Letter To Modi: ಮ್ಯಾಗಿಯ ಬೆಲೆ ಜಾಸ್ತಿಯಾಗಿದೆ! ಮೋದಿಗೆ ಪತ್ರ ಬರೆದ 6 ವರ್ಷದ ಬಾಲೆ

Letter To Modi: ಪ್ರಧಾನಿ ನರೇಂದ್ರ ಮೋದಿಗೆಯವರಿಗೆ ಪುಟ್ಟ ಬಾಲೆಯೊಬ್ಬಳು ಪತ್ರ ಬರೆದಿದ್ದಾಳೆ. ಈ ಮೂಲಕ ತನ್ನ ಸಮಸ್ಯೆಯನ್ನೂ ತಿಳಿಸಿದ್ದಾಳೆ. ಸಮಸ್ಯೆ ಏನು ಅಂತೀರಾ? ಮ್ಯಾಗಿಗೆ ಬೆಲೆ ಜಾಸ್ತಿ ಆಗಿದ್ಯಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೆಹಲಿ(ಆ.01): ಆರು ವರ್ಷದ ಪುಟ್ಟ ಬಾಲಕಿ ಪ್ರಧಾನಿ ಮೋದಿಗೆ (PM Modi) ಪತ್ರ  (Letter) ಬರೆದಿದ್ದಾಳೆ. ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು ಬೆಲೆ ಹೆಚ್ಚಳದಿಂದಾಗಿ ತಾನು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿದ್ದಾಳೆ. ಉತ್ತರ ಪ್ರದೇಶದ (Uttara Pradesh) ಛಿಬ್ರಮಾವು ಪ್ರದೇಶದ ಕನ್ನೌಜ್ ಜಿಲ್ಲೆಯ ಕೃತಿ ದುಬೆ ಎನ್ನುವ ಬಾಲಕಿ ಪತ್ರ ಬರೆದಿದ್ದಾಳೆ. ನನ್ನ ಹೆಸರು ಕೃತಿ ದುಬೆ (Kriti Dubey). ನಾನು 1ನೇ ತರಗತಿಯಲ್ಲಿ ಕಲಿಯುತ್ತೇನೆ. ಮೋದೀಜಿ ನೀವು ಅತಿ ಹೆಚ್ಚು ಬೆಲೆ ಏರಿಕೆ ಮಾಡಿದ್ದೀರಿ. ನನ್ನ ಪೆನ್ಸಿಲ್ (Pencil) ಹಾಗೂ ರಬ್ಬರ್ ಕೂಡಾ ತುಂಬಾ ದುಬಾರಿಯಾಗಿದೆ. ಹಾಗೆಯೇ ಮ್ಯಾಗಿಯ (Maggie) ಬೆಲೆಯೂ ಏರಿಕೆಯಾಗಿದೆ. ಈಗ ನಾನು ಪೆನ್ಸಿಲ್ ಕೇಳಿದರೆ ನನ್ನಮ್ಮ ಹೊಡೆಯುತ್ತಾಳೆ. ನಾನೇನು ಮಾಡಲಿ ? ಬೇರೆ ಮಕ್ಕಳು ನನ್ನ ಪೆನ್ಸಿಲ್ ಕದಿಯುತ್ತಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಬಾಲಕಿಯ ತಂದೆ ವಿಶಾಲ್ ದುಬೆ ಅಡ್ವೊಕೇಟ್ ಆಗಿದ್ದಾರೆ. ಮಗಳ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದು ನನ್ನ ಮಗಳ ಮನ್​ ಕೀ ಬಾತ್. ಶಾಲೆಯಲ್ಲಿ ಪೆನ್ಸಿಲ್ ಕಳೆದು ಬಂದಿದ್ದಕ್ಕೆ ಅವಳ ಅಮ್ಮ ಬೈಯ್ದಾಗ ನನ್ನ ಮಗಳು ಬೇಸರಗೊಂಡಳು ಎಂದಿದ್ದಾರೆ.

ಮೋದಿಗೆ ಪತ್ರ ತಲುಪಿಸುವ ಪ್ರಯತ್ನ

ಛಿಬ್ರಮಾವು ಎಸ್​ ಡಿ ಎಂ ಅಶೋಕ್ ಕುಮಾರ್ ಅವರು ಸೋಷಿಯಲ್ ಮೀಡಿಯಾ ಮೂಲಕ ಪುಟ್ಟ ಬಾಲಕಿಯ ಪತ್ರದ ಬಗ್ಗೆ ತಿಳಿದುಕೊಂಡಿದ್ದಾಗಿ ಹೇಳಿದ್ದಾರೆ. ನಾನು ಬಾಲಕಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸಿದ್ಧಳಿದ್ದೇನೆ. ಹಾಗೆಯೇ ಇದು ಪ್ರಧಾನಿಗೆ ತಲುಪಿಸಲು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

the husband gives divorce to his wife who has been doing maggie for daily 3 times ach
ಮ್ಯಾಗಿ ಸಂಗ್ರಹ ಚಿತ್ರ


ಆಸ್ಪತ್ರೆಗಾಗಿ ಮೋದಿಗೆ ಪತ್ರ

ಜಿಲ್ಲೆಗೆ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (multispecialty hospital) ಬೇಕು ಎಂಬ ಕೂಗು ಜೋರಾಗುತ್ತಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಜಿಲ್ಲಾಕೇಂದ್ರ ಕಾರವಾರದಲ್ಲಿ (Karwar) ವಿವಿಧ ಸಂಘಟನೆಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು (Students) ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಕಾರವಾರದಲ್ಲಿ ರಕ್ತದಿಂದ ಪ್ರಧಾನಿ ಮೋದಿಗೆ (PM Narendra Modi) ಪತ್ರ (Letter) ಬರೆದಿದ್ದಾರೆ. ಶೀಘ್ರದಲ್ಲಿಯೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವಂತೆ ಆಗ್ರಹಿಸಿದರು.

ಇದನ್ನೂ ಓದಿ: SSC Scam: ಡ್ಯಾಮೇಜ್ ಕಂಟ್ರೋಲ್​​ಗೆ ಇಳಿದ ದೀದಿ; ಸಂಪುಟಕ್ಕೆ ಸರ್ಜರಿ, ಹೊಸ ಮುಖಗಳಿಗೆ ಮಣೆ

ಕಾರವಾರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಸೇರಿದ ನೂರಾರು ಪ್ರತಿಭಟನಾಗಾರರು ತಮ್ಮ ದೇಹದ ರಕ್ತ ತೆಗೆದು ಪತ್ರದಲ್ಲಿ ವೀ ನೀಡ್ ಎಮರ್ಜನ್ಸಿ ಹಾಸ್ಪೆಟಲ್ (We Need Emergency Hospital), ನಮಗೆ ಬೇಕು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಪ್ರಧಾನಿಗೆ ಪತ್ರ ಬರೆದು ಕಳುಹಿಸಿದರು. ಆಸ್ಪತ್ರೆ ಶೀಘ್ರದಲ್ಲಿ ಆಗದಿದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದರು.

ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಬೇಕು ಎಂದು ಆಗ್ರಹಿಸಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳು ಗೋಚರವಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಇವತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ವಿವಿಧ ಸಂಘಟನೆ ಗಳಿಂದ ರಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಆಸ್ಪತ್ರೆ ಬೇಕು ಎಂದು ಆಗ್ರಹಿಸಲಾಯಿತು.
Published by:Divya D
First published: