Stone Pelting: ರೈಲಿನಲ್ಲಿ ಪ್ರಯಾಣಿಸುವಾಗ ಕಲ್ಲೆಸೆತ; ಒಂದೇ ವಾರದಲ್ಲಿ ಬರೋಬ್ಬರಿ 20 ಕೇಸ್!

ಚಲಿಸುತ್ತಿರುವ ರೈಲಿನ ಮೇಲೆ ಕಲ್ಲು ತೂರಾಟ

ಚಲಿಸುತ್ತಿರುವ ರೈಲಿನ ಮೇಲೆ ಕಲ್ಲು ತೂರಾಟ

ಕಲ್ಲೆಸೆತದಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಕಿಟಕಿ ಪಕ್ಕ ಕೂತ ಹಲವರಿಗೆ ಗಾಯಗಳಾಗಿದೆ. ಕೆಲವು ಸಂದರ್ಭಗಳಲ್ಲಿ ಗಾರ್ಡ್​​ಗಳೇ ಗಾಯಗೊಂಡವರಿಗೆ ಚಿಕಿತ್ಸೆ ಮಾಡಿದ್ದಾರೆ. ರೈಲು ಸಿಟಿ ಒಳಗೆ ಎಂಟ್ರಿ ಹಾಗೂ ಹೊರಗಡೆ ಹೋಗೋವಾಗ ಈ ಅಟ್ಯಾಕ್ ನಡೆಯುತ್ತದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ನೀವು ರೈಲಿನಲ್ಲಿ (Indian Railways) ಪ್ರಯಾಣಿಸುವಾಗ (Passengers) ಸ್ವಲ್ಪ ಹುಷಾರಾಗಿರಿ. ಯಾಕೆಂದರೆ ನೀವು ಊರು ಸೇರುವ ಮುನ್ನ ಆಸ್ಪತ್ರೆಗೆ ಸೇರಬಹುದು. ಹಾಗಾಂತ‌ ರೈಲಿಗೆ ಏನೂ ಆಗಲ್ಲ, ಆದರೂ ನಿಮ್ಮ ಬಾಡಿ ಡ್ಯಾಮೇಜ್ ಆಗುತ್ತೆ. ಹೌದು, ರೈಲಿನಲ್ಲಿ ಪ್ರಯಾಣಸುವ ಪ್ರಯಾಣಿಕರಿಗೆ ಕಲ್ಲೆಸೆಯುವ ಪ್ರಕರಣಗಳು (Stone Pelting) ದೇಶದಲ್ಲಿ ಇತ್ತೀಚೆಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದು ಒಂದೇ ವಾರದಲ್ಲಿ 20 ಪ್ರಕರಣಗಳು ದಾಖಲಾಗಿದೆ. ಹಾಡುಹಗಲೇ ರೈಲ್ವೇ ಪ್ರಯಾಣಿಕರ ಮೇಲೆ ಅಟ್ಯಾಕ್ ನಡೆಯುತ್ತಿದೆ. ಪ್ರಧಾನಿ ಮೋದಿ (PM Modi) ಕಳೆದ ಒಂದು ತಿಂಗಳ ಹಿಂದೆ ಉದ್ಘಾಟನೆ ಮಾಡಿರುವ ವಂದೇ ಮಾತರಂ ಎಕ್ಸ್ ಪ್ರೆಸ್ (Vande Bharat Express), ಪ್ರಶಾಂತಿ ಎಕ್ಸ್ ಪ್ರೆಸ್ (Prashanti Express), ಡಬ್ಬಲ್ ಡೆಕ್ಕರ್ (Double Decker Train ) ಸೇರಿದಂತೆ ಇತರ ರೈಲುಗಳಿಗೂ ಕಿಡಿಗೇಡಿಗಳು ಕಲ್ಲೆಸೆಯುದ್ದಾರೆ.


ರೈಲು ಸಿಟಿ ಒಳಗೆ ಎಂಟ್ರಿ ಹಾಗೂ ಹೊರಗಡೆ ಹೋಗೋವಾಗ ಕಲ್ಲೆಸೆತ


ಈ ಕಲ್ಲೆಸೆತದಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರಿಗೆ ಗಾಯಗಳಾಗಿದೆ. ಕಿಟಕಿ ಪಕ್ಕ ಕೂತವರಿಗಂತೂ ಏಟು ಪಕ್ಕಾ! ಕೆಲವು ಸಂದರ್ಭಗಳಲ್ಲಿ ಗಾರ್ಡ್​​ಗಳೇ ಏಟಾದವರಿಗೆ ಚಿಕಿತ್ಸೆ ಮಾಡಿದ್ದಾರೆ. ರೈಲು ಸಿಟಿ ಒಳಗೆ ಎಂಟ್ರಿ ಹಾಗೂ ಹೊರಗಡೆ ಹೋಗೋವಾಗ ಈ ಅಟ್ಯಾಕ್ ನಡೆಯುತ್ತದೆ.




ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಕೆ.ಆರ್.ಪುರ. ಮಾರ್ಗ, ಬೆಂಗಳೂರಿನಿಂದ ನಾಯಂಡಹಳ್ಳಿ ತೆರಳೋ ಮಾರ್ಗ, ಯಲಹಂಕ ಚೆನ್ನಸಂದ್ರ ನಡುವಿನ ಮಾರ್ಗ, ಯಶವಂತಪುರ ಕೊಡಿಗೆಹಳ್ಳಿ, ಯಲಹಂಕ ಈ ಮಾರ್ಗ ಗಳಲ್ಲಿ ಏಟು ಬೀಳುತ್ತಿದೆ. ಅಪರಿಚಿತರು ಮೋಜಿಗಾಗಿ ಈ ಕೃತ್ಯ ನಡೆಸುತ್ತಿದ್ದಾರೆ.


ಚಲಿಸುತ್ತಿರುವ ರೈಲಿನ ಮೇಲೆ ಕಲ್ಲು ತೂರಾಟ


ಇದನ್ನೂ ಓದಿ: BDA, Lokayuktha Ride: ಮತ್ತೆ ಅಖಾಡಕ್ಕೆ ಲೋಕಾಯುಕ್ತ ಎಂಟ್ರಿ; BDA ಕಚೇರಿ ಮೇಲೆ ದಾಳಿ, ಸತತ 3 ಗಂಟೆಗಳಿಂದ ದಾಖಲೆ ಪತ್ರ ಪರಿಶೀಲನೆ!


ಟ್ರ್ಯಾಕ್ ಮೇಲೆ ಪೊಲೀಸರ ನಿಗಾ!


ಅಪರಿಚಿತರ ಮೋಜಿನ ಈ ಆಟ ಪೊಲೀಸರಿಗೆ ಸಂಕಟ ತಂದೊಡ್ಡಿದೆ. ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿ ನಿಯೋಜನೆ ಮಾಡಲಾಗಿದೆ. ಪೊಲೀಸರು ಟ್ರಾಕ್ ಮೇಲೆ ದಿನನಿತ್ಯ. ಮೂರು ಕಿಮೀ ನಡೆದು ನಿಗಾ ಇಡುತ್ತಿದ್ದಾರೆ.


ರೈಲುಗಳ ಮೇಲೆ ಕಲ್ಲು ತೂರಾಟದ ಘಟನೆಗಳನ್ನು ತಡೆಗಟ್ಟಲು ಈಗಾಗಲೇ ಗುರುತಿಸಲಾಗಿರುವ ಸ್ಥಳಗಳ ಮೇಲೆ ನಿಗಾ ವಹಿಸಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗುವುದು. ಸಾಮಾನ್ಯವಾಗಿ ಕಲ್ಲು ತೂರಾಟದ ಘಟನೆಗಳು ಸಂಜೆ 6 ರಾತ್ರಿ 11 ಗಂಟೆ ವೇಳೆಯಲ್ಲಿ ನಡೆಯುವುದು ಕಂಡುಬಂದಿದೆ.


ರೈಲ್ವೆ ಪೊಲೀಸ್


ಇದನ್ನೂ ಓದಿ: Siddaramaiah: 4 ತಿಂಗಳ ಕೂಸಿಗೆ ತನ್ನ ಹೆಸರಿಟ್ಟ ಸಿದ್ದರಾಮಯ್ಯ; ಸಿಹಿ ತಿನ್ನಿಸಿ ಶುಭ ಕೋರಿದ ಮಾಜಿ ಸಿಎಂ ಸಿದ್ದು


ರೈಲಿನ ಮೇಲೆ ಕಲ್ಲು ತೂರಾಟದಂತಹ ಕೃತ್ಯಗಳ ಬಗ್ಗೆ ಅರಿವು ಮೂಡಿಸಲು ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಕೂಡ ಕೆಲವು ತಂಡಗಳನ್ನು ನಿಯೋಜಿಸಲು ಅಧಿಕಾರಿಗಲು ಚಿಂತನೆ ನಡೆಸಿದ್ದಾರೆ.


ಬೇಸಿಗೆ ಆರಂಭಕ್ಕೂ ಮುನ್ನವೇ ಬತ್ತಿ ಹೋಗುತ್ತಿವೆ ಬೋರ್​ವೆಲ್


ಬೇಸಿಗೆ ಇನ್ನೂ ಆರಂಭವಾಗಿಲ್ಲ. ಆಗಲೇ ಬೆಂಗಳೂರಿನಲ್ಲಿ ಬೋರ್ ವೆಲ್ ಗಳು ಬತ್ತಿ ಹೋಗುತ್ತಿವೆ.‌ ಬೇಸಿಗೆ ಮುನ್ನವೇ ಬೆಂಗಳೂರಿನಲ್ಲಿ ಬತ್ತಿವೆ 644 ಬೋರ್ ವೆಲ್. ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳು ಸೇರಿದಂತೆ ಕಾವೇರಿ ಸಂಪರ್ಕ ಇಲ್ಲದ ಪ್ರದೇಶದಲ್ಲಿ ಕೊಳವೆಬಾವಿಗಳೇ ಆಧಾರವಾಗಿವೆ. ಇಂಥ ಸ್ಥಿತಿಯಲ್ಲಿ 644 ಬೋರ್ ವೆಲ್ ಬತ್ತಿರೋದು ಜನರ ನಿದ್ದೆಗೆಡಿಸಿದೆ. ಬೇಸಿಗೆಯಲ್ಲಿ ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಅಂತರ್ಜಲ ಮಟ್ಟ ಕಡಿಮೆಯಾಗುತ್ತೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

Published by:Sumanth SN
First published: