Pegasus ಬೇಹುಗಾರಿಕೆ ವಿರುದ್ಧ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ನೇತೃತ್ವದಲ್ಲಿ ಪ್ರತಿಭಟನೆ

ಗಡಿ ಕಾದು ನಮ್ಮನ್ನು ರಕ್ಷಿಸುವ ಸೈನಿಕರ ಮೇಲೂ ಮೋದಿ ಸರ್ಕಾರ ಬೇಹುಗಾರಿಕೆ ನಡೆಸುತ್ತಿದೆ. ಮೋದಿ ಸರ್ಕಾರ ಯಾರನ್ನೂ ಬಿಟ್ಟಿಲ್ಲ. ಇಂತಹ ಕೃತ್ಯ ಮಾಡುವ ಮೂಲಕ ಮೋದಿ ಸರಕಾರ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಶ್ರೀನಿವಾಸ್ ಬಿವಿ ಆಕ್ರೋಶ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ನೇತೃತ್ವದಲ್ಲಿ ಪ್ರತಿಭಟನೆ

ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ನೇತೃತ್ವದಲ್ಲಿ ಪ್ರತಿಭಟನೆ

  • Share this:
ನವದೆಹಲಿ (ಜ. 29) : ಪೆಗಾಸಸ್ ಬೇಹುಗಾರಿಕೆ ಪ್ರಕರಣದ (Pegasus Espionage Case) ವಿರುದ್ಧ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. (Indian Youth Congress Srinivas BV) ನೇತೃತ್ವದಲ್ಲಿ‌ ಇಂದು ಯುವ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಶ್ರೀನಿವಾಸ್ ಬಿ.ವಿ. ಅವರು 'ಪ್ರತಿಪಕ್ಷಗಳ ನಾಯಕರು, ನ್ಯಾಯಾಧೀಶರು, ಮಾಧ್ಯಮದವರು ಮತ್ತು ಇತರ ನಾಗರಿಕರ ಮೇಲೆ ಪೆಗಾಸಸ್ ಸಾಫ್ಟ್‌ವೇರ್ ಗೂಢಚಾರಿಕೆ ಮತ್ತು ಬ್ಲ್ಯಾಕ್‌ಮೇಲಿಂಗ್ ಮಾಡಿದ ರೀತಿ ಅತ್ಯಂತ ಗಂಭೀರವಾದ ವಿಷಯವಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಹಾಗೂ ಸಂಸದ (Congress Leader and Rahul Gandhi) ರಾಹುಲ್ ಗಾಂಧಿ ಅವರು 2021ರ ಜುಲೈನಲ್ಲಿ ಕೇಂದ್ರ ಸರ್ಕಾರಕ್ಕೆ ಎರಡು ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಪ್ರಧಾನ ಮಂತ್ರಿ ಅವರಿಂದ ಉತ್ತರ ಬಂದಿರಲಿಲ್ಲ. ಈಗ ವಿದೇಶಿ ಮಾಧ್ಯಮಗಳು ಸಾಕಷ್ಟು ಪುರಾವೆಯೊಂದಿಗೆ ವರದಿ ಮಾಡುತ್ತಿವೆ ಎಂದು ತಿಳಿಸಿದರು.

ರಾಷ್ಟ್ರೀಯ ಭದ್ರತೆ ಜೊತೆ ಮೋದಿ ಸರ್ಕಾರ ಚೆಲ್ಲಾಟ
ದೇಶದಲ್ಲಿ ನಿರುದ್ಯೋಗಿ ಯುವಕರು ಉದ್ಯೋಗ ಕೊಡಿ ಎಂದು ಕೇಳುತ್ತಿದ್ದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪೆಗಾಸಸ್ ಖರೀದಿ ಮೂಲಕ ಮುಖ್ಯ ವ್ಯಕ್ತಿಗಳ ಬೇಹುಗಾರಿಕೆ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಬಿ.ವಿ., ನರೇಂದ್ರ ಮೋದಿ ಸರ್ಕಾರವು ಸಂವಿಧಾನ ಮತ್ತು ಕಾನೂನು ಎರಡನ್ನೂ ಕೊಲೆ ಮಾಡುತ್ತಿದೆ. ಪ್ರಜಾಪ್ರಭುತ್ವವನ್ನು ಅದರ ಕಾಲಿನ ಕೆಳಗೆ ಹಾಕಿ ಹೊಸಕುತ್ತಿದೆ. ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಅವರು ಸೇರಿದಂತೆ ದೇಶದ ವಿರೋಧ ಪಕ್ಷದ ನಾಯಕರು, ವಿವಿಧ ಗೌರವಾನ್ವಿತ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಮತ್ತು ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಜನರ ಮೇಲೆ ಬೇಹುಗಾರಿಕೆ ನಡೆಸುವ ಮೂಲಕ ನರೇಂದ್ರ ಮೋದಿ ಸರ್ಕಾರ ದೇಶದ್ರೋಹ ಎಸಗಿದೆ. ರಾಷ್ಟ್ರೀಯ ಭದ್ರತೆಯೊಂದಿಗೆ ಕೂಡ ಆಟವಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಹೆಸರು ಬದಲಿಸಲು ಆಗ್ರಹ
ಭಾರತೀಯ ಜನತಾ ಪಕ್ಷದ ಹೆಸರನ್ನು #BharatiyaJasoosParty ಎಂದು ಬದಲಾಯಿಸಬೇಕು. ಪೆಗಾಸಸ್ ಅನ್ನು ಉಗ್ರವಾದದ ವಿರುದ್ಧ ಹೋರಾಡಲು ಸರ್ಕಾರಗಳು ಬಳಸುತ್ತವೆ ಎಂದು ಎನ್ಎಸ್ಒ ಹೇಳಿದೆ. ಆದರೆ ವಾಸ್ತವದಲ್ಲಿ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಪೆಗಾಸಸ್ ಅನ್ನು ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.

ಇದನ್ನು ಓದಿ: ಗರ್ಭಿಣಿಯರು ಕೆಲಸ ಮಾಡಲು ಅನರ್ಹರು ಎಂದ SBI; Delhi ಮಹಿಳಾ ಆಯೋಗದಿಂದ ನೋಟಿಸ್​​

ಸೈನಿಕರ ಮೇಲೂ ಬೇಹುಗಾರಿಕೆ
ಪೆಗಾಸಸ್ ಅನ್ನು ಕೇವಲ ಪತ್ರಕರ್ತರು, ವಿರೋಧ ಪಕ್ಷದ ನಾಯಕರು ಮತ್ತು ಬಿಜೆಪಿ ಮಂತ್ರಿಗಳಿಗೆ ಮಾತ್ರ ಬಳಸಲಾಗಿಲ್ಲ. ಅವರು ದೇಶದ ಭದ್ರತಾ ಏಜೆನ್ಸಿಗಳ ಮುಖ್ಯಸ್ಥರ ವಿಷಯದಲ್ಲೂ ಬಳಸಿದ್ದಾರೆ ಎಂದು ಈಗಾಗಲೇ ತಿಳಿದುಬಂದಿದೆ. ಗಡಿಯನ್ನು ಕಾದು ನಮ್ಮನ್ನು ರಕ್ಷಿಸುವವರ ಮೇಲೂ ಮೋದಿ ಸರ್ಕಾರ ಬೇಹುಗಾರಿಕೆ ನಡೆಸುತ್ತಿದೆ. ಮೋದಿ ಸರ್ಕಾರ ಯಾರನ್ನೂ ಬಿಟ್ಟಿಲ್ಲ. ಇಂತಹ ಕೃತ್ಯ ಮಾಡುವ ಮೂಲಕ ಮೋದಿ ಸರಕಾರ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಗೆ ಧಕ್ಕೆ ತಂದಿದೆ. ಈ ಬೇಹುಗಾರಿಕೆ ಪ್ರಕರಣವನ್ನು ಶೀಘ್ರವಾಗಿ ಜೆಪಿಸಿ ಮತ್ತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ಬಜೆಟ್ ಮೇಲೆ ಶ್ರೀ ಸಾಮಾನ್ಯನ ನಿರೀಕ್ಷೆಗಳೇನು; ಏನೆಲ್ಲಾ ಸಿಗಬಹುದು ಈ ಆಯವ್ಯಯದಲ್ಲಿ?

ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ
ಯುವ ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ರಾಹುಲ್ ರಾವ್ (National Media Incharge of Indian Youth Congress Rahul Rao) ಮಾತನಾಡಿ, ಪೆಗಾಸಸ್ ಬೇಹುಗಾರಿಕೆ ಪ್ರಕರಣದ ವಿರುದ್ಧ ರಾಷ್ಟ್ರೀಯ ಯುವ ಅಧ್ಯಕ್ಷ ಶ್ರೀನಿವಾಸ್ ಬಿವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಬಂದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ಪೊಲೀಸರು ತಡೆದು ನಿಲ್ಲಿಸಲು ಪ್ರಯತ್ನಿಸಿದರು ಮತ್ತು ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ದೆಹಲಿ ಸಹ ಉಸ್ತುವಾರಿ ಖುಷ್ಬೂ ಶರ್ಮಾ, ರಾಷ್ಟ್ರೀಯ ಕಾರ್ಯದರ್ಶಿ ಶಿವಿ ಚೌಹಾಣ್, ಮಿತೇಂದ್ರ ದರ್ಶನ್ ಸಿಂಗ್, ದೆಹಲಿ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ರಣವಿಜಯ್ ಸಿಂಗ್ ಲೋಚವ್, ಹರಿಯಾಣ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ದಿವ್ಯಾಂಶು, ಬೂದಿರಾಜ ಮತ್ತಿತರರಿದ್ದರು.
Published by:Seema R
First published: