ಪೆಹ್ಲೂ ಖಾನ್ ಗುಂಪು ಹತ್ಯೆ ಪ್ರಕರಣ; ಖುಲಾಸೆಗೊಂಡ 6 ಜನರ ವಿರುದ್ಧ ಮರು ವಿಚಾರಣೆಗೆ ಆದೇಶಿಸಿದ ರಾಜಸ್ತಾನ್ ಸರ್ಕಾರ!

ಹಾಲು ವ್ಯಾಪಾರಿ 55 ವರ್ಷದ ಪೆಹ್ಲೂ ಖಾನ್ ಮೇಲೆ ಗೋ ರಕ್ಷಕರು ನಡೆಸಿದ್ದ ಹಲ್ಲೆಯನ್ನು ಕೆಲವರು ವಿಡಿಯೋ ಮಾಡಿದ್ದರು. ಈ ವಿಡಿಯೋ ದೇಶದೆಲ್ಲೆಡೆ ವೈರಲ್ ಆಗಿತ್ತು. ಪೈಶಾಚಿಕ ಹಲ್ಲೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು, ಇಡೀ ದೇಶ ಒಕ್ಕೊರಲಿನಿಂದ ಇದರ ವಿರುದ್ಧ ದ್ವನಿ ಎತ್ತಿತ್ತು.

news18
Updated:August 16, 2019, 3:58 PM IST
ಪೆಹ್ಲೂ ಖಾನ್ ಗುಂಪು ಹತ್ಯೆ ಪ್ರಕರಣ; ಖುಲಾಸೆಗೊಂಡ 6 ಜನರ ವಿರುದ್ಧ ಮರು ವಿಚಾರಣೆಗೆ ಆದೇಶಿಸಿದ ರಾಜಸ್ತಾನ್ ಸರ್ಕಾರ!
ಸಾಂದರ್ಭಿಕ ಚಿತ್ರ.
  • News18
  • Last Updated: August 16, 2019, 3:58 PM IST
  • Share this:
ಜೈಪುರ; ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಪೆಹ್ಲೂ ಖಾನ್ ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣ ಸಂಬಂಧ ಆಗಸ್ಟ್.14 ರಂದು ತೀರ್ಪು ನೀಡಿದ್ದ ನ್ಯಾಯಾಲಯ ಈ ಪ್ರಕರಣದ ಸಂಬಂಧ ಎಲ್ಲಾ 6 ಆರೋಪಿಗಳನ್ನು ಖುಲಾಸೆ ಮಾಡಿತ್ತು. ನ್ಯಾಯಾಲಯದ ತೀರ್ಪು ಹೊರಬಿದ್ದ ಎರಡೇ ದಿನದಲ್ಲಿ ರಾಜಸ್ತಾನ್ ಸರ್ಕಾರ ಈ ಪ್ರಕರಣದ ಮರು ತನಿಖೆಗೆ ಆದೇಶಿಸಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜಸ್ತಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಪೆಹ್ಲುಖಾನ್ ಗುಂಪು ಹತ್ಯೆ ಪ್ರಕರಣದ ಸಂಬಂಧ ಜಿಲ್ಲಾ ನ್ಯಾಯಾಲಯ ನೀಡಿರುವ ತೀರ್ಪನ್ನು ರಾಜ್ಯ ಸರ್ಕಾರ ಹೈಕೋರ್ಟ್​ನಲ್ಲಿ ಪ್ರಶ್ನಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹರಿಯಾಣದ ನುಹ್ ಗ್ರಾಮದವರಾದ 55 ವರ್ಷದ ಪೆಹ್ಲೂ ಖಾನ್ ಅವರು ರಂಜಾನ್ ಹಬ್ಬಕ್ಕೆ ಹಾಲಿನ ಪೂರೈಕೆಗಾಗಿ ಹಸುಗಳನ್ನ ಖರೀದಿಸಿದ್ದರು. ಅವುಗಳನ್ನು ಸಾಗಿಸುವಾಗ ದೆಹಲಿ-ಆಲ್ವಾರ್ ಹೆದ್ದಾರಿಯಲ್ಲಿ 2017ರ ಏಪ್ರಿಲ್ 1ರಂದು ಗೋರಕ್ಷಕರ ಗುಂಪೊಂದು ಅಡ್ಡಗಟ್ಟಿತ್ತು. ತನ್ನ ಬಳಿ ಇರುವ ದಾಖಲೆಗಳನ್ನು ತೋರಿಸಿದರೂ ಕಿವಿಗೊಡದ ಗುಂಪು ಕಬ್ಬಿಣದ ರಾಡ್ ಮತ್ತು ಕೋಲುಗಳಿಂದ ಬಡಿದು ಪೆಹ್ಲೂ ಖಾನ್ರ ಮೇಲೆ ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡ ಪೆಹ್ಲೂ ಖಾನ್ ಕೆಲ ದಿನಗಳ ನಂತರ ಸಾವನ್ನಪ್ಪಿದ್ದರು.

ಇದನ್ನೂ ಓದಿ : ಗೋರಕ್ಷಕರ ಗುಂಪಿನಿಂದ ಪೆಹ್ಲೂ ಖಾನ್ ಹತ್ಯೆ ಪ್ರಕರಣ: ಎಲ್ಲಾ 6 ಆರೋಪಿಗಳೂ ಖುಲಾಸೆ

ಈ ಪ್ರಕರಣದ ಪ್ರಮುಖ ಆರೋಪಿಗಳಾದ ವಿಪಿನ್ ಯಾದವ್, ರವೀಂದ್ರ ಕುಮಾರ್, ಕಲುರಾಮ್, ದಯಾನಂದ್, ಯೋಗೇಶ್ ಕುಮಾರ್ ಮತ್ತು ಭೀಮ್ ರಾತಿ ಸೇರಿದಂತೆ ಮೂರು ಜನ ಬಾಲಾಪರಾಧಿಗಳ ವಿರುದ್ಧ ಬಾಲಾಪರಾಧ ಮಂಡಳಿ ಪ್ರತ್ಯೇಕ ವಿಚಾರಣೆ ನಡೆಸಿತ್ತು.

ಹಾಲು ವ್ಯಾಪಾರಿ 55 ವರ್ಷದ ಪೆಹ್ಲೂ ಖಾನ್ ಮೇಲೆ ಗೋ ರಕ್ಷಕರು ನಡೆಸಿದ್ದ ಹಲ್ಲೆಯನ್ನು ಕೆಲವರು ವಿಡಿಯೋ ಮಾಡಿದ್ದರು. ಈ ವಿಡಿಯೋ ದೇಶದೆಲ್ಲೆಡೆ ವೈರಲ್ ಆಗಿತ್ತು. ಪೈಶಾಚಿಕ ಹಲ್ಲೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು, ಇಡೀ ದೇಶ ಒಕ್ಕೊರಲಿನಿಂದ ಇದರ ವಿರುದ್ಧ ದ್ವನಿ ಎತ್ತಿತ್ತು.

ಆದರೆ, ಇದೇ ಪ್ರಕರಣದ ಕುರಿತು 92 ಪುಟಗಳ ತೀರ್ಪು ನೀಡಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಸರಿತಾ ಸ್ವಾಮಿ, “ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪೊಲೀಸರು ಎಡವಿದ್ದಾರೆ. ಈ ಘಟನೆಯ ವಿಡಿಯೋಗಳನ್ನು ರೆಕಾರ್ಡ್ ಮಾಡಲು ಬಳಸಲಾದ ಮೊಬೈಲ್ ಫೋನ್​ಗಳನ್ನು ಪೊಲೀಸರು ಸರಿಯಾಗಿ ವಶಪಡಿಸಿಕೊಂಡಿಲ್ಲ. ಸ್ವಾಧೀನಪಡಿಸಿಕೊಂಡ ವಿಡಿಯೋಗಳನ್ನು ಫೋರೆನ್ಸಿಕ್ ಲ್ಯಾಬ್​ಗೂ ಸಲ್ಲಿಸಿಲ್ಲ. ಹೀಗಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದ ಇವರನ್ನು ಬಿಡುಗಡೆ ಮಾಡಲಾಗುತ್ತಿದೆ” ಎಂದು ಘೋಷಿಸಿದ್ದರು.ಮೃತ ಪೆಹ್ಲೂ ಖಾನ್ ಅವರ ಮರಣೋತ್ತರ ಹೇಳಿಕೆಯನ್ನು ಪಡೆಯುವಲ್ಲೂ ಸಹ ಪೊಲೀಸರು ಎಡವಿದ್ದರು. ಇದು ಆರೋಪಿಗಳು ಪ್ರಕರಣದಿಂದ ಖುಲಾಸೆಯಾಗಲು ಸಹಕಾರಿಯಾಗಿತ್ತು.

ಇದನ್ನೂ ಓದಿ : ದಲಿತ ಯುವಕನ ಹತ್ಯೆ ಪ್ರಕರಣ; ಮಗನ ಸಾವಿಗೆ ನ್ಯಾಯ ಸಿಗದ ಕಾರಣ ನಿರಾಸೆಗೊಳಗಾಗಿ ಆತ್ಮಹತ್ಯೆಗೆ ಶರಣಾದ ಅಂಧ ತಂದೆ!
First published:August 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ