Delhi High Court: ಮಹಿಳೆಯರು ಸ್ನಾನ ಮಾಡುವುದನ್ನು ಇಣುಕಿ ನೋಡುವುದು ಶಿಕ್ಷಾರ್ಹ ಅಪರಾಧ: ಹೈಕೋರ್ಟ್‌

ದೆಹಲಿ ಹೈಕೋರ್ಟ್

ದೆಹಲಿ ಹೈಕೋರ್ಟ್

ಸಾರ್ವಜನಿಕ ಬಾತ್​ರೂಮ್​ನೊಳಗೆ ಮಹಿಳೆಯರು ಸ್ನಾನ ಮಾಡುವಾಗ ಇಣುಕಿ ನೋಡುವುದು ಐಪಿಸಿ ಅಡಿಯಲ್ಲಿ ಅಪರಾಧ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

  • Share this:

ಸಾರ್ವಜನಿಕ ಬಾತ್​ರೂಮ್​ನೊಳಗೆ (Public Bathroom) ಮಹಿಳೆ ಸ್ನಾನ ಮಾಡುವಾಗ ಇಣುಕಿ ನೋಡುವುದು ಐಪಿಸಿ ಅಡಿಯಲ್ಲಿ ಅಪರಾಧ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಅದು ಸಾರ್ವಜನಿಕ ಬಾತ್ ರೂಂ ಆಗಿದ್ದು, ಅದಕ್ಕೆ ಬಾಗಿಲು ಇಲ್ಲದೇ ಪರದೆ ಮಾತ್ರ ಇದ್ದರೂ ಸ್ನಾನಗೃಹದಲ್ಲಿ ಸ್ನಾನ ಮಾಡುವುದು ‘ಪ್ರೈವೇಟ್‌ ಆಕ್ಟ್‌’ (Private Act) ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆದ್ದರಿಂದ, ಮಹಿಳೆ ಸ್ನಾನ (Woman Bathing) ಮಾಡುವಾಗ ಒಬ್ಬ ವ್ಯಕ್ತಿಯು ಅಂತಹ ಸ್ನಾನಗೃಹದೊಳಗೆ ಇಣುಕಿ ನೋಡಿದರೆ, ಇದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354C ಅಡಿಯಲ್ಲಿ ವೋಯರಿಸ್ಟಿಕ್ ನಡವಳಿಕೆಯ ಅಪರಾಧ ಎಂದು ಕೋರ್ಟ್‌ ಹೇಳಿದೆ.


ಇನ್ನು ಇದುವರೆಗೆ ಇಂತಹ ಪ್ರಕರಣಗಳು ಹಲವಾರು ನಡೆದಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ನ್ಯಾಯಾಲಯ ಈ ಮಹತ್ತರವಾದ ನಿಯಮವನ್ನು ಘೋಷಣೆ ಮಾಡಿದೆ.


ಗೌಪ್ಯತೆಯ ಆಕ್ರಮಣ ಎಂದು ಪರಿಗಣನೆ


ಮುಚ್ಚಿದ ಬಾತ್​ರೂಮ್​ನೊಳಗೆ ಸ್ನಾನ ಮಾಡುವ ಮಹಿಳೆಯು ತನ್ನ ಗೌಪ್ಯತೆಗೆ ಧಕ್ಕೆಯಾಗುತ್ತದೆ ಎಂದು ಭಾವಿಸುತ್ತಾಳೆ. ಬಾತ್​​ರೂಮ್​ ಒಳಗೆ ಇಣುಕಿ ನೋಡುವ ವ್ಯಕ್ತಿಯ ಕೃತ್ಯವನ್ನು ಖಂಡಿತವಾಗಿಯೂ ಅವಳ ಗೌಪ್ಯತೆಯ ಆಕ್ರಮಣ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಲೈಂಗಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಹೇಳಿದರು.


ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಗ್ಯಾಂಗ್‌ಸ್ಟರ್‌ಗಳ ಪ್ಯಾಂಟ್‌ ಒದ್ದೆಯಾಗುತ್ತಿದೆ: ಸಿಎಂ ಯೋಗಿ ಆದಿತ್ಯನಾಥ್


IPC ಯ ಸೆಕ್ಷನ್ 354C ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯಿದೆ, 2012 ರ ಸೆಕ್ಷನ್ 12 ರ ಅಡಿಯಲ್ಲಿ ಅಪರಾಧಕ್ಕಾಗಿ ವಿಚಾರಣಾ ನ್ಯಾಯಾಲಯದಿಂದ ದೋಷಿಯಾಗಿರುವ ಸೋನು ಬಿಲ್ಲಾ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ವಿಚಾರಣೆ ನಡೆಸುತ್ತಿದ್ದರು.


2014ರಲ್ಲಿ ನಡೆದಿದ್ದ ಪ್ರಕರಣ


2014ರ ಸಪ್ಟೆಂಬರ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಸೋನು ಬಿಲ್ಲಾ ಎಂಬಾತ ಲೈಂಗಿಕ ಉದ್ದೇಶದಿಂದ ನೋಡುತ್ತಿದ್ದ. ತಾನು ಸ್ನಾನ ಮಾಡಲು ಹೋದಾಗಲೆಲ್ಲ ಬಾತ್‌ರೂಮ್‌ನ ಹೊರಗೆ ಬೇರೆ ಬೇರೆ ನೆಪದಲ್ಲಿ ನಿಂತು ಒಳಗೆ ಇಣುಕಿ ನೋಡುತ್ತಿದ್ದ. ತನ್ನ ವಿರುದ್ಧ ಅಸಭ್ಯ ಟೀಕೆಗಳು, ಕಾಮೆಂಟ್‌ಗಳು ಮತ್ತು ಸನ್ನೆಗಳನ್ನು ರವಾನಿಸುತ್ತಿದ್ದ ಎಂದು ಆರೋಪಿ ಸೋನು ಬಿಲ್ಲಾ ವಿರುದ್ಧ ದೂರು ದಾಖಲಾಗಿತ್ತು.


ದೆಹಲಿ ಹೈಕೋರ್ಟ್


ಸಂತ್ರಸ್ತೆ ಸಾರ್ವಜನಿಕ ಬಾತ್​ರೂಮ್​ನಲ್ಲಿ ಸ್ನಾನ ಮಾಡುತ್ತಾಳೆ. ಆದ್ದರಿಂದ ಇದು ಪವಿತ್ರ ನದಿಗಳು, ವಾಟರ್ ಪಾರ್ಕ್‌ಗಳು, ಈಜುಕೊಳಗಳು ಅಥವಾ ಸರೋವರಗಳಲ್ಲಿ ಸ್ನಾನ ಮಾಡುವುದಕ್ಕೆ ಸಮನಾಗಿರುತ್ತದೆ ಎಂದು ಸೋನು ಪರ ವಕೀಲರು ವಾದಿಸಿದರು.


ಸ್ನಾನಗೃಹಕ್ಕೆ ಬಾಗಿಲಿಲ್ಲದಿದ್ದರೂ ಪರದೆಗಳಿದ್ದವು!


ಪ್ರಕರಣವನ್ನು ಪರಿಗಣಿಸಿದ ನ್ಯಾಯಮೂರ್ತಿ ಶರ್ಮಾ ಅವರು, ಪ್ರಶ್ನಾರ್ಹ ಬಾತ್​ರೂಮ್​ ತೆರೆದ ಪ್ರದೇಶದಲ್ಲಿ ನೆಲೆಗೊಂಡಿದ್ದರೂ, ಅದು ತೆರೆದ ಸಾರ್ವಜನಿಕ ಸ್ಥಳವಲ್ಲ. ಏಕೆಂದರೆ ಅದು ಗೋಡೆಗಳನ್ನು ಹೊಂದಿತ್ತು ಮತ್ತು ಪ್ರವೇಶದ್ವಾರವು ಪರದೆಯಿಂದ ಮುಚ್ಚಲ್ಪಟ್ಟಿತ್ತು.


"ಪ್ರಸ್ತುತ ಪ್ರಕರಣದಲ್ಲಿ ಸಂತ್ರಸ್ತೆ ಸ್ನಾನ ಮಾಡುವ ಕಾರ್ಯವು 'ಖಾಸಗಿ ಕಾಯಿದೆ' ಎಂಬ ಬದಲು 'ಸಾರ್ವಜನಿಕ ಕೃತ್ಯ'ವಾಯಿತು ಎಂಬ ಮೇಲ್ಮನವಿದಾರರ ಪರ ವಕೀಲರ ವಾದವು ಸಂಪೂರ್ಣವಾಗಿ ಸರಿಯಲ್ಲ. ಮಹಿಳೆಯ ಬಾತ್​ರೂಮ್​ಗೆ ಬಾಗಿಲಿಲ್ಲ ಆದರೆ ಪರದೆ ಮತ್ತು ತಾತ್ಕಾಲಿಕ ಗೋಡೆಗಳು ಮತ್ತು ಅದು ಅವರ ಮನೆಯ ಹೊರಗೆ ಇದೆ. ಆದ್ದರಿಂದ ಅದನ್ನು ಸಾರ್ವಜನಿಕ ಸ್ಥಳ ಎನ್ನಲು ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.


ಧಾರ್ಮಿಕ ಸ್ಥಳಗಳಲ್ಲಿ ಪವಿತ್ರ ಸ್ನಾನ ಮಾಡುವುದು, ಒಬ್ಬ ಹೆಣ್ಣು ಮುಚ್ಚಿದ ಸ್ನಾನಗೃಹದಲ್ಲಿ ಸ್ನಾನ ಮಾಡುವುದು ಸಮವಲ್ಲ ಎಂದು ಎಂದು ನ್ಯಾಯಮೂರ್ತಿ ಶರ್ಮಾ ಹೇಳಿದರು.


ಫೋಟೋ, ವಿಡಿಯೋ ತೆಗೆದುಕೊಳ್ಳಲು ಯಾವುದೇ ಹಕ್ಕಿಲ್ಲ!


ಇನ್ನು, ಸಾರ್ವಜನಿಕ ಬಯಲು ಪ್ರದೇಶದಲ್ಲಿ ಸ್ನಾನ ಮಾಡುವಾಗ, ಅಂತಹ ಮಹಿಳೆಯರ ಛಾಯಾಚಿತ್ರಗಳು ಅಥವಾ ವಿಡಿಯೋಗಳನ್ನು ಮಾಡಬಾರದು. ಆ ಪ್ರಕರಣಗಳಲ್ಲಿಯೂ ಹಾಗೆ ಮಾಡಿದರೆ ಅದು ಆಕೆಯ ಗೌಪ್ಯತೆಯನ್ನು ಆಕ್ರಮಿಸಿದಂತಾಗುತ್ತದೆ.


ಐಪಿಸಿಯ ಸೆಕ್ಷನ್ 354C ಮತ್ತು ಅದರ ವಿವರಣೆಯ ಅಡಿಯಲ್ಲಿ, ಆಕೆಯ ಫೋಟೋಗಳು, ವಿಡಿಯೋಗಳು ಇತ್ಯಾದಿಗಳನ್ನು ತೆಗೆದುಕೊಳ್ಳಲು ಯಾವುದೇ ವ್ಯಕ್ತಿಗೆ ಹಕ್ಕಿಲ್ಲ" ಎಂದು ನ್ಯಾಯಾಲಯ ಹೇಳಿದೆ.




ಆದಾಗ್ಯೂ, ಪ್ರಕರಣದಲ್ಲಿ ಆಕೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯ POCSO ಅಡಿಯಲ್ಲಿ ಶಿಕ್ಷೆಯನ್ನು ಬದಿಗೊತ್ತಿದೆ. ಆದರೆ ಸೋನುಗೆ ಒಂದು ವರ್ಷದ ಅವಧಿಗೆ ಕಠಿಣ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಲಾಗಿದೆ.

First published: