೊತೆಗೂಡಿ ಅಧ್ಯಯನ
2008 ರಲ್ಲಿ ಅವರ ಹುದ್ದೆಯನ್ನು ಪ್ಯೂನ್ ಆಗಿ ಬದಲಾಯಿಸಲಾಯಿತು. ವಿಶ್ವವಿದ್ಯಾನಿಲಯದ ವಾತಾವರಣ ವಿದ್ಯಾರ್ಥಿಗಳ ಜೊತೆಗೂಡಿ ಮತ್ತಷ್ಟು ಅಧ್ಯಯನ ಮಾಡಲು ಪ್ರೋತ್ಸಾಹಿಸಿತು. ಹೆಚ್ಚಿನ ಅಧ್ಯಯನಕ್ಕೆ ನನಗೆ ಅನುಮತಿ ನೀಡುವಂತೆ ಇಲಾಖೆಗೆ ವಿನಂತಿಸಿದರು. ಅವರ ಮನವಿಗೆ    ಶೀಘ್ರದಲ್ಲೇ ನುಮತಿಯೂ ಸಿಕ್ಕಿ ಅಧ್ಯಯನವನ್ನೂ ಪ್ರಾರಂಭಿಸಿದರು. 2009 ರಲ್ಲಿ ಅಂಬೇಡ್ಕರ್ ಚಿಂತನೆ ಮತ್ತು ಸಮಾಜ ಕಾರ್ಯದಲ್ಲಿ ಎಂಎ ಪದವಿಯನ್ನೂ ಸಹ ಅವರು ಗಳಿಸಿದರು.


ಇದನ್ನೂ ಓದಿ: Karnataka Hijab Ban: ಭಿನ್ನ ತೀರ್ಪು, ಶಾಲಾ- ಕಾಲೇಜುಗಳಲ್ಲಿ ಮುಂದುವರೆದ ನಿರ್ಬಂಧ: ಸುಪ್ರೀಂ ಕೊಟ್ಟ ತೀರ್ಪಿನ ಸಂಪೂರ್ಣ ವಿವರ


ಪಿಎಚ್‌ಡಿ ಮಾಡಲು ಸಿಕ್ತು ಅವಕಾಶ!
2009 ರಲ್ಲಿ ಅವರು ಪಿಎಚ್‌ಡಿ ಮಾಡಲು ಅನುಮತಿ ಕೋರಿದರು. ಆದರೆ ಇಲಾಖೆಯು ಮೂರು ವರ್ಷಗಳ ನಂತರ 2012 ರಲ್ಲಿ ತನ್ನ ಒಪ್ಪಿಗೆಯನ್ನು ನೀಡಿತು. ಅವರು 2013 ರಲ್ಲಿ ಪಿಎಚ್‌ಡಿಗೆ ದಾಖಲಾದರು. 2017 ರಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿದರು. ಅವರಿಗೆ 2019 ರಲ್ಲಿ ಪಿಎಚ್‌ಡಿ ಪದವಿಯನ್ನು ನೀಡಲಾಯಿತು. ನಡುವೆ, ಅವರು ಲೆಕ್ಚರ್‌ಶಿಪ್‌ಗಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಸಹ ಬರೆದು ಪ್ರಧ್ಯಾಪಕ ಹುದ್ದೆಗಾಗಿ ಕಾಯತೊಡಗಿದರು.


ಇದನ್ನೂ ಓದಿ: Ravana Pooja: ಈ ಗ್ರಾಮಸ್ಥರಿಗೆ ರಾವಣನೇ ಜ್ಞಾನಿ! ವಿಶೇಷ ಪೂಜೆ ಸಲ್ಲಿಸಿ, ಮೌನ ಪ್ರಾರ್ಥನೆ


ಬಿಹಾರ ಸ್ಟೇಟ್ ಯೂನಿವರ್ಸಿಟಿ ಸರ್ವಿಸ್ ಕಮಿಷನ್ (BSUSC) TMBU ನಲ್ಲಿ ಸಂಬಂಧಿಸಿದ ವಿಭಾಗದಲ್ಲಿ ನಾಲ್ಕು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಖಾಲಿ ಹುದ್ದೆಗಳನ್ನು ಪ್ರಕಟಿಸಿದಾಗ ಅವರ ಸುದೀರ್ಘ ಕಾಯುವಿಕೆ ಅಂತಿಮವಾಗಿ 2020 ರಲ್ಲಿ ಕೊನೆಗೊಂಡಿತು. ಈ ಹುದ್ದೆಯ ಸಂದರ್ಶನಕ್ಕೆ ಹನ್ನೆರಡು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗಿತ್ತು.  ಆದರೆ ಮಂಡಲ್ ಅವರು ಪ್ಯೂನ್ ಆಗಿ ಸೇವೆ ಸಲ್ಲಿಸಿದ ಟಿಎಂಬಿಯುನ ಅದೇ ಅಂಬೇಡ್ಕರ್ ಚಿಂತನೆ ಮತ್ತು ಸಮಾಜಕಾರ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಗೊಳ್ಳುವ ಅದೃಷ್ಟವನ್ನು ಪಡೆದರು.  ಆಯ್ಕೆಯ ಫಲಿತಾಂಶವನ್ನು ಮೇ 19, 2022 ರಂದು ಪ್ರಕಟಿಸಲಾಯಿರು. ಆಗಲೇ ನೋಡಿ ಮೊದಲು ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲೇ ಸಹಾಯಕ ಪ್ರಾಧ್ಯಾಪಕ ಆಗುವ ಅವಕಾಶವನ್ನು ಕಮಲ್ ಕಿಶೋರ್ ಮಂಡಲ್ ಅವರು ಪಡೆದುಕೊಂಡರು. ನಿಜಕ್ಕೂ ಇದೇ ಅಲ್ಲವೇ ಸಕ್ಸಸ್ ಅಂದ್ರೆ?

Published by:ಗುರುಗಣೇಶ ಡಬ್ಗುಳಿ
First published: